ಕೇಂದ್ರದ ರೈತ ವಿರೋಧಿ ಕಾನೂನುಗಳ ವಿರುದ್ದ ರೈತರು ನಡೆಸುತ್ತಿರುವ ಹೋರಾಟ ಇಂದಿಗೆ 11 ನೇ ದಿನಕ್ಕೆ ಕಾಲಿಟ್ಟಿದ್ದು, ಕೇಂದ್ರದ ಬಿಜೆಪಿ ಸರ್ಕಾರದೊಂದಿಗೆ ನಡೆಸಿದ ಐದನೇ ಸುತ್ತಿನ ಮಾತುಕತೆ ವಿಫಲಗೊಂಡಿದೆ. ಆರನೇ ಸುತ್ತಿನ ಮಾತುಕತೆ ಬುಧವಾರಕ್ಕೆ ನಿಗದಿಯಾಗಿದೆ. ಈ ನಡುವೆ ಹೋರಾಟವನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಸುಪ್ರೀಂಕೋರ್ಟನ್ನು ಬಳಸುತ್ತಿರುವದಕ್ಕೆ ರೈತ ಸಂಘಟನೆಗಳ ಒಕ್ಕೂಟ AIKSCC ಖಂಡಿಸಿದೆ.
ಇದನ್ನೂ ಓದಿ: ಪಾಲಿಕೆ ಚುನಾವಣಾ ಪ್ರಚಾರಕ್ಕೂ ಪ್ರಧಾನಿ! ಬಿಜೆಪಿಯ ಈ ತಂತ್ರದ ವಾಸ್ತವವೇನು?
ಈ ಬಗ್ಗೆ AIKSCC ನೀಡಿರುವ ಪತ್ರಿಕಾ ಪ್ರಕಟಣೆಯಲ್ಲಿ, “ರೈತರ ಮಾತಿಗೆ ಕಿವಿಗೊಡದ ಕಾರಣ ಸರ್ಕಾರದ ವಿರುದ್ಧ ಭಾರೀ ಪ್ರಮಾಣದ ಪ್ರತಿಭಟನೆ ನಡೆಯುತ್ತಿದೆ. ರೈತ ಸಂಘಟನೆಗಳು ಕರೆ ನೀಡಿರುವ ಡಿಸೆಂಬರ್ 8 ರ ಅಖಿಲ ಭಾರತ ಬಂದ್‌ಗೆ AIKSCC ಬೆಂಬಲಿಸಲಿದೆ. ಈ ಹಿನ್ನಲೆಯಲ್ಲಿ ದೆಹಲಿ ಸೇರಿದಂತೆ ದೇಶದಾದ್ಯಂತ ಪ್ರತಿಭಟನೆ ನಡೆಯಲಿದೆ” ಎಂದು ಹೇಳಿದೆ.
ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ಸುಪ್ರೀಂ ಕೋರ್ಟನ್ನು ಬಳಸುತ್ತಿರುವುದಕ್ಕೆ ತೀವ್ರ ಖಂಡನೆ ವ್ಯಕ್ತಪಡಿಸಿದ AIKSCC, ದೇಶದ ಪ್ರಧಾನ ಮಂತ್ರಿಯ ಮೇಲೆ ಕಾರ್ಪೊರೇಟ್‌ಗಳ ಒತ್ತಡವಿದೆ ಎಂದು ಆರೋಪಿಸಿದೆ. “ಕಾನೂನುಗಳನ್ನು ಹಿಂತೆಗೆದುಕೊಳ್ಳುವುದನ್ನು ಬಿಟ್ಟು ಸರ್ಕಾರಕ್ಕೆ ಬೇರೆ ದಾರಿಯಿಲ್ಲ, ಅದು ವಿಫಲವಾದರೆ ದೆಹಲಿಗೆ ಎಲ್ಲ ಕಡೆಯಿಂದ ಇನ್ನೂ ಹೆಚ್ಚಿನ ಪ್ರತಿಭಟನಾಕಾರರು ಆಗಮಿಸಲಿದ್ದಾರೆ” ಎಂದು AIKSCC ಎಚ್ಚರಿಸಿದೆ.
ಇದನ್ನೂ ಓದಿ: ಕೃಷಿ ಕಾಯ್ದೆ ರದ್ದುಗೊಳಿಸದಿದ್ದರೆ ಎನ್‌ಡಿಎ ತೊರೆಯುತ್ತೇವೆ: ಅಮಿತ್ ಶಾಗೆ ಪತ್ರ ಬರೆದ ಬಿಜೆಪಿಯ ಮತ್ತೊಂದು ಮೈತ್ರಿ ಪಕ್ಷ!


