Homeಮುಖಪುಟಕಾರ್ಮಿಕ ಕಾನೂನುಗಳ ಅಮಾನತು ತಪ್ಪು ನಿರ್ಧಾರ: ಅಜೀಮ್ ಪ್ರೇಮ್‌ಜಿ

ಕಾರ್ಮಿಕ ಕಾನೂನುಗಳ ಅಮಾನತು ತಪ್ಪು ನಿರ್ಧಾರ: ಅಜೀಮ್ ಪ್ರೇಮ್‌ಜಿ

ಕನಿಷ್ಠ 3 ತಿಂಗಳವರೆಗೆ ತಿಂಗಳಿಗೆ 7,000 ರೂ.ಗಳ ತುರ್ತು ನಗದು ಪರಿಹಾರವನ್ನು ಪ್ರತಿ ಬಡವರ ಮನೆಗೆ ಹಾಗೂ ವಲಸೆ ಕಾರ್ಮಿಕರಿಗೆ ನೀಡಬೇಕು ಎಂದು ಅಜೀಮ್ ಪ್ರೇಮ್‌ಜಿ ಸಲಹೆ ನೀಡಿದ್ದಾರೆ.

- Advertisement -
- Advertisement -

ಕಾರ್ಮಿಕ ಕಾನೂನುಗಳನ್ನು ಅಮಾನತುಗೊಳಿಸುವುದು ತಪ್ಪು ಆಯ್ಕೆಯಾಗಿದೆ ಎಂದು ವಿಪ್ರೋದ ಸಂಸ್ಥಾಪಕ ಅಜೀಮ್ ಪ್ರೇಮ್‌ಜಿ ತಿಳಿಸಿದ್ದಾರೆ. ಅವರು ಎಕನಾಮಿಕ್ಸ್ ಟೈಮ್ಸ್‌ಗೆ ಬರೆದ ಲೇಖನದಲ್ಲಿ ಇದನ್ನು ಪ್ರಸ್ತಾಪಿಸಿದ್ದಾರೆ.

ಕಳೆದ ವಾರ ರೈಲು ಹರಿದು ಹದಿನಾರು ವಲಸೆ ಕಾರ್ಮಿಕರ ಸಾವು ‘ಕ್ಷಮಿಸಲಾಗದ ದುರಂತ’ ಎಂದಿರುವ ಅವರು, ಈ ದುರಂತವು ದೇಶದ ದುರ್ಬಲ ಮತ್ತು ಬಡವರು ಎದುರಿಸುತ್ತಿರುವ ಭೀಕರ ದುಃಖದ ಗುರುತುಗಳಲ್ಲಿ ಒಂದಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ಕಾರ್ಮಿಕರ ಕಾಯ್ದೆಗಳ ತಿದ್ದುಪಡಿ, ಕೆಲಸದ ಅವಧಿ ಹೆಚ್ಚಳ, ಕೈಗಾರಿಕಾ ವಿವಾದಗಳು, ಔದ್ಯೋಗಿಕ ಸುರಕ್ಷತೆ, ಕೆಲಸದ ಪರಿಸ್ಥಿತಿಗಳು, ಕಾರ್ಮಿಕ ಸಂಘಗಳು, ವಲಸೆ ಕಾರ್ಮಿಕರು, ಕನಿಷ್ಠ ವೇತನ ಇತ್ಯಾದಿಗಳಿಗೆ ಸಂಬಂಧಿಸಿದ ಕೆಲವು ಕಾರ್ಮಿಕ ಕಾನೂನುಗಳನ್ನು ಅಮಾನತುಗೊಳಿಸುದರ ಬಗ್ಗೆ ಅಜೀಮ್ ಪ್ರೇಮ್‌ಜಿ ಆಘಾತ ವ್ಯಕ್ತಪಡಿಸಿದ್ದಾರೆ.

ಕಾರ್ಮಿಕ ಕಾನೂನುಗಳನ್ನು ಅಮಾನತುಗೊಳಿಸುವುದು ತಪ್ಪು ಆಯ್ಕೆ ಎಂದಿರುವ ಅವರು, ಇದು ಕಾರ್ಮಿಕರು ಮತ್ತು ವ್ಯವಹಾರಗಳನ್ನು ಪರಸ್ಪರ ವಿರುದ್ಧವಾಗಿಸುತ್ತದೆ ಎಂದಿದ್ದಾರೆ.

“ಬೃಹತ್‌ ಉದ್ಯಮದಾರರ ಒತ್ತಡಕ್ಕೆ ಮಣಿದು ಕಳೆದ ಕೆಲವು ದಶಕಗಳಲ್ಲಿ ಕಾರ್ಮಿಕ ಕಾನೂನುಗಳು ಬದಲಾಗಿವೆ. ಅದೇ ಸಮಯದಲ್ಲಿ ಸಾಮಾಜಿಕ ಭದ್ರತಾ ಕ್ರಮಗಳು ಹೆಚ್ಚಿಲ್ಲ. ಇದರಿಂದಾಗಿ ಉದ್ಯೋಗಿಗಳ ನಂಬಿಕೆ ಮತ್ತು ಸಾಮರ್ಥ್ಯ ಹದಗೆಡುತ್ತದೆ. ಈಗಾಗಲೇ ಸಡಿಲವಾಗಿರುವ ಈ ಕಾನೂನುಗಳನ್ನು ದುರ್ಬಲಗೊಳಿಸುವುದರಿಂದ ಆರ್ಥಿಕ ಚಟುವಟಿಕೆ ಹೆಚ್ಚಾಗುವುದಿಲ್ಲ, ಇದು ಕಡಿಮೆ ವೇತನ ಪಡೆಯುವವರ ಮತ್ತು ಬಡವರ ಕೆಟ್ಟ ಪರಿಸ್ಥಿತಿಗಳನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ ”ಎಂದು ಅವರು ಹೇಳಿದ್ದಾರೆ.

ಸಾಮಾಜಿಕ ಭದ್ರತೆ ಮತ್ತು ಕಾರ್ಮಿಕರ ರಕ್ಷಣೆಯ ಕೊರತೆಯೇ ಆ ಹದಿನಾರು ಯುವಕರನ್ನು ಕೊಂದಿದೆ ಎಂದಿರುವ ಅವರು, ವಲಸೆ ಕಾರ್ಮಿಕರನ್ನು ಸರಿಯಾದ ರೀತಿಯಲ್ಲಿ ನೋಡಿಕೊಳ್ಳದೆ ಇರುವುದರಿಂದಲೇ ಸಾಮೂಹಿಕ ವಲಸೆ ಆಗಿದೆ ಎಂದಿದ್ದಾರೆ.

ಆರೋಗ್ಯ ರಕ್ಷಣೆಯಲ್ಲಿ ಸಾಂಕ್ರಾಮಿಕ ರೋಗವನ್ನು ಸಂಪೂರ್ಣವಾಗಿ ಮತ್ತು ಸಮಗ್ರವಾಗಿ ನಿಭಾಯಿಸಬೇಕು. ಜನರು ಮತ್ತು ಆರ್ಥಿಕತೆಯನ್ನು ಬೆಂಬಲಿಸಬೇಕು, ಸಮಾನ ಮಾನವನ ದುಃಖವನ್ನು ನಿವಾರಿಸಲು ಮತ್ತು ದೀರ್ಘಕಾಲೀನ ಹಾನಿಯನ್ನು ಕಡಿಮೆ ಮಾಡಲು ಶ್ರಮಿಸಬೇಕು. ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಮುಖ ಪಾತ್ರ ವಹಿಸಬೇಕು ಎಂದಿದ್ದಾರೆ.

ಸರ್ಕಾರ ಘೋಷಿಸಿದ 20 ಲಕ್ಷ ಕೋಟಿ ರೂ.ಗಳ ಆರ್ಥಿಕ ಪ್ಯಾಕೇಜ್ ಅನ್ನು ಸ್ವಾಗತಿಸುವಾಗ, ಅಜೀಮ್ ಪ್ರೇಮ್ಜಿ ಮುಂದಿನ 1-2 ವರ್ಷಗಳಲ್ಲಿ ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬುದರ ಕುರಿತು ಕೆಲವು ಸಲಹೆಗಳನ್ನು ನೀಡಿದರು.

ಬಿಕ್ಕಟ್ಟಿನ ವಿರುದ್ಧ ಹೋರಾಡಲು ಪ್ರಧಾನಿ ಮೋದಿ ಘೋಷಿಸಿದ ಜಿಡಿಪಿಯ 10% ಪ್ಯಾಕೇಜ್‌ ಈಗಾಗಲೇ ಘೋಷಿಸಿರುವುದಕ್ಕೆ ಹೆಚ್ಚುವರಿಯಾಗಿರಬೇಕು. ಹಿಂದಿನ ಘೋಷಣೆಗಳನ್ನು ಈ ಪ್ಯಾಕೇಜ್‌ನಲ್ಲಿ ಮರು ವರ್ಗೀಕರಣವಾಗಬಾರದು ಎಂದು ಅವರು ಹೇಳಿದ್ದಾರೆ.

ಕನಿಷ್ಠ 3 ತಿಂಗಳವರೆಗೆ ತಿಂಗಳಿಗೆ 7,000 ರೂ.ಗಳ ತುರ್ತು ನಗದು ಪರಿಹಾರವನ್ನು ಬಯೋಮೆಟ್ರಿಕ್ ದೃಢೀಕರಣವಿಲ್ಲದೆ ಪ್ರತಿ ಬಡವರ ಮನೆ ಹಾಗೂ ವಲಸೆ ಕಾರ್ಮಿಕರಿಗೆ ನೀಡಬೇಕು ಎಂದು ಅಜೀಮ್ ಪ್ರೇಮ್ಜಿ ಸಲಹೆ ನೀಡಿದರು. ಲಾಕ್‌ಡೌನ್ ಅವಧಿಗೆ ಎಲ್ಲಾ ಬಡ ನಗರವಾಸಿಗಳಿಗೆ ಲಾಕ್‌ಡೌನ್ ನಂತರ ಕನಿಷ್ಠ ಎರಡು ತಿಂಗಳಾದರೂ ತಿಂಗಳಿಗೆ 25 ದಿನಗಳ ಕನಿಷ್ಠ ವೇತನವನ್ನು ಬಿಡುಗಡೆ ಮಾಡಬೇಕು ಎಂದಿದ್ದಾರೆ.


ಇದನ್ನೂ ಓದಿ: ಬಡವರಿಗೆ ವಾರ್ಷಿಕ 72 ಸಾವಿರ ನೀಡುವ ನ್ಯಾಯ್ ಯೋಜನೆಯನ್ನು ತನ್ನಿ: ರಾಹುಲ್ ಗಾಂಧಿ


ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ನರೇಗಾ) ಗೆ 1 ಲಕ್ಷ ಕೋಟಿ ರೂ.ಗಳ ಹೆಚ್ಚುವರಿ ಹಂಚಿಕೆ ಮಾಡಬೇಕು ಹಾಗೂ ಪ್ರತಿ ಮನೆಗೆ ಖಾತರಿಪಡಿಸಿದ ಉದ್ಯೋಗದ ದಿನಗಳನ್ನು ಹೆಚ್ಚಿಸಬೇಕು ಮತ್ತು ದೈನಂದಿನ ವೇತನವನ್ನು ಹೆಚ್ಚಿಸಬೇಕು ಎಂದು  ಅಜೀಮ್ ಪ್ರೇಮ್‌ಜಿ ಅಭಿಪ್ರಾಯಪಟ್ಟಿದ್ದಾರೆ. ಇದರಿಂದಾಗಿ ಕೆಲಸ ಮಾಡುವ ಎಲ್ಲರಿಗೂ ಸಹಾಯವಾಗುತ್ತದೆ ಎಂದರು.

ಮಾನವೀಯ ಬಿಕ್ಕಟ್ಟನ್ನು ತಗ್ಗಿಸುವುದಕ್ಕಾಗಿ ಸಾಮಾಜಿಕ ಭದ್ರತೆ ಮತ್ತು ಆಹಾರ ಭದ್ರತೆ ನೀಡಬೇಕು ಎಂದಿದ್ದಾರೆ. “ಪಡಿತರವನ್ನು 3-6 ತಿಂಗಳುಗಳವರೆಗೆ ಸಾರ್ವತ್ರಿಕಗೊಳಿಸಬೇಕು ಮತ್ತು ದ್ವಿಗುಣಗೊಳಿಸಬೇಕು.  ಅಡುಗೆ ಎಣ್ಣೆ, ದ್ವಿದಳ ಧಾನ್ಯಗಳು, ಉಪ್ಪು, ಮಸಾಲಾ, ಸ್ಯಾನಿಟರಿ ಪ್ಯಾಡ್ ಮತ್ತು ಸಾಬೂನು ಎಲ್ಲರಿಗೂ ಮುಂಚಿತವಾಗಿ ಮನೆ ಬಾಗಿಲಿನ ಮೂಲಕ ಉಚಿತವಾಗಿ ವಿತರಿಸಬೇಕು” ಎಂದು ಅವರು ಬರೆದಿದ್ದಾರೆ.

ಸಿಕ್ಕಿಕೊಂಡ ವಲಸೆ ಕಾರ್ಮಿಕರಿಗೆ ಬಸ್ಸುಗಳು ಮತ್ತು ರೈಲುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಬೇಕು ಎಂದು ಹೇಳಿದ್ದಾರೆ.

ನರೇಗಾ ಗೆ ಹೋಲುವ ಉದ್ಯೋಗ ಖಾತರಿ ಯೋಜನೆಯನ್ನು ನಗರ ಪ್ರದೇಶಗಳಿಗೂ ವಿನ್ಯಾಸಗೊಳಿಸಬೇಕು ಹಾಗೂ ವೇತನವನ್ನು ಸಕಾಲಿಕವಾಗಿ ಪಾವತಿಸುವುದನ್ನು ಖಾತ್ರಿಪಡಿಸಬೇಕು ಎಂದು ಹೇಳಿದ್ದಾರೆ.

ಸುಸ್ಥಿರ ಕೃಷಿ ಉಪಕ್ರಮಗಳನ್ನು ಉತ್ತೇಜಿಸಲು ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸಲು  ಹಣವನ್ನು ಮೀಸಲಿಡಬೇಕು ಎಂದು ಪ್ರೇಮ್‌ಜಿ ಬರೆದಿದ್ದಾರೆ.


ಓದಿ: ಭಿನ್ನಮತ ದಮನಕ್ಕೆ ಕೇಂದ್ರ ಸರಕಾರದಿಂದ ಕೋವಿಡ್- 19 ಅಸ್ತ್ರ ಬಳಕೆ


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ದಯವಿಟ್ಟು ಕಾರ್ಮಿಕ ಕಾನೂನು ಸಲಹೆಗಾರ ಫೋನ್ ನಂಬರ್ ಮತ್ತು ವಿಳಾಸ ತಿಳಿಸಿರಿ..

LEAVE A REPLY

Please enter your comment!
Please enter your name here

- Advertisment -

‘ಕರ್ನಾಟಕ ಸರ್ಕಾರ ಸಾಮಾಜಿಕ ನ್ಯಾಯ ನಿರಾಕರಿಸುತ್ತಿದೆ’: ವಿಶೇಷ ಸಚಿವ ಸಂಪುಟ ಸಭೆ ಮುಂದೂಡಿಕೆಗೆ ಹೋರಾಟಗಾರರ ಖಂಡನೆ

ಕಳೆದ 35 ವರ್ಷಗಳಿಂದ ಒಳಮೀಸಲಾತಿಗಾಗಿ ಆಗ್ರಹಿಸಿ ನಡೆಯುತ್ತಿದ್ದ ಹೋರಾಟಕ್ಕೆ ಸುಪ್ರೀಂ ಕೋರ್ಟ್‌ ತೀರ್ಪಿನ ನಂತರ ಕರ್ನಾಟಕದಲ್ಲಿ ಒಳಮೀಸಲಾತಿ ಜಾರಿಯಾಗುವ ಭರವಸೆಯನ್ನು ಒಳಮೀಸಲಾತಿ ಹೋರಾಟಗಾರರು ಹೊಂದಿದ್ದರು.  ಕಾಂಗ್ರೆಸ್‌ ನೇತೃತ್ವದ ಕರ್ನಾಟಕ ಸರ್ಕಾರ ಎರಡು ವರ್ಷಗಳಿಂದ ನಿರಂತರವಾಗಿ...

ನೇಪಾಳದ ನೂತನ ಪ್ರಧಾನಿಯಾಗಿ 35ವರ್ಷದ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ

ಕಠ್ಮಂಡು: 'ಬಾಲೆನ್' ಎಂದು ಪ್ರೀತಿಯಿಂದ ಕರೆಯಲ್ಪಡುವ ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು, ಹಿಮಾಲಯನ್ ರಾಷ್ಟ್ರದಲ್ಲಿ ಉನ್ನತ ಕಾರ್ಯಕಾರಿ ಹುದ್ದೆಯನ್ನು ಅಲಂಕರಿಸಿದ ಅತ್ಯಂತ ಕಿರಿಯ ನಾಯಕರಾಗಿ ಬಾಲೆನ್...

ಶಿವನ ಅವತಾರ ಎಂದು ಹೇಳಿಕೊಳ್ಳುತ್ತಿದ್ದ ಋುಷಿಕೇಶ್ ವೈದ್ಯ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ: ಎಫ್‌ಐಆರ್ ನಂತರ ದೇವಮಾನವ ಪರಾರಿ

ವಸಾಯಿ: ಶಿವನ ಅವತಾರ ಎಂದು ಹೇಳಿಕೊಂಡು ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಸ್ವಯಂ ಘೋಷಿತ ದೇವಮಾನವ ಋಷಿಕೇಶ್ ವೈದ್ಯ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಘಟನೆ ವಸಾಯಿ-ವಿರಾರ್ ಪ್ರದೇಶ...

ಜ್ಯೋತಿಷಿ ಅಶೋಕ್ ಖರತ್ ಲೈಂಗಿಕ ದೌರ್ಜನ್ಯ; ಸಂತ್ರಸ್ತರ ವಿಡಿಯೋ ಪ್ರಸಾರ ಮಾಡುವವರ ವಿರುದ್ಧ ಕ್ರಿಮಿನಲ್ ಕೇಸ್: ದೇವೇಂದ್ರ ಫಡ್ನವೀಸ್

ಮುಂಬೈ: ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಅವರಿಂದ ದೌರ್ಜನ್ಯಕ್ಕೊಳಗಾದ ಸಂತ್ರಸ್ತ ಮಹಿಳೆಯರ ಅಶ್ಲೀಲ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡುವವರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ...

ಕ್ಷಿಪಣಿಗಳ ಮೇಲೆ ಭಾರತ ಸೇರಿದಂತೆ ಹಲವು ರಾಷ್ಟ್ರಗಳಿಗೆ ಧನ್ಯವಾದ ಸಂದೇಶ ಬರೆದ ಇರಾನ್

ಯುನೈಟೆಡ್ ಸ್ಟೇಟ್ಸ್-ಇಸ್ರೇಲ್ ವಿರುದ್ಧದ ಯುದ್ಧದ ಮಧ್ಯೆ ಇರಾನ್‌ನೊಂದಿಗೆ ಒಗ್ಗಟ್ಟನ್ನು ತೋರಿಸಿದ ರಾಷ್ಟ್ರಗಳಿಗೆ ಇರಾನ್‌ ತನ್ನ ಕ್ಷಿಪಣಿಗಳು ಕೃತಜ್ಞತಾ ಸಂದೇಶ ಬರೆದಿದೆ. ಕ್ಷಿಪಣಿಗಳ ಮೇಲೆ ಬರೆಯಲಾದ ಸಂದೇಶಗಲ್ಲಿ "ಭಾರತದ ಜನರಿಗೆ ಧನ್ಯವಾದಗಳು" ಎಂದು ಕಂಡುಬಂದಿದೆ. ಜೊತೆಗೆ,...

ಬಿಜೆಪಿಗೆ ಉಳಿದೆಲ್ಲಾ ಪಕ್ಷಗಳಿಗಿಂತ 10 ಪಟ್ಟು ಹೆಚ್ಚು ದೇಣಿಗೆ: ವರದಿ

2024–25ರ ಆರ್ಥಿಕ ವರ್ಷದಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ ( ಬಿಜೆಪಿ ) ಇತರ ಎಲ್ಲಾ ರಾಷ್ಟ್ರೀಯ ಪಕ್ಷಗಳು ಒಟ್ಟು ಸೇರಿಸಿ ಪಡೆದ ದೇಣಿಗೆಗಿಂತ ಸುಮಾರು ಹತ್ತು ಪಟ್ಟು ಹೆಚ್ಚು ದೇಣಿಗೆ ಪಡೆದಿದೆ...

ವಿಶಾಖಪಟ್ಟಣ| ಕುಡಿದ ಮತ್ತಿನಲ್ಲಿ ಎಪಿಎಸ್‌ಆರ್‌ಟಿಸಿ ಬಸ್‌ ಅಪಹರಿಸಿದ ವ್ಯಕ್ತಿ

ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಎಪಿಎಸ್‌ಆರ್‌ಟಿಸಿ ಬಸ್ಸನ್ನು ಅಪಹರಿಸಿ ಸುಮಾರು ಒಂದು ಕಿಲೋಮೀಟರ್ ಅಜಾಗರೂಕತೆಯಿಂದ ಚಲಾಯಿಸಿ ಸಾರ್ವಜನಿಕರಲ್ಲಿ ಭೀತಿ ಮೂಡಿಸಿದ ಆಘಾತಕಾರಿ ಘಟನೆ ವಿಶಾಖಪಟ್ಟಣದಲ್ಲಿ ನಡೆದಿದೆ. ಪ್ರತ್ಯಕ್ಷ್ಯದರ್ಶಿಗಳ ಪ್ರಕಾರ, ಮಾರ್ಚ್ 26 ರ ಗುರುವಾರ ಬಸ್...

ಕರ್ನಾಟಕ ವಿಧಾನಸಭೆಯಲ್ಲಿ ಐಪಿಎಲ್ ಟಿಕೆಟ್ ವಿವಾದ; ಶಾಸಕರನ್ನು ಟೀಕಿಸಿದ ತೇಜಸ್ವಿ ಸೂರ್ಯ ವಿರುದ್ಧ ಡಿಕೆಶಿ ವಾಗ್ದಾಳಿ

ಶಾಸಕರಿಗೆ ಐಪಿಎಲ್ 2026 ಟಿಕೆಟ್ ಹಂಚಿಕೆ ವಿವಾದದ ನಡುವೆ ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರೋಧ ಪಕ್ಷದ ನಾಯಕ ತೇಜಸ್ವಿ ಸೂರ್ಯ ವಿರುದ್ಧ ಕಿಡಿಕಾರಿದ್ದಾರೆ  ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯಗಳಿಗೆ ವಿಐಪಿ ಟಿಕೆಟ್‌ಗಳಿಗೆ...

ವಿಚಾರಣೆಯ ನಂತರವೂ 8 ಲಕ್ಷ ಮತದಾರರ ಹೆಸರು ಅಳಿಸಲಾಗಿದೆ; ಬಂಗಾಳದಲ್ಲಿ ಎನ್.ಆರ್.ಸಿ ಇಲ್ಲ: ಮಮತಾ ಬ್ಯಾನರ್ಜಿ

ಮೊದಲ ಪೂರಕ ಮತದಾರರ ಪಟ್ಟಿ ಪ್ರಕಟವಾದ ನಂತರ ಎಂಟು ಲಕ್ಷ ಮತದಾರರ ಹೆಸರುಗಳನ್ನು ಅಳಿಸಲಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಇದು ರಾಜ್ಯದಲ್ಲಿ ಚುನಾವಣಾ ಪಾರದರ್ಶಕತೆಯ ಬಗ್ಗೆ ಗಂಭೀರ...

ಪೆಟ್ರೋಲ್-ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿದ ಕೇಂದ್ರ ಸರ್ಕಾರ

ಜಾಗತಿಕ ತೈಲ ಬೆಲೆಗಳ ಏರಿಕೆಯ ಪರಿಣಾಮವನ್ನು ತಗ್ಗಿಸುವ ಪ್ರಯತ್ನದಲ್ಲಿ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ 10 ರೂ.ಗಳಷ್ಟು ಕಡಿಮೆ ಮಾಡಿದೆ, ಇದರಿಂದಾಗಿ ಪೆಟ್ರೋಲ್‌ಗೆ 3 ರೂ.ಗಳಷ್ಟು...