Homeಮುಖಪುಟಈಗ ಯಾವುದೇ ಚುನಾವಣೆ ಇಲ್ಲ, ಜೆಡಿಎಸ್​ ಜೊತೆಗೆ ಮೈತ್ರಿ ಅವಶ್ಯಕತೆ ಇಲ್ಲ; ಬಿ.ಸಿ. ಪಾಟೀಲ್

ಈಗ ಯಾವುದೇ ಚುನಾವಣೆ ಇಲ್ಲ, ಜೆಡಿಎಸ್​ ಜೊತೆಗೆ ಮೈತ್ರಿ ಅವಶ್ಯಕತೆ ಇಲ್ಲ; ಬಿ.ಸಿ. ಪಾಟೀಲ್

ಜೆಡಿಎಸ್​ ಸ್ವಾಭಿಮಾನಿಗಳ ಪಕ್ಷ, ನಮಗೆ ಯಾವುದೇ ಇತರೆ ಪಕ್ಷಗಳ ಜೊತೆಗೆ ವಿಲೀನವಾಗುವ ಅಥವಾ ಮೈತ್ರಿ ಸಾಧಿಸುವ ಅಗತ್ಯವಿಲ್ಲ ಎಂದು ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಸಹ ಕಿಡಿಕಾರಿದ್ದರು.

- Advertisement -
- Advertisement -

ಪ್ರಸ್ತುತ ಬಿಜೆಪಿ-ಜೆಡಿಎಸ್​ ಮೈತ್ರಿ ವಿಚಾರ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಜೆಡಿಎಸ್​ ಬಿಜೆಪಿಯ ‘ಬಿ ಟೀಮ್’​ ಎಂದು ಟೀಕಿಸಲಾಗುತ್ತಿದೆ. ಈ ಬಗ್ಗೆ ಸ್ವತಃ ಕುಮಾರಸ್ವಾಮಿ ಸಹ ಸ್ಪಷ್ಟನೆ ನೀಡಿದ್ದರು. ಇದರ ಬೆನ್ನಿಗೆ ಬಿಜೆಪಿ-ಜೆಡಿಎಸ್​ ಮೈತ್ರಿ ಬಗ್ಗೆ ಮಾತನಾಡಿರುವ ಕೃಷಿ ಸಚಿವ ಬಿ.ಸಿ. ಪಾಟೀಲ್​ “ಈಗ ಯಾವುದೇ ಚುನಾವಣೆ ಇಲ್ಲ. ಹೀಗಾಗಿ ಜೆಡಿಎಸ್ ಜೊತೆ ಹೊಂದಾಣಿಕೆ ಅವಶ್ಯಕತೆ ಇಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ-ಜೆಡಿಎಸ್​ ಮೈತ್ರಿ ಎಂಬ ವದಂತಿ ಜೆಡಿಎಸ್​ನವರೇ ಸೃಷ್ಟಿಸಿರುವ ಗಿಮಿಕ್​ ಎಂದು ಕಿಡಿಕಾರಿರುವ ಸಚಿವ ಬಿ.ಸಿ. ಪಾಟೀಲ್, “ಬಿಜೆಪಿ ಸರ್ಕಾರ ಸುಭದ್ರವಾಗಿದೆ. ನಮಗೆ ಯಾರ ಬೆಂಬವೂ ಅಗತ್ಯವಿಲ್ಲ. ಅಲ್ಲದೆ, ಈಗ ಚುನಾವಣೆ ಇಲ್ಲವಾದ ಕಾರಣ ಜೆಡಿಎಸ್​ ಮೈತ್ರಿ ನಮಗೆ ಅಗತ್ಯವೂ ಇಲ್ಲ. ಅಸಲಿಗೆ ಇದೊಂದು ಗಿಮಿಕ್ ನಡೆಯುತ್ತಿದೆ. ಜೆಡಿಎಸ್ ನವರೇ ಗಿಮಿಕ್ ಮಾಡುತ್ತಿದ್ದಾರೆ. ಆದರೆ, ಯಾವ ಕಾರಣಕ್ಕಾಗಿ ಈ ಗಿಮಿಕ್​ ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಅದನ್ನ ನನ್ನ ಬಾಯಿಂದ ಯಾಕೆ ಹೇಳಿಸ್ತೀರಾ?” ಎಂದು ಕಿಡಿಕಾರಿದ್ದಾರೆ.

ಅಲ್ಲದೆ, “ಯಾರಾದರೂ ಬಿಜೆಪಿ ತತ್ವ ಸಿದ್ದಾಂತ ಮೆಚ್ಚಿ ಪಕ್ಷಕ್ಕೆ ಬಂದರೆ ನಾವು ಎಲ್ಲರನ್ನೂ ಸ್ವಾಗತಿಸುತ್ತೇವೆ. ಆದರೆ, ಯಾವ ಕಾಲದಲ್ಲೂ ಜೆಡಿಎಸ್​ ಜೊತೆಗೆ ಮಾತ್ರ ಮೈತ್ರಿ ಸಾಧ್ಯವಿಲ್ಲ. ಇವೆಲ್ಲಾ ಊಹಾಪೋಹ ವದಂತಿಗಳಾಗಿದ್ದು, ಜನ ಇದಕ್ಕೆ ಕಿವಿಗೊಡದೆ ಇರುವುದು ಒಳ್ಳೆಯದು” ಎಂದು ತಿಳಿಸಿದ್ಧಾರೆ.

ಇದೇ ವಿಚಾರವಾಗಿ ಇಂದು ಬೆಳಗ್ಗೆಯೇ ಕಿಡಿಕಾರಿದ್ದ ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ, “ಜೆಡಿಎಸ್​ ಸ್ವಾಭಿಮಾನಿಗಳ ಪಕ್ಷ, ನಮಗೆ ಯಾವುದೇ ಇತರೆ ಪಕ್ಷಗಳ ಜೊತೆಗೆ ವಿಲೀನವಾಗುವ ಅಥವಾ ಮೈತ್ರಿ ಸಾಧಿಸುವ ಅಗತ್ಯವಿಲ್ಲ. ಜನವರಿಯಿಂದ ಬೇರೆ ರೀತಿಯಲ್ಲಿ ಜೆಡಿಎಸ್​ ಪಕ್ಷವನ್ನು ಸಂಘಟಿಸಲಾಗುವುದು. ಅಲ್ಲದೆ, ರಾಜ್ಯದಲ್ಲಿ ಸ್ವಂತ ಬಲದ ಮೇಲೆ ಜೆಡಿಎಸ್​ ಶೀಘ್ರದಲ್ಲೇ ಸರ್ಕಾರ ರಚಿಸಲಿದೆ” ಎಂದಿದ್ದರು.


ಇದನ್ನೂ ಓದಿ :ಈ ದೇಶದಲ್ಲಿ ಯಾವ ಪಕ್ಷಕ್ಕೂ ಯಾವ ಸಿದ್ಧಾಂತವೂ ಇಲ್ಲ: ಎಚ್.ಡಿ ಕುಮಾರಸ್ವಾಮಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಹಾರದಲ್ಲಿ ಜೆಡಿಯು ಮುಖಂಡನ ಗುಂಡಿಟ್ಟು ಹತ್ಯೆ: ಭುಗಿಲೆದ್ದ ಪ್ರತಿಭಟನೆ

0
ಜೆಡಿಯು ಯುವ ಮುಖಂಡನನ್ನು ಅಪರಿಚಿತ ದಾಳಿಕೋರರು ಗುಂಡಿಕ್ಕಿ  ಹತ್ಯೆ ಮಾಡಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಬೀದಿಗಿಳಿದು ಪ್ರತಿಭಟನೆಯನ್ನು ನಡೆಸಿದ್ದಾರೆ. ಸೌರಭ್ ಕುಮಾರ್ ಹತ್ಯೆಗೀಡಾದ ಜೆಡಿಯು ಯುವ ಮುಖಂಡ....