Homeಕರ್ನಾಟಕರೆಡ್ಡಿ ಬಳ್ಳಾರಿಗೆ ಕಾಲಿಡೋವರೆಗೂ ಒಂದೇ ಒಂದು ಗಲಾಟೆ ಇರಲಿಲ್ಲ; ಕೋಟೆ ನಿರ್ಮಿಸಿಕೊಂಡವರನ್ನು ಯಾರಾದಾರೂ ಕೊಲ್ಲಲು ಹೋಗುತ್ತಾರೆಯೇ:...

ರೆಡ್ಡಿ ಬಳ್ಳಾರಿಗೆ ಕಾಲಿಡೋವರೆಗೂ ಒಂದೇ ಒಂದು ಗಲಾಟೆ ಇರಲಿಲ್ಲ; ಕೋಟೆ ನಿರ್ಮಿಸಿಕೊಂಡವರನ್ನು ಯಾರಾದಾರೂ ಕೊಲ್ಲಲು ಹೋಗುತ್ತಾರೆಯೇ: ಡಿಕೆ ಶಿವಕುಮಾರ್

- Advertisement -
- Advertisement -

“ಜನಾರ್ದನ ರೆಡ್ಡಿ ಬಳ್ಳಾರಿಗೆ ಕಾಲಿಡೋವರೆಗೂ ಒಂದೇ ಒಂದು ಗಲಾಟೆ ಇರಲಿಲ್ಲ. ಸಣ್ಣ ಅಹಿತಕರ ಘಟನೆ ಆಗಿರಲಿಲ್ಲ. ಸಣ್ಣ ಎಫ್ಐಆರ್ ಇರಲಿಲ್ಲ. ಅವರು ಬಂದಮೇಲೆ ಗಲಭೆ ಆಗಿದೆ. ಹೀಗಾಗಿ ಅವರಿಗೆ ಮಾತನಾಡುವ ಹಕ್ಕಿಲ್ಲ. ಶಾಸಕ ಭರತ್ ರೆಡ್ಡಿ ಬೆನ್ನಿಗೆ ನಮ್ಮ ಪಕ್ಷ ನಿಲ್ಲಲಿದೆ. ನಾವು ನಮ್ಮ ಕಾರ್ಯಕರ್ತನನ್ನು ಕಳೆದುಕೊಂಡಿದ್ದೇವೆ. ಇದಕ್ಕೆ ಕಾರಣ ಯಾರು ಎಂಬುದು ತನಿಖೆಯಿಂದ ಹೊರಬರಲಿದ್ದು, ಕಾನೂನು ತನ್ನ ಕ್ರಮ ಕೈಗೊಳ್ಳಲಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ನಡೆದ ಶನಿವಾರ ನಡೆದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಶಿವಕುಮಾರ್ ಮಾತನಾಡಿದರು.

“ಮೊದಲ ಬಾರಿಗೆ ಬಳ್ಳಾರಿಯಲ್ಲಿ ನಮ್ಮ ಸರ್ಕಾರ ವಾಲ್ಮೀಕಿ ಮಹರ್ಷಿಯವರ ಪುತ್ಥಳಿ ನಿರ್ಮಿಸುತ್ತಿದೆ. ನಮ್ಮ ಶಾಸಕರು ಅದರ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ನಗರದ ಎಲ್ಲೆಡೆ ಅದರ ಪೋಸ್ಟರ್ ಗಳನ್ನು ಹಾಕಿದ್ದಾರೆ. ಅದರಲ್ಲಿ ತಪ್ಪೇನಿದೆ? ನಮ್ಮ ಮನೆ ಮುಂದೆಯೂ ಬಿಜೆಪಿಯವರು ಪೋಸ್ಟರ್ ಹಾಕುತ್ತಿರುತ್ತಾರೆ. ಅದನ್ನು ನಾನು ಬೇಡ ಎನ್ನಲು ಸಾಧ್ಯವೇ? ಈ ಪೋಸ್ಟರ್ ಹಾಕುವುದರಿಂದ ಬಿಜೆಪಿಯವರಿಗೆ ಆಗಿರುವ ತೊಂದರೆ ಆದರೂ ಏನು? ಅವರು ಸರ್ಕಾರಿ ಜಾಗದಲ್ಲಿ ಹಾಕಿದ್ದಾರೆ? ಇದರಲ್ಲಿ ರೆಡ್ಡಿ ಜಗಳಕ್ಕೆ ಬರುವ ಅಗತ್ಯವೇನಿತ್ತು. ನಾವು ನಮ್ಮ ಕಾರ್ಯಕರ್ತನನ್ನು ಕಳೆದುಕೊಂಡಿದ್ದೇವೆ. ಇದಕ್ಕೆ ಕಾರಣ ಬಿಜೆಪಿಯವರು. ಈ ಪ್ರಕರಣದ ತನಿಖೆ ನಡೆಯುತ್ತಿದ್ದು, ಈ ಬಗ್ಗೆ ಸಿಎಂ, ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಮಾತನಾಡಿದ್ದಾರೆ. ಪೊಲೀಸರ ತನಿಖೆಯಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ” ಎಂದು ಸ್ಪಷ್ಟಪಡಿಸಿದರು.

“ಪಕ್ಷದ ವತಿಯಿಂದ ಈ ಘಟನೆ ಬಗ್ಗೆ ಅಧ್ಯಯನ ನಡೆಸಲು ಹೆಚ್.ಎಂ. ರೇವಣ್ಣ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ನಿಯೋಗ ಕಳುಹಿಸಿದ್ದೇವೆ. ಬಿಜೆಪಿಯವರಿಗೆ ಬಳ್ಳಾರಿಯಲ್ಲಿ ನಮ್ಮ ಪಕ್ಷದ ಗೆಲುವು ಅರಗಿಸಿಕೊಳ್ಳಲು ಆಗುತ್ತಿಲ್ಲ. ಸೋತ ನಂತರ ಶ್ರೀರಾಮುಲು ಹಾಗೂ ಜನಾರ್ಧನ ರೆಡ್ಡಿ ಅವರು ತಬ್ಬಾಡುತ್ತಿದ್ದಾರೆ. ಅವರ ನಡುವೆ ಏನೇನೂ, ಎಷ್ಟಿದೆ ಎಂಬುದು ಗೊತ್ತಿದೆ. ಮತ್ತೆ ಬಳ್ಳಾರಿಯಲ್ಲಿ ತಮ್ಮ ರಿಪಬ್ಲಿಕ್ ತರಲು ಪ್ರಯತ್ನಿಸುತ್ತಿದ್ದಾರೆ. ನಾವು ಅದಕ್ಕೆ ಅವಕಾಶ ನೀಡುವುದಿಲ್ಲ. ನಮ್ಮ ಕಾರ್ಯಕರ್ತರಿಗೆ ನಮ್ಮ ಸಿಎಂ ಈಗಾಗಲೇ ನಿರ್ದೇಶನ ನೀಡಿದ್ದಾರೆ. ಜನಾರ್ದನ ರೆಡ್ಡಿ ಅವರು ಅಲ್ಲಿಗೆ ಬರುವವರೆಗೂ ಅಲ್ಲಿ ಒಂದೇ ಒಂದು ಗಲಾಟೆ ನಡೆದಿರಲಿಲ್ಲ” ಎಂದು ಹೇಳಿದರು.

“ಈ ಪ್ರಕರಣದ ಬೆನ್ನಲ್ಲೇ ಎಲ್ಲಾ ಖಾಸಗಿ ಗನ್ ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಗನ್ ವಿತರಣೆ ವಿಚಾರದಲ್ಲಿ ಕೈಗೊಳ್ಳಬೇಕಾಗಿರುವ ಕ್ರಮಗಳನ್ನು ಸಿದ್ಧಪಡಿಸಿ, ನಿಯಮಾವಳಿ ರೂಪಿಸುತ್ತೇವೆ” ಎಂದು ತಿಳಿಸಿದರು.

ಶಾಸಕರಾದ ಭರತ್ ರೆಡ್ಡಿ ಅವರು ಮನೆಗೆ ಬೆಂಕಿ ಹಚ್ಚುವ ಕುರಿತು ಮಾತನಾಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಯಾರೂ ಮನೆಗೆ ಬೆಂಕಿ ಹಚ್ಚುವುದಿಲ್ಲ, ಅದನ್ನು ಒಪ್ಪುವುದಿಲ್ಲ. ಮೊದಲು ಅವರ ಹೇಳಿಕೆ ಏನಿದೆ ಎಂದು ಪರಿಶೀಲನೆ ಮಾಡುತ್ತೇನೆ” ಎಂದರು.

ಜನಾರ್ಧನ ರೆಡ್ಡಿ ಮನೆ ಮುಂದೆ ಭರತ್ ರೆಡ್ಡಿ ಬೆಂಬಲಿಗರು ಪೋಸ್ಟರ್ ಅಂಟಿಸಿದ್ದರ ಬಗ್ಗೆ ಕೇಳಿದಾಗ, “ಅಲ್ಲಿ ಭರತ್ ರೆಡ್ಡಿ ಇದ್ದರಾ? ಜನಾರ್ಧನ ರೆಡ್ಡಿ ಅವರ ಮನೆ ಮುಂದೆ ವಾಲ್ಮೀಕಿ ಅವರ ಪೋಸ್ಟರ್ ಇರಬಾರದಾ? ಇದ್ದರೆ ತಪ್ಪೇನಿದೆ” ಎಂದು ಪ್ರಶ್ನಿಸಿದರು.

“ಗುಂಡು ಯಾರು ಹಾರಿಸಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಕಾನೂನು ತನ್ನ ಕ್ರಮ ಕೈಗೊಳ್ಳಲಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತದೆ” ಎಂದು ತಿಳಿಸಿದರು.

ಎಸ್‌ಪಿ ಸೇರಿದಂತೆ ಅಧಿಕಾರಿಗಳ ವರ್ಗಾವಣೆ ಬಗ್ಗೆ ಕೇಳಿದಾಗ, “ನನಗೆ ಈ ಘಟನೆ ತಿಳಿದ ತಕ್ಷಣೆ ಎಸ್‌ಪಿ ಜೊತೆ ಮಾತನಾಡಿದ್ದೇನೆ. ಅವರ ಯಾವ ಪರಿಸ್ಥಿತಿಯಲ್ಲಿ ಮಾತನಾಡಿದರು ಎಂಬುದು ನನ್ನ ಅನುಭವಕ್ಕೇ ಬಂದಿದೆ. ಅವರು ಏನು ಉತ್ತರ ನೀಡಿದ್ದಾರೆ ಎಂಬುದು ಗೊತ್ತಿದೆ. ಈ ಹಿಂದೆ ಇದ್ದ ಎಸ್‌ಪಿ, ಐಜಿ ಮತ್ತು ಶಾಸಕರ ಜತೆಗೂ ಮಾತನಾಡಿದ್ದೇನೆ. ಬೇರೆ ನಾಯಕರ ಜತೆಗೂ ಮಾತನಾಡಿದ್ದೇನೆ. ಶ್ರೀರಾಮುಲು ಕೂಡ ನನಗೆ ಕರೆ ಮಾಡಿ ಈ ಘಟನೆ ಬಗ್ಗೆ ಮಾಹಿತಿ ನೀಡಿದ್ದರು. ನಾನು ತಕ್ಷಣವೇ ಪೊಲೀಸರಿಗೆ ಎಚ್ಚರಿಸಿದ್ದೇನೆ. ಇಲ್ಲಿ ರಾಜಕೀಯ ಮುಖ್ಯವಲ್ಲ. ಶಾಂತಿ ನೆಲೆಸುವುದು ಬಹಳ ಮುಖ್ಯ. ಬಳ್ಳಾರಿಯ ಜನ ನೆಮ್ಮದಿಯ ವಾತಾವರಣ ನಿರ್ಮಾಣವಾಗುತ್ತಿದೆ ಎಂದುಕೊಂಡಿದ್ದರು. ನಮಗೆ ಅದು ಮುಖ್ಯ. ಪಕ್ಷದ ಅಧ್ಯಕ್ಷನಾಗಿ ನನಗೆ ನನ್ನದೇ ಆದ ಜವಾಬ್ದಾರಿ ಇದೆ” ಎಂದು ತಿಳಿಸಿದರು.

ಜನಾರ್ದನ ರೆಡ್ಡಿ ಡ್ರಾಮಾ ಮಾಸ್ಟರ್

ನನ್ನ ಹತ್ಯೆಗೆ ಸಂಚು ರೂಪಿಸಿದ್ದರು ಎಂಬ ಜನಾರ್ದನ ರೆಡ್ಡಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ಡ್ರಾಮಾ ಮಾಸ್ಟರ್. ಅವರು ಮೊದಲೇ ಸಿನಿಮಾ ನಿರ್ಮಾಪಕರಲ್ಲವೇ? ಡ್ರಾಮಾ ಮಾಡುತ್ತಾರೆ. ಕೋಟೆ ನಿರ್ಮಿಸಿಕೊಂಡು ನೂರು ಜನ ಭದ್ರತಾ ಸಿಬ್ಬಂದಿ ಹೊಂದಿರುವವರನ್ನು ಯಾರು ಹತ್ಯೆ ಮಾಡುತ್ತಾರೆ? ಬದಲಿಗೆ ಜನರಿಗೆ ಬೇರೆಯದೇ ರೀತಿಯ ಭಯವಿದೆ. ಜನಾರ್ಧನ ರೆಡ್ಡಿ ಅವರ ಕುಟುಂಬದವರಿಗೆ ಸೋಲು ಅರಗಿಸಿಕೊಳ್ಳಲು ಆಗುತ್ತಿಲ್ಲ. ಅದಕ್ಕೆ ಈ ರೀತಿ ಆರೋಪ ಮಾಡುತ್ತಿದ್ದಾರೆ. ಯಾರ ಇತಿಹಾಸ ಏನಿದೆ ಎಂಬುದನ್ನು ನೀವೇ ಅರ್ಥ ಮಾಡಿಕೊಳ್ಳಬೇಕು” ಎಂದು ತಿರುಗೇಟು ನೀಡಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರ‍್ಯಾಗಿಂಗ್‌ಗೆ ದಲಿತ ವಿದ್ಯಾರ್ಥಿನಿ ಬಲಿ: ‘ಜಾತಿ ಮತ್ತು ಲಿಂಗ ಆಧಾರಿತ ಸಾಂಸ್ಥಿಕ ಹಿಂಸಾಚಾರದ ಗಂಭೀರ ನಿದರ್ಶನ’ ಎಂದ ಮಾನವ ಹಕ್ಕುಗಳ ಸಂಘಟನೆ

ಹಿಮಾಚಲ ಪ್ರದೇಶದ ಸರ್ಕಾರಿ ಕಾಲೇಜಿನಲ್ಲಿ 19 ವರ್ಷದ ದಲಿತ ವಿದ್ಯಾರ್ಥಿನಿಯ ಸಾವಿನ ನಂತರ, ದಲಿತ ಹಕ್ಕುಗಳ ಸಂಘಟನೆಗಳು ಶುಕ್ರವಾರ ಮೂವರು ಹಿರಿಯ ವಿದ್ಯಾರ್ಥಿಗಳು ಮತ್ತು ಕಾಲೇಜು ಪ್ರಾಧ್ಯಾಪಕರನ್ನು ಬಂಧಿಸಬೇಕು ಮತ್ತು ಅಧಿಕಾರಿಗಳು ಅದಕ್ಕೆ...

ಫ್ರೀಡಂ ಫ್ಲೋಟಿಲ್ಲಾ ಸದಸ್ಯರ ಮೇಲೆ ಇಸ್ರೇಲಿ ಪಡೆಗಳಿಂದ ಲೈಂಗಿಕ ದೌರ್ಜನ್ಯ ಆರೋಪ : ಸ್ವತಂತ್ರ ತನಿಖೆ ಆಗ್ರಹ

ಗಾಝಾ ಮೇಲೆ ವಿಧಿಸಲಾಗಿದ್ದ ದಿಗ್ಬಂಧನವನ್ನು ಮುರಿಯಲು ಪ್ರಯತ್ನಿಸಿದ ಫ್ಲೋಟಿಲ್ಲಾ ಹಡಗುಗಳನ್ನು ತಡೆದ ನಂತರ, ಅವುಗಳಲ್ಲಿದ್ದ ಜಗತ್ತಿನ ವಿವಿಧ ಭಾಗಗಳ ಹಲವು ಹೋರಾಟಗಾರರನ್ನು ಇಸ್ರೇಲ್ ಸೇನೆ ಬಂಧಿಸಿದೆ. ಈ ಬಂಧಿತರ ಮೇಲೆ ಇಸ್ರೇಲಿ...

‘ನನಗೆ, ನನ್ನ ಕುಟುಂಬಕ್ಕೆ ‘ಝಡ್‌’ ಶ್ರೇಣಿ ಭದ್ರತೆ ಒದಗಿಸಿ’: ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಜನಾರ್ದನ ರೆಡ್ಡಿ ಪತ್ರ 

ಕೊಪ್ಪಳ: ಬಳ್ಳಾರಿಯಲ್ಲಿ ತಮ್ಮ ಮೇಲೆ "ಪೂರ್ವ ಯೋಜಿತ ಹತ್ಯೆ ಯತ್ನ" ನಡೆದಿದೆ ಎಂದು ಆರೋಪಿಸಿ, ಬಿಜೆಪಿ ಶಾಸಕ ಜಿ ಜನಾರ್ದನ ರೆಡ್ಡಿ ಅವರು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೇಂದ್ರ ಗೃಹ ಸಚಿವ...

ಪೋಕ್ಸೋ ಪ್ರಕರಣದ ದೂರು ತಿರುಚಿದ ಪೊಲೀಸರು : ಸಂತ್ರಸ್ತೆಯ ತಾಯಿ ಆರೋಪ

​ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣವೊಂದನ್ನು ದಾಖಲಿಸುವ ವೇಳೆ ಸಂತ್ರಸ್ತೆಯ ತಾಯಿ ನೀಡಿದ ಮೂಲ ದೂರನ್ನು ತಿರುಚಿ, ಪೊಲೀಸರು ತಮಗೆ ಇಷ್ಟ ಬಂದಂತೆ ಎಫ್‌ಐಆರ್ ದಾಖಲಿಸಿದ್ದಾರೆ ಎಂಬ...

‘ವೆನೆಜುವೆಲಾಗೆ ಅನಗತ್ಯ ಪ್ರಯಾಣ ತಪ್ಪಿಸಿ’: ಅಮೆರಿಕಾ ದಾಳಿ ನಂತರ ಭಾರತ ಪ್ರಜೆಗಳಿಗೆ ವಿದೇಶಾಂಗ ಸಚಿವಾಲಯ ಸೂಚನೆ

ನವದೆಹಲಿ: ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಅಮೆರಿಕ ಮಿಲಿಟರಿ ಕಾರ್ಯಾಚರಣೆಯಲ್ಲಿ ಸೆರೆಹಿಡಿದ ನಂತರ ಭಾರತ ಶನಿವಾರ ರಾತ್ರಿ ವೆನೆಜುವೆಲಾಗೆ ಅನಗತ್ಯ ಪ್ರಯಾಣವನ್ನು ತಪ್ಪಿಸುವಂತೆ ತನ್ನ ಪ್ರಜೆಗಳಿಗೆ ಸಲಹೆ ನೀಡಿದೆ. ಜೊತೆಗೆ...

ಉತ್ತರ ಕನ್ನಡ | ಯಲ್ಲಾಪುರದ ರಂಜಿತಾ ಕೊಲೆ ಆರೋಪಿ ಶವವಾಗಿ ಪತ್ತೆ : ಆತ್ಮಹತ್ಯೆ ಶಂಕೆ

ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದ ಕಾಳಮ್ಮನಗರದಲ್ಲಿ ಶನಿವಾರ (ಜ.3) ನಡೆದ ಅಡುಗೆ ಸಹಾಯಕಿ ರಂಜಿತಾ ಮಲ್ಲಪ್ಪ ಬನ್ಸೊಡೆ (30) ಅವರ ಹತ್ಯೆ ಪ್ರಕರಣದ ಆರೋಪಿ ರಫೀಕ್ ಇಮಾಮಸಾಬ ಯಳ್ಳೂರ(30) ಅವರ ಮೃತದೇಹ ಆತ್ಮಹತ್ಯೆಗೈದ...

ನ್ಯೂಯಾರ್ಕ್ ಜೈಲಿನಲ್ಲಿ ಮಡುರೊ ; ವೆನಿಜುವೆಲಾವನ್ನು ಅಮೆರಿಕ ಆಳಲಿದೆ ಎಂದ ಟ್ರಂಪ್

ಅಮೆರಿಕ ಸೇನೆಯಿಂದ ಶನಿವಾರ (ಜ.3) ಸೆರೆಹಿಡಿಯಲ್ಪಟ್ಟ ವೆನಿಜುವೆಲಾ ಅಧ್ಯಕ್ಷ ನಿಕೊಲಸ್ ಮಡೂರೊ ಮತ್ತು ಅವರ ಪತ್ನಿ ಸಿಲಿಯಾ ಪ್ಲೋರ್ಸ್ ಅವರನ್ನು ನ್ಯೂಯಾರ್ಕ್‌ಗೆ ಕರೆದೊಯ್ಯಲಾಗಿದೆ. ನ್ಯೂಯಾರ್ಕ್‌ನ ಡ್ರಗ್ ಎನ್‌ಫೋರ್ಸ್‌ಮೆಂಟ್ ಅಡ್ಮಿನಿಸ್ಟ್ರೇಷನ್ (ಡಿಇಎ) ಮುಖ್ಯ ಕಛೇರಿಯಲ್ಲಿ...

‘ನಾವು ಯಾರನ್ನು ಶಿಕ್ಷಿಸುತ್ತಿದ್ದೇವೆ?’: ಕೆಕೆಆರ್ ತಂಡದಿಂದ ಬಾಂಗ್ಲಾ ಕ್ರಿಕೆಟಿಗನನ್ನು ಕೈಬಿಡುವ ನಿರ್ಧಾರಕ್ಕೆ ಶಶಿ ತರೂರ್ ಪ್ರತಿಕ್ರಿಯೆ

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಕ್ರಿಕೆಟ್ ಅನ್ನು "ಬುದ್ಧಿಹೀನವಾಗಿ ರಾಜಕೀಯಗೊಳಿಸಬಾರದು" ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಶನಿವಾರ ಹೇಳಿದ್ದಾರೆ.  ಶಾರುಖ್ ಖಾನ್ ಒಡೆತನದ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದಿಂದ, ಬಿಸಿಸಿಐ...

ಕಪ್ಪು ಶರ್ಟ್ ಧರಿಸಿದ್ದಕ್ಕೆ ‘ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ ಪುರಸ್ಕೃತ ಯುವ ಲೇಖಕನನ್ನೇ ತಡೆದ ಪೊಲೀಸರು

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಉಪಸ್ಥಿತಿಗೆ ಸಂಬಂಧಿಸಿದ ಭದ್ರತಾ ಶಿಷ್ಟಾಚಾರವನ್ನು ಉಲ್ಲೇಖಿಸಿ ಪೊಲೀಸರು, 99 ನೇ ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಕಪ್ಪು ಶರ್ಟ್ ಧರಿಸಿದ್ದಕ್ಕಾಗಿ ನನ್ನನ್ನು ತಡೆದರು ಎಂದು...

ಅಗರ್ತಲಾದಲ್ಲಿ ಹಿಂದುತ್ವವಾದಿಗಳಿಂದ ಮುಸ್ಲಿಂ ರಿಕ್ಷಾ ಚಾಲಕನ ಮೇಲೆ ಹಲ್ಲೆ, ಬೆಂಕಿ ಹಚ್ಚಲು ಯತ್ನ

ಗುರುವಾರ ತ್ರಿಪುರಾದ ರಾಜಧಾನಿ ಅಗರ್ತಲಾದಲ್ಲಿ ಮುಸ್ಲಿಂ ರಿಕ್ಷಾ ಚಾಲಕನೊಬ್ಬನನ್ನು ಕೊಲ್ಲುವ ಕ್ರೂರ ಪ್ರಯತ್ನದಲ್ಲಿ, ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ಆತನ ಮೇಲೆ ಹಲ್ಲೆ ನಡೆಸಿ, ಮರಳಿನಲ್ಲಿ ಅರ್ಧದಾರಿಯಲ್ಲೇ ಹೂತುಹಾಕಿ, ಬೆಂಕಿ ಹಚ್ಚಲು ಪ್ರಯತ್ನಿಸಿದೆ ಎಂದು...