ಮಹಾರಾಷ್ಟ್ರದ ಆಡಳಿತಾರೂಡ ಬಿಜೆಪಿ ಮತ್ತು ಶಿವಸೇನೆ ಪಕ್ಷಗಳು ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯ ಮೈತ್ರಿಯಲ್ಲಿ ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕಾಂಗ್ರೆಸ್ ಮತ್ತು ಶರದ್ ಪವಾರ್ ಅವರ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್.ಸಿ.ಪಿ) ಸುಮಾರು 30 ನಾಯಕರು ಬಿಜೆಪಿ ಸೇರಿದ್ದಾರೆ. ಇದರಿಂದಾಗಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಪಕ್ಷಗಳು ಮೈತ್ರಿಕೂಟವಾಗಿ ಸ್ಪರ್ಧಿಸುತ್ತವೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅವರು ಹಾಗೆ ಮಾಡಿದರೆ, ಈಗ ಬಿಜೆಪಿ ಸೇರಿರುವ ನಾಯಕರಿಗೆ ಟಿಕೆಟ್ ಕೊಡುವುದು ವಾಗುತ್ತದೆ.
ಜೊತೆಗೆ ಮುಖ್ಯಮಂತ್ರಿ ಹುದ್ದೆಯ ಮೇಲೆ ಉಭಯ ಪಕ್ಷಗಳು ಕಣ್ಣಿಟ್ಟಿವೆ. ಟಿಕೆಟ್ ಹಂಚಿಕೆ ಮತ್ತು ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿಯಿಂದಾಗಿ ಕೊನೆಗೆ ಈ ಚುನಾವಣೆಯು ಬಿಜೆಪಿ ಮತ್ತು ಶಿವಸೇನೆ ನಡುವಿನ ಯುದ್ಧವಾಗಿ ಕೊನೆಗೊಳ್ಳಬಹುದು ಎಂಬ ಉಹಾಪೋಹಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ. ಮೈತ್ರಿ ಮುರಿದುಕೊಳ್ಳಲು ಶಿವಸೇನಾ ಉತ್ಸುಕನಾಗಿಲ್ಲ. ಆದರೆ ಅಂತಿಮವಾಗಿ ಅಂತಹ ಪರಿಸ್ಥಿತಿ ಬಂದರೆ ಹೇಗೆ ಎದುರಿಸಬೇಕು ಎಂಬುದರ ಕುರಿತಾಗಿ ಈಗಾಗಲೇ ಸಿದ್ಧತೆ ನಡೆಸುತ್ತಿದೆ.
ಬಿಜೆಪಿ ಈಗ “ದೊಡ್ಡಣ್ಣನಂತೆ” ವರ್ತಿಸುತ್ತಿದೆ. ಜೊತೆಗೆ ರಾಜ್ಯದ 288 ಸ್ಥಾನಗಳಲ್ಲಿ 120 ಕ್ಕಿಂತ ಹೆಚ್ಚಿನದನ್ನು ಶಿವಸೇನೆಗೆ ನೀಡಬಾರದು ಎಂದು ಬಿಜೆಪಿ ಭಾವಿಸಿದೆ. ಬೃಹತ್ ಸಂಪನ್ಮೂಲಗಳನ್ನು ಹೊಂದಿರುವ ಇದು ತನ್ನದೇ ಸ್ವಂತ ಬಲದಲ್ಲಿ ಬಹುಮತವನ್ನು ಗಳಿಸಬಹುದು ಮತ್ತು ತನ್ನ ಉದ್ರಿಕ್ತ ಮಿತ್ರನನ್ನು ಸೋಲಿಸಬಹುದೆಂದು ಭಾವಿಸುತ್ತಿದೆ. ಆದರೆ ಇದು ಈಗಲೂ ಆರೆ ಕಾಲೋನಿಯಲ್ಲಿ ಮರಗಳನ್ನು ಕಡಿಯುವುದರ ವಿರುದ್ಧ ಮತ್ತು ಆರ್ಥಿಕತೆಯ ಬಗ್ಗೆ ಸರ್ಕಾರ ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ರವರ ಮಾತನ್ನು ಕೇಳಬೇಕು ಮುಂತಾದ ವಿಷಯಗಳ ಬಗ್ಗೆ ಟೀಕೆಯನ್ನು ಎದುರಿಸುತ್ತಿದೆ.
ಮೈತ್ರಿಕೂಟವನ್ನು ಮುರಿಯಲು ಶಿವಸೇನೆ ಉತ್ಸುಕನಾಗಿಲ್ಲ. ಆದರೆ ಅದು ಏಕಾಂಗಿಯಾಗಿ ಹೋಗುವ ಸಾಧ್ಯತೆಗಾಗಿ ತಯಾರಿ ನಡೆಸುತ್ತಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಮೈತ್ರಿಯನ್ನು ಮುಂದುವರಿಸಲು ಉತ್ಸುಕರಾಗಿದ್ದಾರೆ. “ಮೈತ್ರಿಕೂಟದಲ್ಲಿ ಹೋರಾಡಬೇಕಾದರೆ ನಾವು ಕೆಲವನ್ನು ಪಡೆಯುತ್ತೇವೆ ಮತ್ತು ಕೆಲವನ್ನು ಪಡೆಯುವುದಿಲ್ಲ. ಅದರ ಬಗ್ಗೆ ನಮಗೆ ಚಿಂತೆ ಇಲ್ಲ” ಎಂದು ಹೇಳಿದ್ದಾರೆ. ಆದರೆ ರಾಜ್ಯ ಬಿಜೆಪಿ 50-50 ಸ್ಥಾನಗಳ ಹಂಚಿಕೆ ಒಪ್ಪಂದಕ್ಕೆ ಸಿದ್ಧವಾಗಿಲ್ಲ ಎಂದು ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಆಪ್ತ ಸಹಾಯಕರಿಗೆ ತಿಳಿಸಿದ್ದಾರೆ.
ಸೀಟು ಹಂಚಿಕೆ ಬಗ್ಗೆ ಕೇಳಿದಾಗ, ಉದ್ಧವ್ ಠಾಕ್ರೆ “ನಮ್ಮ ನಡುವಿನ ಎಲ್ಲವನ್ನೂ ಈಗಾಗಲೇ ನಿರ್ಧರಿಸಲಾಗಿದೆ”. “ಮುಖ್ಯಮಂತ್ರಿಯವರು ಶಿವಸೇನೆ ಅಭ್ಯರ್ಥಿಗಳ ಪಟ್ಟಿಯನ್ನು ಮತ್ತು ಸ್ಪರ್ಧಿಸಬಹುದಾದ ಸ್ಥಾನಗಳನ್ನು ಸಿದ್ಧಪಡಿಸುವವರೆಗೆ ನಾನು ಕಾಯುತ್ತೇನೆ. ನಂತರ ನಾನು ಆ ಪಟ್ಟಿಯನ್ನು ನಮ್ಮ ಪಕ್ಷದ ಮುಂದೆ ಇಡುತ್ತೇನೆ ಮತ್ತು ನಾವು ನಿರ್ಧರಿಸುತ್ತೇವೆ” ಎಂದು ಹೇಳಿದ್ದಾರೆ.
ಪಕ್ಷದ ಮುಖವಾಣಿ ಸಾಮ್ನಾದಲ್ಲಿ, ಕೈಗಾರಿಕಾ ಮತ್ತು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರ ಐನ್ಸ್ ಸ್ಟೀನ್ ಗುರುತ್ವಾಕರ್ಷಣೆಯನ್ನು ಕಂಡುಹಿಡಿದಿದ್ದಾರೆ ಮತ್ತು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ವಾಹನ ಮಾರಾಟದಲ್ಲಿನ ಕುಸಿತಕ್ಕೆ ಮಿಲೇನಿಯಮ್ಸ್ ಕಾರಣವಾಗಿದ್ದಾರೆ ಎಂಬ ಹೇಳಿಕೆಗಳನ್ನು ತೀವ್ರವಾಗಿ ಟೀಕಿಸಲಾಗಿದೆ.
“ಲೋಕಸಭಾ ಚುನಾವಣೆಗೆ ಮೈತ್ರಿ ಘೋಷಿಸುವ ಮೊದಲು ಶಿವಸೇನೆಯವರು ಪ್ರಧಾನಿ ಮೋದಿಯವರ ಮೇಲೆ ಹೇಗೆ ದಾಳಿ ನಡೆಸಿದರು ಎಂಬುದನ್ನು ನಾವು ಮರೆತಿಲ್ಲ” ಎಂದು ಬಿಜೆಪಿಯ ಉನ್ನತ ನಾಯಕರೊಬ್ಬರು ಹೇಳಿಕೆ ನೀಡಿದ್ದಾರೆ. ಈ ನಡೆಗಳು ಇವರ ನಡುವೆ ಎಲ್ಲವೂ ಸರಿಯಿಲ್ಲ ಎಂಬುದನ್ನು ತೋರಿಸುತ್ತಿದ್ದು ಇದು ಯಾವಾಗ ಬೇಕಾದರೂ ಸ್ಫೋಟಗೊಳ್ಳಬಹದು ಅಥವಾ ಇದುವರೆಗೂ ಆಗಿರುವಂತೆ ಸ್ಪೋಟಗೊಳ್ಳದೆ ಇರಬಹದು..


