ಮೊನ್ನೆ ತಾನೇ ಜಾಮೀನು ಪಡೆದು ಜೈಲಿನಿಂದ ಹೊರಬಂದಿರುವ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಅಜಾದ್ ಇಂದು ಸಿಎಎ, ಎನ್‌ಆರ್‌ಸಿ ಚಳವಳಿಯ ಸಮಯದಲ್ಲಿ ಉತ್ತರಪ್ರದೇಶದಲ್ಲಿ ಹುತಾತ್ಮರಾದವರ ಕುಟುಂಬಗಳನ್ನು ಭೇಟಿಯಾಗಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು ಯೋಗಿಯ ಪೊಲೀಸರು ನನ್ನನ್ನು ಮೀರತ್‌ಗೆ ಹೋಗದಂತೆ ನಿಷೇಧಿಸಿದ್ದಾರೆ. ಆದ್ದರಿಂದ ನಾನು ಮೀರತ್‌ನ ಹೊರಗಿನ ಎಲ್ಲ ಕುಟುಂಬ ಸದಸ್ಯರನ್ನು ಭೇಟಿಯಾಗಿದ್ದೇನೆ. ನಮ್ಮ ಕಾನೂನು ತಂಡವು ಈ ಕುಟುಂಬಗಳಿಂದ ಎಲ್ಲ ಮಾಹಿತಿಯನ್ನು ಪಡೆದುಕೊಂಡಿದೆ. ಅವರಿಗೆ ಸಾಧ್ಯವಾಗುವ ಎಲ್ಲಾ ರೀತಿಯ ಸಹಾಯ ಮಾಡುವುದ ನಮ್ಮ ಕರ್ತವ್ಯವಾಗಿದೆ. ಹುತಾತ್ಮರ ಈ ತ್ಯಾಗ ವ್ಯರ್ಥವಾಗುವುದಿಲ್ಲ ಎಂದು ಬರೆದುಕೊಂಡಿದ್ದಾರೆ.
आज मेरठ में NRC,CAA आंदोलन के दौरान शहीद हुए साथियों के परिजनों से मुलाकात की,योगी की पुलिस ने मेरे मेरठ जाने पर प्रतिबंध लगा दिया था इसलिए मेरठ के बाहर ही सभी परिजनों से मिलना किया और हमारी लीगल टीम को इन परिवारों की हरसंभव मदद करने की ड्यूटी लगाई। यह कुर्बानी बेकार नही जाएगी। pic.twitter.com/1mkX7RpKUW
— Chandra Shekhar Aazad (@BhimArmyChief) January 19, 2020
ದೆಹಲಿಯ ಟಿಸ್ ಹಜಾರಿಯಾ ನ್ಯಾಯಾಲಯವು ಜಾಮೀನು ಷರತ್ತುಗಳಲ್ಲಿ ಫೆಬ್ರವರಿ 16ರವರೆಗೆ ದೆಹಲಿ ಪ್ರವೇಶಿಸಬಾರದೆಂದು ನಿರ್ಭಂದ ಹೇರಿದೆ. ಆದರೂ ಸುಮ್ಮನೆ ಕೂರುವುದಿಲ್ಲ, ಸಿಎಎ, ಎನ್‌ಆರ್‌ಸಿ ವಿರುದ್ಧ ದೇಶಾದ್ಯಂಚ ಸಂಚರಿಸಿ ಹೋರಾಡುತ್ತೇನೆ ಎಂದು ಅಜಾದ್ ಘೋಷಿಸಿದ್ದಾರೆ. ಜನವರಿ 26ರಂದು ಅವರು ಕರ್ನಾಟಕಕ್ಕೂ ಆಗಮಿಸುವ ಸಾಧ್ಯತೆಯಿದೆ.


