ತೂತುಕುಡಿಯ ಶ್ರೀವೈಕುಂಠಂನಲ್ಲಿ ಸೋಮವಾರ ಬಸ್ಸಿನಲ್ಲಿದ್ದ ಪ್ರಯಾಣಿಕರು ಹಾಗೂ ಸಾರ್ವಜನಿಕರು ನೋಡುತ್ತಿದ್ದಾಗ, ಪ್ರಬಲ ಜಾತಿಗೆ ಸೇರಿದ ಮೂವರು ಅಪ್ರಾಪ್ತ ಬಾಲಕರ ತಂಡವು 16 ವರ್ಷದ ದಲಿತ ಬಾಲಕನನ್ನು ಬಸ್ಸಿನಿಂದ ಹೊರಗೆಳೆದದು ಥಳಿಸಿ, ಕುಡುಗೋಲಿನಿಂದ ಹಲ್ಲೆ ನಡೆಸಿ ಕ್ರೂರತೆ ಪ್ರದರ್ಶಿಸಿದ್ದಾರೆ.
ದಾಳಿಕೋರರಲ್ಲಿ ಒಬ್ಬನ ಸಹೋದರಿಯನ್ನು ಸಂತ್ರಸ್ತ ಬಾಲಕ ಚುಡಾಯಿಸಿದ್ದಾನೆ ಎಂದು ಆರೋಪಿಸಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ನಂತರ, ಹಲ್ಲೆ ನಡೆಸಿದ ಅಪ್ರಾಪ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಸಂತ್ರಸ್ತ ಬಾಲಕನನ್ನು 11 ನೇ ತರಗತಿ ವಿದ್ಯಾರ್ಥಿ ಅರಿಯನಾಯಗಿಪುರಂನ ತಂಗಗಣೇಶ್ ಅವರ ಮಗ ದೇವೇಂದ್ರನ್ ಎಂದು ಗುರುತಿಸಲಾಗಿದೆ. ಸೋಮವಾರ ಬೆಳಿಗ್ಗೆ ಪಳಯಂಕೊಟ್ಟೈನಲ್ಲಿರುವ ತನ್ನ ಶಾಲೆಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ, ದಾಳಿಕೋರರು ಶ್ರೀವೈಕುಂಠಂ ಬಳಿಯ ಕೆಟ್ಟಿಯಮ್ಮಳ್ಪುರಂನಲ್ಲಿ ಬಸ್ ಅನ್ನು ಅಡ್ಡಗಟ್ಟಿ ಆತನನ್ನು ಹೊರಗೆಳೆದಿದ್ದಾರೆ. ಜನರು ಭಯಭೀತರಾಗಿ ನೋಡುತ್ತಿದ್ದಂತೆಯೇ, ಅಪ್ರಾಪ್ತರು ಕುಡುಗೋಲಿನಿಂದ ಹಲ್ಲೆ ನಡೆಸಿದ್ದು, ಬಾಲಕನ ತಲೆ ಮತ್ತು ಕೈಗಳ ಮೇಲೆ ಹಲವಾರು ಗಂಭೀರ ಗಾಯಗಳಾಗಿವೆ.
ದಾಳಿಕೋರರು, ಎಲ್ಲರೂ ಬಾಲಾಪರಾಧಿಗಳು, ದೇವೇಂದ್ರನ್ ಪ್ರಜ್ಞೆ ತಪ್ಪಿ ಬಿದ್ದ ತಕ್ಷಣ ಸ್ಥಳದಿಂದ ಪರಾರಿಯಾಗಿದ್ದರು. ಆತನನ್ನು ತಿರುನಲ್ವೇಲಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಆತ ಚಿಕಿತ್ಸೆ ಪಡೆಯುತ್ತಿದ್ದಾನೆ.
ಪ್ರಾಥಮಿಕ ವರದಿಗಳ ಪ್ರಕಾರ, ಇತ್ತೀಚೆಗೆ ಕಬಡ್ಡಿ ಪಂದ್ಯದ ವೇಳೆ ನಡೆದ ಗಲಾಟೆಗೆ ಪ್ರತಿಕ್ರಿಯೆಯಾಗಿ ಈ ದಾಳಿ ನಡೆದಿದೆ ಎಂದು ಹೇಳಲಾಗಿದ್ದರೂ, ಬಲಿಪಶು 11 ನೇ ತರಗತಿಯ ಬಾಲಕಿಯನ್ನು ಕೀಟಲೆ ಮಾಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಆಕೆ ದಾಳಿಕೋರರಲ್ಲಿ ಒಬ್ಬನ ಸಹೋದರಿ, ಪ್ರಬಲ ಜಾತಿಗೆ ಸೇರಿದವಳು. ಇದಕ್ಕೂ ಮೊದಲು, ದಾಳಿಕೋರರಲ್ಲಿ ಒರ್ವ ಹುಡುಗನಿಗೆ ಬೆದರಿಕೆ ಹಾಕಿದ್ದ ಎಂದು ವರದಿಯಾಗಿದೆ.
ಶ್ರೀವೈಕುಂಠಂ ಡಿಎಸ್‌ಪಿ ರಾಮಕೃಷ್ಣನ್ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ವಿಚಾರಣೆ ನಡೆಸಿತು. ದಾಳಿಯಲ್ಲಿ ಭಾಗಿಯಾಗಿದ್ದ ಮೂವರು ಬಾಲಾಪರಾಧಿಗಳನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಥುರಾ| ಹಲ್ಲೆ ನಡೆದ ಎರಡು ವಾರಗಳ ಬಳಿಕ ನಡೆದ ದಲಿತ ಸಹೋದರಿಯರ ಮದುವೆ; ಬಿಗಿ ಪೊಲೀಸ್ ಭದ್ರತೆ


