ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ “ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುವವರನ್ನು ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ಮಾಡುತ್ತಿರುವಂತೆ ಗುಂಡು ಹಾರಿಸಿ ಸಾಯಿಸಬೇಕು” ಎಂದು ಹೇಳುವ ಮೂಲಕ ವಿವಾದ ಹುಟ್ಟುಹಾಕಿದ್ದಾರೆ.
ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ದಿಲೀಪ್ ಘೋಷ್, ರಾಜ್ಯದಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ರೈಲ್ವೆ ಮತ್ತು ಸಾರ್ವಜನಿಕ ಸಾರಿಗೆಗೆ ಹಾನಿ ಮಾಡಿದವರ ಮೇಲೆ ಗುಂಡು ಹಾರಿಸದೆ, ಲಾಠಿ ಚಾರ್ಜ್ ಮಾಡಬೇಕು. ಆದರೆ ಅವರು ಕೈಕಟ್ಟಿ ಕುಳಿತಿದ್ದಾರೆ ಎಂದು ಟೀಕಿಸಿದ್ದಾರೆ.
“ಅವರು ನಾಶಪಡಿಸುತ್ತಿರುವ ಸಾರ್ವಜನಿಕ ಆಸ್ತಿ ಯಾರಿಗೆ ಸೇರಿದೆ ಎಂದು ಅವರು ಭಾವಿಸುತ್ತಾರೆ? ಅವರ ತಂದೆಯದ್ದೆ? ಸಾರ್ವಜನಿಕ ಆಸ್ತಿ ತೆರಿಗೆದಾರರಿಗೆ ಸೇರಿದೆ … ನೀವು ಇಲ್ಲಿಗೆ ಬರುತ್ತೀರಿ, ನಮ್ಮ ಆಹಾರವನ್ನು ತಿನ್ನುತ್ತೀರಿ, ಇಲ್ಲಿಯೇ ಇದ್ದು ಸಾರ್ವಜನಿಕ ಆಸ್ತಿಯನ್ನು ಹಾನಿಗೊಳಿಸುತ್ತೀರಿ. ಇದು ನಿಮ್ಮ ಪಾಳೆಗಾರಿಕೆಯೇ ನಿಮ್ಮನ್ನು ಲಾಠಿಗಳಿಂದ ಹೊಡೆದುರುಳಿಸಿ, ಗುಂಡು ಹಾರಿಸಿ ಜೈಲಿಗೆ ಹಾಕುತ್ತೇವೆ” ಎಂದು ಘೋಷ್ ಘೋಷಿಸಿದ್ದಾರೆ.
“ಮಮತಾ ಬ್ಯಾನರ್ಜಿಯ ಪೊಲೀಸರು ಸಾರ್ವಜನಿಕ ಆಸ್ತಿಗಳನ್ನು ನಾಶಪಡಿಸಿದ ಜನರ ವಿರುದ್ಧ ಕ್ರಮ ಕೈಗೊಂಡಿಲ್ಲ. ಉತ್ತರ ಪ್ರದೇಶ, ಅಸ್ಸಾಂ ಮತ್ತು ಕರ್ನಾಟಕದ ನಮ್ಮ ಸರ್ಕಾರಗಳು ಈ ಜನರನ್ನು ನಾಯಿಗಳಂತೆ ಹೊಡೆದುರುಳಿಸಿವೆ” ಎಂದು ಬಿಜೆಪಿ ನಾಯಕ ಹೇಳುವ ಮೂಲಕ ನಾವು “ಸರಿಯಾದ ಕೆಲಸ” ಮಾಡಿದ್ದೆವೆ ಎಂದಿದ್ದಾರೆ.
ದೇಶದಲ್ಲಿ ಎರಡು ಕೋಟಿ “ಮುಸ್ಲಿಂ ಒಳನುಸುಳುಕೋರರು” ಇದ್ದಾರೆ ಎಂದು ಹೇಳಿದ ಅವರು ಅದರಲ್ಲಿ ಒಂದು ಕೋಟಿ ಪಶ್ಚಿಮ ಬಂಗಾಳದಲ್ಲಿಯೇ ನೆಲೆಸಿದ್ದಾರೆ. ಹಿಂದೂ ಬಂಗಾಳಿಗಳ “ಹಿತಾಸಕ್ತಿಗಳನ್ನು ಹಾಳುಮಾಡುವ ಇಂಥವರನ್ನು ಮಮತಾ ಬ್ಯಾನರ್ಜಿ ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ.
Mr @DilipGhoshBJP, if that is the case why didn’t Delhi Police not shoot like dogs the ABVP/BJP goons who were running amuck in #JNU.
The language you use is the language of a bully, out to subjugate people with the might of the govt machinery. https://t.co/WEQmW1Uxdj
— ದಿನೇಶ್ ಗುಂಡೂರಾವ್/ Dinesh Gundu Rao (@dineshgrao) January 13, 2020
ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್‌ರವರು “ಹಾಗಿದ್ದಲ್ಲಿ ದೆಹಲಿ ಪೊಲೀಸರು JNU ಮೆಲೆ ದಾಳಿ ಮಾಡಿದ ಎಬಿವಿಪಿ / ಬಿಜೆಪಿ ಗೂಂಡಾಗಳನ್ನು ನಾಯಿಗಳಂತೆ ಏಕೆ ಶೂಟ್ ಮಾಡಲಿಲ್ಲ. ನೀವು ಬಳಸುವ ಭಾಷೆ ಪೀಡಕನ ಭಾಷೆಯಾಗಿದೆ, ಜನರನ್ನು ಅಧೀನಗೊಳಿಸಲು ಸರ್ಕಾರಿ ಯಂತ್ರೋಪಕರಣಗಳ ದುರ್ಬಳಕೆಯಿಂದ ಕೂಡಿದೆ”ಎಂದು ಅವರು ಕಿಡಿಕಾರಿದ್ದಾರೆ.


