ಲಾಕ್‌ಡೌನ್ ಮಧ್ಯೆ ಮಧ್ಯಪ್ರದೇಶದ ಕಾಟ್ನಿಯಲ್ಲಿ ಖ್ಯಾತ ಧರ್ಮಗುರುವಿನ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನರು ಭಾಗಿಯಾದ ಘಟನೆ ನಡೆದಿದೆ. ಕಾಂಗ್ರೆಸ್, ಬಿಜೆಪಿಯ ರಾಜಕಾರಣಿಗಳು ಮತ್ತು ನಟ ಅಶುತೋಷ್ ರಾಣಾ ಅವರಂತಹ ಗಣ್ಯರು ಸಹ ಘಟನೆಯಲ್ಲಿ ಭಾಗಿಯಾಗಿದ್ದಾರೆ.
‘ದಡ್ಡಾಜಿ’ ಎಂದೇ ಖ್ಯಾತರಾಗಿದ್ದ ದೇವ್ ಪ್ರಭಾಕರ್ ಶಾಸ್ತ್ರಿ (82) ಶ್ವಾಸಕೋಶ ಮತ್ತು ಮೂತ್ರಪಿಂಡದ ಕಾಯಿಲೆಗಳಿಂದ ಭಾನುವಾರ ನಿಧನರಾದರು. ದೆಹಲಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು, ಪರಿಸ್ಥಿತಿ ಹದಗೆಟ್ಟ ನಂತರ ರಾಣಾ ಮತ್ತು ಮಾಜಿ ರಾಜ್ಯ ಸಚಿವ ಸಂಜಯ್ ಪಾಠಕ್ ಅವರು ಮಧ್ಯಪ್ರದೇಶಕ್ಕೆ ಕರೆತಂದಿದ್ದರು.
ಆದರೆ ಜಿಲ್ಲಾಡಳಿತ ಮಾತ್ರ ಲಾಕ್‌ಡೌನ್ ಪ್ರೋಟೋಕಾಲ್‌ನ ಯಾವುದೇ ಉಲ್ಲಂಘನೆ ಆಗಿಲ್ಲ ಎಂದು ಹೇಳಿದೆ.
ಕಟ್ನಿ ಜಿಲ್ಲಾಧಿಕಾರಿ ಶಶಿ ಭೂಷನ್ ಸಿಂಗ್, “ಯಾವುದೇ ಉಲ್ಲಂಘನೆ ನಡೆದಿಲ್ಲ. ಎಲ್ಲವನ್ನೂ ನಿಯಂತ್ರಿಸಲಾಗಿದೆ, ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳಲಾಗಿದೆ” ಎಂದು ಹೇಳಿದ್ದರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೊಗಳಲ್ಲಿ ಅಂತ್ಯಕ್ರಿಯೆಯ ಮೆರವಣಿಗೆಗೆ ಜನರು ಗುಂಪು ಗುಂಪಾಗಿ ನಡೆಯುತ್ತಿರುವುದು ಕಾಣಬಹುದಾಗಿದೆ.
Thousands gathered in Katni during the last rites of noted spiritual leader ''Daddaji'', including politicians from congress-BJP, violating #SocialDistancing norms @ndtv@SreenivasanJain @ndtvindia #Lockdown4 #lockdown4guidelines #COVID19 #MigrantWorkers @INCIndia @BJP4India pic.twitter.com/ihro2RRN7a
— Anurag Dwary (@Anurag_Dwary) May 18, 2020
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ, ಸಂಸದ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್ ಮತ್ತು ಹಿರಿಯ ಮುಖಂಡ ದಿಗ್ವಿಜಯ ಸಿಂಗ್ ಮುಂತಾದವರು ಗೌರವ ಸಲ್ಲಿಸಿದ್ದಾರೆ.
ದೇಶದಲ್ಲಿ ಕೊರೊನಾ ವೈರಸ್ ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರವು ಮಾರ್ಚ್‌ನಿಂದಲೇ ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಿ ದೇಶಾದ್ಯಂತ ಸಭೆ ಸೇರುವುದನ್ನು ನಿಷೇಧಿಸಿದೆ.
ಅಲ್ಲದೆ ಭಾನುವಾರ ಮತ್ತೇ ಲಾಕ್‌ಡೌನ್ ಅನ್ನು ಮೇ 31 ರವರೆಗೆ ಕೇಂದ್ರ ಸರ್ಕಾರ ವಿಸ್ತರಿಸಿದೆ. ರಾಜ್ಯಗಳಿಗೆ ನೀಡಿದ ಮಾರ್ಗಸೂಚಿಗಳಲ್ಲಿ, 20 ಕ್ಕಿಂತ ಹೆಚ್ಚು ಜನರು ಅಂತ್ಯಕ್ರಿಯೆಗಳಲ್ಲಿ ಭಾಗವಹಿಸುವಂತಿಲ್ಲ ಎಂದು ಅದು ಉಲ್ಲೇಖಿಸಿದೆ.
ಕೇಂದ್ರ ಸರ್ಕಾರವೂ ರಾಜ್ಯ ಸರ್ಕಾರಕ್ಕೆ ಕಳುಹಿಸಿದ ಸುತ್ತೋಲೆಯಲ್ಲಿ, ರಾಜ್ಯಗಳು ಬಯಸಿದಲ್ಲಿ ಲಾಕ್‌ಡೌನ್ ಅನ್ನು ಹೆಚ್ಚು ಕಠಿಣಗೊಳಿಸಬಹುದು ಎಂದು ಕೇಂದ್ರ ಸ್ಪಷ್ಟಪಡಿಸಿದೆ, ಆದರೆ ಅದನ್ನು ದುರ್ಬಲಗೊಳಿಸುವಂತಿಲ್ಲ ಎಂದು ಹೇಳಿದೆ.
ಓದಿ: ಲಾಕ್‌ಡೌನ್ 4.0 ಮಾರ್ಗಸೂಚಿಗಳನ್ನು ರಾಜ್ಯಗಳು ದುರ್ಬಲಗೊಳಿಸುವಂತಿಲ್ಲ: ಕೇಂದ್ರ ಸರ್ಕಾರ
ವಿಡಿಯೋ ನೋಡಿ: 20 ಲಕ್ಷ ಕೋಟಿಯ ಈ ಪ್ಯಾಕೇಜ್ ನಿಜವೇ? ಇದರಿಂದ ಬಡಜನರಿಗೆ ಏನಾದರೂ ಸಹಾಯವಾಗುವುದೇ?


