Homeಮುಖಪುಟಚಂಡಿಗಢ: ಬ್ಯಾರಿಕೇಡ್ ಮುರಿದು ರಾಜಭವನಕ್ಕೆ ಮುತ್ತಿಗೆ ಹಾಕಲೊರಟ ಪಂಜಾಬ್ -ಹರಿಯಾಣ ರೈತರು

ಚಂಡಿಗಢ: ಬ್ಯಾರಿಕೇಡ್ ಮುರಿದು ರಾಜಭವನಕ್ಕೆ ಮುತ್ತಿಗೆ ಹಾಕಲೊರಟ ಪಂಜಾಬ್ -ಹರಿಯಾಣ ರೈತರು

- Advertisement -
- Advertisement -

ರೈತ ಹೋರಾಟಕ್ಕೆ ಏಳು ತಿಂಗಳು ತುಂಬಿದ ಪ್ರಯುಕ್ತ ರೈತರು ತಮ್ಮ ಹೋರಾಟವನ್ನು ತೀವ್ರಗೊಳಿಸುವ ಉದ್ಧೇಶದಿಂದ ಇಂದು ದೇಶಾದ್ಯಂತ ರಾಜಭವನ ಚಲೋ ಹೋರಾಟವನ್ನು ಹಮ್ಮಿಕೊಂಡಿದ್ದರು. ಇಂದು ಮಧ್ಯಾಹ್ನ 2 ಗಂಟೆ ಹೊತ್ತಿಗೆ ಚಂಡಿಗಢ ಮೊಹಾಲಿ ಗಡಿ ಭಾಗದಲ್ಲಿ ಸಾವಿರಾರು ರೈತರು ಸೇರಿ ರಾಜಭವನದ ಕಡೆ ಹೊರಟರು. ಪೊಲೀಸರು ರೈತರನ್ನು ತಡೆಯಲು ಬ್ಯಾರಕೇಡ್‌ಗಳನ್ನು ಅಳವಡಿಸಿದ್ದರು. ಬ್ಯಾರಕೇಡ್‌ಗಳನ್ನು ಮುರಿದು ಸಾವಿರಾರು ಸಂಖ್ಯೆಯ ರೈತರು ಚಂಡಿಗಢ ನಗರವನ್ನು ಪ್ರವೇಶಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆದಿದ್ದು ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ರಾಜಭವನಕ್ಕೆ 2 ಕಿಲೋ ಮೀಟರ್ ದೂರದಲ್ಲಿಯೇ ಪೊಲೀಸರು ರೈತರನ್ನು ತಡೆದರು. ಅತ್ತ ಹರ್ಯಾಣದ ಕಡೆಯಿಂದಲೂ ಸಾವಿರಾರು ಸಂಖ್ಯೆಯ ರೈತರು ರಾಜಧಾನಿ ಚಂಡಿಗಢಕ್ಕೆ ಆಗಮಿಸಿದರು. ಚಂಡಿಗಢದ ಹೊರವಲಯದ ಪಂಚಕುಲ ಯಮುನಾನಗರ ಹೆದ್ದಾರಿಯ ಚಂಡಿಗಢ ಗಡಿಯಲ್ಲಿ ರೈತರನ್ನು ಪೊಲೀಸರು ತಡೆದರು.

ಬೆಳಗ್ಗೆಯೇ ಪೊಲೀಸರು ನಗರ ಪ್ರವೇಶಕ್ಕಿರುವ 13 ಪ್ರವೇಶ ದ್ವಾರಗಳನ್ನು ಬಂದ್ ಮಾಡಿದ್ದರು. ಪೊಲೀಸರು ಜಲಪಿರಂಗಿಗಳನ್ನು ಬಳಸಿ ರೈತರನ್ನು ತಡೆಯಲು ಯತ್ನಿಸಿದರಾದರೂ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ರೈತರು ಪೊಲೀಸರನ್ನು ಹಿಮ್ಮೆಟ್ಟಿಸಿ ಚಂಡಿಗಢ ನಗರವನ್ನು ಪ್ರವೇಶಿಸಲು ಯಶಸ್ವಿಯಾದರು.

ಪಂಜಾಬ್‌ ರೈತರಿಗೆ ರಾಜಭವನವನ್ನು ಪ್ರವೇಶಿಸಲು ಅವಕಾಶವಾಗಲಿಲ್ಲ. ರಾಜಭವನದ ಅಧಿಕಾರಿಯೊಬ್ಬರು ರಾಜ್ಯಪಾಲರ ಪರವಾಗಿ ರೈತರಿಂದ ಮನವಿ ಸ್ವೀಕರಿಸಿದರು. ಅತ್ತ ಚಂಡಿಗಢದ ಗಡಿಭಾಗದಲ್ಲಿ ತಡೆಯಲ್ಪಟ್ಟ ಹರಿಯಾಣದ ರೈತರಿಂದ ರಾಜಭವನದ ಅಧಿಕಾರಿ ಸತ್ಯದೇವ್ ನಾಯಾಯಣ್ ಆರ್ಯ ಅವರು ಮನವಿಯನ್ನು ಸ್ವೀಕರಿಸಿದರು.

ರೈತ ಹೋರಾಟಗಾರ ಯೋಗೇಂದ್ರ ಯಾದವ್ ಮತ್ತು ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ಗುರುನಾಮ್ ಸಿಂಗ್ ಚಡುಣಿ  ಅವರ ನೇತೃತ್ವದಲ್ಲಿ ಹರ್ಯಾಣ ರೈತರು ರಾಜಭವನ ಚಲೋ ಹೋರಾಟವನ್ನು ಹಮ್ಮಿಕೊಂಡಿದ್ದರು.


ಇದನ್ನೂ ಓದಿ : 8ನೇ ತಿಂಗಳಿಗೆ ಕಾಲಿಟ್ಟ ರೈತ ಹೋರಾಟ: ಪ್ರತಿಭಟನೆ ಕೈಬಿಡುವಂತೆ ಕೇಂದ್ರ ಕೃಷಿ ಮಂತ್ರಿ ಮನವಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...