ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಸಾಕ್ಷಿದಾರರಿಗೆ ಬೆದರಿಕೆ: ನ್ಯಾಯಾಧೀಶರಿಗೆ ದೂರು

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಸಾಕ್ಷಿದಾರರೊಬ್ಬರಿಗೆ ಬುಧವಾರ (ಮೇ.28) ಬೆದರಿಕೆ ಹಾಕಲಾಗಿದೆ. ಈ ವಿಚಾರವನ್ನು ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರ ವಿಶೇಷ ಸಾರ್ವಜನಿಕ ಅಭಿಯೋಜಕ ಬಾಲನ್ ಅವರು ನಾನುಗೌರಿ.ಕಾಂಗೆ ಖಚಿತಪಡಿಸಿದ್ದಾರೆ. ಸಾಕ್ಷಿದಾರರೊಬ್ಬರು ನ್ಯಾಯಾಲಯದ ವಿಚಾರಣೆ ಹಾಜರಾಗಲು ಬುಧವಾರ ಬಸ್‌ ಮೂಲಕ ಬರುತ್ತಿದ್ದಾಗ, ಅವರಿಗೆ ಫೋನ್ ಕರೆಯೊಂದು ಬಂದಿದ್ದು. ಅದರಲ್ಲಿ ಮಾತನಾಡಿದವರು “ಕೋರ್ಟ್‌ಗೆ ಹೋದಾಗ ನಿನ್ನ ಮುಂದೆ ನಾಲ್ಕು ಮಂದಿ ಇರುತ್ತಾರೆ. ಅವರ ಗುರುತು ಇಲ್ಲ” ಎಂದು ಹೇಳುವಂತೆ ಒತ್ತಾಯಿಸಿದ್ದಾರೆ ಎಂದು ಬಾಲನ್ ತಿಳಿಸಿದ್ದಾರೆ. ಈ ವಿಚಾರವನ್ನು ನ್ಯಾಯಾಧೀಶರ … Continue reading ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಸಾಕ್ಷಿದಾರರಿಗೆ ಬೆದರಿಕೆ: ನ್ಯಾಯಾಧೀಶರಿಗೆ ದೂರು