ಟಿಕ್‌ಟಾಕ್ ಸ್ಟಾರ್ ಒಬ್ಬರು ಹರಿಯಾಣದ ಸೋನಿಪತ್‌ನಲ್ಲಿರುವ ತನ್ನ ಬ್ಯೂಟಿ ಪಾರ್ಲರ್‌ನ ಬಾಕ್ಸ್ ಬೆಡ್‌ನೊಳಗೆ ಕತ್ತು ಹಿಸುಕಿದ ಗುರುತುಗಳೊಂದಿಗೆ ಶವವಾಗಿ ಪತ್ತೆಯಾಗಿದ್ದಾರೆ ಎಂದು ಹಿಂದುಸ್ತಾನ್ ಟೈಮ್ಸ್ ಮಾಡಿದೆ.
ಮಹಿಳೆಯ ಶವವನ್ನು ಭಾನುವಾರ ತನ್ನ ಸಹೋದರಿಯ ಸ್ನೇಹಿತ ಪತ್ತೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಪಾರ್ಲರ್ ಒಳಗೆ ದುರ್ವಾಸನೆ ಬರುತ್ತಿರುವುದರಿದ ಮಹಿಳೆಯ ಕುಟುಂಬವನ್ನು ಕರೆದ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಟಿಕ್‌ಟಾಕ್‌ನಲ್ಲಿ 1 ಲಕ್ಷ ದಷ್ಟು ಫಾಲೋವರ್ಸ್‌ಗಳನ್ನು ಹೊಂದಿರುವ ಮಹಿಳೆಯ ಹತ್ಯೆಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಜೂನ್ 26 ರಂದು ಬ್ಯೂಟಿ ಪಾರ್ಲರ್‌ನಲ್ಲಿ ಆರೋಪಿಯೊಬ್ಬರನ್ನು ಭೇಟಿ ಮಾಡಿದ ನಂತರ ಮಹಿಳೆ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ಹೇಳಿದರು. ಈ ಆರೋಪಿಗಳ ಭೇಟಿಯ ಬಗ್ಗೆ ಮಹಿಳೆಯೂ ತನ್ನ ಸಹೋದರಿಗೆ ತಿಳಿಸಿದ್ದರು ಎಂದು ವರದಿ ತಿಳಿಸಿದೆ.
ತಡರಾತ್ರಿಯವರೆಗೆ ಮಹಿಳೆಯೂ ಮನೆಗೆ ಹಿಂತಿರುಗದಿದ್ದಾಗ, ಅವರ ಸಹೋದರಿ ವಾಟ್ಸಾಪ್‌ನಲ್ಲಿ ಸಂದೇಶ ಕಳುಹಿಸಿದ್ದಾರೆ. ಇದಕ್ಕೆ ಉತ್ತರಿಸಿ ಮಹಿಳೆಯ ಸಂಖ್ಯೆಯಿಂದ ತಾನು ಹರಿದ್ವಾರದಲ್ಲಿದ್ದೇನೆ ಮತ್ತು ಮೂರು-ನಾಲ್ಕು ದಿನಗಳ ನಂತರ ಹಿಂದಿರುಗುವೆ ಎಂದು ಸಂದೇಶ ಬಂದಿದೆ.
ಕೊಲೆಗಾರನೂ ಮಹಿಳೆಯ ಫೋನ್ ತೆಗೆದುಕೊಂಡು ಸಂದೇಶಕ್ಕೆ ಪ್ರತಿಕ್ರಿಯಿಸಿರಬೇಕು ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ಆರೋಪಿ ಮಹಿಳೆಗೆ ಕಿರುಕುಳ ನೀಡುತ್ತಿರುವುದು ತನಿಖೆಯಿಂದ ತಿಳಿದುಬಂದಿದ್ದು, ಅದಕ್ಕಾಗಿ ಕುಟುಂಬವು ತಮ್ಮ ಮನೆಯನ್ನು ಬದಲಾಯಿಸಿತ್ತು. ಅಲ್ಲದೆ ಆರೋಪಿಗಳ ವಿರುದ್ಧವೂ ಪೊಲೀಸ್ ದೂರು ಕೂಡಾ ದಾಖಲಿಸಿದ್ದರು.
ಓದಿ: ಟಿಕ್‌ಟಾಕ್ ಸೇರಿದಂತೆ 59 ಚೀನಿ ಆಪ್‌ಗಳನ್ನು ನಿಷೇಧಿಸಿದ ಭಾರತ


