Homeಮುಖಪುಟಟಿಎಂಸಿ ಅಭ್ಯರ್ಥಿಗಳ ಪಟ್ಟಿ: ಮಹಿಳೆಯರಿಗೆ ಆದ್ಯತೆ, 114 ಹೊಸಮುಖಗಳು, ಎಸ್‌ಸಿ-ಎಸ್‌ಟಿಗೆ ಒತ್ತು

ಟಿಎಂಸಿ ಅಭ್ಯರ್ಥಿಗಳ ಪಟ್ಟಿ: ಮಹಿಳೆಯರಿಗೆ ಆದ್ಯತೆ, 114 ಹೊಸಮುಖಗಳು, ಎಸ್‌ಸಿ-ಎಸ್‌ಟಿಗೆ ಒತ್ತು

- Advertisement -
- Advertisement -

ಮುಂಬರುವ ಎರಡು ತಿಂಗಳಲ್ಲಿ ಹರಡಿರುವ ವಿಧಾನಸಭಾ ಚುನಾವಣೆಗೆ ತಮ್ಮ ಪಕ್ಷದ ಪೂರ್ಣ ಅಭ್ಯರ್ಥಿಗಳ ಪಟ್ಟಿಯನ್ನು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥ ಮಮತಾ ಬ್ಯಾನರ್ಜಿ ಶುಕ್ರವಾರ ಪ್ರಕಟಿಸಿದ್ದಾರೆ. 294 ಸ್ಥಾನಗಳಲ್ಲಿ ಟಿಎಂಸಿ 291 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಮೂರು ಸ್ಥಾನಗಳನ್ನು ಮೈತ್ರಿ ಪಾಲುದಾರ ಗೂರ್ಖಾ ಜನಮುಕ್ತಿ ಮೋರ್ಚಾ (ಜಿಜೆಎಂ) ಗೆ ಬಿಟ್ಟಿದೆ.

ಬ್ಯಾನರ್ಜಿ ನಂದಿಗ್ರಾಮ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ಈ ಬಾರಿ ಭಬಾನಿಪುರ ಸ್ಥಾನವನ್ನು ಪಕ್ಷದ ಮುಖಂಡ ಶೋಭಂದೇಬ್ ಚಟ್ಟೋಪಾಧ್ಯಾಯ ಅವರಿಗೆ ಬಿಟ್ಟು ಕೊಟ್ಟಿದ್ದಾರೆ.

ಅಭ್ಯರ್ಥಿಗಳ ಪಟ್ಟಿಯಲ್ಲಿ, ಮಹಿಳಾ ಅಭ್ಯರ್ಥಿಗಳ ಮೇಲೆ ವಿಶೇಷ ಗಮನಹರಿಸಿ ಸಮಾಜದ ಎಲ್ಲಾ ವರ್ಗಗಳ ನಡುವೆ ಸಮತೋಲನವನ್ನು ಕಂಡುಕೊಳ್ಳಲು ಬ್ಯಾನರ್ಜಿ ಪ್ರಯತ್ನಿಸಿದ್ದಾರೆ. ಈ ಪಟ್ಟಿಯಲ್ಲಿ 50 ಮಹಿಳಾ ಅಭ್ಯರ್ಥಿಗಳು (ಒಟ್ಟು ಅಭ್ಯರ್ಥಿಗಳಲ್ಲಿ 17%), 79 ಎಸ್‌ಸಿ ಅಭ್ಯರ್ಥಿಗಳು (27%), 42 ಮುಸ್ಲಿಂ ಅಭ್ಯರ್ಥಿಗಳು (14%) ಮತ್ತು 17 ಎಸ್‌ಟಿ ಅಭ್ಯರ್ಥಿಗಳು (5%) ಸೇರಿದ್ದಾರೆ. ಈ ಪಟ್ಟಿಯಲ್ಲಿ ನಟರು, ಗಾಯಕರು, ವೈದ್ಯರು, ಕ್ರೀಡಾ ವ್ಯಕ್ತಿಗಳು, ಬರಹಗಾರರು, ಮಾಜಿ ಐಪಿಎಸ್ ಅಧಿಕಾರಿಗಳು ಮತ್ತು ಪ್ರಭಾವಿ ಮುಖಂಡರು ಸೇರಿದ್ದಾರೆ. 80 ವರ್ಷಕ್ಕಿಂತ ಮೇಲ್ಪಟ್ಟ ನಾಯಕರನ್ನು ಹೊರಗಿಡಲಾಗಿದೆ.

160 ಸ್ಥಾನಗಳಲ್ಲಿ ಹೊಸ ಅಭ್ಯರ್ಥಿಗಳಿದ್ದರೆ, ಪಟ್ಟಿಯಲ್ಲಿ 114 ಹೊಸ ಮುಖಗಳಿವೆ. ಅದೇ ಸಮಯದಲ್ಲಿ, ಐವರು ಮಂತ್ರಿಗಳು (ಅಮಿತ್ ಮಿತ್ರ, ಬಚು ಹನ್ಸ್ಡಾ, ರತ್ನ ಘೋಷ್ ಕಾರ್, ರೆಝಾಕ್ ಮೊಲ್ಲಾ ಮತ್ತು ಪೂರ್ಣೇಂದು ಬೋಸ್) ಸೇರಿದಂತೆ 28 ಹಾಲಿ ಶಾಸಕರಿಗೆ ಟಿಕೆಟ್ ನೀಡಲಾಗಿಲ್ಲ.

ಅಭ್ಯರ್ಥಿಗಳ ಪಟ್ಟಿಯ ಪ್ರಮುಖಾಂಶಗಳು

ಮಹಿಳೆಯರ ಮೇಲೆ ಕೇಂದ್ರೀಕರಣ:

ಪಕ್ಷದ ಚುನಾವಣಾ ಘೋಷಣೆಯಾದ ‘ಬಾಂಗ್ಲಾ ನಿಜರ್ ಮೆಯೆಕೆ ಚಾಯ್’ (ಬಂಗಾಳ ತನ್ನ ಸ್ವಂತ ಮಗಳನ್ನು ಬಯಸಿದೆ) ಅನುಸರಿಸಿ ಟಿಎಂಸಿ ಈ ಬಾರಿ 50 ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ, ಇದು 2016 ರ ವಿಧಾನಸಭಾ ಚುನಾವಣೆಗಿಂತ ಐದು ಹೆಚ್ಚು. ಬಿಜೆಪಿಯನ್ನು ಎದುರಿಸಲು ಪಕ್ಷವು ಮಹಿಳಾ ಮತದಾರರನ್ನು ತಲುಪಲು ಪ್ರಯತ್ನಿಸುತ್ತಿದೆ ಎಂಬುದು ಈ ಕ್ರಮದಿಂದ ಸ್ಪಷ್ಟವಾಗಿದೆ. ಟಿಎಂಸಿ ಮಾಜಿ ಮುಖಂಡ ಬಿಜೆಪಿ ಸಂಸದ ಸೌಮಿತ್ರಾ ಖಾನ್ ಅವರ ಪತ್ನಿ ಸುಜಾತಾ ಖಾನ್ ಅವರಿಗೆ ಪಕ್ಷ ಟಿಕೆಟ್ ನೀಡಿದೆ. ಅದೇ ಸಮಯದಲ್ಲಿ, ಮಾಜಿ ರಾಜ್ಯ ಸಚಿವರಾದ ಬಿಜೆಪಿ ಮುಖಂಡ ಸೋವನ್ ಚಟರ್ಜಿಯವರ ಪತ್ನಿ ರತ್ನ ಚಟರ್ಜಿಗೆ ಸೋವನ್ ಅವರ ಕ್ಷೇತ್ರದ ಬೆಹಲಾ ಪುರ್ಬಾದಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ.

ಎಸ್‌ಸಿ / ಎಸ್‌ಟಿ ಸಮುದಾಯಗಳಿಗೆ ಒತ್ತು:

ಈ ಬಾರಿ ಟಿಎಂಸಿ ಅಭೂತಪೂರ್ವ 79 ಎಸ್‌ಸಿ ಅಭ್ಯರ್ಥಿಗಳು ಮತ್ತು 17 ಎಸ್‌ಟಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ, ಇದು 2016 ರ ಚುನಾವಣೆಯಲ್ಲಿ 68 ಎಸ್‌ಸಿ ಮತ್ತು 16 ಎಸ್‌ಟಿ ಅಭ್ಯರ್ಥಿಗಳನ್ನು ಗಮನಿಸಿದಾಗ ಇದು ಗಮನಾರ್ಹ ಏರಿಕೆ ಆಗಿದೆ. ಪಶ್ಚಿಮ ಬಂಗಾಳದಲ್ಲಿ ಎಸ್‌ಸಿಗೆ 68 ಕ್ಷೇತ್ರಗಳು ಮತ್ತು ಎಸ್‌ಟಿಗಳಿಗೆ 16 ಕ್ಷೇತ್ರಗಳನ್ನು ಕಾಯ್ದಿರಿಸಲಾಗಿದೆ. ಈ ಕ್ರಮವು ಬಾಂಗ್ಲಾದೇಶದಲ್ಲಿ ತನ್ನ ಮೂಲವನ್ನು ಗುರುತಿಸುವ ಮತ್ತು 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ನಿಷ್ಠೆಯನ್ನು ಬದಲಾಯಿಸಿದ ನಿರಾಶ್ರಿತರ ಸಮುದಾಯವಾದ ಮಾಟುವಾಸ್ ಸೇರಿದಂತೆ ಎಸ್‌ಸಿ / ಎಸ್‌ಟಿ ಸಮುದಾಯಗಳನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ. ಈ ಸಮುದಾಯಗಳ ಸದಸ್ಯರಿಗೆ ಹೆಚ್ಚಿನ ಟಿಕೆಟ್ ನೀಡುವ ಮೂಲಕ, ಮಮತಾ ಬ್ಯಾನರ್ಜಿ ತಮ್ಮ ಪಕ್ಷವನ್ನು ಒಳಗೊಂಡಿದ್ದಾರೆ ಎಂಬ ಸಂದೇಶವನ್ನು ಆ ಸಮುದಾಯಗಳಿಗೆ ಕಳುಹಿಸಲು ಪ್ರಯತ್ನಿಸುತ್ತಿದ್ದಾರೆ.

ಮುಸ್ಲಿಂ ತುಚ್ಛಿಕರಣದ ಟ್ಯಾಗ್ ಕಳಚುವ ಯತ್ನ:

ಟಿಎಂಸಿ ಈ ಬಾರಿ ಕಡಿಮೆ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. 2016 ರಲ್ಲಿ, ಪಕ್ಷವು 57 ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿತ್ತು, ಆದರೆ ಈ ಬಾರಿ ಅದು 42 ಕ್ಕೆ ಇಳಿದಿದೆ. ಪಕ್ಷದ ಒಳಗಿನವರ ಪ್ರಕಾರ, ಇದು ಮುಸ್ಲಿಂ ತುಚ್ಛಿಕರಣದ ಟ್ಯಾಗ್ ಅನ್ನು ಕಳಚುವ ಪ್ರಯತ್ನವಾಗಿದೆ, ವಿರೋಧ ಪಕ್ಷಗಳು ಈ ಟ್ಯಾಗ್ ಬಳಸಿ ಅಪಾದನೆ ಮಾಡುತ್ತ ಬಂದಿದ್ದವು. ಮತ್ತೊಂದೆಡೆ, ಹೆಚ್ಚಿನ ಶೇಕಡಾವಾರು ಹಿಂದಿ ಮಾತನಾಡುವ ಮತದಾರರನ್ನು ಹೊಂದಿರುವ ಕ್ಷೇತ್ರಗಳಲ್ಲಿ ಪ್ರತಿಪಕ್ಷಗಳ ಪರವಾಗಿ ಹಿಂದೂ ಮತಗಳ ಧ್ರುವೀಕರಣವನ್ನು ನಿಲ್ಲಿಸಲು ಇದು ಸಹಾಯ ಮಾಡುತ್ತದೆ.

ಆಡಳಿತ ವಿರೋಧವನ್ನು ಎದುರಿಸುವುದು:

ಕುತೂಹಲಕಾರಿಯಾಗಿ, ಟಿಎಂಸಿಯು ಚುನಾವಣೆಯಲ್ಲಿ ಸ್ಪರ್ಧಿಸಲು 114 ಹೊಸ ಮುಖಗಳನ್ನು ಹೊಂದಿದೆ. ಇದಲ್ಲದೆ, 160 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಬದಲಾಯಿಸಲಾಗಿದೆ. ಇದು ಆಡಳಿತ ವಿರೋಧಿ ಅಲೆಯ ಭಯದಿಂದ ತೆಗೆದುಕೊಂಡ ಕ್ರಮವಾಗಿದ್ದು, ಮತದಾರರಿಗೆ ಉತ್ತಮ ಅಭ್ಯರ್ಥಿಗಳನ್ನು ನೀಡಲು ಕಾರಣವಾಗಿದೆ. 2006 ರಲ್ಲಿ, ಹಿಂದಿನ ಎಡಪಂಥೀಯ ಸರ್ಕಾರವು ತನ್ನ ಅಭ್ಯರ್ಥಿಗಳನ್ನು 150 ಸ್ಥಾನಗಳಲ್ಲಿ ಬದಲಾಯಿಸಿತ್ತು, ಇದು ರಾಜ್ಯದ 230 ಸ್ಥಾನಗಳನ್ನು ಗೆಲ್ಲಲು ಎಡಪಂಥಿಯ ಕೂಟಕ್ಕೆ ಸಹಾಯ ಮಾಡಿತ್ತು. ಈಗ ಟಿಎಂಸಿ ಹಳೆಯ ಮತ್ತು ಹೊಸ ನಾಯಕರ ನಡುವೆ ಸಮತೋಲನ ಹೊಂದಲು ಯುವ ಮುಖಗಳನ್ನು ಪಕ್ಷಕ್ಕೆ ತರಲು ಒತ್ತು ನೀಡಿದೆ..

ಸೆಲೆಬ್ರಿಟಿಗಳನ್ನು ಅವಲಂಬಿಸಿ:

2011 ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಮಮತಾ ಬ್ಯಾನರ್ಜಿ ಯಾವಾಗಲೂ ಬಂಗಾಳಿ ಚಲನಚಿತ್ರೋದ್ಯಮದ ಸದಸ್ಯರಿಗೆ ಟಿಕೆಟ್ ನೀಡಿದ್ದಾರೆ. ಹಿಂದಿನ ಹೆಚ್ಚಿನ ಸಂದರ್ಭಗಳಲ್ಲಿ, ಟಿಎಂಸಿಗೆ ಹೆಚ್ಚಿನ ಸಂಖ್ಯೆಯ ಸ್ಥಾನಗಳನ್ನು ಗೆಲ್ಲಲು ಸ್ಟಾರ್‌ಗಳು ಸಹಾಯ ಮಾಡಿದ್ದಾರೆ. ನಟರಾದ ದೇವ್, ಮೂನ್ ಮೂನ್ ಸೇನ್, ದಿವಂಗತ ನಟ ತಪಸ್ ಪಾಲ್, ಶತಾಬ್ದಿ ರಾಯ್, ಮಿಮಿ ಚಕ್ರವರ್ತಿ, ನುಸ್ರತ್ ಜಹಾನ್, ದೇಬಶ್ರೀ ರಾಯ್ ಮತ್ತು ಇತರರು ಟಿಎಂಸಿ ಟಿಕೆಟ್‌ನಲ್ಲಿ ಚುನಾವಣೆಯಲ್ಲಿ ಜಯ ಗಳಿಸಿದ್ದರು. ಈ ಬಾರಿ ಕೂಡ ಪಕ್ಷವು ನಟರಾದ ಸೋಹಮ್ ಚಕ್ರವರ್ತಿ, ಸಯಾಂತಿಕಾ ಬ್ಯಾನರ್ಜಿ, ಸಯಾನಿ ಘೋಷ್, ಜೂನ್ ಮಾಲಿಯಾ, ಕೌಶಾನಿ ಬ್ಯಾನರ್ಜಿ, ಕಾಂಚನ್ ಮಲ್ಲಿಕ್, ನಿರ್ದೇಶಕ ರಾಜ್ ಚಕ್ರವರ್ತಿ ಮತ್ತು ಗಾಯಕಿ ಅದಿತಿ ಮುನ್ಶಿ ಅವರನ್ನು ಇದೇ ರೀತಿಯ ಫಲಿತಾಂಶವನ್ನು ನೀಡಲು ಕಣಕ್ಕಿಳಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...