ತಮಿಳುನಾಡು | ಮುಷ್ಕರ ಕೈಬಿಟ್ಟ ಸ್ಯಾಮ್‌ಸಂಗ್ ಕಾರ್ಮಿಕರು : ಸಂಧಾನ ಸಭೆ ಬಳಿಕ ಸರ್ಕಾರ ಘೋಷಣೆ

ಸ್ಯಾಮ್‌ಸಂಗ್ ಇಂಡಿಯಾದ ಶ್ರೀಪೆರಂಬದೂರ್ ಘಟಕದಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಸುತ್ತಿದ್ದ ಮುಷ್ಕರವನ್ನು ಕಾರ್ಮಿಕರು ಹಿಂಪಡೆದಿದ್ದಾರೆ ಎಂದು ತಮಿಳುನಾಡು ಸರ್ಕಾರದ ಕಾರ್ಮಿಕ ಇಲಾಖೆ ಅಕ್ಟೋಬರ್ 15 ಮಂಗಳವಾರ ಪ್ರಕಟಿಸಿದೆ. ಕೆಲಸದ ಸ್ಥಳದ ವಾತಾವರಣ ಸುಧಾರಿಸಬೇಕು, ವೇತನ ಪರಿಷ್ಕರಣೆ ಮತ್ತು ಕಾರ್ಮಿಕ ಒಕ್ಕೂಟದ ನೋಂದಣಿಗೆ ಆಗ್ರಹಿಸಿ ಕಳೆದ ಒಂದು ತಿಂಗಳಿನಿಂದ ‘ಸ್ಯಾಮ್‌ಸಂಗ್ ಇಂಡಿಯಾ ವರ್ಕರ್ಸ್ ಯೂನಿಯನ್’ (ಎಸ್‌ಐಡಬ್ಲ್ಯೂಯು) ಬ್ಯಾನರ್ ಅಡಿಯಲ್ಲಿ ಕಾರ್ಮಿಕರು ಪ್ರತಿಭಟಿಸುತ್ತಿದ್ದರು. ಕಾರ್ಮಿಕರು ಮುಷ್ಕರವನ್ನು ಹಿಂಪಡೆದು ಕೆಲಸಕ್ಕೆ ಮರಳಲು ಒಪ್ಪಿಗೆ ನೀಡಿದ್ದಾರೆ ಎಂದು ಕಾರ್ಮಿಕ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ … Continue reading ತಮಿಳುನಾಡು | ಮುಷ್ಕರ ಕೈಬಿಟ್ಟ ಸ್ಯಾಮ್‌ಸಂಗ್ ಕಾರ್ಮಿಕರು : ಸಂಧಾನ ಸಭೆ ಬಳಿಕ ಸರ್ಕಾರ ಘೋಷಣೆ