Homeಮುಖಪುಟಸಿಎಎ ಜಾರಿ ನಂತರ ಇಂದು ಮೊದಲ ಬಾರಿಗೆ ಅಸ್ಸಾಂಗೆ ಪ್ರಧಾನಿ ಮೋದಿ ಭೇಟಿ

ಸಿಎಎ ಜಾರಿ ನಂತರ ಇಂದು ಮೊದಲ ಬಾರಿಗೆ ಅಸ್ಸಾಂಗೆ ಪ್ರಧಾನಿ ಮೋದಿ ಭೇಟಿ

- Advertisement -

ಸರ್ಕಾರ ಮತ್ತು ನಿಷೇಧಿತ ಉಗ್ರಗಾಮಿ ಗುಂಪು ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೋಡೋಲ್ಯಾಂಡ್ ನಡುವಿನ ಒಪ್ಪಂದವಾದ ’ಬೋಡೋ ಶಾಂತಿ ಒಪ್ಪಂದಕ್ಕೆ’ ಸಹಿ ಹಾಕುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿಯವರು ಇಂದು ಅಸ್ಸಾಂಗೆ ಭೇಟಿ ನೀಡಲಿದ್ದಾರೆ.

ಸಿಎಎ ಜಾರಿ ನಂತರ ಅಸ್ಸಾಂನಲ್ಲಿ ಭಾರೀ ಪ್ರತಿಭಟನೆಗಳು ನಡೆದು ಹಿಂಸಾಚಾರ ಭುಗಿಲೆದ್ದಿತ್ತು. ಈ ವಿಚಾರವಾಗಿ ರಾಜ್ಯದಲ್ಲಿ ಮೂರು ಜನರು ಸಾವನ್ನಪ್ಪಿದ್ದಾರೆ. ಹಾಗಾಗಿ ಕಳೆದ ತಿಂಗಳು ಮೋದಿಯವರು ರಾಜ್ಯದ ಖೇಲೋ ಇಂಡಿಯಾ ಕ್ರೀಡಾಕೂಟಕ್ಕೆ ಹಾಜರಾಗಲು ಹಿಂದೇಟು ಹಾಕಿದ್ದರು. ಒಟ್ಟಿನಲ್ಲಿ ಸಿಎಎ ನಂತರದ ಮೋದಿಯವರ ಮೊದಲ ಅಸ್ಸಾಂ ಭೇಟಿ ಇದಾಗಿದೆ.

ಕಳೆದ ಬಾರಿ ಅಸ್ಸಾಂಗೆ ಮೋದಿ ಬರುವ ಸೂಚನೆ ಸಿಗುತ್ತಿದ್ದಂತೆ ಅಸ್ಸಾಂನಲ್ಲಿ ಭಾರೀ ಪ್ರತಿಭಟನೆಗೆ ಕರೆ ನೀಡಲಾಗಿತ್ತು. ಹಲವು ವಿದ್ಯಾರ್ಥಿ ವಿದ್ಯಾರ್ಥಿ ಸಂಘಟನೆಗಳು ಉಗ್ರ ಪ್ರತಿಭಟನೆಗೆ ಸಜ್ಜುಗೊಂಡಿದ್ದವು. ಆ ಕಾರಣಕ್ಕಾಗಿಯೇ ಪ್ರಧಾನಿ ಕಚೇರಿ ಭೇಟಿಯನ್ನು ರದ್ದುಗೊಳಿಸಿತ್ತು. ಇಂದು ಸಹ ಪ್ರತಿಭಟನೆಗಳು ನಡೆಯುವ ಸೂಚನೆಯಿದೆ.

ಅವರು ಇಂದು ಬೋಡೋ ಪ್ರಾಬಲ್ಯದ ಕೊಕ್ರಜಾರ್ ಪಟ್ಟಣದಲ್ಲಿ ಮೆಗಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

“ನಾಳೆ ನಾನು ಅಸ್ಸಾಂನಲ್ಲಿದ್ದು, ನಿಮ್ಮನ್ನು ಎದುರು ನೋಡುತ್ತಿದ್ದೇನೆ. ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲು ನಾನು ಕೊಕ್ರಜಾರ್‌ನಲ್ಲಿರುತ್ತೇನೆ. ಬೋಡೋ ಒಪ್ಪಂದಕ್ಕೆ ಯಶಸ್ವಿಯಾಗಿ ಸಹಿ ಹಾಕುವುದನ್ನು ನಾವು ಗುರುತಿಸುತ್ತೇವೆ, ಶಾಂತಿ ಮತ್ತು ಪ್ರಗತಿಯ ಹೊಸ ಯುಗದ ಆರಂಭ. ಇದು ದಶಕಗಳಿಂದಲೂ ಮುಂದುವರೆದಿದ್ದ ಸಮಸ್ಯೆಯನ್ನು ಕೊನೆಗೊಳಿಸುತ್ತದೆ.” ಎಂದು ಪ್ರಧಾನಿ ಮೋದಿ ನಿನ್ನೆ ಟ್ವೀಟ್ ಮಾಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಸೀದಿ ಒಡೆಯುವ ಮಾತುಗಳು: ‘ಮುತಾಲಿಕ್‌’ ಮುಂದುವರಿದ ಭಾಗ ‘ಕಾಳಿ ಸ್ವಾಮೀಜಿ’ ಪ್ರಕರಣ

ಕೋಮು ಪ್ರಚೋದನೆ ಮಾಡಿರುವ ರಿಷಿ ಕುಮಾರ ಸ್ವಾಮೀಜಿ (ಕಾಳಿ ಸ್ವಾಮೀಜಿ) ಈಗ ಸುದ್ದಿಯಲ್ಲಿದ್ದಾರೆ. ಮಸೀದಿ ಒಡೆಯಬೇಕೆಂದು ಕರೆ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಬಾಬ್ರಿ ಮಸೀದಿ ರೀತಿಯಲ್ಲಿ ಶ್ರೀರಂಗಪಟ್ಟಣದ ಮಸೀದಿ ಕೆಡವಬೇಕೆಂದು ಕಾಳಿ...
Wordpress Social Share Plugin powered by Ultimatelysocial