ಬೆಂಗಳೂರಲ್ಲಿ ಟ್ರಾನ್ಸ್‌ಜೆಂಡರ್ ಶವವಾಗಿ ಪತ್ತೆ: ಕೊಲೆ ಶಂಕೆ

ಬೆಂಗಳೂರಿನ ಕೆ.ಆರ್‌ ಪುರದ ಗಾಯತ್ರಿ ಲೇಔಟ್‌ನಲ್ಲಿ ಸುಮಾರು 40 ವರ್ಷ ವಯಸ್ಸಿನ ಟ್ರಾನ್ಸ್‌ಜೆಂಡರ್ ಒಬ್ಬರು ಭಾನುವಾರ (ಏ.20) ಶವವಾಗಿ ಪತ್ತೆಯಾಗಿದ್ದಾರೆ. ಮಾರಕಾಸ್ತ್ರಗಳಿಂದ ಕೊಚ್ಚಿ ಅವರನ್ನು ಕೊಲೆ ಮಾಡಲಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ. ತನುಶ್ರೀ ಸಾವಿಗೀಡಾದ ಟ್ರಾನ್ಸ್‌ಜೆಂಡರ್. ಮನೆಯಲ್ಲೇ ತನುಶ್ರೀ ಅವರ ಶವ ಕಂಡು ಬಂದಿದೆ. ಅಲ್ಲಿಯೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ವರದಿಗಳ ಪ್ರಕಾರ, ಮೂರು ದಿನಗಳ ಹಿಂದೆಯೇ ತನುಶ್ರೀ ಹತ್ಯೆಯಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೋಟ್ಯಾಧಿಪತಿಯಾಗಿದ್ದ ತನುಶ್ರೀ ಅವರು ‘ಸಂಗಮ’ ಎಂಬ ಸಮಾಜಸೇವಾ ಸಂಘಟನೆ ನಡೆಸುತ್ತಿದ್ದರು. … Continue reading ಬೆಂಗಳೂರಲ್ಲಿ ಟ್ರಾನ್ಸ್‌ಜೆಂಡರ್ ಶವವಾಗಿ ಪತ್ತೆ: ಕೊಲೆ ಶಂಕೆ