ಮಧ್ಯಪ್ರದೇಶದ ಮಾಜಿ ಗೃಹ ಸಚಿವ ಭೂಪೇಂದ್ರ ಸಿಂಗ್ ಅವರು 20 ವರ್ಷದ ಮಗಳು ಅಂಜನಾ ಅಹಿರ್ವಾರ್, ಮಗ ಮತ್ತು ಸೋದರ ಮಾವ ಸೇರಿದಂತೆ ತನ್ನ ಕುಟುಂಬದ ಸದಸ್ಯರ ಹತ್ಯೆಯಲ್ಲಿ ಬೆಂಬಲಿಗರೊಂದಿಗೆ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ದಲಿತ ಮಹಿಳೆಯೊಬ್ಬರು ಸಿಬಿಐ ತನಿಖೆಗೆ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿಗಳಾದ ಜೆ ಕೆ ಮಹೇಶ್ವರಿ ಮತ್ತು ಅರವಿಂದ್ ಕುಮಾರ್ ಅವರ ಪೀಠವು, ಪ್ರಕರಣದಲ್ಲಿ ಪ್ರತಿಕ್ರಿಯೆ ನೀಡುವಂತೆ ಮಧ್ಯಪ್ರದೇಶ ಸರ್ಕಾರ ಮತ್ತು ಸಿಬಿಐಗೆ ನೋಟಿಸ್ ಜಾರಿ ಮಾಡಿದೆ.
ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವೆಸ್ ಮತ್ತು ವಕೀಲ ಮೀನೇಶ್ ದುಬೆ ಮೂಲಕ ಅರ್ಜಿದಾರರಾದ ಬಹು, ಮಾಜಿ ಸಂಸದ ರಾಜ್ಯ ಗೃಹ ಸಚಿವ ಭೂಪೇಂದ್ರ ಸಿಂಗ್ ವಿರುದ್ಧದ ತ್ರಿವಳಿ ಕೊಲೆ ಪ್ರಕರಣವನ್ನು ಸಿಬಿಐನಿಂದ ನಿಷ್ಪಕ್ಷಪಾತ ತನಿಖೆಗೆ ನಿರ್ದೇಶಿಸಬೇಕೆಂದು ಕೋರಿದರು. ತಮ್ಮ ಕುಟುಂಬದ ಮೂವರು ಸದಸ್ಯರನ್ನು ಕೊಲ್ಲಲಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಹತ್ಯೆಯು ಮಧ್ಯಪ್ರದೇಶದ ಮಾಜಿ ಗೃಹ ಸಚಿವರ ನೇತೃತ್ವದ ಗ್ರಾಮದ ಪ್ರಬಲ ಸಮುದಾಯದ ಸದಸ್ಯರನ್ನು ಒಳಗೊಂಡ ಕ್ರಿಮಿನಲ್ ಪಿತೂರಿಯ ಪರಿಣಾಮವಾಗಿದೆ ಎಂದು ಅರ್ಜಿಯಲ್ಲಿ ಹೇಳಿಲಾಗಿದೆ.
ಅರ್ಜಿದಾರರು ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡಿದ್ದಾರೆ. ಅಂದರೆ, ಅವರ ಮಗ ನಿತಿನ್, ಅವರ ಸೋದರ ಮಾವ – ರಾಜೇಂದ್ರ ಮತ್ತು ಪುತ್ರಿ ಅಂಜನಾ ಅವರನ್ನು ಕೊಲೆ ಮಾಡಲಾಗಿದೆ.
“ಆಕೆಯ ಹತ್ಯೆಯ ನಂತರವೂ, ಪೊಲೀಸರು ಆರೋಪಿಗಳಿಗೆ ಸಂಪೂರ್ಣ ಸಹಾಯ ಮಾಡಿದರು. ಏಕೆಂದರೆ ಮಾಜಿ ರಾಜ್ಯ ಗೃಹ ಸಚಿವರು ಮತ್ತು ಅವರ ಗುಂಪು ಈ ಹತ್ಯೆಗಳ ಹಿಂದೆ ಇದ್ದಾರೆ. ಪರಿಣಾಮವಾಗಿ, ಮಧ್ಯಪ್ರದೇಶ ರಾಜ್ಯದಲ್ಲಿ ಆರೋಪಿಗಳ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸಲು ಸಾಧ್ಯವಿಲ್ಲ” ಎಂದು ಅರ್ಜಿಯಲ್ಲಿ ಹೇಳಲಾಗಿದ್ದು, ಪ್ರಕರಣವನ್ನು ದೆಹಲಿಗೆ ವರ್ಗಾಯಿಸುವಂತೆ ಕೋರಲಾಗಿದೆ.
ರಾಜಕೀಯವಾಗಿ ಪ್ರಭಾವಿ ವ್ಯಕ್ತಿಯಾಗಿರುವ ಮಾಜಿ ಗೃಹ ಸಚಿವರು ಪ್ರಸ್ತುತ ಸಾಗರ್ ಜಿಲ್ಲೆಯ ಶಾಸಕರಾಗಿದ್ದಾರೆ ಎಂದು ಅದು ಗಮನಸೆಳೆದಿದೆ.
“2019 ರಿಂದ ಮೃತರ ಕುಟುಂಬ ಸದಸ್ಯರು ಎದುರಿಸುತ್ತಿರುವ ರಾಜಕೀಯ ಒತ್ತಡ ಮತ್ತು ಬೆದರಿಕೆಗಳೊಂದಿಗೆ ನ್ಯಾಯಯುತ ತನಿಖೆ ನಡೆಸಲು ಮಧ್ಯಪ್ರದೇಶ ಪೊಲೀಸರ ವೈಫಲ್ಯವು ಮಧ್ಯಪ್ರದೇಶ ರಾಜ್ಯದ ಹೊರಗಿನ ಅಧಿಕಾರಿಗಳ ನೇತೃತ್ವದಲ್ಲಿ ಸಿಬಿಐ ತನಿಖೆಗೆ ಅಗತ್ಯವಾಗಿದೆ. ಹೆಚ್ಚುವರಿಯಾಗಿ, ನ್ಯಾಯಯುತ ತನಿಖೆ ಮತ್ತು ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು, ಈ ಪ್ರಕರಣಗಳನ್ನು ದೆಹಲಿಗೆ ವರ್ಗಾಯಿಸುವುದು ಅತ್ಯಗತ್ಯ” ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ; ರಾಜಸ್ಥಾನ| 200 ಪೊಲೀಸರ ಭದ್ರತೆಯೊಂದಿಗೆ ದಲಿತ ವರನ ಕುದುರೆ ಮೆರವಣಿಗೆ


