Homeಮುಖಪುಟಟಿಆರ್‌ಪಿ ಪ್ರಕರಣ: 3 ಚಾನೆಲ್‌‌ಗಳ 32 ಕೋಟಿ ರೂ. ಆಸ್ತಿ ವಶಪಡಿಸಿಕೊಂಡ ಇ.ಡಿ

ಟಿಆರ್‌ಪಿ ಪ್ರಕರಣ: 3 ಚಾನೆಲ್‌‌ಗಳ 32 ಕೋಟಿ ರೂ. ಆಸ್ತಿ ವಶಪಡಿಸಿಕೊಂಡ ಇ.ಡಿ

ಚಾನೆಲ್‌ಗಳ ವಿರುದ್ಧ ಜಾರಿ ನಿರ್ದೇಶನಾಲಯವು ಹಣ ವರ್ಗಾವಣೆ (ಮನಿ ಲಾಂಡರಿಂಗ್) ಪ್ರಕರಣವನ್ನು ದಾಖಲಿಸಿತ್ತು.

- Advertisement -
- Advertisement -

ಟಿಆರ್‌ಪಿ ಹಗರಣದ ಬಗ್ಗೆ ಮನಿ ಲಾಂಡರಿಂಗ್ ತನಿಖೆಗೆ ಸಂಬಂಧಿಸಿದಂತೆ ಮೂರು ಮಹಾರಾಷ್ಟ್ರ ಮೂಲದ ಟಿವಿ ಚಾನೆಲ್‌ಗಳ ಸುಮಾರು 32 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಬುಧವಾರ ವಶಪಡಿಸಿಕೊಂಡಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಯ ನಿಬಂಧನೆಗಳ ಪ್ರಕಾರ ವಶಪಡಿಸಲಾದ ಆಸ್ತಿಗಳು ಫಕ್ತ್ ಮರಾಠಿ, ಬಾಕ್ಸ್ ಸಿನೆಮಾ ಮತ್ತು ಮಹಾ ಮೂವಿ ಚಾನೆಲ್‌ಗಳಿಗೆ ಸೇರಿವೆ. ಮುಂಬೈ, ಇಂದೋರ್, ದೆಹಲಿ ಮತ್ತು ಗುರಗಾಂವ್‌ನಲ್ಲಿ ಈ ಆಸ್ತಿಗಳಿವೆ. ಚಾನೆಲ್‌ಗಳ ಕೆಲವು ಬ್ಯಾಂಕ್ ಠೇವಣಿಗಳನ್ನು ಕೂಡ ಸೀಜ್ ಮಾಡಲಾಗಿದೆ ಎಂದು ಇ.ಡಿ ತಿಳಿಸಿದೆ.

ಇದನ್ನೂ ಓದಿ: ಕೇರಳ: ಬಿಜೆಪಿ ಮೈತ್ರಿಕೂಟ ತೊರೆದ ‘ಕೇರಳ ಕಾಂಗ್ರೆಸ್’!

ಟಿಆರ್‌ಪಿ ದಂಧೆ ಒಂದು ವಂಚನೆಯ ಆಟ. ಎಷ್ಟು ವೀಕ್ಷಕರು ಯಾವ ಚಾನೆಲ್ ಜಾಸ್ತಿ ನೋಡಿದರು, ಯಾವ ಪ್ರೊಗ್ರಾಮ್ ಹೆಚ್ಚು ನೋಡಿದರು ಎಂಬುದರ ಆಧಾರದಲ್ಲಿ ಆ ಚಾನೆಲ್‌ಗಳಿಗೆ ಜಾಹೀರಾತು ಹರಿದು ಬರುತ್ತದೆ. ಅರ್ನಾಬ್ ಗೋಸ್ವಾಮಿಯ ರಿಪಬ್ಲಿಕ್ ಚಾನೆಲ್ ಬಾರ್ಕ್ ಮುಖ್ಯಸ್ಥನ ಜೊತೆ ಸೇರಿ ಕೃತಕ ಟಿಆರ್‌ಪಿಗಳನ್ನು ಸೃಷ್ಟಿಸಿದ ಆರೋಪ ಎದುರಿಸುತ್ತಿದೆ.

ಜೊತೆಗೆ ಮೇಲೆ ಉಲ್ಲೇಖಿಸಲಾದ ಮೂರು ಮಹಾರಾಷ್ಟ್ರ ಮೂಲದ ಚಾನೆಲ್‌ಗಳು ಕೂಡ ಈ ಕೃತಕ ಟಿಆರ್‌ಪಿ ಏರಿಕೆ ದಂಧೆಯಲ್ಲಿ ತೊಡಗಿಕೊಂಡಿದ್ದವು. ಆಯ್ದ ವೀಕ್ಷಕ ಕುಟುಂಬಗಳು ಪದೇ ಪದೇ ಅದೇ ಚಾನೆಲ್ ಅಥವಾ ಆ ಚಾನೆಲ್‌ನ ಒಂದು ಕಾರ್ಯರಕ್ರಮವನ್ನು ವೀಕ್ಷಿಸುವಂತೆ ಲಂಚ ನೀಡುವ ಮೂಲಕ ಇದನ್ನು ಮಾಡಲಾಗಿದೆ.

’ಮೇಲೆ ಉಲ್ಲೇಖಗೊಂಡ ಮೊದಲ ಎರಡು ಚಾನೆಲ್‌ಗಳು 5 ಕುಟುಂಬಗಳ ಜೊತೆಗೆ ಒಪ್ಪಂದ ಮಾಡಿ ಸುಮಾರು 25% ಟಿಆರ್‌ಪಿಯನ್ನು ಪಡೆಯುತ್ತಿದ್ದವು. ಮೂರನೇ ಚಾನಲ್ ಕೂಡಾ 5 ಕುಟುಂಬಗಳೊಂದಿಗೆ ಒಪ್ಪಂದ ಮಾಡಿಕೊಂಡ ಪರಿಣಾಮ ಕೃತಕವಾಗಿ 12% ಟಿಆರ್‌‌‌ಪಿಯನ್ನು ಪಡೆಯುತ್ತಿದ್ದವು’ ಎಂದು ಇ.ಡಿ. ಹೇಳಿದೆ.

ಇದನ್ನೂ ಓದಿ: ಕೇರಳ: ನಾನು ಬಿಜೆಪಿಯ ಕಾರ್ಯಕರ್ತನೂ ಅಲ್ಲ & ಸ್ಪರ್ಧಿಸುವುದಿಲ್ಲ- ಬಿಜೆಪಿ ಟಿಕೆಟ್ ಘೋಷಿಸಲಾಗಿದ್ದ ವ್ಯಕ್ತಿ ಹೇಳಿಕೆ

ಟೆಲಿವಿಷನ್ ರೇಟಿಂಗ್ ಪಾಯಿಂಟ್‌ಗಳನ್ನು (ಟಿಆರ್‌ಪಿ) ತಿರುಚಿರುವ ಆರೋಪದ ಮೇಲೆ ಮುಂಬೈ ಪೊಲೀಸ್ ಸಿದ್ಧಪಡಿಸಿದ ಎಫ್‌ಐಆರ್ ಅಧ್ಯಯನ ಮಾಡಿದ ನಂತರ ಇ.ಡಿ. ಚಾನೆಲ್‌ಗಳ ವಿರುದ್ಧ ಮನಿ ಲಾಂಡರಿಂಗ್ ಪ್ರಕರಣ ದಾಖಲಿಸಿತ್ತು.

“ಟೆಲಿವಿಷನ್ ಚಾನೆಲ್‌ಗಳಾದ ಫಕ್ತ್ ಮರಾಠಿ, ಬಾಕ್ಸ್ ಸಿನೆಮಾ ಮತ್ತು ಮಹಾ ಮೂವಿ ಚಾನೆಲ್‌ಗಳು ಟಿಆರ್‌ಪಿಗಳನ್ನು ತಿರುಚುವ ಮೂಲಕ ಅಕ್ರಮ ಲಾಭ ಮಾಡಿಕೊಂಡಿವೆ’ ಎಂದು ಇ.ಡಿ ಮತ್ತು ಮಹಾರಾಷ್ಟ್ರ ಪೊಲೀಸರು ಅಪಾದಿಸಿದ್ದಾರೆ.

“ಟಿಆರ್‌ಪಿ ರೇಟಿಂಗ್‌ಗಳನ್ನು ಮೋಸದಿಂದ ಹೆಚ್ಚಿಸುವ ಮೂಲಕ, ಈ ಚಾನಲ್‌ಗಳು ವಿಪರೀತ ಜಾಹೀರಾತು ಆದಾಯವನ್ನು ಗಳಿಸಿವೆ” ಎಂದು ಇಡಿ ಹೇಳಿದೆ.

ಟಿಆರ್‌ಪಿ ಎಂಬುದು ಟಿವಿ ಚಾನೆಲ್ ಅಥವಾ ಪ್ರೋಗ್ರಾಂನ ಜನಪ್ರಿಯತೆಯನ್ನು ಸೂಚಿಸುತ್ತದೆ ಮತ್ತು ವೀಕ್ಷಕರು ಯಾವುದನ್ನು ಹೆಚ್ಚು ನೋಡುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಜಾಹೀರಾತುದಾರರಿಗೆ ಅನುವು ಮಾಡಿಕೊಡುತ್ತದೆ.

ಇದನ್ನೂ ಓದಿ: ಹುತಾತ್ಮ ರೈತರಿಗೆ ಗೌರವ ಸಲ್ಲಿಸದ ಕೇಂದ್ರದ ವಿರುದ್ದ ರಾಹುಲ್ ಗಾಂಧಿ ಹೇಳಿದ್ದೇನು?

ವೀಕ್ಷಕರ ಮನೆಗಳಲ್ಲಿ ಬಾರೋಮೀಟರ್‌ಗಳನ್ನು ಅಳವಡಿಸಿ, ಟಿಆರ್‌‌ಪಿ ಅಳೆಯಲಾಗುತ್ತದೆ. ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) ಇದನ್ನು ನಿರ್ವಹಿಸುತ್ತದೆ. ಆದರೆ ಅದು ಅಳವಡಿಸುವಿಕೆ ಮತ್ತು ಸೇವೆಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸುತ್ತದೆ. ಈ ಪ್ರಕರಣದಲ್ಲಿ ಅದು ಹನ್ಸಾ ಏಜೆನ್ಸಿಯನ್ನು ನೇಮಿಸಿಕೊಂಡಿತ್ತು. (ಬಾರೋಮೀಟರ್‌ಗಳನ್ನು ಯಾವ ಮನೆಗಳಲ್ಲಿ ಅಳವಡಿಸಬೇಕು ಎಂಬುದನ್ನು ಬಾರ್ಕ್ ನಿರ್ಧರಿಸುತ್ತದೆ).

ಟಿಆರ್‌ಪಿ ಯಾವುದೇ ಚಾನಲ್‌ಗೆ ಜಾಹೀರಾತನ್ನು ಪಡೆಯುವ ಪ್ರಮುಖ ಆಧಾರ ಮೂಲ. ಅದು ಟಿವಿ ಚಾನೆಲ್‌ನ ಆದಾಯವನ್ನು ನಿರ್ಧರಿಸುತ್ತದೆ. ಹೀಗಾಗಿ, ಟಿಆರ್‌ಪಿಯನ್ನು ವಾಮಮಾರ್ಗಗಳಲ್ಲಿ ಹೆಚ್ಚಿಸಿ ಹೆಚ್ಚಿನ ಜಾಹೀರಾತು ಆದಾಯವನ್ನು ಗಳಿಸುವ ಸಾಧನವಾಗಿ ಬಳಸಿಕೊಳ್ಳಲಾಗಿದೆ.

“ಬಾರೋಮೀಟರ್ ಸ್ಥಾಪಿಸಲಾದ ಮನೆಗಳ ಗೌಪ್ಯ ಮಾಹಿತಿಯನ್ನು ಏಜೆನ್ಸಿ ವ್ಯವಸ್ಥಾಪಕರು ಹಣದ ಲಾಭಕ್ಕಾಗಿ ಬಹಿರಂಗಪಡಿಸಿದ್ದು, ನಂತರ ಮನೆಯವರಿಗೆ ಲಂಚ ನೀಡಲಾಯಿತು. ಈ ಮೂಲಕ ನಿರ್ದಿಷ್ಟ ಚಾನೆಲ್‌ಗಳನ್ನು ವೀಕ್ಷಿಸುವಂತೆ ಪ್ರೇರೇಪಿಸಲಾಯಿತು. ಟಿಆರ್‌ಪಿಯನ್ನು ಕೃತಕವಾಗಿ ಏರಿಸಿ ಜಾಹೀರಾತುದಾರರನ್ನು ಮೋಸಗೊಳಿಸಲಾಯಿತು” ಎಂದು ಇ.ಡಿ ವಿವರಿಸಿದೆ.

ಆರೋಪಿತ ಚಾನೆಲ್‌ಗಳು ಒಟ್ಟು 46.77 ಕೋಟಿ ರೂ.ಗಳನ್ನು ಅಕ್ರಮ ಟಿಆರ್‌ಪಿ ಆಧಾರದಲ್ಲಿ ಗಳಿಸಿವೆ ಎಂದು ಇ.ಡಿ ಹೇಳಿದೆ.

ಇದನ್ನೂ ಓದಿ: ‘ಎರಡು ವರ್ಷಗಳಲ್ಲಿ 157 ಲಾಕಪ್ ಡೆತ್’- ಆಘಾತಕಾರಿ ಮಾಹಿತಿ ನೀಡಿದ ಗುಜರಾತ್ ಸರ್ಕಾರ‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...