ಮಾಧ್ಯಮ ದಿಗ್ಗಜ ರೂಪರ್ಟ್ ಮುರ್ಡೋಕ್, ಅವರ ಮೂಲ ಸಂಸ್ಥೆ ನ್ಯೂಸ್ ಕಾರ್ಪ್, ಅದರ ಅಂಗಸಂಸ್ಥೆ ಡೌ ಜೋನ್ಸ್ ಹಾಗೂ ಇವುಗಳ ಪ್ರಮುಖ ಪತ್ರಿಕೆ ‘ದಿ ವಾಲ್ ಸ್ಟ್ರೀಟ್ ಜರ್ನಲ್’ನ ವರದಿಗಾರರಾದ ಖದೀಜಾ ಸಫ್ದಾರ್ ಮತ್ತು ಜೋ ಪಲಾಝೋಲೋ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಎಂದು ವರದಿಯಾಗಿದೆ.
ಟ್ರಂಪ್ ಅವರು ಫ್ಲೋರಿಡಾದ ದಕ್ಷಿಣ ಜಿಲ್ಲೆ ಮಿಯಾಯ ಜಿಲ್ಲಾ ನ್ಯಾಯಾಲಯದಲ್ಲಿ ಕನಿಷ್ಠ 10 ಬಿಲಿಯನ್ ಡಾಲರ್ ಮೊತ್ತದ ಪರಿಹಾರ ಕೋರಿ ಮಾನನಷ್ಟದ ಮೊಕದ್ದಮೆ ಹೂಡಿದ್ದಾರೆ ಎಂದು ವರದಿಗಳು ಹೇಳಿವೆ.
ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಟ್ರಂಪ್, 2003ರಲ್ಲಿ ಲೈಂಗಿಕ ಅಪರಾಧದಲ್ಲಿ ಶಿಕ್ಷೆಗೆ ಒಳಗಾಗಿದ್ದ ಜೆಫ್ರಿ ಎಪ್ಸ್ಟೀನ್‌ಗೆ ಜನ್ಮದಿನದ ಶುಭಾಷಯ ಪತ್ರವನ್ನು ಕಳುಹಿಸಿದ್ದರು. ಅದರಲ್ಲಿ ಸಂಪೂರ್ಣ ನಗ್ನ ರೇಖಾಚಿತ್ರಗಳು, ಟ್ರಂಪ್ ಅವರ ಸಹಿ ಇತ್ತು. ಪರಸ್ಪರರ ರಹಸ್ಯದ ಬಗ್ಗೆ ಉಲ್ಲೇಖವೂ ಒಳಗೊಂಡಿತ್ತು ಎಂಬ ವರದಿಯನ್ನು ಜುಲೈ 17,2025ರಂದು ವಾಲ್‌ಸ್ಟ್ರೀಟ್ ಜರ್ನಲ್ ಪ್ರಕಟಿಸಿತ್ತು.
ಈ ಸಂಬಂಧ ಪತ್ರಿಕೆ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ ಮರುದಿನವೇ ಕಾನೂನು ಕ್ರಮ ಕೈಗೊಂಡಿದ್ದಾರೆ. ಪತ್ರಿಕೆ ವಿರುದ್ಧ ‘ಪವರ್ ಹೌಸ್ ಲಾಸೂಟ್’ ಸಲ್ಲಿಸಿರುವುದಾಗಿ ಟ್ರಂಪ್ ಟ್ರುಥ್ ಸೋಶಿಯಲ್‌ನಲ್ಲಿ ಪ್ರಕಟಿಸಿದ್ದಾರೆ.
ಈ ತಪ್ಪು, ಅವಮಾನಕರ, ಮಾನಹಾನಿಕರ, ಸುಳ್ಳು ಸುದ್ದಿಯ ಲೇಖನವನ್ನು ವಾಲ್‌ಸ್ಟ್ರೀಟ್ ಜರ್ನಲ್ ನಲ್ಲಿ ಪ್ರಕಟಿಸಿದ್ದಕ್ಕಾಗಿ, ಇದರಲ್ಲಿ ಶಾಮೀಲಾದ ಎಲ್ಲರ ವಿರುದ್ಧವೂ ಪವರ್ ಹೌಸ್ ಲಾಸೂಟ್ ದಾಖಲಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಅಸ್ಸಾಂ ಸೌರ ಯೋಜನೆ: ಭೂಕಬಳಿಕೆ ಆರೋಪ, ಬಲವಂತದಿಂದ 20,000 ಜನರ ಸ್ಥಳಾಂತರ – ಕೇಂದ್ರದ ಮಧ್ಯಪ್ರವೇಶಕ್ಕೆ ಜಮಿಯತ್ ಕರೆ


