ಒತ್ತೆಯಾಳುಗಳಾಗಿ ಇಟ್ಟುಕೊಂಡಿರುವ ಎಲ್ಲಾ ಇಸ್ರೇಲಿಗರನ್ನು ಬಿಡುಗಡೆ ಮಾಡುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಮಾಸ್‌ಗೆ ಕೊನೆಯ ಎಚ್ಚರಿಕೆ ನೀಡಿದ್ದು, ಗಾಝಾ ತೊರೆಯುವಂತೆ ಅದರ ನಾಯಕರಿಗೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.
ಅಮೆರಿಕ-ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆ ಮತ್ತು ಗಾಝಾದಲ್ಲಿ ಯುದ್ಧವನ್ನು ಕೊನೆಗೊಳಿಸಲು 1997ರ ನಂತರ ಮೊದಲ ಬಾರಿಗೆ ಹಮಾಸ್ ಜೊತೆ ನೇರ ಮಾತುಕತೆ ನಡೆಸುವುದಾಗಿ ಶ್ವೇತಭವನ ಘೋಷಿಸಿದ ಬೆನ್ನಲ್ಲೇ ಟ್ರಂಪ್‌ನಿಂದ ಈ ಬೆದರಿಕೆ ಬಂದಿದೆ.
ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿರುವ ಇಸ್ರೇಲ್ ಅನ್ನು ಬಲವಾಗಿ ಬೆಂಬಲಿಸಿದ ಟ್ರಂಪ್, “ಕೆಲಸ ಪೂರ್ತಿಗೊಳಿಸಲು ನಮ್ಮ ಆಡಳಿತವು ಶತಕೋಟಿ ಡಾಲರ್‌ಗಳ ಶಸ್ತ್ರಾಸ್ತ್ರಗಳನ್ನು ಮತ್ತು ಇತರ ಅಗತ್ಯವಿರುವ ಎಲ್ಲವನ್ನೂ ಇಸ್ರೇಲ್‌ಗೆ ನೀಡಲಿದೆ” ಎಂದು ಟ್ರಂಪ್ ಹೇಳಿದ್ದಾರೆ.
“ನಂತರ ಅಲ್ಲ, ಈಗಲೇ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿ. ನೀವು ಕೊಲೆ ಮಾಡಿರುವ ಎಲ್ಲಾ ಜನರ ಮೃತದೇಹಗಳನ್ನು ಹಸ್ತಾಂತರಿಸಿ. ಇಲ್ಲಾ ಅಂದ್ರೆ ನಿಮ್ಮದು ಅತಿಯಾಗುತ್ತದೆ” ಎಂದು ಬಿಡುಗೆಯಾಗಿರುವ ಒತ್ತೆಯಾಳುಗಳ ಜೊತೆ ಮಾತುಕತೆ ನಡೆಸಿದ ನಂತ ಸಾಮಾಜಿಕ ಜಾಲತಾಣ ಟ್ರುತ್‌ನಲ್ಲಿ ಟ್ರಂಪ್ ಬರೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
“2023ರ ಅಕ್ಟೋಬರ್ 7ರಂದು ಹಮಾಸ್ ನಡೆಸಿದ ದಾಳಿಗೆ ಪ್ರತಿಯಾಗಿ ಇಸ್ರೇಲ್ ನಡೆಸಿದ ಕಾರ್ಯಾಚರಣೆಯಿಂದ ಸಂಪೂರ್ಣ ಜನಸಂಖ್ಯೆ ಸ್ಥಳಾಂತರಗೊಂಡು ಗಾಝಾದ ಮೇಲೆ ದೊಡ್ಡ ಪರಿಣಾಮ ಬೀರಿದೆ. ಗಾಝಾದ ಜನರಿಗೆ ಸುಂದರವಾದ ಭವಿಷ್ಯ ಕಾಯುತ್ತಿದೆ. ಆದರೆ, ನೀವು ಒತ್ತೆಯಾಳುಗಳನ್ನು ಹಿಡಿದಿಟ್ಟುಕೊಂಡರೆ ಅದು ನಡೆಯಲ್ಲ, ನೀವು ಸತ್ತಂತೆ” ಎಂದು ಟ್ರಂಪ್
“ಅಕ್ಟೋಬರ್ 7ರ ದಾಳಿಯ ಬಳಿಕ ಒತ್ತೆಯಾಳುಗಳಾಗಿ ಇಟ್ಟುಕೊಂಡವರನ್ನು ಹಸ್ತಾಂತರಿಸದಿದ್ದರೆ ‘ನೀವು ಊಹಿಸಲಾಗದ ಪರಿಣಾಮವನ್ನು ಎದುರಿಸಲಿದ್ದೀರಿ’ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಮಾಸ್‌ಗೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ಟ್ರಂಪ್ ಬೆದರಿಕೆ ಹಾಕಿದ್ದಾರೆ.
ಇಸ್ರೇಲ್‌ನ ದಿಗ್ಬಂಧನದಿಂದ ಬೆಲೆ ಹೆಚ್ಚಳವಾಗಿದ್ದು, ಆಹಾರದ ಕೊರತೆಯೂ ಉಂಟಾಗಿದೆ. ಇದರಿಂದ ಗಾಝಾದಲ್ಲಿರುವ ಪ್ಯಾಲೆಸ್ತೀನಿಯರು ಹಸಿವಿನಿಂದ ಬಳಲುತ್ತಿದ್ದಾರೆ. ವಿಶ್ವ ಆಹಾರ ಕಾರ್ಯಕ್ರಮ (ಡಬ್ಲ್ಯುಎಫ್‌ಪಿ) ತನ್ನ ಆಹಾರ ದಾಸ್ತಾನು ಎರಡು ವಾರಗಳ ಒಳಗೆ ಖಾಲಿಯಾಗಬಹುದು ಎಂದು ಎಚ್ಚರಿಸಿದೆ.
ಸರ್ಬಿಯಾ ಸಂಸತ್‌ನಲ್ಲಿ ಗದ್ದಲ : ಹೊಗೆ ಬಾಂಬ್ ದಾಳಿ ನಡೆಸಿದ ವಿಪಕ್ಷ ನಾಯಕರು


