ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೋಜನ ಕೂಟ ನೀಡಿದ ನಂತರ ಕಾಂಗ್ರೆಸ್ ಗುರುವಾರ ಕೇಂದ್ರ ಸರ್ಕಾರದ ಮೇಲೆ ದಾಳಿ ನಡೆಸಿದ್ದು, ಇದು ಭಾರತೀಯ ರಾಜತಾಂತ್ರಿಕತೆಗೆ “ದೊಡ್ಡ ಹೊಡೆತ” ಎಂದು ಹೇಳಿದೆ. “ಇದು ಭಾರತೀಯ ರಾಜತಾಂತ್ರಿಕತೆಗೆ (ಮತ್ತು ಆಲಿಂಗನ ರಾಜತಾಂತ್ರಿಕತೆಗೂ) ದೊಡ್ಡ ಹೊಡೆತವಾಗಿದೆ” ಎಂದು ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದೆ. ಟ್ರಂಪ್ & ಪಾಕ್ ಸೇನಾ
ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರು ಪಾಕಿಸ್ತಾನ ಮುಖ್ಯಸ್ಥನೊ ಅಥವಾ ಸರ್ಕಾರದ ಮುಖ್ಯಸ್ಥನೊ ಅಲ್ಲ. ಬದಲಾಗಿ ಅವರು ಪಾಕಿಸ್ತಾನದ ಸೇನಾ ಮುಖ್ಯಸ್ಥರಾಗಿದ್ದು, ಆದರೆ ಅವರನ್ನೆ ಟ್ರಂಪ್ ಊಟಕ್ಕೆ ಆಹ್ವಾನಿಸುತ್ತಾರೆ ಮತ್ತು ಹೆಚ್ಚಿನ ಪ್ರಶಂಸೆಯನ್ನು ಮಾಡುತ್ತಾರೆ ಎಂದು ಕಾಂಗ್ರೆಸ್ ಸಂವಹನ ವಿಭಾಗದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
“ಇದೇ ವ್ಯಕ್ತಿಯ ಕ್ರೂರ ಮತ್ತು ಪ್ರಚೋದನಕಾರಿ ಹೇಳಿಕೆಗಳ ಕಾರಣಕ್ಕೆ ಪಹಲ್ಗಾಮ್ ದಾಳಿ ಆಯೋಜಿಸ್ಪಟ್ಟಿತ್ತು ಮತ್ತು ಅವರದೇ ಸೈನ್ಯದ ಉಪಕರಣದಿಂದ ಈ ದಾಳಿ ಸಂಭವಿಸಿತ್ತು” ಎಂದು ರಮೇಶ್ ಅವರು ಪೋಸ್ಟ್‌ನಲ್ಲಿ ಬರೆದಿದ್ದಾರೆ. ಟ್ರಂಪ್ ಮತ್ತು ಅವರ ಭೇಟಿಯು ಇದು ಭಾರತೀಯ ರಾಜತಾಂತ್ರಿಕತೆಗೆ (ಮತ್ತು ಆಲಿಂಗನ ರಾಜತಾಂತ್ರಿಕತೆಗೂ) ದೊಡ್ಡ ಹೊಡೆತವಾಗಿದೆ ಎಂದು ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ರಮೇಶ್ ಅವರು ಟೀಕಿಸಿದ್ದಾರೆ.
”ಆಲಿಂಗನ ರಾಜತಾಂತ್ರಿಕತೆ” ಪದವನ್ನು ಬಳಸಿ ಕಾಂಗ್ರೆಸ್ ಪಕ್ಷವೂ ಪ್ರಧಾನಿ ಮೋದಿ ಅವರನ್ನು ನೇರವಾಗಿ ಟೀಕಿಸುತ್ತಿದೆ. ಅಂತರರಾಷ್ಟ್ರೀಯ ಅಥವಾ ದ್ವಿಪಕ್ಷೀಯ ಕಾರ್ಯಕ್ರಮಗಳಲ್ಲಿ ವಿದೇಶಿ ರಾಷ್ಟ್ರಗಳ ಮುಖ್ಯಸ್ಥರೊಂದಿಗೆ ನಡೆಯುವ ಅವರ ಸಭೆಗಳಲ್ಲಿ ಪ್ರಧಾನಿ ಮೋದಿ ಹೆಚ್ಚಾಗಿ “ಆಲಿಂಗನ” ಮಾಡುತ್ತಾರೆ. ಹಾಗಾಗಿ ಕಾಂಗ್ರೆಸ್ “ಆಲಿಂಗನ ರಾಜತಾಂತ್ರಿಕತೆ” ಎಂಬ ಪದವನ್ನು ಬಳಸುತ್ತಿದೆ.
फील्ड मार्शल आसिम मुनीर न तो किसी देश के राष्ट्राध्यक्ष है, न ही किसी सरकार का प्रमुख। वह पाकिस्तान का सेना प्रमुख है। इसके बावजूद उसे राष्ट्रपति ट्रंप ने व्हाइट हाउस में लंच पर आमंत्रित किया और उसकी जमकर तारीफ की।
यह वही व्यक्ति है, जिसके भड़काऊ और आपत्तिजनक बयानों की पृष्ठभूमि…
— Jairam Ramesh (@Jairam_Ramesh) June 19, 2025
ಈ ಮಧ್ಯೆ, ಭಾರತ ಮತ್ತು ಪಾಕಿಸ್ತಾನದ ಇಬ್ಬರು “ಅತ್ಯಂತ ಬುದ್ಧಿವಂತ” ನಾಯಕರು ವಾರಗಳ ಹಿಂದೆ ಪರಮಾಣು ಯುದ್ಧವನ್ನು ಮುಂದುವರಿಸದಿರಲು “ನಿರ್ಧರಿಸಿದ್ದಾರೆ” ಎಂದು ಟ್ರಂಪ್ ಹೇಳಿದ್ದಾರೆ. ಅದಾಗ್ಯೂ, ಎರಡು ನೆರೆಯ ರಾಷ್ಟ್ರಗಳ ನಡುವಿನ ಯುದ್ಧವನ್ನು ನಿಲ್ಲಿಸಿದ ಕೀರ್ತಿಯನ್ನು ಅವರು ಈ ಬಾರಿ ಹೇಳಿಕೊಳ್ಳಲಿಲ್ಲ.
ಬುಧವಾರ ಶ್ವೇತಭವನದಲ್ಲಿ ಮುನೀರ್ ಅವರನ್ನು ಊಟಕ್ಕೆ ಆತಿಥ್ಯ ವಹಿಸಿದ ನಂತರ ಓವಲ್ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಟ್ರಂಪ್ ಈ ಹೇಳಿಕೆಗಳನ್ನು ನೀಡಿದ್ದಾರೆ. ಮುನೀರ್ ಅವರನ್ನು ಭೇಟಿಯಾಗುವ ಗೌರವ ತನಗೆ ಸಿಕ್ಕಿದೆ ಎಂದು ಟ್ರಂಪ್ ಹೇಳಿದ್ದಾರೆ. ಟ್ರಂಪ್ & ಪಾಕ್ ಸೇನಾ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಬಿಹಾರ | ಜನ ಸುರಾಜ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಪ್ರಶಾಂತ್ ಕಿಶೋರ್
ಬಿಹಾರ | ಜನ ಸುರಾಜ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಪ್ರಶಾಂತ್ ಕಿಶೋರ್

