Homeಚಳವಳಿ’ಜೈಭೀಮ್‌ ಟ್ವಿಟ್ಟರ್‌’ ಮೊಳಗಿದ ಘೋಷಗಳು: ಟ್ವಿಟ್ಟರ್‌ನ ಜಾತೀಯತೆಗೆ ಭಾರೀ ಪ್ರತಿರೋಧ...

’ಜೈಭೀಮ್‌ ಟ್ವಿಟ್ಟರ್‌’ ಮೊಳಗಿದ ಘೋಷಗಳು: ಟ್ವಿಟ್ಟರ್‌ನ ಜಾತೀಯತೆಗೆ ಭಾರೀ ಪ್ರತಿರೋಧ…

- Advertisement -
- Advertisement -

ಟ್ವಿಟ್ಟರ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳು ಪಕ್ಷಪಾತಿಯಾಗಿವೆಯೇ? ಹಣಕ್ಕಾಗಿ ಕೆಲವರ ಹಿತಾಸಕ್ತಿ ಕಾಪಾಡಲು ಮಾತ್ರ ಕೆಲಸ ಮಾಡುತ್ತಿವೆಯೇ? ಜಾತಿವಾದಿಯಾಗಿ ಮತ್ತು ಕೋಮುವಾದಿಯಾಗಿ ನಡೆದುಕೊಳ್ಳುತ್ತಿವೆಯೇ ಎಂಬ ಪ್ರಶ್ನೆಗಳು ಎದುರಾದರೆ ಅದಕ್ಕಿರುವ ಒಂದೇ ಉತ್ತರ ’ಹೌದು’ ಆಗಿರುತ್ತದೆ.

ಹೌದು ನಾವಂದೂಕೊಂಡಿರುವ ಈ ಸೋಷಿಯಲ್‌ ಸ್ಪೇಸ್‌ಗಳು ಕೂಡ ಜಾತಿ, ಧರ್ಮದಿಂದ ಮುಕ್ತವಾಗಿಲ್ಲ. ಅಲ್ಲದೇ ನಿಷ್ಪಕ್ಷಪಾತವಾಗಿಲ್ಲ. ಏಕೆಂದರೆ ಎಲ್ಲರಿಗೂ ಅವರದೇ ಆದ ಹಿತಾಸಕ್ತಿಯಿರುವಂತೆ ಟ್ವಿಟ್ಟರ್‌ ಫೇಸ್‌ಬುಕ್‌ಗಳಂತಹ ಸಾಮಾಜಿಕ ಜಾಲತಾಣಗಳ ನಿರ್ವಾಹಕರಿಗೂ ತಮ್ಮದೇ ಆದ ಹಿತಾಸಕ್ತಿಗಳಿರುವುದು ಸ್ಪಷ್ಟ. ಇವುಗಳ ಮುಖ್ಯಸ್ಥರು ಹಣಕ್ಕಾಗಿ ಕೆಲ ಖಾಸಗಿ ಮಾಹಿತಿಯನ್ನು ರಾಜಕೀಯ ಪಕ್ಷಗಳಿಗೆ, ವ್ಯಾಪಾರಿ ಕಂಪನಿಗಳಿಗೆ ಮಾರಿರುವುದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ ಮತ್ತು ಇದರ ಕುರಿತು ಹಲವು ಕೋರ್ಟ್‌ ಕೇಸುಗಳನ್ನು ಸಹ ಎದುರಿಸುತ್ತಿದ್ದಾರೆ.

ಇನ್ನು ಇವು ಜಾತಿವಾದಿಯೇ? ಕೋಮುವಾದಿಯೇ ಎಂದರೆ ಅದು ಸಹ ಸತ್ಯ. ಸ್ವತಃ ಈ ಕಂಪನಿಗಳ ಮುಖ್ಯಸ್ಥರು ಜಾತಿವಾದಿ, ಕೋಮುವಾದಿ ಅಲ್ಲದಿದ್ದರೂ ಈ ಸಂಸ್ಥೆಗಳ ಆಯಾಕಟ್ಟಿನ ಜಾಗದಲ್ಲಿ ಕೂತಿರುವ ಸಾವಿರಾರು ಉದ್ಯೋಗಿಗಳು ಮಾತ್ರ ತಮ್ಮ ತಲೆಯಲ್ಲಿ ಜಾತಿ ಕೋಮು ವಿಷವನ್ನು ತುಂಬಿಕೊಂಡಿರುವುದು ದುರಂತ.

ಇಷ್ಟೇಲ್ಲಾ ವಿವರಣೆ ಏಕೆಂದರೆ ನಿನ್ನೆ ಟ್ವಿಟ್ಟರ್‌ನಲ್ಲಿ ಕ್ಯಾಸ್ಟಿಸ್ಟ್‌ ಟ್ವಿಟ್ಟರ್‌ ಎಂದೂ ಜೊತೆಗೆ ಇಂದು ಜೈಭೀಮ್‌ ಟ್ವಿಟ್ಟರ್‌ ಎಂಬಂತಹ ಹ್ಯಾಷ್‌ಟ್ಯಾಗ್‌ಗಳು ಟ್ರೆಂಡ್‌ ಆಗಿವೆ. ಇನ್ನು ಸ್ಯಾಕ್ ಮನೀಶ್ ಮಹೇಶ್ವರಿ ಎಂಬ ಟ್ವಿಟ್ಟರ್‌ ಟ್ರೆಂಡಿಂಗ್‌ ಅನ್ನು ಟ್ವಿಟ್ಟರ್‌ ಕ್ಷಣಾರ್ಧದಲ್ಲಿ ಅಳಿಸಿಬಿಟ್ಟಿತ್ತು. ಇದು ಟ್ಟಿಟ್ಟರ್‌ನಲ್ಲಿ ದೊಡ್ಡ ಕೋಲಾಹಲವನ್ನೇ ಎಬ್ಬಿಸಿತ್ತು. ಇದೆಲ್ಲಾ ಯಾಕಾಯಿತು ಎಂಬುದನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳುವುದು ಈ ಸಾಮಾಜಿಕ ಜಾಲತಾಣಗಳ ಜಾತಿರಾಜಕೀಯವನ್ನು ಅರಿಯಲು ಸುಲಭವಾಗುತ್ತದೆ.

ಕೆಲದಿನಗಳ ಹಿಂದೆ ಹಿರಿಯ ಪತ್ರಕರ್ತ ದಿಲೀಪ್ ಮಂಡಲ್ ಅವರ ಖಾತೆಯನ್ನು ಟ್ವಿಟ್ಟರ್‌ ನಿರ್ಬಂಧಿಸಿ‍ತ್ತು. ಇದಕ್ಕೆ ಕೊಟ್ಟ ಕಾರಣವೆಂದರೆ ದ್ವೇಷಪೂರಿತ ಹೇಳಿಕೆಗಳನ್ನು ತಡೆಯುವುದಕ್ಕಾಗಿ ಹಲವಾರು ಜನರ ಖಾತೆಯನ್ನು ಹೀಗೆ ನಿರ್ಭಂದಿಸುತ್ತಿದ್ದೇವೆ ಎಂದು ಟ್ವಿಟ್ಟರ್‌ ವಿವರಣೆ ನೀಡಿತ್ತು.

ಹಾಗೆ ನೋಡಿದರೆ ದಿಲೀಪ್‌ ಮಂಡಲ್‌ರವರು ಆ ರೀತಿಯ ಯಾವುದೇ ದ್ವೇಷಪೂರಿತ ಹೇಳಿಕೆಗಳನ್ನು ತಮ್ಮ ಟ್ವಿಟ್ಟರ್‌ನಲ್ಲಿ ಪ್ರಕಟಿಸಿರಲಿಲ್ಲ. ಬದಲಿಗೆ ನಿಜವಾಗಿಯೂ ದ್ವೇಷ ಬಿತ್ತುತ್ತಿದ್ದ, ಮುಸ್ಲಿಂ ಸಮುದಾಯದ ವಿರುದ್ಧ ಕಿಡಿಕಾರುತ್ತಿದ್ದ ಬಹಳಷ್ಟು ಜನರ, ಪತ್ರಕರ್ತರ ಟ್ವಿಟ್ಟರ್‌ಗಳು ಹಾಗೆ ರಾರಾಜಿಸುತ್ತಿದ್ದವು. ಇದು ದಿಲೀಪ್ ಮಂಡಲ್‌ರವರಿಗೆ ಮಾತ್ರವಲ್ಲದೇ ಬಹಳಷ್ಟು ಪ್ರಗತಿಪರ ಟ್ವಿಟ್ಟರ್‌ಗಳಿಗೆ ಇದೇ ಪರಿಸ್ಥಿತಿ ಇದುರಾಗಿತ್ತು.

ಇದರಿಂದ ಕೋಪಗೊಂಡ ದಿಲೀಪ್ ಮಂಡಲ್ ಅವರು ಟ್ವಿಟ್ಟರ್‌ನ ಈ ಪಕ್ಷಪಾತವನ್ನು ಅದೇ ಟ್ವಿಟ್ಟರ್‌ನಲ್ಲಿ ಪ್ರಶ್ನಿಸಿದರು. ಇದೆಲ್ಲದಕ್ಕೂ ಉತ್ತರ ಬೇಕೆಂದು ಆಗ್ರಹಿಸಿದರು. ಅವರು #SackManishMaheshari ಎಂಬ ಹ್ಯಾಶ್‌ಟ್ಯಾಗ್ ಬಳಸಿ ತಮ್ಮ ಪ್ರಶ್ನೆಗಳನ್ನು ಕೇಳಿದರು.

ಮಣಿಶ್ ಮಹೇಶ್ವರಿಯವರು ಭಾರತದ ಟ್ವಿಟ್ಟರ್‌ನ ಎಂಡಿಯಾಗಿದ್ದಾರೆ. ದ್ವೇಷ ಹರಡುವ ಖಾತೆಗಳನ್ನು ಹಾಗೆ ಬಿಟ್ಟು ಜನಪರ ಪತ್ರಕರ್ತರ ಮೇಲೆ ಕ್ರಮ ತೆಗೆದುಕೊಳ್ಳುವುದನ್ನು ವಿರೋಧಿಸಿ ಸಾವಿರಾರು ಜನರು ಅಸಮಾಧಾನಗೊಂಡಿದ್ದಾರೆ. ಮತ್ತು ಅವರೆಲ್ಲರೂ #SackManishMaheshari ಎಂಬ ಹ್ಯಾಷ್‌ಟ್ಯಾಗ್‌ ಬಳಸಿ ತಮ್ಮ ಆಕ್ರೊಶವನ್ನು ಹೊರಹಾಕಿದರು.

ಶೀಘ್ರದಲ್ಲೇ ಇದು ಮೇಲ್ಭಾಗದಲ್ಲಿ ಟ್ರೆಂಡಿಂಗ್ ಆಗಿತ್ತು. ನೋಡನೋಡುತ್ತಿದ್ದಂತೆಯೇ ಭಾರತದಲ್ಲಿ ಎಂಟರಿಂದ ಮೂರನೆಯ ಸ್ಥಾನಕ್ಕೆ ಜಿಗಿಯಿತು. ಇದು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿತು. ಆದರೆ ಕ್ಷಣಾರ್ಧದಲ್ಲಿಯೇ ಅದು ಇದ್ದಕ್ಕಿದ್ದಂತೆ ಕಣ್ಮರೆಯಾಯಿತು.

ಅಂದರೆ ಟ್ವಿಟ್ಟರ್‌ ಇಂಡಿಯಾ ಆ ಹ್ಯಾಸ್‌ಟ್ಯಾಗ್‌ ಅನ್ನು ಟ್ರೆಂಡಿಂಗ್‌ ನಿಂದ ತೆಗೆದುಹಾಕಿತ್ತು. ಇದರಿಂದ ಜಾಲತಾಣಿಗರು ಮತ್ತಷ್ಟು ಕ್ರೋಧಗೊಂಡರು. ಟ್ವಿಟರ್ ದ್ವೇಷದ ಮಾತನ್ನು ನಿಲ್ಲಿಸುವುದಿಲ್ಲ, ದ್ವೇಷಿಸುವವರಿಗೆ ಜಾಗವನ್ನು ನೀಡುತ್ತದೆ ಮತ್ತು ಟ್ವಿಟ್ಟರ್‌ನ ಮಾನದಂಡಗಳನ್ನು ಪದೇ ಪದೇ ಉಲ್ಲಂಘಿಸುವ ಜನರ ಮೇಲೆ ಮೃದುಭಾವನೆ ತಳೆಯುತ್ತದೆ ಆದರೆ ಅಂಚಿನಲ್ಲಿರುವ ವಿಭಾಗಗಳಾದ ದಲಿತರು, ಮುಸ್ಲಿಮರು, ಹಿಂದುಳಿದವರು, ಬುಡಕಟ್ಟು ಜನಾಂಗದವರು ಮತ್ತು ಈ ಗುಂಪುಗಳ ಬಳಕೆದಾರರ ಮೇಲೆ ಅತ್ಯಂತ ಕಠಿಣ ನಿರ್ಭಂಧಗಳನ್ನು ವಿಧಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಇದಾದ ಸ್ವಲ್ಪ ಸಮಯದಲ್ಲಿಯೇ ಟ್ವಿಟ್ಟರ್‌ ಬಳಕೆದಾರರು #ಕ್ಯಾಸ್ಟಿಸ್ಟ್ ಟ್ವಿಟರ್ ಎಂಬ ಹ್ಯಾಷ್‌ಟ್ಯಾಗ್‌ ಬಳಸಿ ಅದನ್ನು ಸಹ ಟ್ರೆಂಡ್ ಮಾಡಿದ್ದಾರೆ. ವಿಚಿತ್ರವೆಂದರೆ, ಯಾವುದೇ ಉಲ್ಲಂಘನೆ ಇಲ್ಲದಿದ್ದರೂ ತಳಸಮುದಾಯಕ್ಕೆ ಸೇರಿದ ಖಾತೆಗಳನ್ನು ಟ್ವಿಟ್ಟರ್‌ ತ್ವರಿತವಾಗಿ ನಿರ್ಬಂಧಿಸಲಾಗುತ್ತದೆ. ಇದಕ್ಕೆ ಕಾರಣ ಟ್ವಿಟರ್ ಇಂಡಿಯಾದಲ್ಲಿ ಸಾಮಾಜಿಕ ಅಸಮತೋಲನವಿದೆ (ಕಂಪನಿಯಲ್ಲಿ ಹಲವಾರು ಪ್ರಮುಖ ಹುದ್ದೆಗಳಲ್ಲಿ ವಿವಿಧ ಸಮುದಾಯಗಳ ಪ್ರಾತಿನಿಧ್ಯದ ಕೊರತೆ) ಅದರ ಬಗ್ಗೆ ಗಮನಹರಿಸಲು ಅದರ ಸಿಇಒಗೆ ಬಹಳಷ್ಟು ಜನರು ಒತ್ತಾಯಿಸಿದ್ದಾರೆ.

ಪತ್ರಕರ್ತ ದಿಲೀಪ್‌ ಮಂಡಲ್‌ರವರ ಟ್ವಿಟ್ಟರ್‌ ಖಾತೆಯನ್ನು ವೆರಿಫೈಡ್‌ ಎಂದು ಘೋಷಿಸಿದ ಟ್ವಿಟ್ಟರ್‌ಗೆ ಹಿರಿಯ ಪತ್ರಕರ್ತ ದಿ ಪ್ರಿಂಟ್‌ನ ಶೇಖರ್‌ ಗುಪ್ತಾ ಸಹ ಛೀಮಾರಿ ಹಾಕಿದ್ದಾರೆ.

ಟ್ವಿಟ್ಟರ್‌ಗೆ ಎಲ್ಲಾ ಸಮುದಾಯದವರನ್ನು ಒಳಗೊಳ್ಳುವ ಮತ್ತು ಸಮಾನತೆಯ ಪಾಠ ಬೋಧಿಸಲು ನೆಟ್ಟಿಗರು ತೀರ್ಮಾನಿಸಿದರು. ಅದಕ್ಕಾಗಿ ಭಾರತದಲ್ಲಿ ಸಮಾನತೆಗಾಗಿ ಜೀವಮುಡಿಪಿಟ್ಟ ಬಾಬಾಸಾಹೇಬ್ ಅಂಬೇಡ್ಕರ್‌ರವರನ್ನು ನೆನಪಿಸಲು ಇಂದು ಬೆಳಿಗ್ಗೆಯೇ ಜೈಭೀಮ್‌ ಟ್ವಿಟ್ಟರ್‌ ಎಂಬ ಹ್ಯಾಷ್‌ಟ್ಯಾಗ್‌ ಅನ್ನು ಹರಿಯಬಿಟ್ಟರು. ಕಾಂಗ್ರೆಸ್‌ನ ದಲಿತ ವಿಭಾಗದ ಅಧ್ಯಕ್ಷ ಮತ್ತು ಶಾಸಕ ಡಾ.ನಿತಿನ್‌ ರಾವತ್‌, ಗುಜರಾತ್‌ನ ಹೋರಾಟಗಾರ ಮತ್ತು ಶಾಸಕ ಜಿಗ್ನೇಶ್‌ ಮೇವಾನಿ ಅಲ್ಲವೇ ದಲಿತ್ ಏಕತಾ, ಬಹುಜನ್‌ಫಾರ್‌ ಇಂಡಿಯಾ, ಟ್ರೈಬಲ್‌ ಆರ್ಮಿ ಸೇರಿದಂತೆ ಸಾವಿರಾರು ಖಾತೆಗಳಿಂದ ಜೈಭೀಮ್‌ ಟ್ವಿಟ್ಟರ್‌ ಟ್ರೆಂಡ್‌ ಆಗಿದೆ.

ಅಂತೂ ಇದರಿಂದ ಟ್ವಿಟ್ಟರ್‌ ಮುಜುಗರಕ್ಕೆ ಒಳಗಾಗಿದೆ. ಇದು ಇಂದಿನ ತಳಸಮುದಾಯದ ಯುವತಲೆಮಾರಿನ ಸ್ವಾಭಿಮಾನ ಪ್ರದರ್ಶನದ ಧ್ಯೋತಕವಾಗಿದೆ. ಹೆಚ್ಚು ಹೆಚ್ಚು ಯುವಜನರು ಈ ಸಾಮಾಜಿಕ ಫ್ಲಾಟ್‌ಫಾರಂಗಳಿಗೆ ಬಂದಂತೆ ತಮ್ಮ ಅಸರ್ಸನ್‌ ಅನ್ನು ವ್ಯಕ್ತಪಡಿಸುತ್ತಿದ್ದಾರೆ. ಟ್ವಿಟ್ಟರ್‌ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳು ಈ ವಿದ್ಯಮಾನದಿಂದ ಪಾಠ ಕಲಿಯಬೇಕಿದೆ. ಇಲ್ಲದಿದ್ದಲ್ಲಿ ಮತ್ತಷ್ಟು ಪ್ರತಿರೋಧ ವ್ಯಕ್ತವಾಗುವುದರಲ್ಲಿ ಸಂಶಯವಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...

ಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ ನಿಧನ

ಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ (82 ವರ್ಷ) ಅವರು ಬುಧವಾರ (ಜನವರಿ 7, 2026) ತಡರಾತ್ರಿ ಪುಣೆಯಲ್ಲಿರುವ ತಮ್ಮ ಮನೆಯಲ್ಲಿ ಅಲ್ಪಕಾಲದ ಅನಾರೋಗ್ಯದ ನಂತರ ನಿಧನರಾದರು. ಈ ಕುರಿತು ಗಾಡ್ಗೀಳ್ ಅವರ...

ಅಪರಾಧದ ಸ್ವರೂಪ ಏನೇ ಇರಲಿ, ತ್ವರಿತ ವಿಚಾರಣೆಯ ಹಕ್ಕು ಅನ್ವಯಿಸುತ್ತದೆ: ಸುಪ್ರೀಂ ಕೋರ್ಟ್

ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ತ್ವರಿತ ವಿಚಾರಣೆಯ ಹಕ್ಕು ಅಪರಾಧದ ಗಂಭೀರತೆ ಅಥವಾ ಸ್ವರೂಪವನ್ನು ಲೆಕ್ಕಿಸದೆ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಪುನರುಚ್ಚರಿಸಿದೆ. 2002 ರ ಹಣ ವರ್ಗಾವಣೆ ತಡೆ ಕಾಯ್ದೆಯ...