ಮುಂಬೈ ಉಬರ್ ಕ್ಯಾಬ್ ಚಾಲಕನೊಬ್ಬ, ಸಿಎಎ ಪ್ರತಿಭಟನೆಯ ಕುರಿತು ಫೋನ್‌ನಲ್ಲಿ ಮಾತನಾಡುತ್ತಿದ್ದ ತನ್ನ ಪ್ರಯಾಣಿಕ (ಕವಿ ಮತ್ತು ಸಾಮಾಜಿಕ ಕಾರ್ಯಕರ್ತ)ನನ್ನು ದೇಶದ್ರೋಹಿ ಎಂದು ಭಾವಿಸಿ ಅವರನ್ನು ಪೊಲೀಸರಿಗೆ ಒಪ್ಪಿಸಿರುವ ಘಟನೆ ಬುಧವಾರ ರಾತ್ರಿ ಜರುಗಿದೆ.
ಹೋರಾಟಗಾರ್ತಿ ಕವಿತಾ ಕೃಷ್ಣನ್ ಈ ಘಟನೆಯನ್ನು “ಭಯಾನಕ ಪ್ರಸಂಗ” ಎಂದು ಕರೆದು ಟ್ವೀಟ್ ಮಾಡಿದ್ದಾರೆ. ಈ ಕುರಿತು ಕ್ಯಾಬ್ ಚಾಲಕನ ಮೇಲೆ ತುರ್ತು ಕ್ರಮ ಕೈಗೊಳ್ಳುವಂತೆ ಉಬರ್ ಸಂಸ್ಥೆ ಮತ್ತು ಮುಂಬೈ ಪೊಲೀಸರಿಗೆ ಮನವಿ ಮಾಡಿದ್ದಾರೆ.
ನಡೆದಿದ್ದೇನು?
ಸರ್ಕಾರ್‌ರವರ ಹೇಳಿಕೆಯನ್ನು ಕವಿತಾ ಕೃಷ್ಣನ್‌ರವರು ಟ್ವೀಟ್ ಮಾಡಿದ್ದಾರೆ. ಅದರಂತೆ ಸರ್ಕಾರ್ ಎಂಬ ಕವಿ ಮತ್ತು ಸಾಮಾಜಿಕ ಕಾರ್ಯಕರ್ತ ಬುಧವಾರ ರಾತ್ರಿ 10:30ರ ಸುಮಾರಿಗೆ ಜುಹುನಿಂದ ಕುರ್ಲಾಕ್ಕೆ ಉಬರ್ ಕ್ಯಾಬ್ ತೆಗೆದುಕೊಂಡಿದ್ದಾರೆ. ಪ್ರಯಾಣದ ಸಮಯದಲ್ಲಿ ಅವರು ತಮ್ಮ ಸ್ನೇಹಿತರೊಂದಿಗೆ (ಮೊಬೈಲ್ ಫೋನ್‌ನಲ್ಲಿ) ದೆಹಲಿಯ ಶಾಹೀನ್ ಬಾಗ್ ಪ್ರತಿಭಟನೆಯಲ್ಲಿ “ಲಾಲ್ ಸಲಾಮ್” ಘೋಷಣೆಯು ಜನರಿಗೆ ಹೆಚ್ಚು ಒಪ್ಪಿತವಾಗಿಲ್ಲ ಎಂಬ ವಿಷಯದ ಕುರಿತು ಚರ್ಚಿಸುತ್ತಿದ್ದರು.
Last night, poet @Bappadittoh had a scary episode in Mumbai, at the hands of an @Uber driver and @MumbaiPolice cops (see screenshots): a glimpse of scary India under NPR NRC CAA, where every person will be incentivised to suspect & turn in others & police can harass everyone. pic.twitter.com/OOKUB58BxK
— Kavita Krishnan (@kavita_krishnan) February 6, 2020
ಇದನ್ನು ಕೇಳುತ್ತಿದ್ದ ಚಾಲಕ, ಸರ್ಕಾರ್‌ಗೆ ತಾನು ಎಟಿಎಂನಿಂದ ಹಣವನ್ನು ತೆಗೆದುಕೊಳ್ಳುತ್ತೇನೆ ಎಂದು ಕಾರು ನಿಲ್ಲಿಸಿದ್ದಾರೆ. ಆದರೆ ಚಾಲಕ ಇಬ್ಬರು ಪೊಲೀಸರೊಂದಿಗೆ ಹಿಂತಿರುಗಿದ್ದಾನೆ. ಪೊಲೀಸರು ಸರ್ಕಾರ್ ಅವರನ್ನು “ದಫ್ಲಿ” (ತಾಳವಾದ್ಯ) ಏಕೆ ಸಾಗಿಸುತ್ತಿದ್ದೀರಿ ಎಂದು ಕೇಳಿದರು ಮತ್ತು ಅವರ ವಿಳಾಸವನ್ನೂ ಕೇಳಿದ್ದಾರೆ.
ಸರ್ಕಾರ್ ಅವರು ಜೈಪುರದವರು ಮತ್ತು ಸಿಎಎ ವಿರೋಧಿ “ಮುಂಬೈ ಬಾಗ್” ಪ್ರತಿಭಟನೆಗೆ ಭೇಟಿ ನೀಡಿದ್ದರು ಎಂದು ಹೇಳಿದರು. ಅವರು ಪ್ರತಿಭಟನೆಯಲ್ಲಿ ಹಾಡು ಮತ್ತು ಘೋಷಣೆ ಕೂಗಲು ಅವರ ವಾದ್ಯವನ್ನು ಹೊತ್ತೊಯ್ಯುತ್ತಿದ್ದರು ಎಂದು ಅವರು ಹೇಳಿದ್ದಾರೆ.
ಆದರೆ ಕ್ಯಾಬ್ ಚಾಲಕ “ಅವನು ಕಮ್ಯುನಿಸ್ಟ್ ಎಂದು ಹೇಳಿಕೊಂಡಿದ್ದಾನೆ. ದೇಶವನ್ನು ಸುಡುವ ಬಗ್ಗೆ ಮತ್ತು ಮುಂಬೈನಲ್ಲಿ ಶಾಹೀನ್ ಬಾಗ್ ಮಾಡುವ ಬಗ್ಗೆ ಮಾತನಾಡುತ್ತಿದ್ದಾನೆ. ಹಾಗಾಗಿ ಆ ಪ್ರಯಾಣಿಕನನ್ನು ಬಂಧಿಸುವಂತೆ” ಪೊಲೀಸರನ್ನು ಕೇಳಿಕೊಂಡಿದ್ದಾನೆ. ತಾನು ಅವನ ಫೋನ್ ಸಂಭಾಷಣೆಯನ್ನು ರೆಕಾರ್ಡ್ ಮಾಡಿದ್ದೇನೆ ಎಂದು ಚಾಲಕ ಹೇಳಿಕೊಂಡಿದ್ದಾನೆ.
ಸರ್ಕಾರ್ ಅವರನ್ನು ನಂತರ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು ಎಂದು ಹೇಳಿಕೆ ತಿಳಿಸಿದೆ. ಆಗ ಸರ್ಕಾರ್ ಸಂಭಾಷಣೆಯನ್ನು ಆಲಿಸುವಂತೆ ಪೊಲೀಸರಿಗೆ ಮನವಿ ಮಾಡಿದರು ಮತ್ತು ಆ ಸಂಭಾಷಣೆಯಲ್ಲಿ ಏನು ಅಪರಾಧವೆಂದು ಅವರು ಚಾಲಕನನ್ನು ಕೇಳಿದರು.
“ನೀವು ದೇಶವನ್ನು ನಾಶಪಡಿಸುತ್ತಿದ್ದಾಗ ನಾವು ಸುಮ್ಮನೆ ಕೈಕಟ್ಟಿ ನೋಡಬೇಕೆಂದು ನೀವು ನಿರೀಕ್ಷಿಸುತ್ತೀರಾ? ನಾನು ನಿಮ್ಮನ್ನು ಬೇರೆಲ್ಲಿಗೋ ಒಯ್ಯುವ ಬದಲು ಪೊಲೀಸ್ ಠಾಣೆಗೆ ಕರೆದೊಯ್ಯಿದ್ದೇನೆ. ಅದಕ್ಕೆ ನೀವು ಕೃತಜ್ಞರಾಗಿರಬೇಕು” ಎಂದು ಚಾಲಕ ಏರುದನಿಯಲ್ಲಿ ಬೆದರಿಸಿದ್ದಾನೆ.
ಕಾರು ಚಾಲಕನ ರೈಡ್-ಹೇಲಿಂಗ್ ಅಪ್ಲಿಕೇಶನ್‌ನಲ್ಲಿನ ಅವರ ಪ್ರೊಫೈಲ್ ವಿವರಣೆಯಲ್ಲಿ ಹೀಗೆ ಬರೆಯಲಾಗಿದೆ: “ನಾನು ಕಾರು ಚಾಲನ ವೃತ್ತಿ ಮಾಡುವುದು ಏಕೆಂದರೆ ಅದು ವಿಭಿನ್ನ ಪಾತ್ರಗಳು ಮತ್ತು ವ್ಯಕ್ತಿತ್ವಗಳನ್ನು ಅಧ್ಯಯನ ಮಾಡಲು ಅನುವು ಮಾಡಿಕೊಡುತ್ತದೆ”.
“ಆ ಸಮಯದಲ್ಲಿ ಸ್ವಲ್ಪ ಭಯದ ಭಾವನೆ ಮೂಡಿತು. ಅದು ತಕ್ಷಣದಲ್ಲಿಯೇ ಬಗೆಹರಿಯಲಿಲ್ಲ, ಮತ್ತು ರಾತ್ರಿಯಿಡೀ ಉಳಿದಿದೆ” ಎಂದು ಕವಿ-ಕಾರ್ಯಕರ್ತ ಸರ್ಕಾರ್ ತಿಳಿಸಿದ್ದಾರೆ.
ಪೊಲೀಸರು ಸರ್ಕಾರ್‌ರವರ ಸಿದ್ಧಾಂತ ಮತ್ತು ಅವರು ಓದಿದ ಜನರ ಬಗ್ಗೆ ಕೇಳಿದರು. ಸರ್ಕಾರ್ ಅವರ ಪ್ರಕಾರ, ಕೇವಲ ಅವನ ತಂದೆಯ ಸಂಬಳದಲ್ಲಿ ಮತ್ತು ಕೆಲಸವಿಲ್ಲದೆ ತಾನು ಹೇಗೆ ಬದುಕಲು ಸಾಧ್ಯ ಎಂಬಂತಹ “ಅಸಂಬದ್ಧ” ಪ್ರಶ್ನೆಗಳನ್ನು ಸಹ ಪೊಲೀಸರು ಕೇಳಿದರು. ಮತ್ತು ಅವರು “ದಫ್ಲಿ” ಯನ್ನು ಏಕೆ ಸಾಗಿಸುತ್ತಿದ್ದಾರೆಂದು ಪದೇ ಪದೇ ಕೇಳುತ್ತಲೇ ಇದ್ದರು.
ಪೊಲೀಸರು ಆತನೊಂದಿಗೆ ಸಭ್ಯರಾಗಿದ್ದರು ಮತ್ತು ಅವರ ಮತ್ತು ಚಾಲಕ ಇಬ್ಬರನ್ನೂ ತಮ್ಮ ಹೇಳಿಕೆಗಳನ್ನು ದಾಖಲಿಸುವಂತೆ ಕೇಳಿಕೊಂಡರು.
ಮುಂಜಾನೆ 1 ಗಂಟೆ ಸುಮಾರಿಗೆ ಮತ್ತೊಬ್ಬ ಕಾರ್ಯಕರ್ತ ಎಸ್ ಗೋಹಿಲ್ ಪೊಲೀಸ್ ಠಾಣೆಗೆ ಬಂದ ನಂತರ ಸರ್ಕಾರ್ ಅವರಿಗೆ ಅಲ್ಲಿಂದ ಹೋಗಲು ಅನುಮತಿ ನೀಡಲಾಯಿತು.
ಕವಿತಾ ಕೃಷ್ಣನ್ ಅವರ ಟ್ವೀಟ್ ಹೇಳಿಕೆಯ ಪ್ರಕಾರ, ಸರ್ಫಾರ್‌ಗೆ ಡಫ್ಲಿ ಒಯ್ಯಬೇಡಿ ಮತ್ತು ಕೆಂಪು ಸ್ಕಾರ್ಫ್ ಧರಿಸಬೇಡಿ. “ವಾತಾವರಣವು ಉತ್ತಮವಾಗಿಲ್ಲ ಮತ್ತು ಏನು ಬೇಕಾದರೂ ಆಗಬಹುದು” ಎಂದು ಪೊಲೀಸರು ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಈ ಘಟನೆಯು “ಎನ್‌ಪಿಆರ್ ಎನ್‌ಆರ್‌ಸಿ ಸಿಎಎ ಅಡಿಯಲ್ಲಿ ಭಯಾನಕ ಭಾರತದ ದರ್ಶನವಾಗಿದೆ, ಅಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಇತರರನ್ನು ಅನುಮಾನಿಸಲು ಮತ್ತು ವಿಚಾರಣೆ ನಡೆಸಲು ಪ್ರೋತ್ಸಾಹಿಸಲಾಗುವುದು ಮತ್ತು ಪೊಲೀಸರು ಎಲ್ಲರಿಗೂ ಕಿರುಕುಳ ನೀಡಬಹುದು” ಎಂದು ಕವಿತಾ ಕೃಷ್ಣನ್ ಟ್ವೀಟ್ ಮಾಡಿದ್ದಾರೆ. ಅವರು ಮುಂಬೈ ಪೊಲೀಸ್ ಮತ್ತು ಉಬರ್ ಅನ್ನು ಟ್ಯಾಗ್ ಮಾಡಿದ್ದಾರೆ.
We have followed you. Please share the exact details of case in DM.
— Mumbai Police (@MumbaiPolice) February 6, 2020
“ನಾವು ನಿಮ್ಮನ್ನು ಫಾಲೋ ಮಾಡುತ್ತಿದ್ದೇವೆ. ದಯವಿಟ್ಟು ಡಿಎಂನಲ್ಲಿ ಪ್ರಕರಣದ ನಿಖರವಾದ ವಿವರಗಳನ್ನು ಹಂಚಿಕೊಳ್ಳಿ” ಎಂದು ಮುಂಬೈ ಪೊಲೀಸರು ಕೃಷ್ಣನ್‌ರವರ ಟ್ವೀಟ್‌ಗೆ ಉತ್ತರಿಸಿದ್ದಾರೆ.
This is concerning. We'd like to address this on priority. Kindly share the registered details from which the trip was requested via Direct Message. A member from our safety team will get in touch with you at the earliest. https://t.co/1WqzzOmdKe
— Uber India Support (@UberINSupport) February 6, 2020
ಟ್ವಿಟರ್ ಹ್ಯಾಂಡಲ್ ‘ಉಬರ್ ಇಂಡಿಯಾ ಸಪೋರ್ಟ್’ ಈ ಘಟನೆಗೆ ಸಂಬಂಧಿಸಿದೆ “ನಾವು ಇದನ್ನು ಆದ್ಯತೆಯ ಮೇರೆಗೆ ವಿಚಾರನೆ ನಡೆಸಲು ಬಯಸುತ್ತೇವೆ. ಪ್ರಯಾಣವನ್ನು ವಿನಂತಿಸಿದ ನೋಂದಾಯಿತ ವಿವರಗಳನ್ನು ದಯವಿಟ್ಟು ಹಂಚಿಕೊಳ್ಳಿ” ಎಂದು ಅದು ಹೇಳಿದೆ.



ನೈತಿಕ ಪೊಲೀಸ್ ಗಿರಿ ಮೆರೆದಿರುವ ಉಬರ್ ಚಾಲಕನ ವಿರುದ್ಧ ಉಬರ್ ಕಂಪನಿಯು ಸೂಕ್ತ ಕಾನೂನು ಕ್ರಮ ಜರುಗಿಸಬೇಕು.
Taxi driver must be questioned for this harrasment
Questionable act’s are harassment is very dangerous zone this is the encashment if BJP govt
They doesn’t want to development of so many sectors
They want to only got power and smashing all constional institutions
This very condemned one and shame full to NDA givt