‘ಜೈ ಹಿಂದೂ ರಾಷ್ಟ್ರ’ ಎಂದು ಬರೆದಿರುವ, ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಅವರ ಚಿತ್ರದೊಂದಿಗೆ ಬ್ರಿಟಿಷರಲ್ಲಿ ಹಲವು ಬಾರಿ ಕ್ಷಮೆ ಕೇಳಿ ಖ್ಯಾತರಾದ ವಿ.ಡಿ.ಸಾವರ್ಕರ್ ಅವರ ಫೋಟೋವನ್ನೂ ಬಳಸಿರುವ ಪ್ಲೆಕ್ಸ್‌ಅನ್ನು ಉಡುಪಿಯ ಪ್ರಮುಖ ಸ್ಥಳದಲ್ಲಿ ಹಾಕಲಾಗಿದ್ದು, ಉಡುಪಿ ಪೊಲೀಸರು ಇದಕ್ಕೆ ರಕ್ಷಣೆ ನೀಡಿದ್ದಾರೆ.
ಬ್ಯಾನರ್‌ನ ಒಂದು ಬದಿಯಲ್ಲಿ “ಜೈ ಹಿಂದೂ ರಾಷ್ಟ್ರ” ಎಂಬ ಹೇಳಿಕೆ ಮತ್ತು ಇನ್ನೊಂದು ಬದಿಯಲ್ಲಿ “ಸ್ವಾತಂತ್ರ್ಯವು ಬ್ರಿಟಿಷರು ಅಹಿಂಸೆಗೆ ನೀಡಿದ ಭಿಕ್ಷೆಯಲ್ಲ” ಎಂಬ ಹೇಳಿಕೆಯನ್ನು ಹಾಕಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಬ್ಯಾನರ್‌ನಲ್ಲಿ, “ಕ್ರಾಂತಿಕಾರಿ ಹೋರಾಟದ ಮೂಲಕ ಬ್ರಿಟಿಷರನ್ನು ಸೋಲಿಸಿ ಅವರ ದುರಾಡಳಿತದಿಂದ ದೇಶವನ್ನು ಮುಕ್ತಗೊಳಿಸಿದ ಕ್ರಾಂತಿಕಾರಿ ನಾಯಕರಾದ ವೀರ್ ಸಾವರ್ಕರ್ ಮತ್ತು ಸುಭಾಷ್ ಚಂದ್ರ ಬೋಸ್ ಅವರನ್ನು ಈ 75 ನೇ ಸ್ವಾತಂತ್ರ್ಯ ದಿನದಂದು ಸ್ಮರಿಸೋಣ” ಎಂದು ಬರೆಯಲಾಗಿದೆ. ಮಹಾನ್ ಚೇತನ ಸುಭಾಷ್ ಚಂದ್ರ ಬೋಸ್ ಅವರ ಫೋಟೋಕ್ಕಿಂತ, ಹಿಂದುತ್ವವಾದಿ ಸಾವರ್ಕರ್ ಫೋಟೋವನ್ನು ದೊಡ್ಡದಾಗಿ ಬಳಸಿರುವುದನ್ನು ಪ್ಲೆಕ್ಸ್‌ನಲ್ಲಿ ಕಾಣಬಹುದು.
National Gen. Secretary of #BJP OBC morcha Yashpal Suvarna flowered "Jai Hindu Rashtra" hoarding with #Savarkar Pic with police protection in Udupi which was placed during #IndependenceDay.
Had earlier called 6 #Hijab-clad students belonging to Terrorist org & celebrated later. pic.twitter.com/kxPL0xaeKo
— Syed Mueen (@Mueen_mgd) August 17, 2022
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ನೀಡಿದ ದೂರಿನ ಬಳಿಕ ಬ್ಯಾನರ್ ಇರುವ ಸ್ಥಳದಲ್ಲಿ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲು ಉಡುಪಿ ಪಟ್ಟಣ ಪುರಸಭೆ ಸೋಮವಾರ ನಿರ್ಧರಿಸಿದೆ. ಮುಂದಿನ 15 ದಿನಗಳ ಕಾಲ ನಗರಸಭೆಯ ಮನವಿಯಂತೆ ಬ್ಯಾನರ್ ಇರುವ ಸ್ಥಳದಲ್ಲಿ ಪೊಲೀಸರು ಹಾಜರಿರುತ್ತಾರೆ ಎಂದು ಉಡುಪಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಕುರಿತು ವರದಿ ಮಾಡಿರುವ ‘ದಿ ನ್ಯೂಸ್ ಮಿನಿಟ್’ ಜಾಲತಾಣ, “ಬ್ಯಾನರ್‌ನ ಸ್ಥಳಕ್ಕೆ ಭೇಟಿ ನೀಡಿದಾಗ ಬ್ರಹ್ಮಗಿರಿ ವೃತ್ತದಲ್ಲಿ ಎಂಟು ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಸ್ವಾತಂತ್ರ್ಯೋತ್ಸವದ ನಿಮಿತ್ತ ಬ್ರಹ್ಮಗಿರಿ ವೃತ್ತದಲ್ಲಿ ಬ್ಯಾನರ್ ಅಳವಡಿಸಲಾಗಿದ್ದು, ಇದನ್ನು ಪ್ರಮೋದ್ ಉಚ್ಚಿಲ, ಶೈಲೇಶ್ ದೇವಾಡಿಗ ಮತ್ತು ಯೋಗೀಶ್ ಕುತ್ಪಾಡಿ ಅವರು ಅಳವಡಿಸಿದ್ದಾರೆ. ಪ್ರಮೋದ್, ಉಡುಪಿಯ ಬಲಪಂಥೀಯ ಸಂಘಟನೆ ಹಿಂದೂ ಮಹಾಸಭಾಕ್ಕೆ ಸೇರಿದವರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ” ಎಂದು ವಿವರಿಸಿದೆ.
ಬ್ಯಾನರ್ ವಿರುದ್ಧ ಎಸ್‌ಡಿಪಿಐ ದೂರು ನೀಡಿದ್ದರೂ, ಪಟ್ಟಣದ ಪುರಸಭೆಯು ಬ್ರಹ್ಮಗಿರಿ ವೃತ್ತದಲ್ಲಿ ಬ್ಯಾನರ್ ಇರಿಸಲು ಮತ್ತು ಹೆಚ್ಚಿನ ರಕ್ಷಣೆ ನೀಡಲು ನಿರ್ಧರಿಸಿದೆ.
ಪಾಲಿಕೆ ಆಯುಕ್ತ ಉದಯಕುಮಾರ್ ಶೆಟ್ಟಿ ಮಾತನಾಡಿ, ‘ಬ್ಯಾನರ್ ಹಾಕಲು ಯಾವುದೇ ನಿರ್ಬಂಧವಿಲ್ಲ ಮತ್ತು ಅರ್ಜಿದಾರರು ಮೂರು ದಿನ ಮುಂಚಿತವಾಗಿ ಹಾಕಲು ಅನುಮತಿ ಕೋರಿದ್ದಾರೆ’ ಎಂದು ಹೇಳಿದ್ದಾರೆ.
ವಿವಾದಾತ್ಮಕ ಪ್ಲೆಕ್ಸ್‌ಗಳನ್ನು ಹಾಕಿದ ಕಾರಣ ಶಿವಮೊಗ್ಗ ಅಹಿತಕರ ಘಟನೆಗಳಿಗೆ ಸಾಕ್ಷಿಯಾಗಿದೆ. ಆಗಸ್ಟ್ 15ರಂದು ಶಿವಮೊಗ್ಗ ಜಿಲ್ಲೆಯ ಅಮೀರ್ ಅಹಮದ್ ವೃತ್ತದಲ್ಲಿ ಸಾವರ್ಕರ್ ಅವರ ಪೋಸ್ಟರ್ ಹಾಕಿದ್ದರಿಂದ ಉದ್ವಿಗ್ನತೆ ಉಂಟಾಗಿತ್ತು.
ಪೋಸ್ಟರ್ ವಿಚಾರವಾಗಿ ನಡೆದ ಘರ್ಷಣೆಯಲ್ಲಿ ಪ್ರೇಮ್ ಸಿಂಗ್ ಎಂಬ ವ್ಯಕ್ತಿಗೆ ಚಾಕುವಿನಿಂದ ಇರಿದ ನಾಲ್ವರು ಎಸ್‌ಡಿಪಿಐ ಕಾರ್ಯಕರ್ತರನ್ನು ಬಂಧಿಸಲಾಗಿದೆ. ದಕ್ಷಿಣ ಕನ್ನಡದಲ್ಲಿ, ಸಾವರ್ಕರ್ ಅವರ ಪೋಸ್ಟರ್‌ಗಳನ್ನು ಪ್ರದರ್ಶಿಸಿದ ಸರ್ಕಾರಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದಕ್ಕಾಗಿ ಎಸ್‌ಡಿಪಿಐ ಸದಸ್ಯರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿರಿ: ದೇಶ ವಿಭಜನೆಗೆ ಸಾವರ್ಕರ್ ಕಾರಣ: ವಿಡಿಯೊ ಬಿಡುಗಡೆ ಮಾಡಿದ ಕಾಂಗ್ರೆಸ್
ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಪತ್ರಿಕೆಗಳಿಗೆ ನೀಡಿದ ಜಾಹೀರಾತಿನಲ್ಲೂ ಸಾವರ್ಕರ್ ಫೋಟೋವನ್ನು ಹಾಕಲಾಗಿತ್ತು. ದೇಶಕ್ಕಾಗಿ ಸೇವೆ ಸಲ್ಲಿಸಿದ, ಮೊದಲ ಪ್ರಧಾನಿ ಜವಹರಲಾಲ್ ನೆಹರೂ ಅವರ ಫೋಟೋವನ್ನು ಕಡೆಗಣಿಸಿದ್ದು, ಭಾರೀ ಟೀಕೆಗೆ ಒಳಗಾಗಿತ್ತು.
ಟೀಕೆಗಳ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿ, “ಆರ್ ಎಸ್ ಎಸ್ ಆದರ್ಶಗಳಿಗೆ ತಲೆಬಾಗುತ್ತೇನೆ” ಎಂದಿದ್ದಾರೆ.
ದೇಶ ವಿಭಜನೆಯಲ್ಲೂ ಸಾವರ್ಕರ್ ಪಾತ್ರವಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ನಿರಂತರ ಕ್ಷಮಾಪಣಾ ಪತ್ರಗಳನ್ನು ಬ್ರಿಟಿಷರಿಗೆ ಬರೆಯುವ ಮೂಲಕ ಸಾವರ್ಕರ್ ಇತಿಹಾಸದಲ್ಲಿ ದಾಖಲಾಗಿದ್ದಾರೆ. ಆದರೆ ಕರ್ನಾಟಕ ರಾಜ್ಯ ಸರ್ಕಾರ ಇತಿಹಾಸವನ್ನು ತಿರುಚುವ ಕೆಲಸಕ್ಕೆ ಕೈಹಾಕಿದೆ ಎಂಬ ಆರೋಪಗಳು ಬರುತ್ತಿವೆ.



ನೇತಾಜಿ ಸುಭಾಷ್ ಚಂದ್ರ ಬೋಸ್ ಎಂದಿಗೂ ಹಿಂದೂ ರಾಷ್ಟ್ರದ ಪ್ರತಿಪಾದಕ ಆಗಿರಲಿಲ್ಲ. ಈಗ ಅವರ ಫೋಟೊ ಜೊತೆಗೆ ಸಾವರ್ಕರ್ ಫೋಟೊ ಹಾಕುವ ಮೂಲಕ ಮನುವಾದಿಗಳು ನೇತಾಜಿಯವರಿಗೆ ಅವಮಾನ ಮಾಡಿದ್ದಾರೆ. ಇದು ಕಂಡನಾರ್ಹ.
Is this not anti national?