Homeಎಕಾನಮಿಹೆಚ್ಚಿದ ನಿರುದ್ಯೋಗ: ಗುಜರಾತ್‌ನಲ್ಲಿ ಜವಾನ ಹುದ್ದೆಗೆ ಆಯ್ಕೆಯಾದ ವೈದ್ಯಕೀಯ, ಇಂಜಿನಿಯರಿಂಗ್‌, ಸ್ನಾತಕೋತ್ತರ ಪದವೀಧರರು.!

ಹೆಚ್ಚಿದ ನಿರುದ್ಯೋಗ: ಗುಜರಾತ್‌ನಲ್ಲಿ ಜವಾನ ಹುದ್ದೆಗೆ ಆಯ್ಕೆಯಾದ ವೈದ್ಯಕೀಯ, ಇಂಜಿನಿಯರಿಂಗ್‌, ಸ್ನಾತಕೋತ್ತರ ಪದವೀಧರರು.!

ಕೆಲಸವಿಲ್ಲದೇ ಸುಮ್ಮನೆ ಮನೆಯಲ್ಲಿ ಕುಳಿತುಕೊಳ್ಳುವುದಕ್ಕಿಂತ ಸಣ್ಣ ಹುದ್ದೆಯ ಸರಕಾರಿ ನೌಕರಿ ಉತ್ತಮ ಎನ್ನುತ್ತಿದ್ದಾರೆ ಲಕ್ಷಾಂತರ ನಿರುದ್ಯೋಗಿಗಳು

- Advertisement -
- Advertisement -

ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್‍ನಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಉನ್ನತ ಶಿಕ್ಷಣದ ಪದವೀಧರರನ್ನು 4ನೇ ದರ್ಜೆಯ ಹುದ್ದೆಗಳಿಗೆ ನೇಮಿಸುವ ಉತ್ತರಪ್ರದೇಶ ಸರ್ಕಾರವನ್ನು ಸಹ ಗುಜರಾತ್ ರಾಜ್ಯ ಹಿಂದಿಕ್ಕಿದೆ.

ಗುಜರಾತ್ ಹೈಕೋರ್ಟ್ ಸೇರಿದಂತೆ ಅಧೀನ ನ್ಯಾಯಾಲಯದಲ್ಲಿಖಾಲಿ ಇದ್ದ 1,149 ಪಿಯುನ್ (ಜವಾನ) ಬೆಲೀಫ್ ಹಾಗೂ ಬಿಯರರ್ಸ್ ಹುದ್ದೆಗಳಿಗಾಗಿ ಇತ್ತೀಚೆಗೆ ನಡೆದ ಪ್ರವೇಶ ಪರೀಕ್ಷೆಯಲ್ಲಿ1,59,278 ಅಭ್ಯರ್ಥಿಗಳು ಹಾಜರಾಗಿದ್ದರು. ಉತ್ತೀರ್ಣರಾಗಿ ನೇಮಕಗೊಂಡವರ ಪೈಕಿ 7 ಜನ ವೈದ್ಯಕೀಯ ಪದವೀಧರರು, 450 ಎಂಜಿನಿಯರರು, 543 ಸ್ನಾತಕೋತ್ತರ ಪದವೀಧರರಿದ್ದಾರೆ.

ಪರೀಕ್ಷೆ ಬರೆದ 19 ವೈದ್ಯರ ಪೈಕಿ 7 ಜನ ವೈದ್ಯರು ಪಿಯುನ್ ಹುದ್ದೆಗಳನ್ನು ಒಪ್ಪಿ, ವೃತ್ತಿಗೆ ಸೇರಿಕೊಂಡಿದ್ದಾರೆ. ಬಹುತೇಕರು ದಂತ ವೈದ್ಯರು ಹಾಗೂ ಹೋಮಿಯೋಪಥಿಕ್ ವೈದ್ಯರು. ಇವರಿಗೆ ಮಾಸಿಕವಾಗಿ 30 ಸಾವಿರ ರೂ.ಗಳ ವೇತನವಿದೆ.

5446 ಸ್ನಾತಕೋತ್ತರ ಪದವೀಧರರ ಪೈಕಿ ಬಹುತೇಕರು ಕಾನೂನು, ವಾಣಿಜ್ಯ, ವಿಜ್ಞಾನ ಪದವೀಧರರು. ಇವರೆಲ್ಲರೂ ಸಣ್ಣ ಮೊತ್ತದ ವೇತನಕ್ಕಾಗಿ ಪರೀಕ್ಷೆ ಬರೆದಿದ್ದರು.

ಯುಪಿಎಸ್‍ಸಿ ಪರೀಕ್ಷೆಗಳಿಗೆ ಕೋಚಿಂಗ್ ಹಾಗೂ ತರಬೇತಿ ನೀಡುವ ಬಹುತೇಕ ಸಂಸ್ಥೆಗಳ ಮಾಲೀಕರು ಸಹ ಪರೀಕ್ಷಾರ್ಥಿಗಳಾಗಿದ್ದರು. ಪಿಯುನ್, ಬೇಲೀಫ್ ಹುದ್ದೆಗಳಿಗಾಗಿ ನಡೆಸುವ ಪರೀಕ್ಷೆಗಳಲ್ಲಿ ಯಾವ ರೀತಿಯ ಪ್ರಶ್ನೆಪತ್ರಿಕೆ ಇರುತ್ತದೆ ಎಂಬುದನ್ನು ತಿಳಿಯುವುದು ಇವರ ಉದ್ದೇಶವಾಗಿತ್ತು. ಏಕೆಂದರೆ, ಈ ರೀತಿಯ ಪರೀಕ್ಷಾರ್ಥಿಗಳ ಪೈಕಿ ಬಹುತೇಕರು ಆಯ್ಕೆಗೊಂಡಿದ್ದರೂ ಕೆಲಸಕ್ಕೆ ಸೇರಿಕೊಂಡಿಲ್ಲ.

ಸಣ್ಣ ಹುದ್ದೆಗಳಿಗಾಗಿ ಏಕೆ ಪರೀಕ್ಷೆ ಬರೆದಿದ್ದೀರಿ ಎಂಬ ಪ್ರಶ್ನೆಗೆ ಉನ್ನತ ಶಿಕ್ಷಣ ಪಡೆದ ಪರಿಕ್ಷಾರ್ಥಿಗಳ ಉತ್ತರ ಹೀಗಿದೆ; “ಕೆಲಸವಿಲ್ಲದೇ ಸುಮ್ಮನೆ ಮನೆಯಲ್ಲಿ ಕುಳಿತುಕೊಳ್ಳುವುದಕ್ಕಿಂತ ಸಣ್ಣ ಹುದ್ದೆಯ ಸರಕಾರಿ ನೌಕರಿ ಉತ್ತಮ. ಅವರನ್ನು ವರ್ಗಾವಣೆ ಮಾಡುವಂತಿಲ್ಲ. ಊರಲ್ಲೇ ಶಾಶ್ವತವಾಗಿರಬಹುದು” ಎನ್ನುತ್ತಾರೆ.

ಕಳೆದ ವರ್ಷ, ಕಂದಾಯ ಇಲಾಖೆಯಲ್ಲಿ 2753 ಗ್ರಾಮಾಧಿಕಾರಿ ಹಾಗೂ ಗುಮಾಸ್ತ ಹುದ್ದೆಗಳ ಭರ್ತಿಗೆ ನಡೆದ ಪರೀಕ್ಷೆಯಲ್ಲಿ ಸುಮಾರು 1 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು.

2011 ರಿಂದ 2014ರವರೆಗೆ ನರೇಂದ್ರ ಮೋದಿ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಈ ಅವಧಿಯಲ್ಲೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಭಾರತದ ಪ್ರಧಾನಿಯಾಗಿಯೂ ಮೋದಿ ಆಯ್ಕೆಗೊಂಡಿದ್ದರು. ಅಭಿವೃದ್ಧಿ ಎಂದರೆ ಗುಜರಾತ್ ಎಂದು ಬೀಗುವ ಬಹುತೇಕ ಬಿಜೆಪಿ ನಾಯಕರಿಗೆ ಇಂತಹ ಅಂಶಗಳ ಮಾಹಿತಿಯೂ ತಿಳಿದಿರಬೇಕು, ಅಲ್ಲವೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಗುಜರಾತ್ ಮಾದರಿಯ ಅಭಿವೃದ್ಧಿ ಎಂದು ಬೊಗಳೆ ಬಿಡುತ್ತಿದ್ದವರು, ಇದರಿಂದ ಪಾಠ ಕಲಿಯಬೇಕು.

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...