‘ಗೋ ಕೊರೊನಾ ಗೋ’ ಘೋಷಣೆಯ ಮೂಲಕ ದೇಶದಾದ್ಯಂತ ಸುದ್ದಿಯಲ್ಲಿದ್ದ ಕೇಂದ್ರ ಸಚಿವ ರಾಮದಾಸ್ ಅಠಾವಳೆ ಈಗ ‘ನೋ ಕೊರೊನಾ ನೋ’ ಎಂದು ಹೇಳಿದ್ದಾರೆ. ಈ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
“ನಾನು ‘ಗೋ ಕೊರೊನಾ ಗೋ’ ಎಂದು ಆಗ ಹೇಳಿದ್ದೆ. ಈಗ ಆ ವೈರಸ್ ಹೋಗುತ್ತಿದೆ. ಕೊರೊನಾ ನನ್ನ ಬಳಿ ಬರುವುದಿಲ್ಲ ಎಂದು ಭಾವಿಸಿದ್ದೆ. ಆದರೆ ಅದು ನನ್ನ ಹತ್ತಿರವೂ ಬಂದಿತ್ತು. ಹಾಗಾಗಿ ನಾನು ಆಸ್ಪತ್ರೆ ಸೇರಬೇಕಾಯಿತು. ಅದು ಎಲ್ಲಿಗೆ ಬೇಕಾದರೂ ಹೋಗಬಹುದು” ಎಂದು ಕೇಂದ್ರ ಸಚಿವರ ಹೇಳಿಕೆಯನ್ನು ಎನ್‌ಡಿಟಿವಿ ವರದಿ ಮಾಡಿದೆ.
“ಈ ಹಿಂದೆ ನಾನು ‘ಗೋ ಕೊರೊನಾ ಗೋ’ ಎಂದು ಹೇಳಿದ್ದೆ. ಈಗ ಹೊಸ ರೂಪ ಪಡೆದುಕೊಂಡು ಬರುತ್ತಿರುವ ಕೊರೊನಾ ವೈರಸ್‌ಗೆ ನಾನು ‘ನೋ ಕೊರೊನಾ ನೋ’ ಎನ್ನುತ್ತೇನೆ. ಏಕೆಂದರೆ ಹಳೆಯ ವೈರಸ್ ಆಗಲಿ ಅಥವಾ ಹೊಸ ವೈರಸ್ ಆಗಲಿ ನಮ್ಮನ್ನು ಬಾದಿಸಬಾರದು” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ಅವರನ್ನು ಛೇಡಿಸಿದ ಸುರೇಶ್ ಕುಮಾರ್: ತರಾಟೆಗೆ ತೆಗೆದುಕೊಂಡ ಟ್ವಿಟ್ಟಿಗರು!
ರಾಮದಾಸ್ ಅಠಾವಳೆ ಅವರ ‘ಗೋ ಕೊರೊನಾ ಗೋ’ ಘೋಷಣೆಗೆ ಸಂಬಂಧಪಟ್ಟ ವಿಡಿಯೊವೊಂದು ವೈರಲ್ ಆಗಿತ್ತು. ಆ ನಂತರ ಈ ಘೋಷಣೆಯನ್ನು ರೀಮಿಕ್ಸ್ ಮಾಡಿ, ಪಾಶ್ಚಾತ್ಯ ಸಂಗಿತದ ಸ್ಪರ್ಶ ನೀಡಲಾಗಿತ್ತು.
ಬ್ರಿಟನ್‌ನಲ್ಲಿ ಹೊಸ ಸ್ವರೂಪದ ಕೊರೊನಾ ವೈರಸ್ ಪತ್ತೆಯಾಗಿದೆ. ಅದು ಅತ್ಯಂತ ವೇಗವಾಗಿ ಹರಡುತ್ತಿದ್ದು, ಪರಿಸ್ಥಿತಿ ಕೈಮೀರಿದೆ ಎಂದು ಬ್ರಿಟನ್ ಸರ್ಕಾರ ಹೇಳಿದೆ. ಇದರ ಬೆನ್ನಲ್ಲೇ ಹೊಸ ಸ್ವರೂಪದ ವೈರಸ್ ಹರಡುವುದನ್ನು ತಡೆಗಟ್ಟಲು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯು ಸೂಚನೆ ನೀಡಿದೆ.
ಇದನ್ನೂ ಓದಿ: ತೀವ್ರಗೊಳ್ಳುತ್ತಿರುವ ರೈತರ ಆಕ್ರೋಶ: ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು


