‘ಮುಕ್ತ’ ವಿಚಾರದ ನೆಪದಲ್ಲಿ ವಿಶ್ವವಿದ್ಯಾನಿಲಯಗಳು ‘ಮತೀಯ’ವಾಗಬಾರದು: ಬರಗೂರು ರಾಮಚಂದ್ರಪ್ಪ

ಯಾವುದೇ ವಿಶ್ವವಿದ್ಯಾನಿಲಯಗಳು ಮುಕ್ತ ವಿಚಾರದ ನೆಪದಲ್ಲಿ ಮತೀಯವಾಗಬಾರದು ಎಂದು ಖ್ಯಾತ ಸಾಹಿತಿ, ಸಂಸ್ಕೃತಿ ಚಿಂತಕ ನಾಡೋಜ ಬರಗೂರು ರಾಮಚಂದ್ರಪ್ಪ ಅವರು ಪ್ರತಿಪಾದಿಸಿದರು. ನಿನ್ನೆಯಷ್ಟೇ ಭಗವದ್ಗೀತೆ ಕುರಿತ ವಿಚಾರ ಸಂಕಿರಣಕ್ಕಾಗಿ ವಿವಾದ ಉಂಟಾಗಿದ್ದ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಇಂದು ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಯಾವುದೇ ವಿಶ್ವವಿದ್ಯಾನಿಲಯ ಮುಕ್ತವಾಗಿ ಬೇರೆ ಬೇರೆ ವಿಚಾರಗಳನ್ನು ಪ್ರಸ್ತಾಪ ಮಾಡಿದರೂ ವಿನಃ, ಅಂತಿಮವಾಗಿ ಅದು ಮತೀಯವಾಗದೆ ಇರುವಂತಹ ವಾತಾವರಣವನ್ನು ನಿರ್ಮಾಣ ಮಾಡುವುದು ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿ” ಎಂದು ತಿಳಿದುಕೊಂಡಿದ್ದೇನೆ ಎಂದರು. … Continue reading ‘ಮುಕ್ತ’ ವಿಚಾರದ ನೆಪದಲ್ಲಿ ವಿಶ್ವವಿದ್ಯಾನಿಲಯಗಳು ‘ಮತೀಯ’ವಾಗಬಾರದು: ಬರಗೂರು ರಾಮಚಂದ್ರಪ್ಪ