Homeಮುಖಪುಟಯುಪಿ: ಮನೆ ಹೊರಗೆ ಹೋಳಿ ಆಚರಣೆಗೆ ವಿರೋಧಿಸಿದ್ದಕ್ಕೆ 60 ವರ್ಷದ ಮಹಿಳೆಯ ಕೊಲೆ

ಯುಪಿ: ಮನೆ ಹೊರಗೆ ಹೋಳಿ ಆಚರಣೆಗೆ ವಿರೋಧಿಸಿದ್ದಕ್ಕೆ 60 ವರ್ಷದ ಮಹಿಳೆಯ ಕೊಲೆ

- Advertisement -
- Advertisement -

ತಮ್ಮ ಮನೆಯ ಹೊರಗೆ ಹೋಳಿ ಆಚರಣೆ ಮಾಡದಂತೆ ಹಬ್ಬದ ಸಂಭ್ರಮದಲ್ಲಿರುವವರನ್ನು ವಿರೋಧಿಸಿದ 60 ವರ್ಷದ ಮಹಿಳೆಯೊಬ್ಬರನ್ನು ಥಳಿಸಿ ಕೊಂದಿರುವ ಘಟನೆ ಉತ್ತರ ಪ್ರದೇಶದ ಮೆವಾತಿ ಟೋಲಾ ಪ್ರದೇಶದಲ್ಲಿ ಸೋಮವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ಮೃತ ಮಹಿಳೆಯ ಕುಟುಂಬದ ಐವರು ಸದಸ್ಯರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ವರದಿಯಾಗಿದೆ.

ಹೋಳಿ ಹಬ್ಬವನ್ನು ಸಂಭ್ರಮಿಸುವವರು ಬೆಳಿಗ್ಗೆ 10 ರ ಸುಮಾರಿಗೆ ಮಹಿಳೆಯ ಮನೆಗೆ ಪ್ರವೇಶಿಸಿ ಕೋಲು ಮತ್ತು ಕಲ್ಲಿನಿಂದ ಹೊಡೆದು ಕೊಂದಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ನಗರ) ಪ್ರಶಾಂತ್ ಕುಮಾರ್ ಪ್ರಸಾದ್ ಹೇಳಿಕೆಯನ್ನು TNIE ಪತ್ರಿಕೆ ವರದಿ ಮಾಡಿದೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ ಅಧಿಕಾರಕ್ಕೇರಿದರೆ ಕೃಷಿ ಕಾಯ್ದೆಗಳ ವಿರುದ್ದ ನಿರ್ಣಯ; ಡಿಎಂಕೆ ನಾಯಕ ಸ್ಟಾಲಿನ್

ದುಷ್ಕರ್ಮಿಗಳು ಅವರನ್ನು ಥಳಿಸುವಾಗ ತಡೆಯಲು ಬಂದ ಕುಟುಂಬದ ಇತರ ಐವರು ಸದಸ್ಯರ ಮೇಲೆ ಕೂಡಾ ಹಲ್ಲೆ ನಡೆಸಲಾಗಿದೆ. ಹಲ್ಲೆಗೊಳಗಾದವವರಲ್ಲಿ ಇಬ್ಬರು ಮಹಿಳೆಯರಾಗಿದ್ದು, ಮೂವರು ಮಕ್ಕಳು ಸೇರಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಎಕ್ಡಿಲ್ ಪೊಲೀಸ್ ಠಾಣೆ ಪ್ರದೇಶದಿಂದ ವರದಿಯಾದ ಮತ್ತೊಂದು ಘಟನೆಯಲ್ಲಿ, ಮದ್ಯದ ಅಮಲಿನಲ್ಲಿದ್ದ ಯುವಕನೊಬ್ಬ ಅತಿ ವೇಗದಲ್ಲಿ ಟ್ರ್ಯಾಕ್ಟರ್ ಓಡಿಸಿದ ಪರಿಣಾಮವಾಗಿ ಆರು ಜನರಿಗೆ ಗಾಯಗಳಾಗಿವೆ. ಟ್ರಾಕ್ಟರ್‌ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದರಿಂದ ಟ್ರಾಕ್ಟರ್‌ ಅಫಘಾತಕ್ಕೊಳಗಾಗಿದೆ.

ಯುವಕನನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


 

ಇದನ್ನೂ ಓದಿ: ಅಸ್ಸಾಂ: ಜಾಹೀರಾತನ್ನು ಸುದ್ದಿಯ ರೂಪದಲ್ಲಿ ನೀಡಿದ ಬಿಜೆಪಿ; ಕಾಂಗ್ರೆಸ್‌ನಿಂದ ದೂರು ದಾಖಲು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...