ದಲಿತ ಯುವಕನನ್ನು ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಲಖಿಂಪುರದ ಬಸೌಲಿ ಗ್ರಾಮದಲ್ಲಿ ನಡೆದಿದೆ ಎಂದು ಎಪಿಎನ್‌ಲೈವ್ ಸುದ್ದಿ ಮಾಧ್ಯಮ ವರದಿ ಮಾಡಿದೆ. ಗುಂಡೇಟು ತಿಂದ ಯುವಕನನ್ನು ಆಸ್ಪತ್ರೆಗೆ ಸಾಗಿಸುವಾಗ ರಸ್ತೆ ಮಧ್ಯೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಹತ್ಯೆಗೀಡಾದ ಯುವಕನನ್ನು ಅವನೀಶ್ ಎಂದು ಗುರುತಿಸಲಾಗಿದೆ ಎಂದು ಎಪಿಎನ್‌ಲೈವ್ ಸುದ್ದಿ ಮಾಧ್ಯಮ ವರದಿ ಮಾಡಿದೆ. ಗುಂಡೇಟಿಗೆ ಒಳಗಾಗಿ ರಕ್ತದ ಮಡುವಿನಲ್ಲಿ ಬಿದ್ದಿರುವ ಯುವಕನ ಶರೀರದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ರಕ್ತದ ಮಡುವಿನಲ್ಲಿ ಬಿದ್ದಿರುವ ಯುವಕನ ಶರೀರದ ಪಕ್ಕ ಸಂತ್ರಸ್ತ ಕುಟುಂಬ ಗೋಳಾಡುತ್ತಿರುವುದು ವೈರಲ್ ವಿಡಿಯೊದಲ್ಲಿ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅಧಿಕೃತ ಹೇಳಿಕೆ ಇನ್ನೂ ನೀಡಿಲ್ಲ.
A #Dalit man #Avneesh was shot dead by the caste #Hindu goons in #Basauli village of #Lakhimpur, #UttarPradesh.#Castiesm #DalitlivesMatter #UPModel pic.twitter.com/pfobbR2exB
— Hate Detector 🔍 (@HateDetectors) October 1, 2022
ಉತ್ತರ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಹಲವಾರು ಜನರು ದುಃಖ ಮತ್ತು ಆಕ್ರೋಶವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತಪಡಿಸಿದ್ದು, ರಾಜ್ಯವು ರಾಮರಾಜ್ಯವೆ ಅಥವಾ ಬುಲ್ಡೋಜರ್ ರಾಜ್ಯವೇ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ತಮ್ಮ ಜಮೀನಿನಲ್ಲಿ ಆಟವಾಡಿದ ದಲಿತ ಬಾಲಕನನ್ನು ಕರೆಂಟ್ ಕಂಬಕ್ಕೆ ಕಟ್ಟಿ ಥಳಿಸಿದ ಸವರ್ಣೀಯರು
ಉತ್ತರ ಪ್ರದೇಶದಲ್ಲಿ ಜಾತಿ ಆಧಾರಿತ ಹಿಂಸಾಚಾರ ಪ್ರಕರಣಗಳು ಹೆಚ್ಚುತ್ತಿದೆ. ಇತ್ತೀಚೆಗೆ ರಾಜ್ಯದ ಮೈನ್‌ಪುರಿ ಜಿಲ್ಲೆಯ ಬಜೇರಾ ಗ್ರಾಮದಲ್ಲಿ ಸಾಲವನ್ನು ಮರುಪಾವತಿಸಿಲ್ಲ ಎಂಬ ಕಾರಣಕ್ಕೆ ದಲಿತ ವ್ಯಕ್ತಿಯೊಬ್ಬರ ಹತ್ಯೆ ನಡೆದಿತ್ತು.



ರಾಜ್ಯ ಮತ್ತು ಕೇಂದ್ರ, ಎರಡೂ ಕಡೆ ಮನುವಾದಿಗಳು ಅಧಿಕಾರದಲ್ಲಿ ಇರುವುದರಿಂದ, ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ದಲಿತಪರ ಸಂಘಟನೆಗಳು ಇನ್ನಾದರೂ ಎಚ್ಚೆತ್ತುಕೊಂಡು, ತಮ್ಮ ಸಂಘಟನೆಗಳ ಶಾಕೆಗಳನ್ನು ಪ್ರತಿಯೊಂದು ಗ್ರಾಮದಲ್ಲೂ ಬಲವಾಗಿ ಬೇರೂರಿಸಬೇಕಿದೆ.
ಎಲ್ಲಾ ದಲಿತರು ಓಗ್ಗಟ್ಟ ಆಗಬೆಕಾಗಿದೆ
Yes
Rich Dalits have become selfish. Poor Dalits have become foolish.
Rich Dalits have become selfish. Poor Dalits have become foolish. Still hope is there to flourish