ಉತ್ತರಪ್ರದೇಶ: ಶ್ರಾವಸ್ತಿಯಲ್ಲಿ 65 ವರ್ಷ ಹಳೆಯ ಮದರಸಾ ನೆಲಸಮ: ವ್ಯಾಪಕ ಆಕ್ರೋಶ-ವೀಡಿಯೋ

ಉತ್ತರಪ್ರದೇಶದ ಶ್ರಾವಸ್ತಿ ಜಿಲ್ಲೆಯಲ್ಲಿ ಫತೇಹ್‌ಪುರ್ ಬಂಗೈ ಗ್ರಾಮದಲ್ಲಿರುವ 65 ವರ್ಷಗಳ ಹಳೆಯ ಇಸ್ಲಾಮಿಯಾ ಅರೇಬಿಯಾ ಅನ್ವರುಲ್ ಉಲೂಮ್ ಮದರಸಾವನ್ನು ಸ್ಥಳೀಯ ಆಡಳಿತವು ನೆಲಸಮಗೊಳಿಸಿದೆ. ಈ ಕುರಿತು ಸ್ಥಳೀಯ ಮುಸ್ಲಿಮರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುರುವಾರ (ಜೂನ್ 19) ಸ್ಥಳೀಯ ತಹಸೀಲ್ದಾರ್ ಜಮುನ್ಹಾ ಅವರ ಆದೇಶದ ಮೇರೆಗೆ ಈ ಮದರಸಾದ ನೆಲಸಮಗೊಳಿಸುವ ಕಾರ್ಯಾಚರಣೆಯನ್ನು ನಡೆಸಲಾಗಿದೆ. ‘ಮದರಸಾವನ್ನು ಗ್ರಾಮಸಭಾ ಭೂಮಿಯಲ್ಲಿ  ಅನುಮತಿಯಿಲ್ಲದೆ ಕಟ್ಟಲಾಗಿತ್ತು. ಈ ಭೂಮಿ ಸರ್ಕಾರಕ್ಕೆ ಸೇರಿದ್ದಾಗಿದೆ. ಇದಕ್ಕೂ ಮೊದಲು ಮದರಸಾ ಸಂಸ್ಥೆಗೆ ಅನೇಕ ನೋಟಿಸ್‌ಗಳನ್ನು ನೀಡಲಾಗಿದೆ’ ಎಂದು ತಹಸೀಲ್ದಾರ್ ಹೇಳಿದರು. … Continue reading ಉತ್ತರಪ್ರದೇಶ: ಶ್ರಾವಸ್ತಿಯಲ್ಲಿ 65 ವರ್ಷ ಹಳೆಯ ಮದರಸಾ ನೆಲಸಮ: ವ್ಯಾಪಕ ಆಕ್ರೋಶ-ವೀಡಿಯೋ