ಉತ್ತರ ಪ್ರದೇಶ| ತೀವ್ರ ಗಾಯಗಳಿಂದ ದಲಿತ ಅತ್ಯಾಚಾರ ಸಂತ್ರಸ್ತೆ ಸಾವು

ಏಪ್ರಿಲ್ 17 ರಂದು ಉತ್ತರ ಪ್ರದೇಶದ ಬಂಡಾದ ಹಳ್ಳಿಯಲ್ಲಿ ನೆರೆಹೊರೆಯವರಿಂದ ಅತ್ಯಾಚಾರಕ್ಕೊಳಗಾಗಿದ್ದ 55 ವರ್ಷದ ದಲಿತ ಮಹಿಳೆ ಶನಿವಾರ ತಡರಾತ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಲೈಂಗಿಕ ದೌರ್ಜನ್ಯದಲ್ಲಿ ಸಂತ್ರಸ್ತೆ ಗಾಯಗೊಂಡಿದ್ದು, ಅಂದಿನಿಂದ ಸರ್ಕಾರಿ ಆಸ್ಪತ್ರೆಯಲ್ಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಕೃಷಿ ಕಾರ್ಮಿಕನಾಗಿರುವ ಆರೋಪಿ (28) ಘಟನೆಯ ಒಂದು ದಿನದ ನಂತರ ಬಂಧಿಸಲ್ಪಟ್ಟಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾನೆ. “ಸಂತ್ರಸ್ತೆಯ ಮುಖದ ಮೇಲೆ ಗಾಯಗಳಾಗಿದ್ದು, ಮೃತದೇಹದ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದೆ. ಅಂತ್ಯಕ್ರಿಯೆಗಾಗಿ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುವುದು. … Continue reading ಉತ್ತರ ಪ್ರದೇಶ| ತೀವ್ರ ಗಾಯಗಳಿಂದ ದಲಿತ ಅತ್ಯಾಚಾರ ಸಂತ್ರಸ್ತೆ ಸಾವು