Homeಮುಖಪುಟಉತ್ತರಪ್ರದೇಶ: ಅಪಹರಣಕ್ಕೊಳಗಾದ 11 ವರ್ಷದ ಬಾಲಕಿ ಶವವಾಗಿ ಪತ್ತೆ; ಪರಿಚಯಸ್ಥರಿಂದಲೇ ಕೊಲೆ

ಉತ್ತರಪ್ರದೇಶ: ಅಪಹರಣಕ್ಕೊಳಗಾದ 11 ವರ್ಷದ ಬಾಲಕಿ ಶವವಾಗಿ ಪತ್ತೆ; ಪರಿಚಯಸ್ಥರಿಂದಲೇ ಕೊಲೆ

- Advertisement -
- Advertisement -

ಘಾಜಿಯಾಬಾದ್: ಇಲ್ಲಿನ ನಂದಗ್ರಾಮ್‌ನಲ್ಲಿರುವ ತನ್ನ ಮನೆಯಲ್ಲಿದ್ದ ಹಾಗೂ ಭಾನುವಾರ ಬೆಳಗ್ಗೆ ಅಪಹರಣಕ್ಕೊಳಗಾದ 11 ವರ್ಷದ ಬಾಲಕಿಯು 80 ಕಿಮೀ ದೂರದ ಬುಲಂದ್‌ಶಹರ್ ಗ್ರಾಮದ ಕೃಷಿ ಭೂಮಿಯಲ್ಲಿ ಪತ್ತೆಯಾಗಿದ್ದಾಳೆ. ಕೊಲೆಯಾಗಿರುವ ಸ್ಥಿತಿಯಲ್ಲಿ ಗೋಣಿಚೀಲದೊಳಗೆ ಶವ ಸಿಕ್ಕಿದೆ.

ಅಪಹರಣ ಮತ್ತು ಕೊಲೆಗೆ ಸಂಬಂಧಿಸಿದಂತೆ ಬಾಲಕಿಯ ನೆರೆಹೊರೆಯವರು ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಬಾಲಕಿಯು ತನ್ನ ಅಜ್ಜಿಯೊಂದಿಗೆ ನಂದಗ್ರಾಮ್‌ನ ನೈ ಬಸ್ತಿ ಗ್ರಾಮದಲ್ಲಿ ವಾಸಿಸುತ್ತಿದ್ದಳು. ಆಕೆಯ ಪೋಷಕರು ಹರಿಯಾಣದ ಸೋನಿಪತ್‌ನಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಭಾನುವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಬಾಲಕಿಯ ಅಜ್ಜಿಯರು ರಾಸುಗಳಿಗಾಗಿ ಹುಲ್ಲು ಕೊಯ್ಯಲು ಹೊಲಕ್ಕೆ ಹೋಗಿದ್ದ ವೇಳೆ ಆರೋಪಿಗಳು ಮನೆಗೆ ನುಗ್ಗಿ ಬಾಲಕಿಯನ್ನು ಅಪರಿಸಿದ್ದಾರೆ. ಗ್ರಾಮದ ಜಾತ್ರೆಗೆ ಹೋಗೋಣವೆಂದು ಮನವೊಲಿಸಿ ಕರೆದೊಯ್ದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆತ ಪದೇ ಪದೇ ಮನೆಗೆ ಬರುತ್ತಿದ್ದರಿಂದ ಬಾಲಕಿ ಕೊಂಚ ಹೆದರಿದ್ದಳು. ಕೆಲವು ಗಂಟೆಗಳ ನಂತರ, ಬಾಲಕಿಯ ಮಲತಂದೆ ಸೋನು ಸಿಂಗ್ ಅವರಿಗೆ ವಿವಿಧ ನಂಬರ್‌ಗಳಿಂದ ಮಿಸ್ಡ್ ಕಾಲ್‌ಗಳು ಬಂದಿದ್ದವು.

“ನನ್ನ ಫೋನ್ ಸೈಲೆಂಟ್ ಮೋಡ್‌ನಲ್ಲಿದ್ದ ಕಾರಣ ಕೆಲವು ಮಿಸ್‌ಕಾಲ್‌ಗಳಾಗಿದ್ದವು. ಕರೆಯೊಂದನ್ನು ಸ್ವೀಕರಿಸಿದಾಗ ನಿನ್ನ ಮಗಳನ್ನು ಅಪಹರಿಸಲಾಗಿದೆ ಎಂದು ತಿಳಿಸಲಾಯಿತು. ನಂತರದ ಕೆಲವು ಕರೆಗಳನ್ನು ಮಾಡಿ 30 ಲಕ್ಷ ರೂಪಾಯಿ ಕೊಟ್ಟರೆ ಮಾತ್ರ ಮಗಳನ್ನು ಬಿಡುವುದಾಗಿ ಹೇಳಿದರು” ಎಂದು ಮಲತಂದೆ ಸೋನು ಹೇಳಿದ್ದಾರೆ.

ಬಾಲಕಿಯ ತಾಯಿಯ ಮೊದಲ ಪತಿ ಮೋನು 2015ರಲ್ಲಿ ಅಪಘಾತದಲ್ಲಿ ಸಾವನ್ನಪ್ಪಿದ್ದರು. ನಂತರ ಆ ತಾಯಿಯು ತನ್ನ ಸೋದರ ಮಾವ ಸೋನುವನ್ನು ಮದುವೆಯಾಗಿದ್ದರು.

ಒಂದು ವರ್ಷದ ಮಗುವಾಗಿದ್ದಾಗಿನಿಂದಲೂ ಬಾಲಕಿಯು ತನ್ನ ಅಜ್ಜಿಯೊಂದಿಗೆ ವಾಸಿಸುತ್ತಿದ್ದಳು. ಬಾಲಕಿಯ ತಾಯಿಯ ಪತಿ ಮೋನು ಅಪಘಾತಕ್ಕೀಡಾದ ಕಾರಣ ವಿಮಾ ಹಣ 26 ಲಕ್ಷ ರೂಪಾಯಿಯನ್ನು ಆ ತಾಯಿಯು ಶೀಘ್ರದಲ್ಲೇ ಪಡೆಯಲಿದ್ದಾರೆ ಎಂದು ನೆರೆಮನೆಯ ಬಬ್ಲು ಕುಮಾರ್ ಇತ್ತೀಚೆಗೆ ತಿಳಿದುಕೊಂಡಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

ಬಾಲಕಿಯನ್ನು ಅಪಹರಿಸಿ ಹಣ ದೋಚಲು ಸಂಚು ರೂಪಿಸಿದ್ದನು. ಈ ಕೃತ್ಯಕ್ಕೆ ಸಹಕರಿಸಲು ದಾದ್ರಿಯ ಅಮಿತ್, ಬುಲಂದ್‌ಶಹರ್‌ನ ಗಂಭೀರ್‌ ಎಂಬವವರ ಸಹಾಯ ಪಡೆದನು. ಪೊಲೀಸರ ಪ್ರಕಾರ ಈ ಮೂವರೂ ಕೆಲಸವಿಲ್ಲದ ನಿರುದ್ಯೋಗಿಗಳು.

ಭಾನುವಾರ ಬೆಳಿಗ್ಗೆ ಬಾಲಕಿಯೊದಿಗೆ ಈತ (ಬಬ್ಲು) ನಡೆದುಕೊಂಡು ಹೋಗುವುದನ್ನು ನೋಡಿದ್ದನ್ನು ಕೆಲವು ಗ್ರಾಮಸ್ಥರು ಪೊಲೀಸರಿಗೆ ತಿಳಿಸಿದ್ದಾರೆ. ಆ ನಂತರ ಬಬ್ಲುವನ್ನು ಬಂಧಿಸಲಾಗಿದೆ ಎಂದು ಸರ್ಕಲ್ ಅಧಿಕಾರಿ ಅಲೋಕ್ ದುಬೆ ತಿಳಿಸಿದ್ದಾರೆ.

“ಬೆಳಿಗ್ಗೆ 10 ಗಂಟೆ ಸುಮಾರಿಗೆ, ಅಜ್ಜಿಯರು ಇಲ್ಲದಿದ್ದಾಗ ಮತ್ತು ಹುಡುಗಿ ಒಬ್ಬಳೇ ಇದ್ದಾಗ ಬಬ್ಲು ಮನೆಗೆ ನುಸುಳಿದನು. ಹಳ್ಳಿಯ ಜಾತ್ರೆಗೆ ಕರೆದುಕೊಂಡು ಹೋಗುವುದಾಗಿ ನಂಬಿಸಿದನು. ಬೈಕಿನಲ್ಲಿ ದೂರದಲ್ಲಿ ಕಾಯುತ್ತಿದ್ದ ಅಮಿತ್‌ಗೆ ಬಾಲಕಿಯನ್ನು ಒಪ್ಪಿಸಿದನು. ಹುಡುಗಿ ಅಮಿತ್‌ನನ್ನೂ ನಂಬಿದಳು. ಯಾಕೆಂದರೆ ಆತನೂ ಕೂಡ ಬಬ್ಲುನೊಂದಿಗೆ ಬಾಲಕಿಯ ಮನೆಗೆ ಭೇಟಿ ನೀಡುತ್ತಿದ್ದನು” ಎಂದು ದುಬೆ ಹೇಳಿದ್ದಾರೆ.

ಒಂದೂವರೆ ಗಂಟೆಯ ನಂತರ ಅಮಿತ್ ದಾದ್ರಿ ಬೈಪಾಸ್ ತಲುಪಿದಾಗ, ಗಂಭೀರ್ ಜೊತೆಗೆ ಸ್ಕೂಟರ್‌ನಲ್ಲಿ ಹೋಗುವಂತೆ ಹುಡುಗಿಗೆ ತಿಳಿಸಿದನು. “ಬಾಲಕಿಗೆ ಬಬ್ಲು ಮತ್ತು ಅಮಿತ್ ತಿಳಿದಿರುವ ಕಾರಣ, ಹೇಗಾದರೂ ಬಾಲಕಿಯನ್ನು ಕೊಲೆ ಹಾಗೂ ಸುಲಿಗೆ ಮಾಡಿ ಪರಾರಿಯಾಗಲು ನಿರ್ಧರಿಸಿದ್ದರು” ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

“ಗಂಭೀರ್ ಬಾಲಕಿಯನ್ನು ಬುಲಂದ್‌ಶಹರ್‌ನ ಸರೈ ಚಬಿಲಾ ಗ್ರಾಮದ ಕಾಡಿಗೆ ಕರೆದೊಯ್ದು ಕತ್ತು ಹಿಸುಕಿ ಕೊಂದಿದ್ದಾನೆ. ಬಳಿಕ ಶವವನ್ನು ಗೋಣಿಚೀಲದಲ್ಲಿ ಹಾಕಿ ಜಮೀನಿನಲ್ಲಿ ಬೆಳೆದಿದ್ದ ಬೆಳೆಗಳ ನಡುವೆ ಎಸೆದಿದ್ದಾರೆ” ಎಂದು ಪೊಲೀಸರು ಕಂಡುಕೊಂಡಿದ್ದಾರೆ.

ಇದನ್ನೂ ಓದಿರಿ: ನವೆಂಬರ್‌ 26ರ ಸಂವಿಧಾನ ದಿನವನ್ನು ‘ಜಾತಿ ಪದ್ದತಿ ಸಮರ್ಥನೆ & ವೈಭವೀಕರಣ’ ದಿನವಾಗಿ ಆಚರಿಸಲು ಬಿಜೆಪಿ ಸರ್ಕಾರದಿಂದ ತಯಾರಿ!

ಬಬ್ಲು, ಮನೆಗೆ ಹಿಂದಿರುಗಿದನು ಮತ್ತು ಇತರ ಗ್ರಾಮಸ್ಥರೊಂದಿಗೆ ಹುಡುಗಿಯ ಹುಡುಕಾಟದಲ್ಲಿ ತೊಡಗಿದನು. ಸೋನುಗೆ ನಿರಂತರ ಕರೆಗಳನ್ನು ಮಾಡುವಾಗ ಬಬ್ಲು ಮತ್ತು ಅಮಿತ್ ಬೇರೆ ಯಾವುದೇ ಸಿಮ್ ಕಾರ್ಡ್‌ಗಳನ್ನು ಖರೀದಿಸಿರಲಿಲ್ಲ. ಬೀದಿಯಲ್ಲಿ ನಡೆದು ಹೋಗುವ ಜನರ ಪೋನ್‌ಗಳನ್ನು ಪಡೆದುಕೊಂಡು ಕರೆಗಳನ್ನು ಮಾಡಿದ್ದರು.

ಮಂಗಳವಾರ ಸಂಜೆ, ಶವ ಪತ್ತೆಯಾದ ಕೆಲವು ಗಂಟೆಗಳ ನಂತರ, ಎಫ್‌ಐಆರ್ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಪೊಲೀಸರು ತನಿಖೆಯನ್ನು ವಿಳಂಬ ಮಾಡುತ್ತಿದ್ದಾರೆ ಎಂದು ಬಾಲಕಿಯ ಕುಟುಂಬಸ್ಥರು ಆರೋಪಿಸಿದ್ದಾರೆ.

“ಭಾನುವಾರ ಸಂಜೆಯೇ ಪೊಲೀಸರು ಬಬ್ಲುವನ್ನು ವಶಕ್ಕೆ ತೆಗೆದುಕೊಂಡರು, ಆದರೆ ವಿಚಾರಣೆ ಮಾಡಲಿಲ್ಲ. ಅವರು ಹಾಗೆ ಮಾಡಿದ್ದರೆ, ಪೊಲೀಸರಿಗೆ ನನ್ನ ಮೊಮ್ಮಗಳು ಎಲ್ಲಿದ್ದಾಳೆಂದು ತಿಳಿಯುತ್ತಿತ್ತು. ಮತ್ತು ಆಕೆಯನ್ನು ಉಳಿಸಬಹುದಿತ್ತು” ಬಾಲಕಿಯ ಅಜ್ಜಿ ಪ್ರತಿಕ್ರಿಯಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಂಜಾಬ್‌| ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ವೃದ್ಧ

ಪಂಜಾಬ್‌ನ ಬರ್ನಾಲಾ ಜಿಲ್ಲೆಯಲ್ಲಿ, ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ಕಾಯುತ್ತಿದ್ದಾಗ 66 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಅನಿಲ ಕೊರತೆಯಿಂದ ಉಂಟಾಗುತ್ತಿರುವ...

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿದ ವಿಪಕ್ಷಗಳು

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ವಿರೋಧ ಪಕ್ಷದ ಸಂಸದರು ಸಂಸತ್ತಿನ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿರುವುದಾಗಿ ಶುಕ್ರವಾರ ವರದಿಯಾಗಿದೆ.  ಈ ನೋಟಿಸ್‌ಗೆ 130 ಲೋಕಸಭಾ ಸದಸ್ಯರು...

ಹಿಂದೂಯೇತರರಿಗೆ ದೇಗುಲ ಪ್ರವೇಶಕ್ಕೆ ನಿಷೇಧ ಹೇರಿದ ಬದರೀನಾಥ್-ಕೇದಾರನಾಥ ದೇವಾಲಯಗಳ ಸಮಿತಿ

ಮುಂಬರುವ ತೀರ್ಥಯಾತ್ರೆಯ ಋತುವಿನಿಂದ ಜಾರಿಗೆ ಬರುವಂತೆ ಬದರೀನಾಥ್ ಮತ್ತು ಕೇದಾರನಾಥ ದೇವಾಲಯಗಳು ಸೇರಿದಂತೆ ಅದರ ವ್ಯಾಪ್ತಿಯಲ್ಲಿರುವ 47 ಇತರ ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸುವ ನಿರ್ಣಯವನ್ನು ಸರ್ವಾನುಮತದಿಂದ ದೇವಾಲಯ ಸಮಿತಿಯು ಅಂಗೀಕರಿಸಿದೆ. ಬಿಕೆಟಿಸಿ ಅಧ್ಯಕ್ಷ...

‘ಮಹಿಳೆಯರನ್ನು ಯಾರೂ ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ..’; ಕಡ್ಡಾಯ ಮುಟ್ಟಿನ ರಜೆ ಕುರಿತ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ 

ಮಹಿಳೆಯರಿಗೆ ಕಡ್ಡಾಯ ಮುಟ್ಟಿನ ರಜೆ 'ಅವರ ಉದ್ಯೋಗದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು'. ಏಕೆಂದರೆ, ನಾವು ಅಂತಹ ಕಾನೂನನ್ನು ಜಾರಿಗೆ ತಂದರೆ ಉದ್ಯೋಗದಾತರು ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ' ಎಂದು ಸುಪ್ರೀಂ ಕೋರ್ಟ್‌ ಮುಖ್ಯ...

ಪ್ಯಾಲೆಸ್ತೀನಿಯನ್ ಬಂಧಿತನ ಮೇಲೆ ಲೈಂಗಿಕ ದೌರ್ಜನ್ಯ; ಇಸ್ರೇಲ್ ಸೈನಿಕರ ವಿರುದ್ಧದ ಆರೋಪ ಕೈಬಿಟ್ಟ ಸೇನೆ

ಕ್ಯಾಮೆರಾದಲ್ಲಿ ಭಾಗಶಃ ಸೆರೆಹಿಡಿಯಲಾದ ಹಲ್ಲೆಯಲ್ಲಿ, ಬಂಧಿತ ಪ್ಯಾಲೆಸ್ತೀನಿಯನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಐದು ಸೈನಿಕರ ವಿರುದ್ಧದ ಆರೋಪಗಳನ್ನು ಕೈಬಿಡುತ್ತಿರುವುದಾಗಿ ಇಸ್ರೇಲ್ ಸೇನೆ (ಮಾರ್ಚ್ 12) ತಿಳಿಸಿದೆ. ಈ ಘೋಷಣೆಯನ್ನು ಪ್ರಧಾನಿ...

‘ಇರಾನ್ ಸರ್ವೋಚ್ಚ ನಾಯಕ ಜೀವಂತವಾಗಿರಬಹುದು, ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ’: ಡೊನಾಲ್ಡ್ ಟ್ರಂಪ್

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ(56) "ಬಹುಶಃ ಜೀವಂತವಾಗಿದ್ದಾರೆ ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಶುಕ್ರವಾರ ಪ್ರಸಾರವಾದ ಫಾಕ್ಸ್ ನ್ಯೂಸ್ ರೇಡಿಯೋದ ಬ್ರಿಯಾನ್ ಕಿಲ್ಮೀಡ್ ಅವರ...

ಬಾಗಲಕೋಟೆ| ಜನರ ಮೇಲೆ ಕಲ್ಲು ಎಸೆದ ಆರೋಪ; ಸಾವಳಗಿಯಲ್ಲಿ ದಲಿತ ಯುವಕನನ್ನು ಕೊಂದ ಗುಂಪು

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ದಲಿತ ದೌರ್ಜನ್ಯದ ಆಘಾತಕಾರಿ ಘಟನೆಯೊಂದು ನಡೆದಿದೆ. ಶಾಲಾ ಕಾರ್ಯಕ್ರಮವೊಂದರಲ್ಲಿ ಜನರ ಮಲೆ ಸಣ್ಣ ಕಲ್ಲು ಎಸೆದ ಎಂಬ ಆರೋಪದ ಮೇಲೆ ದಲಿತ ಯುವಕನನ್ನು ಕ್ರೂರವಾಗಿ...

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...