ಹೆರಾಯಿನ್‌ಗೆ ವ್ಯಸನಿಯಾಗಿದ್ದ 17 ವರ್ಷದ ಬಾಲಕಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದ 10ಕ್ಕೂ ಹೆಚ್ಚು ಯುವಕರು ಎಚ್‌ಐವಿ / ಏಡ್ಸ್‌ಗೆ ತುತ್ತಾಗಿರುವ ಘಟನೆ ಉತ್ತರಾಖಂಡ ರಾಜ್ಯದ ನೈನಿತಾಲ್ ಜಿಲ್ಲೆಯ ರಾಮನಗರದಲ್ಲಿ ನಡೆದಿದೆ. ಘಟನೆಯು ಪ್ರದೇಶದಾದ್ಯಂತ ಆಘಾತವನ್ನು ಉಂಟುಮಾಡಿದೆ.
“ಇದು ಗೊಂದಲಕಾರಿ ಘಟನೆಯಾಗಿದ್ದು, ನಾವು ತಕ್ಷಣ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಹುಡುಗಿಯ ಚಟವು ಈ ದುರದೃಷ್ಟಕರ ಪರಿಸ್ಥಿತಿಗೆ ಕಾರಣ. ನಾವು ಅವರಿಗೆ ಸಲಹೆ ಮತ್ತು ಬೆಂಬಲವನ್ನು ಒದಗಿಸಲು ಕೆಲಸ ಮಾಡುತ್ತಿದ್ದೇವೆ” ಎಂದು ಜಿಲ್ಲಾ ಆರೋಗ್ಯಾಧಿಕಾರಿ ಹೇಳಿದ್ದಾರೆ.. ಉತ್ತರಾಖಂಡ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಹೆರಾಯಿನ್ ಚಟಕ್ಕೆ ಒಳಗಾಗಿರುವ 17 ವರ್ಷದ ಬಾಲಕಿ ತನ್ನ ಚಟಕ್ಕೆ ಹಣ ಹೊಂದಿಸಲು ಯುವಕರೊಂದಿಗೆ ಶಾರೀರಿಕ ಸಂಬಂಧದಲ್ಲಿ ತೊಡಗಿದ್ದಳು ಎನ್ನಲಾಗಿದೆ. ಯುವಕರು ಅನಾರೋಗ್ಯಕ್ಕೆ ಒಳಗಾದಾಗ ಆಸ್ಪತ್ರೆಗೆ ದಾಖಲಾಗಿದ್ದು, ಈ ವೇಳೆ ನಡೆಸಿದ ಪರೀಕ್ಷೆಯ ವೇಳೆ ಯುವಕರಿಗೆ ಎಚ್‌ಐವಿ ಇರುವುದು ದೃಢವಾಗಿದೆ ಎಂದು ವರದಿ ಉಲ್ಲೇಖಿಸಿದೆ.
ನೈನಿತಾಲ್‌ನ ಮುಖ್ಯ ವೈದ್ಯಾಧಿಕಾರಿ ಡಾ.ಹರೀಶ್ ಚಂದ್ರ ಪಂತ್ ಮಾತನಾಡಿ, ಪ್ರದೇಶದಲ್ಲಿ ಎಚ್‌ಐವಿ ಪ್ರಕರಣಗಳಲ್ಲಿ ಹಠಾತ್ ಹೆಚ್ಚಳದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. “ಸಾಮಾನ್ಯವಾಗಿ, ವಾರ್ಷಿಕವಾಗಿ ಸುಮಾರು 20 HIV ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತವೆ. ಆದಾಗ್ಯೂ, ಈ ವರ್ಷ ಕೇವಲ ಐದು ತಿಂಗಳೊಳಗೆ, 19 ಹೊಸ ಪ್ರಕರಣಗಳು ವರದಿಯಾಗಿವೆ.” ಎಂದು ಅವರು ಹೇಳಿದ್ದಾರೆ.
ಅಧಿಕಾರಿಗಳು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಸಮಸ್ಯೆಯನ್ನು ಪರಿಹರಿಸಲು ವಿವಿಧ ಪ್ರದೇಶಗಳಲ್ಲಿ ಕೌನ್ಸೆಲಿಂಗ್ ಸೇವೆಗಳನ್ನು ಪ್ರಾರಂಭಿಸಿದ್ದಾರೆ ಎಂದು ಅವರು ಒತ್ತಿ ಹೇಳಿದರು.
“ಎಚ್‌ಐವಿ ಪ್ರಕರಣಗಳಲ್ಲಿ ಈ ಹಠಾತ್ ಹೆಚ್ಚಳದಿಂದ, ಅದರಲ್ಲೂ ವಿಶೇಷವಾಗಿ ವಾರ್ಷಿಕವಾಗಿ ವರದಿಯಾಗುವ ಪ್ರಕರಣಗಳು ಈಗಲೆ ವರದಿಯಾಗಿದ್ದು ಆತಂಕಕಾರಿ” ಎಂದು ಡಾ. ಪಂತ್ ಹೇಳಿದ್ದಾರೆ. ಜಿಲ್ಲಾ ಆರೋಗ್ಯ ಇಲಾಖೆಯು ಈಗ ಪೀಡಿತ ಸಮುದಾಯಗಳಿಗೆ ಬೆಂಬಲ ಮತ್ತು ಶಿಕ್ಷಣವನ್ನು ಒದಗಿಸಲು ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.
“ಕಳೆದ 17 ತಿಂಗಳುಗಳಲ್ಲಿ, ರಾಮನಗರದಲ್ಲಿ 45 ವ್ಯಕ್ತಿಗಳು ಎಚ್‌ಐವಿ ಪಾಸಿಟಿವ್ ಆಗಿದ್ದಾರೆ ಎಂದು ವರದಿಯಾಗಿದೆ. ಇದು ಆರೋಗ್ಯ ಅಧಿಕಾರಿಗಳಲ್ಲಿ ಕಳವಳವನ್ನು ಉಂಟುಮಾಡಿದೆ” ಎಂದು ಆರೋಗ್ಯ ಇಲಾಖೆಯ ಹಿರಿಯ ಮೂಲಗಳು ಬಹಿರಂಗಪಡಿಸಿವೆ.
“ಯುವಕರು ಅನಾರೋಗ್ಯಕ್ಕೆ ಒಳಗಾಗಲು ಪ್ರಾರಂಭವಾದಾಗ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ನಡೆಸಿದ ಪರೀಕ್ಷೆಗಳು ಅವರು ಎಚ್ಐವಿ ಪಾಸಿಟಿವ್ ಆಗಿರುವುದು ದೃಢಪಡಿಸಿವೆ. ಇನ್ನೂ ಹೆಚ್ಚು ಆತಂಕದ ಸಂಗತಿಯೆಂದರೆ, ಈ ವ್ಯಕ್ತಿಗಳಲ್ಲಿ ಹಲವಾರು ವ್ಯಕ್ತಿಗಳು ಮದುವೆಯಾಗಿದ್ದು, ಅವರ ಸಂಗಾತಿಗಳು ಸಹ ಈ ಕಾಯಿಲೆಗೆ ತುತ್ತಾಗಿದ್ದಾರೆ” ಎಂದು ಮೂಲಗಳು ಹೇಳಿವೆ.
ಇದು ನಮ್ಮ ಸಮುದಾಯಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿದೆ ಎಂದು ನೈನಿತಾಲ್‌ನ ಮುಖ್ಯ ವೈದ್ಯಾಧಿಕಾರಿ ಡಾ.ಹರೀಶ್ ಚಂದ್ರ ಪಂತ್ ಹೇಳಿದ್ದಾರೆ. “ನಾವು ಜಾಗೃತಿ ಮೂಡಿಸಲು, ಸಮಾಲೋಚನೆ ನೀಡಲು ಮತ್ತು ಈ ಸಾಂಕ್ರಮಿಕವನ್ನು ತಡೆಗಟ್ಟಲು ದಣಿವರಿಯಿಲ್ಲದೆ ಕೆಲಸ ಮಾಡುತ್ತಿದ್ದೇವೆ.” ಎಂದು ಅವರು ತಿಳಿಸಿದ್ದಾರೆ.
“ರಾಮನಗರ ಎಚ್‌ಐವಿ ಸಾಂಕ್ರಮಿಕ್ಕೆ ಸಂಬಂಧಿಸಿ ಅನೇಕ ಯುವಕರು ಅವರ ಸಾಮಾನ್ಯ ಲಿಂಕ್ ಅನ್ನು ಹಂಚಿಕೊಂಡಿದ್ದಾರೆ. ಅದರ ಮೂಲಕ ಅವರ ಅರಿವಿಗೆ ಬಾರದಂತೆ ರೋಗಕ್ಕೆ ತುತ್ತಾಗಿದ್ದಾರೆ. ಸಮಾಲೋಚನೆಯ ಅವಧಿಯಲ್ಲಿ, ಅವರೆಲ್ಲರೂ ಬಾಲಕಿಯೊಂದಿಗೆ ದೈಹಿಕ ಸಂಬಂಧಗಳನ್ನು ಹೊಂದಿರುವ ಬಗ್ಗೆ ನಾವು ಕಂಡುಕೊಂಡಿದ್ದೇವೆ. ಬಾಲಕಿಯು ಮಾದಕ ದ್ರವ್ಯದ ಚಟ ಹೊಂದಿದ್ದರು ಎಂದು ಇವರ್ಯಾರಿಗೂ ತಿಳಿದಿರಲಿಲ್ಲ” ಎಂದು ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಚಟದಿಂದ ಹೊರಬರಲಾರದ ಬಾಲಕಿಯು ತನ್ನ ಚಟಕ್ಕೆ ಹಣ ಹೊಂದಿಸಲು ಈ ಸಂಬಂಧಗಳಲ್ಲಿ ತೊಡಗಿಸಿಕೊಂಡಿದ್ದರು. ದುರದೃಷ್ಟವಶಾತ್, ಯುವಕರು ಸುಲಭವಾಗಿ ಇದಕ್ಕೆ ಬಲಿಯಾಗಿದ್ದಾರೆ” ಎಂದು ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಶಕ್ತಿ ಯೋಜನೆ ಮರುಪರಿಶೀಲನೆ : ಡಿ.ಕೆ ಶಿವಕುಮಾರ್ ಸುಳಿವು


