Homeಮುಖಪುಟಉತ್ತರಾಖಂಡ ಹಿಮಪ್ರವಾಹ ದುರಂತ- ಮೃತಪಟ್ಟವರ ಸಂಖ್ಯೆ 53 ಕ್ಕೆ ಏರಿಕೆ

ಉತ್ತರಾಖಂಡ ಹಿಮಪ್ರವಾಹ ದುರಂತ- ಮೃತಪಟ್ಟವರ ಸಂಖ್ಯೆ 53 ಕ್ಕೆ ಏರಿಕೆ

- Advertisement -
- Advertisement -

ಉತ್ತರಾಖಂಡದ ಹಿಮಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 53 ಕ್ಕೆ ಏರಿದೆ. ಪ್ರವಾಹದಿಂದ ಹಾನಿಗೊಳಗಾದ ತಪೋವನ್ ಸುರಂಗದಿಂದ ಸೋಮವಾರ (ಇಂದು) ಮತ್ತೆ ಮೂರು ಶವಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಶವಗಳು ಎನ್‌ಟಿಪಿಸಿಯ ತಪೋವನ್-ವಿಷ್ಣುಗಡ್ ಯೋಜನಾ ಸ್ಥಳದ ಸುರಂಗದಲ್ಲಿ ಪತ್ತೆಯಾಗಿದೆ ಎಂದು ಚಮೋಲಿ ಜಿಲ್ಲಾಧಿಕಾರಿ ಸ್ವಾತಿ ಎಸ್ ಭದೌರಿಯಾ ಪಿಟಿಐಗೆ ತಿಳಿಸಿದ್ದಾರೆ.

ಫೆಬ್ರವರಿ 7 ರ ಭಾನುವಾರದಂದು ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠದ ತಪೋವನ್ ಪ್ರದೇಶದಲ್ಲಿ ’ನಂದಾ ದೇವಿ’ ಹಿಮನದಿಯಲ್ಲಿ ಭಾರಿ ಹಿಮ ಪ್ರವಾಹ ಉಂಟಾಗಿತ್ತು. ಪ್ರವಾಹದಿಂದಾಗಿ ಕನಿಷ್ಠ 150 ಮಂದಿ ಕಾರ್ಮಿಕರು ಕಾಣೆಯಾಗಿದ್ದಾರೆ ಎಂದು ವರದಿಯಾಗಿತ್ತಾದರೂ ನಂತರ ಕಾಣೆಯಾದವರ ಸಂಖ್ಯೆ 170 ಕ್ಕೆ ಏರಿತ್ತು.

ಇದನ್ನೂ ಓದಿ: ಉತ್ತರಾಖಂಡ ಹಿಮ ಪ್ರವಾಹ: ಸುರಂಗದಲ್ಲಿ ಸಿಕ್ಕಿಬಿದ್ದ 12 ಜನರ ರಕ್ಷಣೆಯ ವಿಡಿಯೋ ನೋಡಿ

ಘಟನೆಯಿಂದಾಗಿ ರೈನಿ ಗ್ರಾಮದ ಸಮೀಪವಿರುವ ಋಷಿಗಂಗಾ ವಿದ್ಯುತ್ ಯೋಜನೆಗೂ ಹಾನಿಯಗಿದ್ದು, ಕಾಣೆಯಾದ ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದರು. ಘಟನೆಯಿಂದಾಗಿ ಒಟ್ಟು ಎರಡು ವಿದ್ಯುತ್ ಯೋಜನೆಗಳಿಗೆ ಹಾನಿಯಾಗಿದೆ. ಕಾಣೆಯಾದ ಅಥವಾ ಸಿಕ್ಕಿಬಿದ್ದವರು ಬದುಕುಳಿಯುವ ಸಾಧ್ಯತೆಗಳ ಬಗ್ಗೆ ಪ್ರಶ್ನೆಗೆ ಜಿಲ್ಲಾಧಿಕಾರಿ, “ಸಂದರ್ಭಗಳು ಪ್ರತಿಕೂಲವಾದಾಗ ನಾವು ಯಾವಾಗಲೂ ಭರವಸೆಯಿಡಲು ಪ್ರಯತ್ನಿಸಬೇಕು” ಎಂದು ಹೇಳಿದ್ದಾರೆ.

ಘಟನೆ ಸಂಭವಿಸಿದಾಗ ಸುರಂಗದೊಳಗೆ ಕೆಲಸ ಮಾಡುತ್ತಿದ್ದ ಸುಮಾರು 30 ಜನರು ತಪೋವನ್‌ನಲ್ಲಿರುವ ಸುರಂಗದಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ನಂಬಲಾಗಿದೆ. ದುರಂತದಲ್ಲಿ ಮೃತಪಟ್ಟ ಚಮೋಲಿ ಜಿಲ್ಲೆಯ ಹೊರಗಿನ ಕುಟುಂಬಗಳಿಗೆ ಸಂಬಂಧಪಟ್ಟ ಜಿಲ್ಲಾಡಳಿತವು ಬ್ಯಾಂಕರ್‌ಗಳ ಚೆಕ್ ಮೂಲಕ ತಲಾ 4 ಲಕ್ಷ ರೂ. ಗಳನ್ನು ನೀಡಿದೆ ಎಂದು ಇಂಡಿಯನ್ ಎಕ್ಸ್‌‌ಪ್ರೆಸ್ ವರದಿ ಮಾಡಿದೆ.

ಇದನ್ನೂ ಓದಿ: ಉತ್ತರಾಖಂಡ: ಹಿಮನದಿಯಲ್ಲಿ ಭಾರಿ ಹಿಮ ಪ್ರವಾಹ, 150 ಜನರು ನಾಪತ್ತೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇರಳ: ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿಗೆ ಹಲ್ಲೆ ನಡೆಸಿದ ಸ್ವಪಕ್ಷದ ಮುಖಂಡ

0
ಕೇರಳದ ಕೊಲ್ಲಂ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ ಕೃಷ್ಣಕುಮಾರ್ ಅವರ ಕಣ್ಣಿಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಪಕ್ಷದ ಸ್ಥಳೀಯ ನಾಯಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಕೃಷ್ಣಕುಮಾರ್ ಇತ್ತೀಚೆಗೆ...