ಕೊರೊನಾ ಲಸಿಕೆ ಏನಿದ್ದರೂ ಮುಂದಿನ ವರ್ಷಕ್ಕೆ ಮಾತ್ರ ಸಾಧ್ಯ ಎಂದು ಸಾರ್ವಜನಿಕ ಆರೋಗ್ಯ ತಜ್ಞ ಫ್ರೊಫೆಸರ್ ಆಶಿಶ್ ಝಾ ಹೇಳಿದ್ದಾರೆ. ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯೊಂದಿಗೆ ಸಂವಾದ ನಡೆಸುತ್ತಿದ್ದಾಗ ಈ ವಿಚಾರ ತಿಳಿಸಿದ್ದಾರೆ.
ಲಸಿಕೆ ಯಾವಾಗ ಸಿದ್ದವಾಗಬಹುದು ಎಂಬ ರಾಹುಲ್ ಪ್ರಶ್ನೆಗೆ ಉತ್ತರಿಸಿದ ಅವರು ಮುಂದಿನ ವರ್ಷ ಲಸಿಕೆ ಸಿದ್ದವಾಗುತ್ತದೆ ಎಂಬುದನ್ನು ಆತ್ಮವಿಶ್ವಾಸದಿಂದ ಹೇಳಬಲ್ಲೇ ಎಂದು ಆಶಿಶ್ ಝಾ ಹೇಳಿದ್ದಾರೆ.
ಕೊರೊನಾ ಬಿಕ್ಕಟ್ಟಿನ ಬಗ್ಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಜಾಗತಿಕ ಸಾರ್ವಜನಿಕ ಆರೋಗ್ಯ ತಜ್ಞ ಡಾ.ಅಶಿಶ್ ಝಾ ಮತ್ತು ಸ್ವೀಡನ್‌ನ ಕರೋಲಿನ್ಸ್ಕಾ ಸಂಸ್ಥೆಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಪ್ರೊಫೆಸರ್ ಜೋಹಾನ್ ಗೀಸೆಕೆ ಅವರೊಂದಿಗೆ ಸಂವಾದ ನಡೆಸಿದರು.
"Yeh bhaiya bataiye ki vaccine kab aayegi?," Rahul Gandhi to public health expert Prof Ashish Jha, to which Jha says, "I am very confident a vaccine will come by next year". pic.twitter.com/xBUb6zLXKI
— ANI (@ANI) May 27, 2020
ರಾಹುಲ್ ಗಾಂಧಿಯವರೊಂದಿಗೆ ಮಾತನಾಡುತ್ತಾ ಆಶಿಶ್ ಝಾ “ಯಾಕೆ ಕಡಿಮೆ ಸಂಖ್ಯೆಯ ಜನರನ್ನು ಪರೀಕ್ಷೆ ನಡೆಸುತ್ತೀರಿ ಎಂದು ಕೆಲವು ಅಧಿಕಾರಿಗಳನ್ನು ಕೇಳಿದ್ದೇನೆ. ಅವರ ನಿಲುವು ಏನೆಂದರೆ, ಪರೀಕ್ಷಾ ಸಂಖ್ಯೆಯನ್ನು ಹೆಚ್ಚು ಮಾಡಿದರೆ ಕೊರೊನಾ ಪ್ರಕರಣಗಳು ಸಹ ಹೆಚ್ಚಾಗಿ ಜನ ಭಯಬೀಳುತ್ತಾರೆ ಎಂದು ಅಧಿಕಾರಿಗಳು ಹೇಳುತ್ತಾರೆ” ಎಂದು ಆಶ್ಚರ್‍ಯ ವ್ಯಕ್ತಪಡಿಸಿದ್ದಾರೆ.
“ಲಾಕ್ ಡೌನ್ ಮೂಲಕ ವೈರಸ್ ಅನ್ನು ನಿಧಾನಗೊಳಿಸಬಹುದು, ಇದರಿಂದ ಭಾರಿ ಆರ್ಥಿಕ ಪರಿಣಾಮಗಳು ಆಗುತ್ತದೆ. ಆದರೂ ಈ ಸಮಯವನ್ನು ಅಧಿಕಾರಿಗಳು ತಮ್ಮ ಪರೀಕ್ಷಾ ಮತ್ತು ಆಸ್ಪತ್ರೆಯ ಮೂಲಸೌಕರ್ಯವನ್ನು ತಯಾರಿಸಲು ಬಳಸಿಕೊಳ್ಳಬೇಕಿತ್ತು. ಮುಂದಾದರೂ ಎಲ್ಲವನ್ನೂ ಯೋಜಿಸುವ ರೀತಿಯಲ್ಲಿರಬೇಕು” ಅವರು ಝಾ ಹೇಳಿದ್ದಾರೆ.
ಲಾಕ್‌ಡೌನ್ ಸಮಯದಲ್ಲಿ ದೇಶಾದ್ಯಂತ ತೆರಳುತ್ತಿರುವ ವಲಸೆ ಕಾರ್ಮಿಕರನ್ನು ಇತ್ತೀಚೆಗೆ ಭೇಟಿ ಮಾಡಿದ ತಮ್ಮ ಅಭಿಪ್ರಾಯಗಳನ್ನು ರಾಹುಲ್ ಗಾಂಧಿ ಫ್ರೋ.ಝಾ ಅವರೊಂದಿಗೆ ಹಂಚಿಕೊಂಡರು. ಈ ಕಾರ್ಮಿಕರು ದೊಡ್ಡ ಅನಿಶ್ಚಿತತೆಯನ್ನು ಹೊಂದಿದ್ದಾರೆ ಎಂದು ಹೇಳಿದರು. ಇದನ್ನು ಒಪ್ಪಿಕೊಂಡ ಫ್ರೊಫೆಸರ್ ಲಾಕ್ ಡೌನ್ ಅನ್ನು ತೆರವುಗೊಳಿಸಲು ಸರ್ಕಾರವು ಕಾರ್ಯತಂತ್ರವನ್ನು ಹೊಂದಿರಬೇಕು ಎಂದು ಹೇಳಿದರು.
ಕೊರೊನಾ ಬಿಕ್ಕಟ್ಟು ಮತ್ತು ಭಾರತದ ಆರ್ಥಿಕತೆಯ ಮೇಲೆ ಅದರ ಪರಿಣಾಮಗಳ ಬಗ್ಗೆ ಚರ್ಚಿಸಲು ರಾಹುಲ್ ಗಾಂಧಿ ಜಾಗತಿಕ ಹಾಗೂ ಭಾರತೀಯ ಚಿಂತಕರೊಂದಿಗೆ ಸರಣಿ ಸಂವಾದಗಳನ್ನು ನಡೆಸುತ್ತಿದ್ದಾರೆ.
ಈ ತಿಂಗಳ ಆರಂಭದಲ್ಲಿ ಅವರು ನೊಬೆಲ್ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನರ್ಜಿ ಅವರೊಂದಿಗೆ ಸಂವಾದ ನಡೆಸಿದ್ದರು. ಅಲ್ಲದೆ ಏಪ್ರಿಲ್ 30 ರಂದು ಆರ್‌ಬಿಐ ನ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರೊಂದಿಗೆ ಮಾತುಕತೆ ನಡೆಸಿದ್ದರು.
ಓದಿ: ಉತ್ತರ ಪ್ರದೇಶದ ಕಾರ್ಮಿಕರು ಆದಿತ್ಯನಾಥರ ವೈಯಕ್ತಿಕ ಆಸ್ತಿಯಲ್ಲ: ರಾಹುಲ್ ಗಾಂಧಿ ಕಿಡಿ


