ರಾಜ್ಯದ ವಿಜಯಪುರ ಜಿಲ್ಲೆಯ ಕೆನರಾ ಬ್ಯಾಂಕ್‌ನಿಂದ ಬರೋಬ್ಬರಿ 52 ಕೋಟಿ ರೂಪಾಯಿ ಮೌಲ್ಯದ 51 ಕೆಜಿ ಚಿನ್ನವನ್ನು ಕಳ್ಳರು ದರೋಡೆ ಮಾಡಿದ್ದಾರೆ ಎಂದು ವರದಿಯಾಗಿದೆ. ದೇಶದಲ್ಲಿ ವರದಿಯಾದ ಅತಿ ದೊಡ್ಡ ಚಿನ್ನ ದರೋಡೆ ಪ್ರಕರಣಗಳಲ್ಲಿ ಇದು ಒಂದಾಗಿದ್ದು, ಕಳ್ಳರು ಕಳೆದ ತಿಂಗಳ ವಾರಾಂತ್ಯದಲ್ಲಿ ಈ ಕೃತ್ಯವನ್ನು ಎಸಗಿದ್ದಾರೆ ಎಂದು ವರದಿ ಸೂಚಿಸಿದೆ. ವಿಜಯಪುರ | ಕೆನರಾ ಬ್ಯಾಂಕಿನಿಂದ
ಮೇ 23 ರಂದು ವಿಜಯಪುರದ ಕೆನರಾ ಬ್ಯಾಂಕಿನ ಮನಗುಳಿ ಶಾಖೆಯಲ್ಲಿ ಕಳ್ಳತನ ನಡೆದಿದ್ದರೂ, ಮೇ 26 ರಂದು ಸಿಬ್ಬಂದಿ ಕೆಲಸಕ್ಕೆ ಮರಳಿದಾಗ ಅಪರಾಧ ಬೆಳಕಿಗೆ ಬಂದಿತ್ತು. ಪ್ರಕರಣದಲ್ಲಿ ಪೊಲೀಸರು ಇನ್ನೂ ಯಾರನ್ನೂ ಬಂಧಿಸಿಲ್ಲ ಎಂದು ವರದಿ ಹೇಳಿದೆ.
ಕಳ್ಳರು 51 ಕಿಲೋಗ್ರಾಂ ಚಿನ್ನದ ಆಭರಣಗಳೊಂದಿಗೆ ಪರಾರಿಯಾಗಿದ್ದರೂ, ಲೂಟಿ ಮಾಡಿದ ವಸ್ತುಗಳ ಸಾಗಣೆಯ ವಿಧಾನದ ಬಗ್ಗೆ ಪೊಲೀಸರಿಗೆ ಇನ್ನೂ ಮಾಹಿತಿ ಸಿಕ್ಕಿಲ್ಲ ಎಂದು ವರದಿ ಹೇಳಿದೆ.
ಸೋಮವಾರ, ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಅವರು, ಮೇ 23 ರಂದು ಸಂಜೆ 6 ಗಂಟೆಯಿಂದ ಮೇ 25 ರಂದು ಬೆಳಿಗ್ಗೆ 11.30 ರ ನಡುವೆ ಚಿನ್ನಾಭರಣಗಳನ್ನು ಕದ್ದಿರುವ ಶಂಕೆ ವ್ಯಕ್ತವಾಗಿದೆ ಎಂದು ಹೇಳಿದ್ದಾರೆ.
“ಆರೋಪಿಗಳನ್ನು ಬಂಧಿಸಲು ನಾವು ಎಂಟು ತಂಡಗಳನ್ನು ರಚಿಸಿದ್ದೇವೆ. ಕಳ್ಳತನದಲ್ಲಿ 6 ರಿಂದ 8 ಜನರು ಭಾಗಿಯಾಗಿದ್ದಾರೆ ಎಂದು ಶಂಕಿಸಲಾಗಿದೆ” ಎಂದು ಅವರು ಹೇಳಿದ್ದಾರೆ.
ಇದು ಪೂರ್ವ ಯೋಜಿತ ಕಳ್ಳತನ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಜೊತೆಗೆ ಕಳ್ಳರು ಅಪರಾಧ ಮಾಡಲು ದೀರ್ಘ ವಾರಾಂತ್ಯಕ್ಕಾಗಿ, ಎರಡನೇ ಶನಿವಾರ ಮತ್ತು ಭಾನುವಾರ ಕಾಯುತ್ತಿದ್ದರು. ನಕಲಿ ಕೀಲಿಯನ್ನು ಬಳಸಿ ಕಳ್ಳರು ಬ್ಯಾಂಕ್‌ಗೆ ಪ್ರವೇಶಿಸಿದ್ದು, ಅಲಾರಂ ಅನ್ನು ಆಫ್ ಮಾಡಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.
ಅವರು ಸಿಸಿಟಿವಿ ಕ್ಯಾಮೆರಾಗಳನ್ನು ಸಹ ಆಫ್ ಮಾಡಿದ್ದು, ನೆಟ್‌ವರ್ಕ್ ವೀಡಿಯೊ ರೆಕಾರ್ಡರ್ (ಎನ್‌ವಿಆರ್) ಅನ್ನು ಕದ್ದೊಯ್ದಿದ್ದಾರೆ ಎಮದು ಅವರು ಹೇಳಿದ್ದಾರೆ. ಕಳ್ಳರು ಬ್ಯಾಂಕ್ ಲಾಕರ್‌ಗಳನ್ನು ಮಾತ್ರ ತೆರೆದು ಚಿನ್ನದೊಂದಿಗೆ ಪರಾರಿಯಾಗಿದ್ದಾರೆ ಎಂದು ವರದಿ ಹೇಳಿದೆ.
ಕಳ್ಳತನದ ನಂತರ, ಆರೋಪಿಗಳು ಕಪ್ಪು ಬಣ್ಣದ ಗೊಂಬೆಯನ್ನು ಇಟ್ಟು ಹೋಗಿದ್ದು, ಇದು ಅಪರಾಧ ಸ್ಥಳದಲ್ಲಿ ಅವರು ಯಾವುದೋ ಆಚರಣೆಯನ್ನು ಮಾಡಿದ್ದಾರೆ ಎಂದು ತೋರುತ್ತದೆ ಎಂದು ವಿಜಯಪುರ ಪೊಲೀಸರು ತಿಳಿಸಿದ್ದಾರೆ.
ಕಳೆದ ವರ್ಷ ಅಕ್ಟೋಬರ್ 28 ರಂದು, ದಾವಣಗೆರೆ ಜಿಲ್ಲೆಯ ನ್ಯಾಮತಿ ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಶಾಖೆಯಿಂದ ಒಂದು ಗ್ಯಾಂಗ್ 13 ಕೋಟಿ ರೂ. ಮೌಲ್ಯದ ಚಿನ್ನದ ಆಭರಣಗಳನ್ನು ಕದ್ದಿದೆ. ನಂತರ ದಾವಣಗೆರೆ ಪೊಲೀಸರು ಅಪರಾಧದಲ್ಲಿ ಭಾಗಿಯಾಗಿದ್ದ ಆರು ಜನರನ್ನು ಬಂಧಿಸಿದ್ದಾರೆ.
ಈ ವರ್ಷದ ಜನವರಿ 17 ರಂದು ಮಂಗಳೂರಿನ ಕೋಟೆಕಾರ್‌ನಲ್ಲಿರುವ ವ್ಯವಸಾಯ ಸೇವಾ ಸಹಕಾರಿ ಸಂಘ ಬ್ಯಾಂಕ್‌ನಲ್ಲಿ 12 ಕೋಟಿ ರೂ. ಮೌಲ್ಯದ ಚಿನ್ನವನ್ನು ದೋಚಿದ್ದ ತಂಡವೊಂದು ದರೋಡೆ ಮಾಡಿತ್ತು. ಈ ದರೋಡೆಗೆ ಸಂಬಂಧಿಸಿದಂತೆ ಪೊಲೀಸರು ಆರು ಜನರನ್ನು ಬಂಧಿಸಿದ್ದರು. ವಿಜಯಪುರ | ಕೆನರಾ ಬ್ಯಾಂಕಿನಿಂದ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಅಭಯಾರಣ್ಯದ ಮೂಲಕ ತಮ್ಮ ಜಮೀನಿಗೆ ತೆರಳಲು ಸಚಿವ ಕೆ.ಜೆ ಜಾರ್ಜ್ ಮಗನಿಗೆ ಹೈಕೋರ್ಟ್ ಅನುಮತಿ
ಅಭಯಾರಣ್ಯದ ಮೂಲಕ ತಮ್ಮ ಜಮೀನಿಗೆ ತೆರಳಲು ಸಚಿವ ಕೆ.ಜೆ ಜಾರ್ಜ್ ಮಗನಿಗೆ ಹೈಕೋರ್ಟ್ ಅನುಮತಿ

