Homeಮುಖಪುಟವೈರಲ್‌ ವಿಡಿಯೊ: ಘರ್ಜಿಸುತ್ತಿರುವ ಸಿಂಹವನ್ನು ಹೊತ್ತೊಯ್ದ ಮಹಿಳೆ!

ವೈರಲ್‌ ವಿಡಿಯೊ: ಘರ್ಜಿಸುತ್ತಿರುವ ಸಿಂಹವನ್ನು ಹೊತ್ತೊಯ್ದ ಮಹಿಳೆ!

- Advertisement -
- Advertisement -

ಘರ್ಜಿಸುತ್ತಿರುವ ಸಿಂಹವೊಂದನ್ನು ರಚ್ಚೆಹಿಡಿದಿರುವ ಮಗುವನ್ನು ಎತ್ತಿಕೊಂಡು ಹೋಗು ರೀತಿಯಲ್ಲಿ ಮಹಿಳೆಯೊಬ್ಬರು ಹೊತ್ತೊಯ್ದಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಯು ಕುವೈತ್‌ ದೇಶದ ಸಬಾಹಿಯ ಜಿಲ್ಲೆಯ ನಗರದ ವಸತಿ ಪ್ರದೇಶಲ್ಲಿ ನಡೆದಿದೆ ಎಂದು ಅಲ್ಲಿನ ಸುದ್ದಿ ಮಾಧ್ಯಮಗಳು ವರದಿ ಮಾಡಿದೆ.

ವಿಡಿಯೊದಲ್ಲಿ ಹಿಬಾಬ್ ಧರಿಸಿರುವ ಮಹಿಳೆಯೊಬ್ಬರು ಸಿಂಹಿಣಿಯನ್ನು ಹೊತ್ತುಕೊಂಡು ಹೋಗುತ್ತಾರೆ. ಈ ವೇಳೆ ಅದು ಘರ್ಜಿಸುತ್ತಿದ್ದರೂ, ಭಾರವಾಗಿರುವ ಅದನ್ನು ಕಷ್ಟದಿಂದಲೇ ಎತ್ತಿಕೊಂಡು ಹೋಗಿ ಇನ್ನೊಂದು ಬದಿಯಲ್ಲಿ ಅದನ್ನು ಇಳಿಸುತ್ತಾರೆ.

ಇದನ್ನೂ ಓದಿ:ಜಾರ್ಖಂಡ್‌: ’ಪವಿತ್ರ ಮರ’ ಕಡಿದ ಆರೋಪದಲ್ಲಿ ವ್ಯಕ್ತಿಯನ್ನು ಹತ್ಯೆ ಮಾಡಿದ 150 ಜನರ ಗುಂಪು

ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಪ್ರಸಾರವಾಗಲು ಪ್ರಾರಂಭಿಸಿದಾಗ ಕೆಲವರು ಅದರ ಸತ್ಯಾಸತ್ಯತೆಯನ್ನು ಪ್ರಶ್ನಿಸಿದ್ದರು. ಇನ್ನು ಕೆಲವರು ಅದರ ಬಗ್ಗೆ ಹಾಸ್ಯ ಚಟಾಕಿಯನ್ನು ಹಾರಿಸಿದ್ದಾರೆ.

ಆದಾಗ್ಯೂ, ಈ ವಿಡಿಯೊ ಅಸಲಿ ಎಂದು ಕುವೈತ್‌ ಪತ್ರಿಕೆ ಅಲ್‌-ಅನ್ಬಾ ವರದಿ ಮಾಡಿದೆ. ಅದು ಸುದ್ದಿ ಮಾಡಿರುವಂತೆ, ಜನವರಿ 1, 2022 ರಂದು ಈ ವಿಡಿಯೊವನ್ನು ಮಾಡಲಾಗಿದೆ. ಸಿಂಹಿಣಿಯನ್ನು ಅದನ್ನು ಎತ್ತಿಕೊಂಡು ಹೋಗುತ್ತಿರುವ ಮಹಿಳೆ ಸಾಕಿದ್ದಾಗಿದೆ ಎಂದು ಅದು ಹೇಳಿದೆ.

ಇದನ್ನೂ ಓದಿ:ವೀಕೆಂಡ್‌ ಕರ್ಫ್ಯೂ: ಹೊಸ ಕೊರೊನಾ ಮಾರ್ಗಸೂಚಿಯಲ್ಲಿ ಏನೇನಿದೆ?

ಮನೆಯಿಂದ ತಪ್ಪಿಸಿಕೊಂಡ ಸಿಂಹಿಣಿಯು ಬೀದಿಯಲ್ಲಿ ಅಲೆದಾಡಿ ನಿವಾಸಿಗಳನ್ನು ಭಯಭೀತರನ್ನಾಗಿಸಿತ್ತು. ನಂತರ ಇದರ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತೆರಳಿ, ಅದರ ಮಾಲಿಕರನ್ನು ಕಂಡು ಹಿಡಿದು, ಅದನ್ನು ಹಿಡಿಯಲು ಮಹಿಳೆಯಗೆ ಸಹಾಯ ಮಾಡಿದ್ದಾರೆ ಎಂದು ಅಲ್‌ ಅರೇಬಿಯಾ ವರದಿ ಮಾಡಿದೆ.

ಕುವೈತ್‌ನಲ್ಲಿ 2018ರಲ್ಲಿ ಇದೇ ರೀತಿಯ ಘಟನೆ ಸಂಭವಿಸಿದ್ದವು. ಈ ವೇಳೆ ಹಲವಾರು ಸಿಂಹಗಳು ಬೀದಿಗಳಲ್ಲಿ ಅಲೆದಾಡಿದ್ದವು. ಅಧಿಕಾರಿಗಳು ಅದನ್ನು ಟ್ರ್ಯಾಂಕ್ವಿಲೈಜರ್‌ ಬಳಸಿ ಸೆರೆಹಿಡಿದು ಮೃಗಾಲಯಕ್ಕೆ ಹಸ್ತಾಂತರಿಸಿದ್ದರು.

ಸಿಂಹ, ಹುಲಿ ಮುಂತಾದ ಕಾಡು ಪ್ರಾಣಿಗಳನ್ನು ಸಾಕುವುದು ಕುವೈತ್‌ನಲ್ಲಿ ಕಾನೂನುಬಾಹಿರವಾಗಿದ್ದರೂ, ಅಲ್ಲಿನ ನಿವಾಸಿಗಳು ಇನ್ನೂ ಕಾಡು ಪ್ರಾಣಿಗಳನ್ನು ಸಾಕುತ್ತಿದ್ದಾರೆ.

ಇದನ್ನೂ ಓದಿ:ಶೀಘ್ರದಲ್ಲೇ ರಾಜ್ಯಕ್ಕೆ ಅಮಿತ್‌ ಶಾ ಭೇಟಿ: BJP ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕುತ್ತು, ಸಿಎಂ ಬದಲಾವಣೆ ಸಾಧ್ಯತೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...