ಉತ್ತರಪ್ರದೇಶದ ಗಾಜಿಯಾಬಾದ್‌ನ ಲೋನಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ನಂದಕಿಶೋರ್ ಗುರ್ಜರ್, ವಿರಾಟ್ ಕೊಹ್ಲಿ ಪತ್ನಿ ಅನುಷ್ಕ ಶರ್ಮಾಗೆ ವಿಚ್ಛೇದನ ನೀಡಬೇಕೆಂದು ಆಗ್ರಹಿಸಿದ್ದಾರೆ. ಆ ಮೂಲಕ ಅವರು ನಟಿ ಮತ್ತು ನಿರ್ಮಾಪಕಿಯಾಗಿರುವ ಅನುಷ್ಕಾ ಶರ್ಮಾ ಮತ್ತು ಕೊಹ್ಲಿ ವಿರುದ್ಧ ಕಿಡಿಕಾರಿದ್ದಾರೆ.
ಭಾರತ ಕ್ರಿಕೆಟ್ ತಂಡದ ವಿರಾಟ್ ಕೊಹ್ಲಿ ರಾಷ್ಟ್ರೀಯವಾದಿ ಕ್ರಿಕೆಟ್ ಆಟಗಾರರಾಗಿದ್ದಾರೆ. ಅವರು ಅಪ್ರತಿಮ ದೇಶಭಕ್ತರಾಗಿದ್ದು, ದೇಶಕ್ಕಾಗಿ ಆಡುತ್ತಾರೆ. ಹಾಗಾಗಿ ಕೂಡಲೇ ಅವರು ಅನುಷ್ಕ ಶರ್ಮಾಗೆ ವಿಚ್ಛೇದನ ನೀಡಬೇಕೆಂದು ಆ ಶಾಸಕ ತನ್ನ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾನೆ. ಆಂಟಿ ಹಿಂದೂ ಅನುಷ್ಕಾ ಶರ್ಮಾ ಎಂಬ ಹ್ಯಾಸ್‌ಟ್ಯಾಗ್ ಅನ್ನು ಸಹ ಬಳಸಿದ್ದಾನೆ.
ಅಷ್ಟು ಮಾತ್ರವಲ್ಲದೇ ಅವರು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ರವರಿಗೆ ಪತ್ರ ಬರೆದು, ಸ್ಥಳೀಯ ಠಾಣೆಯಲ್ಲಿ ದೂರು ನೀಡಿದ್ದಾರೆ.
#BanPaatalLok
सनातन विरोधी वेब सीरीज #पाताललोक की प्रोड्यूसर @AnushkaSharma के खिलाफ तहरीर देने के पश्चात आज #पाताललोक #BanPaatalLok
के लिए मा. सूचना एवं प्रसारण मंत्री @PrakashJavdekar जी को पत्र प्रेषित किया
1/3#AntiHinduAnushkaSharma#ShameOnYouAmazonPrimeIndia pic.twitter.com/ZciaGofdis— Nandkishor Gurjar (@nkgurjar4bjp) May 24, 2020
ಕಾರಣವೇನು?
ಒಟಿಟಿ ಫ್ಲಾಟ್‌ಫಾರಂ ಅಮೆಜಾನ್ ಪ್ರೈಮ್‌ನಲ್ಲಿ ಪ್ರಸಾರವಾಗುತ್ತಿರುವ ‘ಪಾತಾಳ್ ಲೋಕ್’ ವೆಬ್ ಸೀರೀಸ್ ಸಾಕಷ್ಟು ಜನರ ಮೆಚ್ಚುಗೆ ಪಡೆದಿದೆ. ಇದರ ನಿರ್ಮಾಪಕ ಅನುಷ್ಕ ಶರ್ಮಾ. ಇದರಲ್ಲಿ ಸನಾತನ ಧರ್ಮ ನಿಂದನೆಯಾಗಿದೆ, ಪಕ್ಷ ನಿಂದನೆಯಾಗಿದೆ, ಕೋಮು ಕೋಲಾಹಲವೆಬ್ಬಿಸಿದೆ. ಇದರಲ್ಲಿ ನನ್ನ ಫೋಟೊ ಸಹ ಬಳಕೆಯಾಗಿದೆ. ಹಾಗಾಗಿ ಇದರ ನಿರ್ಮಾಪಕಿಯ ಮೆಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ದೇಶದ್ರೋಹದ ಕೇಸು ದಾಖಲಿಸಿಬೇಕೆಂಬುದು ಬಿಜೆಪಿ ಶಾಸಕನ ಒತ್ತಾಯವಾಗಿದೆ.
ಯಾರು ಈ ನಂದಕಿಶೋರ್ ಗುರ್ಜರ್?
ನಂದಕಿಶೋರ್ ಗುರ್ಜರ್ ಉತ್ತರಪ್ರದೇಶದ ಗಾಜಿಯಾಬಾದ್‌ನ ಲೋನಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ. ಈತನ ಮೇಲೆ ಈಗಾಗಲೇ IPC 147, 148, 149 ಸೆಕ್ಷನ್ ಸೇರಿದಂತೆ ಹಲವಾರು ಕ್ರಿಮಿನಲ್ ಪ್ರಕರಣಗಳಿವೆ. ಈತನ ಅಪ್ರಾಪ್ತ ವಯಸ್ಸಿನ ಮಗನೂ ಸಹ ಕುಡಿದು ವಾಹನ ಚಲಾಯಿಸಿ ಅಪಘಾತ ಮಾಡಿ ಕೇಸು ಎದುರಿಸುತ್ತಿದ್ದಾನೆ. ನಂದಕಿಶೋರ್ ಗುರ್ಜರ್ ಈ ಹಿಂದೆ ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರನ್ನು ಸಾರ್ವಜನಿಕವಾಗಿ ಥಳಿಸಿ ಸುದ್ದಿಯಾಗಿದ್ದರು.
ಪಾತಾಳ್ ಲೋಕ್ ಬಗ್ಗೆ
ಸುದೀಪ್ ಶರ್ಮಾ, ಸಾಗರ್ ಹಾವೆಲಿ, ಹಾರ್ದಿಕ್ ಮೆಹ್ತಾ ಮತ್ತು ಗುಂಜಿತ್ ಚೋಪ್ರಾ ರಚನೆಯ ಈ ವೆಬ್ ಧಾರವಾಹಿಯನ್ನು ಅವಿನಾಶ್ ಅರುಣ್ ಮತ್ತು ಪ್ರೊಸಿತ್ ರಾಯ್ ನಿರ್ದೇಶಿಸಿದ್ದಾರೆ. ದೆಹಲಿಯ ಹೆಸರಾಂತ ಪತ್ರಕರ್ತನೊಬ್ಬನ ಕೊಲೆ ಪ್ರಯತ್ನದ ಪ್ರಕರಣದ ಜಾಡುಹಿಡಿದ ಹೊರಟ ದೆಹಲಿ ಪೊಲೀಸ್ ಕಣ್ಣಿಗೆ ಕಾಣುವ ಅಪರಾಧ ಲೋಕದ ಅನಾವರಣ ಇಲ್ಲಿದೆ. ಪೊಲೀಸರ ಭ್ರಷ್ಟಾಚಾರ ಮತ್ತು ಅಪರಾಧಿಗಳಿಗೆ ರಕ್ಷಣೆ, ಅಮಾಯಕರ ಬಲಿಪಶು, ಎಲ್ಲಕ್ಕೂ ಭಯೋತ್ಪಾದನೆಯ ನಂಟು ಹೊರಿಸಿ ನಿಜವಾದ ಅಪರಾಧಿಗಳು ತಪ್ಪಿಸಿಕೊಳ್ಳುವುದನ್ನು ಈ ಧಾರಾವಾಹಿ ಸಮರ್ಥವಾಗಿ ಕಟ್ಟಿಕೊಟ್ಟಿದೆ. ಜೈದೀಪ್ ಅಹ್ಲವಾತ್, ಗುಲ್ ಪನಾಗ್, ನೀರಜ್ ಕಬಿ, ಅಭಿಷೇಕ್ ಬ್ಯಾನರ್ಜಿ ಮುಂತಾದವರು ಇದರಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ಕೊರೊನಾ ವಿರುದ್ದ ಹೋರಾಡಲು ಮಹಾರಾಷ್ಟ್ರಕ್ಕೆ ವೈದ್ಯರ ತಂಡ ಕಳುಹಿಸಲಿರುವ ಕೇರಳ



First nim familyna correctag itkolapa amele avr bagge mataduve