“ಮತದಾರರು ತಮ್ಮ ಭವಿಷ್ಯವನ್ನು ಕಾಂಗ್ರೆಸ್‌ನಲ್ಲಿ ನೋಡುತ್ತಿದ್ದಾರೆ” ಎಂದು ಕಾಂಗ್ರೆಸ್ ಸಂಸದೆ ಕುಮಾರಿ ಸೆಲ್ಜಾ ಹರಿಯಾಣ ವಿಧಾನಸಭೆಯಲ್ಲಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹರಿಯಾಣ ವಿಧಾನಸಭೆ ಚುನಾವಣೆ ಮತ ಎಣಿಕೆ ಬೆಳಗಿನ ಟ್ರೆಂಡಿಂಗ್ ಕುರಿತು ಖಾಸಗಿ ಸುದ್ದಿವಾಹಿಯೊಂದಿಗೆ ಮಾತನಾಡಿದ ಅವರು, “ಆರಂಭದಲ್ಲಿ ಆಯಾಸ ಹೊಂದುವುದು ಸಹಜ. ಇದರಲ್ಲಿ ಬಿಜೆಪಿಯ ದುರಾಡಳಿತವೂ ಇತ್ತು. ಅದು ಈ ಚುನಾವಣೆಣೆಯಲ್ಲಿ ದೊಡ್ಡ ಅಂಶವಾಗಿತ್ತು” ಎಂದು ಹೇಳಿದರು.
“ಮತದಾರರು ತಮ್ಮ ಭವಿಷ್ಯವನ್ನು ನೋಡುತ್ತಾರೆ.. ಜನರ ಭವಿಷ್ಯವು ಕಾಂಗ್ರೆಸ್ ಎಂದು ಅವರಿಗೆ ತಿಳಿದಿದೆ. ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಮತ್ತು ಸ್ಥಳೀಯ ಕಾರ್ಯಕರ್ತರ ಪ್ರಯತ್ನವು ಗೆಲುವಿಗೆ ಸಹಕಾರಿಯಾಗುತ್ತದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಗೆ ಹ್ಯಾಟ್ರಿಕ್ ಗೆಲುವನ್ನು ತಡೆಯುವ ಪ್ರಯತ್ನದಲ್ಲಿ ಅಂಚೆ ಮತಗಳು ಮತ್ತು ಆರಂಭಿಕ ಮತಗಳನ್ನು ಎಣಿಕೆ ಮಾಡುತ್ತಿದ್ದಂತೆ ಕಾಂಗ್ರೆಸ್ ಆರಂಭಿಕ ಮುನ್ನಡೆ ಸಾಧಿಸಿತು. ಆದರೆ, ಸ್ವಲ್ಪ ಹೊತ್ತಿನಲ್ಲೇ ಟ್ರೆಂಡ್ ಬದಲಾಯಿತು. ಆಡಳಿತ ಪಕ್ಷವು ಶೀಘ್ರದಲ್ಲೇ ಐವತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿತು. ಆದರೂ, ಅಂತಿಮವಾಗಿ ಮೇಲುಗೈ ಸಾಧಿಸುವ ವಿಶ್ವಾಸವನ್ನು ಕಾಂಗ್ರೆಸ್ ಹೊಂದಿದೆ.
ಇದನ್ನೂ ಓದಿ; Election Result : ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್-ಎನ್‌ಸಿ ಮೈತ್ರಿ, ಹರಿಯಾಣದಲ್ಲಿ ಕಾಂಗ್ರೆಸ್ ಮುನ್ನಡೆ


