ರಷ್ಯಾದಲ್ಲಿ ಆಂತರೀಕ ಯುದ್ಧ ಪ್ರಾರಂಭವಾಗಿದೆ. ಅಧ್ಯಕ್ಷ ಪುಟಿನ್‌ರವರ ಬೆಂಬಲದಿಂದ ಆರಂಭವಾಗಿದ್ದ ಯೆವ್ಗೆನಿ ಪ್ರಿಗೋಜಿನ್ ನೇತೃತ್ವದ ವ್ಯಾಗ್ನರ್ ಮರ್ಸೆನರಿ ಎಂಬ ಖಾಸಗಿ ಮಿಲಿಟರಿ ಪಡೆಯು ಸದ್ಯ ಪುಟಿನ್ ವಿರುದ್ಧವೇ ತಿರುಗಿ ಬಿದ್ದಿದೆ. ಈ ಪಡೆಯು ಶಶಸ್ತ್ರ ದಂಗೆಯನ್ನು ಆರಂಭಿಸಿದ್ದು ರಷ್ಯಾದ ಎರಡು ನಗರಗಳನ್ನು ವಶಪಡಿಸಿಕೊಂಡಿರುವುದಾಗಿ ಮತ್ತು ಮೂರು ಮಿಲಿಟರಿ ಹೆಲಿಕಾಪ್ಟರ್‌ಗಳನ್ನು ಹೊಡೆದುರುಳಿಸಿರುವಾಗಿ ಹೇಳಿಕೊಂಡಿದೆ.
ಈ ಕುರಿತು ಪುಟಿನ್ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ, “ವ್ಯಾಗ್ನರ್ ಸೈನಿಕರ ಶಸ್ತ್ರಸಜ್ಜಿತ ದಂಗೆಯು ‘ಬೆನ್ನಿಗೆ ಇರಿತವಾಗಿದೆ’ ಮತ್ತು ಪ್ರಿಗೋಜಿನ್ ರಷ್ಯಾಕ್ಕೆ ‘ದ್ರೋಹ’ ಮಾಡಿದ್ದಾರೆ. ಅತಿರಂಜಿತ ಮಹತ್ವಾಕಾಂಕ್ಷೆಗಳು ಮತ್ತು ವೈಯಕ್ತಿಕ ಹಿತಾಸಕ್ತಿಗಳು ಈ ದೇಶದ್ರೋಹಕ್ಕೆ ಕಾರಣವಾಗಿವೆ. ಇದರಲ್ಲಿ ಭಾಗಿಯಾದವರು ತಕ್ಕ ಶಿಕ್ಷೆ ಅನುಭವಿಸುತ್ತಾರೆ ಎಂದು ಕಿಡಿಕಾರಿದ್ದಾರೆ.
ರಷ್ಯಾದ ಅಧ್ಯಕ್ಷರು ತಮ್ಮ ಭಾಷಣದ ಸಮಯದಲ್ಲಿ ತಪ್ಪು ಆಯ್ಕೆ ಮಾಡಿದ್ದಾರೆ ಮತ್ತು ದೇಶವು ಶೀಘ್ರದಲ್ಲೇ ಹೊಸ ಪ್ರಧಾನಿಯನ್ನು ಹೊಂದಲಿದೆ ಎಂದು ವ್ಯಾಗ್ನರ್ ಪಡೆ ಹೇಳಿದೆ. ಪುಟಿನ್‌ರನ್ನು ಕೆಳಗಿಳಿಸುವ ಪ್ರತಿಜ್ಞೆ ಮಾಡಿರುವ ಆ ಪಡೆಯು ಸದ್ಯ ಮಾಸ್ಕೋನತ್ತ ತೆರಳುತ್ತಿದೆ ಎನ್ನಲಾಗಿದೆ.
ಮಾಸ್ಕೋದಲ್ಲಿ ರಷ್ಯಾದ ಮಿಲಿಟರಿಯು ತನ್ನ ಮೇಲೆ ಮಾರಣಾಂತಿಕ ದಾಳಿ ನಡೆಸಿದ ಕಾರಣಕ್ಕಾಗಿ ನಾವು ದಂಗೆಯನ್ನು ಆರಂಭಿಸಿದ್ದೇವೆ ಎಂದು ಪ್ರಿಗೋಜಿನ್ ಹೇಳಿದ್ದಾರೆ. ‘ನಮ್ಮ ದಾರಿಗೆ ಅಡ್ಡಬರುವ ಎಲ್ಲವನ್ನೂ ನಾಶಮಾಡುತ್ತವೆ ಎಂದಿರುವ ಅವರು “ಇದು ಮಿಲಿಟರಿ ದಂಗೆಯಲ್ಲ, ಆದರೆ ನ್ಯಾಯದ ಮೆರವಣಿಗೆ” ಎಂದಿದ್ದಾರೆ.
ಇನ್ನೊಂದೆಡೆ ಜನತೆ ತನ್ನ ಪರ ನಿಲ್ಲುವಂತೆ ಮನವಿ ಮಾಡಿರುವ ಪುಟಿನ್ ವ್ಯಾಗ್ನರ್ ದಾಳಿಯನ್ನು ಹಿಮ್ಮೆಟ್ಟಿಸಲು ನಮ್ಮ ಸೇನೆ ಸುಸಜ್ಜಿವಾಗಿದೆ ಎಂದು ಹೇಳಿಕೊಂಡಿದ್ದಾರೆ.
Russian Citizens in the Occupied-City of Rostov-on-Don have begun to Confront the Wagner PMC Personnel in the City, with Arguments beginning to Break-Out over their Action. pic.twitter.com/LRye2ZWMS5
— OSINTdefender (@sentdefender) June 24, 2023
ಚೆಚೆನ್ ನಾಯಕ ರಂಜಾನ್ ಕದಿರೊವ್ ಅವರು ಪುಟಿನ್ ಬೆಂಬಲಕ್ಕೆ ನಿಂತಿದ್ದು, ವ್ಯಾಗ್ನರ್ ಗುಂಪಿನ ವಿರುದ್ಧ ಹೋರಾಡಲು ಚೆಚೆನ್ ಸೈನಿಕರನ್ನು ಕಳುಹಿಸಿದ್ದಾರೆ ಎನ್ನಲಾಗಿದೆ.
ಉಕ್ರೇನ್ ಈ ಬೆಳವಣಿಗೆಯನ್ನು ಗ್ರಹಿಸುತ್ತಿದ್ದು, ಒಬ್ಬರೊಬ್ಬರು ಹಣ ಮತ್ತು ಅಧಿಕಾರಕ್ಕಾಗಿ ಪರಸ್ಪರ ಕಚ್ಚಾಡುತ್ತಿದ್ದಾರೆ ಎಂದು ಹೇಳಿದೆ.
ಯೆವ್ಗೆನಿ ಪ್ರಿಗೋಜಿನ್ ನೇತೃತ್ವದ ವ್ಯಾಗ್ನರ್ ಮರ್ಸೆನರಿ ಎಂಬ ಖಾಸಗಿ ಮಿಲಿಟರಿ ಪಡೆಯು 2014ರಲ್ಲಿ ಆರಂಭಗೊಂಡಿದ್ದು, ಪುಟಿನ್‌ಗೆ ಬೆಂಬಲವಾಗಿ ಕೆಲಸ ಮಾಡಿದೆ. ಇತ್ತೀಚಿಗಿನ ಉಕ್ರೇನ್ ವಿರುದ್ಧದ ಸಂದರ್ಭದಲ್ಲಿಯೂ ಮಹತ್ವದ ಪಾತ್ರವಹಿಸಿದೆ ಎನ್ನಲಾಗಿದೆ. ಆದರೆ ಸದ್ಯ ಅದು ಪುಟಿನ್ ಕೆಳಗಿಳಿಸಲು ಮುಂದಾಗಿದೆ.
ಇದನ್ನೂ ಓದಿ: ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಪ್ರತ್ಯೇಕ ಆ್ಯಪ್ ಸಿದ್ಧಗೊಂಡಿದೆ: ಡಿ.ಕೆ ಶಿವಕುಮಾರ್


