ವಿವಾದಾತ್ಮಕ ವಕ್ಫ್ (ತಿದ್ದುಪಡಿ) ಮಸೂದೆ, 2024 ಅನ್ನು ಕೇಂದ್ರ ಸರ್ಕಾರ ಬುಧವಾರ (ಏ.2) ಲೋಕಸಭೆಯಲ್ಲಿ ಮಂಡಿಸಿತು. ನಿರೀಕ್ಷೆಯಂತೆ ಮಸೂದೆ ಮಂಡನೆ ವೇಳೆಯೇ ಪ್ರತಿಪಕ್ಷಗಳ ಸದಸ್ಯರು ಘೋಷಣೆಗಳನ್ನು ಕೂಗಿ ವಿರೋಧ ವ್ಯಕ್ತಪಡಿಸಿದರು.
ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮತ್ತು ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟದ ನಡುವೆ ವಾಗ್ವಾದಕ್ಕೆ ಈ ಮಸೂದೆ ಕಾರಣವಾಗಿದೆ. ಪ್ರತಿಪಕ್ಷಗಳು ಮಸೂದೆಯನ್ನು ‘ಅಸಂವಿಧಾನಿಕ’ ಎಂದಿದೆ.
1995ರ ವಕ್ಫ್ ಕಾಯ್ದೆಗೆ ಹೊಸ ಮಸೂದೆ ತಿದ್ದುಪಡಿಗಳನ್ನು ತರಲಿದೆ. ಮಸೂದೆ ಮಂಡಿಸಿದ ಕೇಂದ್ರ ಸಂಸದೀಯ ವ್ಯವಹಾರ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು “ಸರ್ಕಾರ ಯಾವುದೇ ಧಾರ್ಮಿಕ ಸಂಸ್ಥೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ” ಎಂದು ಹೇಳಿದರು.
ಲೋಕಸಭೆಯಲ್ಲಿ ಮಸೂದೆ ಮೇಲೆ ಎಂಟು ಗಂಟೆಗಳ ಚರ್ಚೆ ನಡೆಯಲಿದೆ. ಬಳಿಕ ಮಸೂದೆ ಅಂಗೀಕಾರವಾದರೆ ಅದನ್ನು ಗುರುವಾರ (ಏ.3) ರಾಜ್ಯಸಭೆಯಲ್ಲಿ ಮಂಡಿಸುವ ನಿರೀಕ್ಷೆಯಿದೆ.
542 ಸದಸ್ಯ ಬಲದ ಲೋಕಸಭೆಯಲ್ಲಿ ಎನ್‌ಡಿಎ 293 ಸದಸ್ಯರನ್ನು ಹೊಂದಿದೆ. ಮಸೂದೆ ಅಂಗೀಕಾರಕ್ಕೆ 272 ಮತಗಳ ಅಗತ್ಯವಿದೆ. ಹಾಗಾಗಿ, ಎನ್‌ಡಿಎ ಲೋಕಸಭೆಯಲ್ಲಿ ಸ್ಪಷ್ಟ ಬಹುಮತ ಹೊಂದಿದೆ.
245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಎನ್‌ಡಿಎ 125 ಸದಸ್ಯರನ್ನು ಹೊಂದಿದೆ. ಒಂಬತ್ತು ಸ್ಥಾನಗಳು ಖಾಲಿ ಇದ್ದರೂ ಮಸೂದೆ ಅಂಗೀಕಾರಕ್ಕೆ ಬೇಕಾದ 118 ಮತಗಳು ಎನ್‌ಡಿಎ ಬಳಿ ಇದೆ.
ಕ್ಷೇತ್ರ ಪುನರ್‌ವಿಂಗಡನೆ: ಪ್ರಧಾನಿ ಮೋದಿ ಬಳಿಗೆ ಸರ್ವಪಕ್ಷ ನಿಯೋಗ ಕೊಂಡೊಯ್ಯಲಿರುವ ಎಂ.ಕೆ ಸ್ಟಾಲಿನ್


