Homeಕರ್ನಾಟಕWatch: ಕೋಮುವಾದ ತಡೆಗೆ ಪ್ರತಿಪಕ್ಷಗಳು ಜಾತಿ ಸಮಾವೇಶಗಳನ್ನು ನಡೆಸಬೇಕಿದೆ- ನವೀನ್‌ ಸೂರಿಂಜೆ

Watch: ಕೋಮುವಾದ ತಡೆಗೆ ಪ್ರತಿಪಕ್ಷಗಳು ಜಾತಿ ಸಮಾವೇಶಗಳನ್ನು ನಡೆಸಬೇಕಿದೆ- ನವೀನ್‌ ಸೂರಿಂಜೆ

- Advertisement -
- Advertisement -

“ಕೋಮುವಾದವನ್ನು ಮಣಿಸಬೇಕೆಂದರೆ ಜಾತಿಗಳು ಸಶಕ್ತಗೊಳ್ಳುವ ಅಗತ್ಯವಿದೆ. ಹಿಂದುಳಿದ ವರ್ಗಗಳ ಜಾತಿಗಳು ಪ್ರತ್ಯೇಕ ಪ್ರತ್ಯೇಕವಾಗಿ ಸಮಾವೇಶಗಳನ್ನು ಮಾಡಬೇಕು. ಪ್ರತ್ಯೇಕ ಅಸ್ತಿತ್ವಗಳನ್ನು ಕಂಡುಕೊಳ್ಳಬೇಕು. ಆಗ ಮಾತ್ರ ಈ ಹಿಂದುತ್ವ ರಾಜಕಾರಣಕ್ಕೆ ದೊಡ್ಡದಾದ ಪೆಟ್ಟು ಕೊಡಲು ಸಾಧ್ಯವಾಗುತ್ತದೆ ಎಂಬುದು ಬಹುತೇಕ ಚಿಂತಕರ ಅಭಿಪ್ರಾಯ” ಎನ್ನುತ್ತಾರೆ ಪತ್ರಕರ್ತ ನವೀನ್ ಸೂರಿಂಜೆ.

‘ನ್ಯಾಯಪಥ’ ವಾರಪತ್ರಿಕೆ ಹಾಗೂ ‘ನಾನುಗೌರಿ.ಕಾಂ’ಗೆ ಇತ್ತೀಚೆಗೆ ನೀಡಿರುವ ವಿಡಿಯೊ ಸಂದರ್ಶನದಲ್ಲಿ ಅವರು ಕರಾವಳಿಯ ಕೋಮು ರಾಜಕಾರಣದ ಕುರಿತು ವಿಸ್ತೃತವಾಗಿ ಮಾತನಾಡಿದ್ದಾರೆ. ಕರಾವಳಿಯ ಕೋಮುಸಂಘರ್ಷದ ಕುರಿತು ಅವರು ಇತ್ತೀಚೆಗೆ ಬರೆದಿರುವ ‘ನೇತ್ರಾವತಿಯಲ್ಲಿ ನೆತ್ತರು’ ಕೃತಿ ಕುರಿತ ಸ್ವಾರಸ್ಯಕರ ಸಂಗತಿಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

“ಜಾತಿ ಸಮಾವೇಶಗಳನ್ನು ಯಾವ ರೀತಿಯಲ್ಲಿ ಮಾಡಬೇಕು ಎಂಬುದನ್ನು ಬಿಜೆಪಿಯೇತರ ರಾಜಕೀಯ ಪಕ್ಷಗಳು ಯೋಚನೆ ಮಾಡಿಲ್ಲ. ಸಿಪಿಐಎಂ ಸಣ್ಣಮಟ್ಟದಲ್ಲಿ ಈ ಪ್ರಯತ್ನವನ್ನು ಮಾಡಿತು. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರನ್ನು ಕರೆಸಿ ಬಿಲ್ಲವ ಸಮಾವೇಶಗಳನ್ನು, ನಾರಾಯಣಗುರು ಸಮಾವೇಶಗಳನ್ನು ಏರ್ಪಡಿಸಿತು. ಅದು ಕೆಲವು ಪರಿಣಾಮಗಳನ್ನು ಬೀರಿತು” ಎಂದಿದ್ದಾರೆ.

“ಬಿಲ್ಲವರು ಈಗ ಸ್ವಲ್ಪ ಜಾಗೃತರಾಗಿದ್ದಾರೆ. ಯಾಕೆ ನಾವು ಮಾತ್ರ ಕೊಲೆಯಾಗುತ್ತಿದ್ದೇವೆ, ನಾವು ಮಾತ್ರ ಏಕೆ ಕೊಲ್ಲುತ್ತಿದ್ದೇವೆ, ಅಧಿಕಾರಕ್ಕೆ ಏರುವುದು ಮಾತ್ರ ಬ್ರಾಹ್ಮಣರು ಮತ್ತು ಬಂಟರು ಮಾತ್ರ ಏಕೆ ಎಂಬ ಪ್ರಶ್ನೆಯನ್ನು ಸಮುದಾಯ ಕೇಳಿಕೊಳ್ಳುತ್ತಿದೆ. ಪ್ರವೀಣ್‌ ಕೊಲೆಯ ಸಂದರ್ಭದಲ್ಲಿ- ನೋಡಿ ಮತ್ತೊಬ್ಬ ಬಿಲ್ಲವ ಸತ್ತ- ಎಂಬ ವಿಷಾದ ವ್ಯಕ್ತವಾಯಿತು. ಫಾಝಿಲ್ ಕೊಲೆ ಸಂಬಂಧ ಅರೆಸ್ಟ್‌ ಆಗಿರುವವರಲ್ಲಿ ಬಿಲ್ಲವ, ಬಂಟರನ್ನು ಬಿಟ್ಟರೆ ಬ್ರಾಹ್ಮಣರು, ಮೇಲ್ವರ್ಗಗಳು ಯಾಕಿಲ್ಲ ಎಂಬ ಪ್ರಶ್ನೆ ಮೂಡಿದೆ. ಇದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ” ಎಂದು ತಿಳಿಸಿದ್ದಾರೆ.

“ಜಾತಿ ಜಾಗೃತಿಯ ಸಮಾವೇಶಗಳು ಹೆಚ್ಚಾಗಿ ಆಗಬೇಕಿದೆ. ಕೆಳವರ್ಗಗಳು ಜಾತಿ ಸಮಾವೇಶಗಳನ್ನು ಮಾಡುವುದು ಜಾತಿವಾದ ಆಗುವುದಿಲ್ಲ. ಅದು ಸಮಾಜ ಸುಧಾರಣೆಯ ಭಾಗವಾಗುತ್ತದೆ. ಎಲ್ಲ ಕೆಳಸ್ತರದ ಜಾತಿಗಳ ಜಾಗೃತಿ ಸಮಾವೇಶಗಳನ್ನು ಮಾಡುವ ತುರ್ತು ಇದೆ. ಇದಕ್ಕೆ ಕಾಂಗ್ರೆಸ್‌, ಜೆಡಿಎಸ್‌ ಥರದ ಪಕ್ಷಗಳು ಸಹಾಯ ಮಾಡಬೇಕು” ಎಂದು ಆಶಿಸಿದ್ದಾರೆ.

ವಿಡಿಯೊ ಸಂದರ್ಶನದಲ್ಲಿ ಕೇಳಲಾಗಿರುವ ಪ್ರಶ್ನೆಗಳು

* ಚುನಾವಣೆ ಹತ್ತಿರವಾದಂತೆ ಕರಾವಳಿ ಮತ್ತೆ ಸುದ್ದಿಯಲ್ಲಿದೆ. ಹಿಂದೂ ಮುಸ್ಲಿಂ ಬೈನರಿಯಾಚೆಗೆ ಕರಾವಳಿ ಕರ್ನಾಟಕದ ರಾಜಕಾರಣ ಇಲ್ಲವೇ?

* ಸಂಘಪರಿವಾರದ ಅಜೆಂಡಾಗಳನ್ನು ಇಲ್ಲಿನ ಬಲಿಪಶುಗಳಿಗೆ ತಿಳಿಸುವ ಪ್ರಯತ್ನಗಳಾಗುತ್ತಿವೆಯೇ? ಅದು ಯಾವ ಮಟ್ಟಿಗಿನ ಯಶಸ್ಸು ಲಭಿಸಿದೆ.

* ಕೋಮುದ್ವೇಷ ಹಿನ್ನೆಲೆಯ ಕೊಲೆಗಳಲ್ಲಿ ಸರ್ಕಾರ ಪರಿಹಾರ ನೀಡುವಾಗ ತಾರತಮ್ಯ ನೀತಿ ಅನುಭವಿಸುತ್ತಿರುವ ಟೀಕೆಗಳು ಬರುತ್ತಿವೆ. ಇದನ್ನು ಹೇಗೆ ನೋಡುತ್ತೀರಿ?

* ಕರಾವಳಿ ಪೊಲೀಸರ ಮತೀಯವಾದಿ ಧೋರಣೆಯ ಕುರಿತು ಆತಂಕಗಳು ವ್ಯಕ್ತವಾಗುತ್ತಿವೆ. ‌ಇದರ ಕುರಿತು ನಿಮ್ಮ ಅನಿಸಿಕೆಗಳೇನು?

* ಕೋಮುವಾದದಾಚೆಗೆ ಕರಾವಳಿ ಜನತೆಯ ನಿಜವಾದ ಸಮಸ್ಯೆಗಳು ಯಾವುವು?

* ಕರಾವಳಿ ಭಾಗದ ಮುಸ್ಲಿಮರ ಆರ್ಥಿಕ ಸಬಲೀಕರಣ ಕೂಡ ಮುಸ್ಲಿಮೇತರರ ಅಸೂಹೆಗೆ ಕಾರಣವಾಗಿದೆಯೇ?

* ಕರಾವಳಿಯ ಸಮಸ್ಯೆಯಲ್ಲಿ ಸರ್ಕಾರ failure ಅಂತೂ ಇದ್ದೇ ಇದೆ. ಆದರೆ ನಾಗರಿಕ ಸಮಾಜ ಎಲ್ಲಿ ಎಡವುತ್ತಾ ಇದೆ?

* ಅಕಸ್ಮಾತ್, ಕೋಮು ಧ್ರುವೀಕರಣವನ್ನು ತಗ್ಗಿಸಿ, ದಕ್ಷಿಣ ಕನ್ನಡದಲ್ಲಿ ಸೌಹಾರ್ದತೆ ನೆಲೆಸಲು ತಯ್ಯಾರಾಗುವ ಪಕ್ಷ ಅಧಿಕಾರಕ್ಕೆ ಬಂದರೆ, ಅವರು ಯಾವ್ಯಾವ ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು?

* ನೀವು ಬರೆದ ‘ನೇತ್ರಾವತಿಯಲ್ಲಿ ನೆತ್ತರು’ ಕೃತಿ ಕರಾವಳಿಯ ಗಂಭೀರ ಸಮಸ್ಯೆಯ ಕುರಿತು ಮಾತನಾಡಿದೆ. ಓದುಗರಿಂದ ಪ್ರತಿಕ್ರಿಯೆ ಹೇಗಿದೆ?

* ‘ನೇತ್ರಾವತಿಯಲ್ಲಿ ನೆತ್ತರು’ ಕೃತಿ ಮುಸ್ಲಿಂ ಕೋಮುವಾದದ ಕುರಿತು ಚರ್ಚೆ ನಡೆಸಿಲ್ಲ ಎಂಬ ಆಕ್ಷೇಪಗಳಿವೆಯಲ್ಲ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಈ ದೇಶದಿಂದ ಜಾತಿವಾದ ತೊಲಗಲಿ ಎಂದು ಕರೆ ಕೊಡುವ ಬದಲು, ಜಾತಿಯ ವಿಷ ಬೀಜ ಬಿತ್ತಬೇಡಿ. ಜಾತಿವಾದ ಹೋಗುವವರೆಗೂ ಈ ದೇಶ ಉದ್ಧಾರ ಆಗಲ್ಲ

LEAVE A REPLY

Please enter your comment!
Please enter your name here

- Advertisment -

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...