Homeಕರ್ನಾಟಕಮುಸ್ಲಿಮರೆ ಜಾಸ್ತಿ ನಖರಾ ಮಾಡಿದರೆ ಉಫ್‌ ಅಂತ ಊದಿಬಿಡ್ತೇವೆ: ಬಹಿರಂಗ ಕೋಮು ಪ್ರಚೋದಾನಕಾರಿ ಭಾಷಣ ಮಾಡಿದ...

ಮುಸ್ಲಿಮರೆ ಜಾಸ್ತಿ ನಖರಾ ಮಾಡಿದರೆ ಉಫ್‌ ಅಂತ ಊದಿಬಿಡ್ತೇವೆ: ಬಹಿರಂಗ ಕೋಮು ಪ್ರಚೋದಾನಕಾರಿ ಭಾಷಣ ಮಾಡಿದ BJP ಶಾಸಕ ಸೋಮಶೇಖರ್‌ರೆಡ್ಡಿ

ನಿಮಗೆ ಪಂಕ್ಚರ್‌ ಹಾಕುವವರಿಗೆ ಏನೂ ಗೊತ್ತಿಲ್ಲ. ಯಾರದೋ ಮಾತು ಕೇಳಿಕೊಂಡು ಪ್ರತಿಭಟನೆ ಮಾಡುತ್ತಿದ್ದೀರಿ. ನಾವು ಒಂದು ಕೂಗು ಕೊಟ್ರೆ 95% ಮಂದಿ ಬರ್‍ತಾರೆ. ನಾವು ಉಫ್‌ ಅಂತ ಊದಿದರೆ ನೀವು ಹಾರಿಹೋಗ್ತೀರಿ

- Advertisement -
- Advertisement -

ಬಳ್ಳಾರಿಯಲ್ಲಿಂದು ಬಿಜೆಪಿ ಹಮ್ಮಿಕೊಂಡಿದ್ದ ಸಿಎಎ ಪರವಾಗಿ ಜನಜಾಗೃತಿ ಕಾರ್ಯಕ್ರಮದಲ್ಲಿ BJP ಶಾಸಕ ಸೋಮಶೇಖರ್‌ರೆಡ್ಡಿ ಭಾರತದ ಮುಸ್ಲಿಮರ ವಿರುದ್ಧ ಎಗ್ಗಿಲ್ಲದೇ ನಾಲಿಗೆ ಹರಿಯಬಿಟ್ಟಿದ್ದು ಮನಬಂದಂತೆ ಕೋಮು ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ. ನೇರವಾಗಿ ನೀವು ಇರೋದೋ 17% ಹಾಗಾಗಿ ನಾವು ಹೇಳಿದಂತೆ ಕೇಳಿಕೊಂಡಿರಿ. ಇಲ್ಲಿದಿದ್ದರೆ ನಿಮ್ಮನ್ನು ಉಳಿಸೊಲ್ಲ ಅಂತ ಅವಾಜ್‌ ಹಾಕಿದ್ದಾರೆ.

ಮಚ್ಚು ಖಡ್ಗ ಹಿಡಿದು ರಣರಂಗ ಮಾಡ್ತೀವಿ ಅಂತ ಹೇಳಿರುವ ಅವರ ಭಾಷಣದ ಪೂರ್ಣ ವಿವರ ಈ ಕೆಳಗಿನಂತಿದೆ ಓದಿ.

ಹೋರಾಟ ಮಾಡುತ್ತಿರುವವರಿಗೆ ಒಂದು ಎಚ್ಚರಿಕೆ ಎಂದರೆ, ಫೈವ್‌ ಪರ್ಸೆಂಟ್‌ ಮಾತ್ರ. ಜಾಸ್ತಿ ನಖರಾ ಮಾಡಿದರೆ, 100% ಜನ ಬಂದ್ರೆ ನಿಮ್ಮ ಪರಿಸ್ಥಿತಿ ಎನಾಗುತ್ತದೆ ಎಂಬುದು ನಿಮಗೆ ಗೊತ್ತಿರಲಿ

ಕಾಂಗ್ರೆಸ್‌ ಬೆವುಕೂಫ್‌ಗಳನ್ನು ನಂಬಿಕೊಂಡು ಬೀದಿಗೆ ಬರ್ತಿರಾ ನೀವು? ನಾವು 80% ಇರೋರು. ನೀವು ಬರೀ 17% ಇರೋದು. ನಾವು ತಿರುಗಿಬಿದ್ರೆ ನಿಮ್‌ ಪರಿಸ್ಥಿತಿ ಎನಾಗುತ್ತೆ ಗೊತ್ತಾ? ಎಚ್ಚರವಿರಲಿ, ಮೈಮೇಲೆ ಎಚ್ಚರವಿಟ್ಟುಕೊಂಡು ನಮ್‌ ದೇಶದಲ್ಲಿರಿ…

ಇದು ನನ್ ದೇಶ. ನಮ್ಮೆಲ್ಲರ ದೇಶ. ನೀವು ನಮ್ಮ ದೇಶದಲ್ಲಿರಬೇಕಾದರೆ ಆಸ್ಟ್ರೇಲಿಯಾ ಪ್ರಧಾನಿ ಹೇಳಿದಂತೆ ನಮ್ಮ ಪದ್ಧತಿ ಪ್ರಕಾರ ಇರಬೇಕು. ಹೆಚ್ಚಿಗೆ ನಖರಾ ಮಾಡಿದರೆ ನಿಮ್ ದೇಶಕ್ಕೆ ಕಳಿಸಿಕೊಡಬೇಕಾಗುತ್ತದೆ. ಆ ಪರಿಸ್ಥಿತಿ ಬರದಂತೆ ನೋಡಿಕೊಳ್ಳಿ

ನಾವು ಹಿಂದೂಗಳು ಶಾಂತಿಯಿಂದ ಇದ್ದೀವಿ. ನಮ್ಮ ಶಾಂತಿನ ನೀವು ಪರೀಕ್ಷೆ ಮಾಡೋದಾದರೆ ಒಂದು ಸಲ, ಎರಡು ಸಾರಿ. ನಾವು ತಿರುಗಿಬಿದ್ದರೆ ಮೂರನೇ ಸಾರಿ ಉಳಿಯೊಲ್ಲ ನೀವು.

ನಮ್ಮ ದೇಶದ, ಸರ್ಕಾರದ ವಾಹನಗಳು ಮತ್ತು ಪೊಲೀಸರ ಮೇಲೆ ಹಲ್ಲೆ ಮಾಡಿದರೆ ಪರಿಣಾಮ ನೆಟ್ಟಗಿರುವುದಿಲ್ಲ. ಪಂಕ್ಚರ್‌ ಹಾಕುವವರು ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ನಮ್ಮ ಸೌತ್‌ ಎಂಪಿ ತೇಜಸ್ವಿ ಸೂರ್ಯ ಹೇಳಿದ್ದರು. ಅದು ನಿಜ. ಏಕೆಂದರೆ ನಿಮಗೆ ಪಂಕ್ಚರ್‌ ಹಾಕುವವರಿಗೆ ಏನೂ ಗೊತ್ತಿಲ್ಲ. ಯಾರದೋ ಮಾತು ಕೇಳಿಕೊಂಡು ಪ್ರತಿಭಟನೆ ಮಾಡುತ್ತಿದ್ದೀರಿ. ನಾವು ಒಂದು ಕೂಗು ಕೊಟ್ರೆ 95% ಮಂದಿ ಬರ್‍ತಾರೆ. ನಾವು ಉಫ್‌ ಅಂತ ಊದಿದರೆ ನೀವು ಹಾರಿಹೋಗ್ತೀರಿ..

ಅಣ್ಣ ತಮ್ಮಂದಿರು ಅಣ್ಣತಮ್ಮಂದಿರ ಥರ ಇರಬೇಕು. ನೀವು ಶತ್ರುಗಳ ಥರ ಆಡಿದರೆ ನಾವು ಶತ್ರುಗಳಾಗುತ್ತವೆ. ಒಬ್ಬೊಬ್ಬ ಹಿಂದೂ ಒಬ್ಬೊಬ್ಬ ಶಿವಾಜಿ ಥರ ಆಗಿ ಮಚ್ಚು ಹಿಡಿದುಕೊಂಡರೆ, ಬಳ್ಳಾರಿ ದುರ್ಗಮ್ಮ ದರ್ಶನ ಮಾಡಿಕೊಂಡು ಖಡ್ಗ ಹಿಡಿದುಕೊಂಡರೆ ರಣರಂಗ ಸೃಷ್ಟಿಯಾಗುತ್ತೆ.

ಸಿಎಎ ಮತ್ತು ಎನ್‌ಆರ್‌ಸಿ ನಮ್ಮ ಆಕ್ಟ್‌ಗಳು. ಮೋದಿ ಸಾಹೇಬರು, ಅಮಿತ್‌ ಶಾ ಮಾಡಿರುವ ತಂದಿರುವ ಆಕ್ಟ್‌ಗಳು. ಇದಕ್ಕೆ ಯಾರಾದರೂ ವಿರುದ್ಧವಾಗಿ ನಡೆದುಕೊಂಡರೆ ಚೆನ್ನಾಗಿರೋಲ್ಲ.

ಇದಿಷ್ಟು ಒರ್ವ ಜನಪ್ರತಿನಿಧಿ ಮಾಡಿರುವ ಭಾಷಣವಾಗಿದೆ. ಈ ವಿಷಯಕ್ಕೆ ಇವರ ಮೇಲೆ ದೂರು ದಾಖಲಿಸುವ ಸಾಧ್ಯತೆಯೂ ಸಹ ಇದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ಯುದ್ದ ಪ್ರಾರಂಭವಾಗುವುದಾದರೆ ಎದುರಲ್ಲಿ ಇವನೇ ನಿಲ್ಲಲಿ.
    ಮುಗ್ದ ಬಡವರ ಮನೆಯ ಮಕ್ಕಳನ್ನು ನಿಲ್ಲಿಸಿ ಇವನು ಅಧಿಕಾರ ಪಡೆಯುವುದು ಬೇಡ.
    ಬಳ್ಳಾರಿಯನ್ನು ಲೂಟಿಮಾಡಿದ ಇವನ ಪರಂಪರೆ ಎಷ್ಟು ಚೆನ್ನಾಗಿರಬಹುದು

  2. ಹಿಂದೂ 19% ಮುಲನಿವಾಸಿಗಲು, 8% ………. ಆದಿವಾಸಿಗಲು ಮತ್ತು ದ್ರಾವಿಡ ರು ……. ನೆನಪಿಡಿ ……….. ಯಾವಾಗ ಸತ್ಯ …….. …. (ಇತಿಹಾಸ) ಹೋರಾಗ್ ….. ಬರುತೆ ……….. ಅಗಾ ??????????????????????????????????????????

  3. ಪ್ರಜಾಪ್ರಭುತ್ವ ಅಂದ್ರೆ ಏನು ಅಂತ ಗೊತ್ತಿದಿಯಾ ಮಿಸ್ಟರ್ ಸೋಮಶೇಖರ ರೆಡ್ಡಿ…
    ಬಿಜೆಪಿ ಶಾಸಕರು ಎಂಥ ವಿಕೃತಿ ಮನೋಸ್ಥಿತಿಯವರು ಅನ್ನೋದಕ್ಕೆ ಇದೊಂದು ನಿದರ್ಶನ…. ಯಾರು ದೇಶದ ಭ್ರಾತೃತ್ವಕ್ಕೆ , ಪ್ರಜಾಪ್ರಭುತ್ವಕ್ಕೆ, ಗೌರವಿಸಲ್ವೋ ಅವರನ್ನು ದೇಶ ದ್ರೋಹಿ ಅಂತ ತೀರ್ಮಾನಿಸಬೇಕು… ಆದರೆ ಭಾಜಪಾ ಶಾಸಕರೇ ಇಂಥ ಅಸಭ್ಯ, ಹೇಳಿಕೆಗಳ್ನ ಕೊಟ್ಕೂಂಡು ನಿರ್ಭಯವಾಗಿ ಸಮರ್ಥಿಸಿಕೊಳ್ಳುತ್ತಿರುವುದು ಇದನ್ನು ಪಕ್ಷ ಗಣನೆಗೆ ತೆಗೆದುಕೊಳ್ಳದಿರುವುದನ್ನ ನೋಡಿದರೆ ಪಕ್ಷದ ಹಿನ್ನೋಟ, ಅಜೆಂಡಾ, ಧ್ಯೇಯ ಒಂದೇ ಎಂದೆನಿಸುತ್ತಿದೆ ಸಹಜವಾಗಿ..

LEAVE A REPLY

Please enter your comment!
Please enter your name here

- Advertisment -

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...