ಬಿಡದಿಯಲ್ಲಿರುವ ಟೊಯೊಟಾ ಕಿರ್ಲೋಸ್ಕರ್ ಮೋಟರ್ ಆಡಳಿಯ ಮಂಡಳಿಯ ಅನ್ಯಾಯದ ವಿರುದ್ದ ಅಲ್ಲಿನ ಕಾರ್ಮಿಕರು ನಡೆಸುತ್ತಿರುವ ಹೋರಾಟ 84 ನೇ ದಿನಕ್ಕೆ ಕಾಲಿಟ್ಟಿದೆ. ಇಂದು (ಭಾನುವಾರ) ಕಾರ್ಮಿಕರು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ, “ನಿಮ್ಮ ನ್ಯಾಯಯುತ ಬೇಡಿಕೆ ಪರವಾಗಿ ಕಾಂಗ್ರೆಸ್ ಪಕ್ಷ ಇರುತ್ತದೆ” ಎಂದು ಪ್ರತಿಭಟನಾ ನಿರತ ಕಾರ್ಮಿಕರಿಗೆ ಭರವರಸೆ ನೀಡಿದರು.
ಪ್ರತಿಭಟನಾ ನಿರತ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, “ಸದನದ ಶೂನ್ಯ ವೇಳೆಯಲ್ಲಿ ನಿಮ್ಮ ವಿಚಾರಗಳನ್ನು ಪ್ರಸ್ತಾಪ ಮಾಡಿ, ಸರ್ಕಾರದ ಗಮನ ಸೆಳೆಯುತ್ತೇನೆ. ಈ ಮೂಲಕ ಮುಖ್ಯಮಂತ್ರಿ, ಕೈಗಾರಿಕಾ ಸಚಿವ, ಕಾರ್ಮಿಕ ಸಚಿವರ ಮೇಲೆ ಗರಿಷ್ಠ ಮಟ್ಟದ ಒತ್ತಡ ಹಾಕಿ, ವಿರೋಧ ಪಕ್ಷದ ಕೆಲಸವನ್ನು ಮಾಡುತ್ತೇನೆ” ಎಂದು ಹೇಳಿದರು.
ಕಾರ್ಮಿಕರೇನು ಶ್ರೀಮಂತರಲ್ಲ, ಅವರೆಲ್ಲರೂ ಎಣ್ಣೆಬತ್ತಿಗೆ ನೇರ ಇರುವವರು ಎಂದು ಕಾರ್ಮಿಕರ ಸಚಿವರಿಗೆ ಈಗಾಗಲೆ ಹೇಳಿದ್ದೇನೆ ಎಂದು ಹೇಳಿದ ಸಿದ್ದರಾಮಯ್ಯ, “ಜಪಾನ್ ಕಂಪೆನಿಗೆ ನಮ್ಮ ಭೂಮಿ, ನೀರು, ವಿದ್ಯುತ್ ಕೊಟ್ಟಿದ್ದೇವೆ. ಕಾರ್ಮಿಕರನ್ನು ನ್ಯಾಯಯುತವಾಗಿ ನಡೆಸಿಕೊಳ್ಳಬೇಕಿರುವುದು ಅವರ ಜವಾಬ್ದಾರಿ. ಬೇರೆ ದೇಶದವರು ನಮ್ಮಲ್ಲಿ ಬಂಡವಾಳ ಹೂಡುವುದು ತಪ್ಪಲ್ಲ. ಆದರೆ ಅವರು ನಮ್ಮ ದೇಶದ ಕಾನೂನಿನಂತೆ ಕೆಲಸ ನಿರ್ವಹಿಸಬೇಕು” ಎಂದ ಹೇಳಿದರು.
ವಿಡಿಯೋ ನೋಡಿ►►
ಇದನ್ನೂ ಓದಿ: ವಿದೇಶಿ ಕಂಪನಿಗಳು ಈ ನೆಲದ ಕಾನೂನನ್ನು ಗೌರವಿಸಲಿ: ಟೊಯೊಟಾ ಕಾರ್ಮಿಕರ ಹೊರಾಟದಲ್ಲಿ ಸಿದ್ದರಾಮಯ್ಯ


