ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ಕಳೆದ 2 ತಿಂಗಳಿನಿಂದ ಲಕ್ಷಾಂತರ ರೈತರು ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಪ್ರತಿಭಟನೆಗೆ ಇತ್ತೀಚೆಗೆ ಜಾಗತಿಕ ಮನ್ನಣೆ ಸಿಕ್ಕಿತ್ತು. ಇದರ ಬೆನ್ನಲ್ಲೇ ತಮಿಳು ನಿರ್ದೇಶಕ ಪ. ರಂಜಿತ್, “ರೈತರನ್ನು ಟೀಕಿಸುತ್ತಿರುವವರ ಬಗ್ಗೆ ಸೂಕ್ಷ್ಮವಾಗಿ ಯೋಚಿಸಬೇಕು” ಎಂದು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ. ರಂಜಿತ್, “ನಾವು ರೈತರನ್ನು ಬೆಂಬಲಿಸಬೇಕು. ಏಕೆಂದರೆ, ಕಳೆದ ಕೆಲವು ತಿಂಗಳುಗಳಿಂದ ರೈತರು ಹೋರಾಡುತ್ತಿರುವ ಕಾರಣಕ್ಕಾಗಿ ನಾವು ರೈತರನ್ನು ಬೆಂಬಲಿಸಬೇಕು. ರೈತರನ್ನು ಮತ್ತು ಅವರ ಹೋರಾಟವನ್ನು ಬೆಂಬಲಿಸುವವರನ್ನು ವಿರೋಧಿಸುತ್ತಿರುವವರು, ಕನಿಷ್ಟ ಬೆಂಬಲ ಬೆಲೆಯ ಮೇಲೆ ಅವಲಂಬಿತವಾಗಿರುವ ರೈತರ ಅಸ್ತಿತ್ವದ ಬಗ್ಗೆ ಅರಿವು ಪಡೆದುಕೊಳ್ಳಲಿ. #FarmersBill #StandWithFarmers” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ರಿಹಾನ್ನಾಳ ಕೃಪೆ: ಮೋದಿ ಸರ್ಕಾರದ ಅಹಂ, ಭ್ರಮೆ, ಭಯ ಬಯಲಿಗೆ! -ರಾಮಚಂದ್ರ ಗುಹಾ
We, being the responsible people, have to think about who questions and criticise farmer's protest &it's supporters. We have seen some flow of criticism against supporters of farmer's protest which shown their stand for the survival of farmers!#WeNeedMSP
— pa.ranjith (@beemji) February 5, 2021
ಇದನ್ನೂ ಓದಿ: ಮುಂದಿನ ರಿಹಾನ್ನಾ ವಿಡಿಯೋದಲ್ಲಿ ನೀವಿರುತ್ತೀರಿ: ಸ್ವರ, ತಾಪ್ಸಿ ಶ್ಲಾಘಿಸಿದ ಅಭಯ್ ಡಿಯೋಲ್
“ರೈತರನ್ನು ಮತ್ತು ರೈತ ಬೆಂಬಲಿಗರನ್ನು ಪ್ರಶ್ನಿಸುತ್ತಿರುವ ಮತ್ತು ಟೀಕಿಸುತ್ತಿರುವವರ ಬಗ್ಗೆ ಜವಾಬ್ದಾರಿಯುತ ನಾಗರೀಕರಾದ ನಾವು ಸೂಕ್ಷ್ಮವಾಗಿ ಯೋಚಿಸಬೇಕು. ತಮ್ಮ ಅಸ್ತಿತ್ವಕ್ಕಾಗಿ ಹೋರಾಡುತ್ತಿರುವ ರೈತರನ್ನು ಬೆಂಬಲಿಸುವವರ ವಿರುದ್ಧ ಕೆಲವು ಟೀಕೆಗಳು ಬರುತ್ತಿರುವುದನ್ನು ನಾವು ಕಾಣಬಹುದು. #WeNeedMSP” ಎಂದು ಬರೆದುಕೊಂಡಿದ್ದಾರೆ.
ಇತ್ತೀಚೆಗೆ ಜಾಗತಿಕ ಐಕಾನ್ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್ ಮತ್ತು ಪಾಪ್ ಸಿಂಗರ್ ರಿಹಾನ್ನಾ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದರು. ಆದರೆ ಇವರ ವಿರುದ್ಧ ಭಾರತದ ಕೆಲವು ಸೆಲಬ್ರೆಟಿಗಳು ಸೇರಿದಂತೆ ಸರ್ಕಾರವೂ ಟೀಕೆ ಮಾಡಿತ್ತು.
ಇದನ್ನೂ ಓದಿ: ವಿಧಾನಸಭಾ ಅಧಿವೇಶನದ ಫೇಸ್‌ಬುಕ್ ಲೈವ್ ನೋಡಿ


