ಭಾರತ ಸಂವಿಧಾನದ ವಿರೋಧಿ, ಆರೆಸ್ಸೆಸ್ ನಾಯಕ ಕೆ.ಎನ್. ಗೋವಿಂದಾಚಾರ್ಯ ಅವರ ‘ಭಾರತ ವಿಕಾಸ ಸಂಘಂ’ ಆಯೋಜಿಸುವ 9 ದಿನಗಳ ‘7ನೇ ಭಾರತೀಯ ಸಂಸ್ಕೃತಿ ಉತ್ಸವ’ ಕಾರ್ಯಕ್ರಮದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಸಚಿವರು, ಶಾಸಕರು ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ. 2016ರಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಗೋಂವಿದಾಚಾರ್ಯ ‘ಭಾರತೀಯತೆಯನ್ನು ಪ್ರತಿಬಿಂಬಿಸಲು ನಾವು ಸಂವಿಧಾನವನ್ನು ಪುನಃ ಬರೆಯುತ್ತೇವೆ’ ಎಂದು ಹೇಳಿದ್ದರು.
ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್, ಆರೆಸ್ಸೆಸ್ ನಾಯಕ ದತ್ತಾತ್ರೆಯ ಹೊಸಬಾಳೆ, ವೀರೇಂದ್ರ ಹೆಗಡೆ, ಯಡಿಯೂರಪ್ಪ, ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ವಿಶ್ವೇಶ್ವರ ಕಾಗೇರಿ, ಯತ್ನಾಲ್, ಸುಧಾ ಮೂರ್ತಿ, ವಿಜಯೇಂದ್ರ, ಬಾಬಾ ರಾಮದೇವ್ ಸೇರಿದಂತೆ ಹಲವಾರು ಬಿಜೆಪಿ ಮತ್ತು ಸಂಘಪರಿವಾರದ ನಾಯಕರು ಇದರಲ್ಲಿ ಭಾಗವಹಿಸಲಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಆಶ್ಚರ್ಯವೆಂದರೆ, ಇದೇ ಆರೆಸ್ಸೆಸ್ ಪರ ವ್ಯಕ್ತಿಗಳು ನಡೆಸುವ ಕಾರ್ಯಕ್ರಮದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರದ ಹಲವಾರು ಸಚಿವರು, ಶಾಸಕರು ಹಾಗೂ ಪಕ್ಷದ ಸಂಸದರು ಮತ್ತು ನಾಯಕರು ಭಾಗವಹಿಸಲಿದ್ದಾರೆ ಎಂದು ಆಮಂತ್ರಣ ಪತ್ರಿಕೆಯಲ್ಲಿ ಹೇಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರು ಇದ್ದರೂ, ಈ ಬಗ್ಗೆ ಇಬ್ಬರೂ ಈಗಾಗಲೆ ಸ್ಪಷ್ಟೀಕರಣ ಕೊಟ್ಟಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ.
ಅದಾಗ್ಯೂ, ರಾಜ್ಯ ಸರ್ಕಾರ ಸಚಿವರುಗಳಾದ ಡಾ. ಶರಣ್ ಪ್ರಕಾಶ್ ಪಾಟೀಲ್, ಶರಣಬಸಪ್ಪ ಪಾಟೀಲ್ ದಾಸನಪುರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಆಮಂತ್ರಣ ಪತ್ರಿಕೆ ಹೇಳಿದೆ. ಜೊತೆಗೆ ಸಚಿವರುಗಳು ಕೂಡಾ ಈ ಬಗ್ಗೆ ಯಾವುದೇ ಸ್ಪಷ್ಟಿಕರಣವಾಗಲಿ, ನಿರಾಕರಣೆಯಾಗಲಿ ಮಾಡಿಲ್ಲ.
ಇಷ್ಟೆ ಅಲ್ಲದೆ, ಕಲಬುರಗಿಯ ಕಾಂಗ್ರೆಸ್ ಸಂಸದ ರಾಧಾಕೃಷ್ಣ ದೊಡ್ಡಮನಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯನಾಗಿದ್ದು, ರಾಜ್ಯದ ಸಚಿವ ಪ್ರಿಯಾಂಕ್ ಖರ್ಗೆ ಅವರ ಸಹೋದರಿಯ ಪತಿಯಾಗಿದ್ದಾರೆ. ಜೊತೆಗೆ, ಆಮಂತ್ರಣ ಪತ್ರಿಕೆಯಲ್ಲಿ ಬಳ್ಳಾರಿಯ ಕಾಂಗ್ರಸ್ ಸಂಸದ ಇ.ತುಕಾರಾಮ, ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಅವರ ಮಗ ಜೇವರ್ಗಿಯ ಕಾಂಗ್ರೆಸ್ ಶಾಸಕ ಅಜಯ್ ಸಿಂಗ್ ಮತ್ತು ಕಾಂಗ್ರೆಸ್ ನಾಯಕ ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಅವರ ಹೆಸರು ಆಮಂತ್ರಣ ಪತ್ರಿಕೆಯಲ್ಲಿ ಕಾಣಿಸಿಕೊಂಡಿದೆ.
ಇಷ್ಟೆ ಅಲ್ಲದೆ, ಆಮಂತ್ರಣ ಪತ್ರಿಕೆಯಲ್ಲಿ ಹಿರಿಯ ಸಾಹಿತಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಇತ್ತಿಚೆಗೆ ಆಯ್ಕೆಯಾದ ಗೊ.ರು. ಚೆನ್ನಬಸಪ್ಪ ಅವರ ಹೆಸರು ಕೂಡಾ ಕಾಣಿಸಿಕೊಂಡಿದೆ. ಕಾಂಗ್ರೆಸ್ ಸರ್ಕಾರವಿರುವ ತೆಲಂಗಾಣದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ADGP) ಆಗಿದ್ದ, ಪ್ರಸ್ತುತ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿರುವ ವಿಶ್ವನಾಥ್ ಚನ್ನಪ್ಪ ಸಜ್ಜನರ್ ಕೂಡಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಜೊತೆಗೆ ಬೀದರ್‌ನ ಶಾಹಿನ್ ಸಂಸ್ಥೆ ಮುಖ್ಯಸ್ಥ ಅಬ್ದುಲ್ ಖಾದಿರ್, ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಹಾಗೂ ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್ ಕೂಡಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಆರೆಸ್ಸೆಸ್ ಪರ ಸಂಘಟನೆಯಾದ ಭಾರತ ವಿಕಾಸ್ ಸಂಘಂ ಈ ಕಾರ್ಯಕ್ರಮವನ್ನು ಕಲಬುರ್ಗಿಯಲ್ಲಿ ಆಯೋಜಿಸಿದ್ದು 2025ರ ಜನವರಿ 29ರಿಂದ ಪ್ರಾರಂಭವಾಗಿ ಫೆಬ್ರವರಿ 6ರ ವರೆಗೆ ನಡೆಯಲಿದೆ. ಕಾರ್ಯಕ್ರಮಕ್ಕೆ ಶ್ರೀ ಕೊಟ್ಟಾಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಮತ್ತು ವಿಕಾಸ್ ಅಕಾಡೆಮಿ ಸಹಯೋಗ ನೀಡಲಿದೆ. ಕಾರ್ಯಕ್ರಮ ಆಯೋಜಿಸುವ ಹೆಚ್ಚಿನ ಎಲ್ಲಾ ಸಂಘಟಕರು ಆರೆಸ್ಸೆಸ್‌ನ ನಾಯಕರುಗಳಾಗಿದ್ದಾರೆ.
ಅಡ್ವಾನಿ ಜೊತೆಗೆ ಸೇರಿ ಬಾಬರಿ ಮಸೀದಿ ಧ್ವಂಸ ನಡೆಸಲು ನೀಲ ನಕ್ಷೆ ರಚಿಸಿದವರಲ್ಲಿ ಕೆ.ಎನ್. ಗೋವಿಂದಾಚಾರ್ಯ ಅವರು ಕೂಡಾ ಒಬ್ಬರಾಗಿದ್ದಾರೆ. 2016ರಲ್ಲಿ ದಿ ವೈರ್‌ಗೆ ನೀಡಿದ್ದ ಸಂದರ್ಶದನಲ್ಲಿ ಅವರು ಭಾರತ ಸಂವಿಧಾನದಲ್ಲಿ ಭಾರತೀಯತೆ ಇಲ್ಲ, ಹಾಗಾಗಿ ನಾವು ಹೊಸದಾಗಿ ಸಂವಿಧಾನ ಬರೆಯಲಿದ್ದೇವೆ ಎಂದು ಹೇಳಿದ್ದರು. ಸಂವಿಧಾನವನ್ನು ಪುನಃ ಬರೆಯುತ್ತೇವೆ
RSS ideologue Govindacharya: ‘We will rewrite the constitution to reflect Bharatiyata’ https://t.co/ZUcHRR7Qom pic.twitter.com/QL99JakpQj
— The Wire (@thewire_in) June 20, 2016
ಭಾರತ ವಿಕಾಸ ಸಂಘಂನ ಸ್ಥಾಪಕರಾಗಿರುವ ಗೋಂವಿದಾಚಾರ್ಯ, ಸನಾತನ ಹಿಂದೂ ಪ್ರತಿಷ್ಠಾನ, ರಾಷ್ಟ್ರೀಯ ಸ್ವಾಭಿಮಾನ್ ಆಂದೋಲನ ಸೇರಿದಂತೆ ಔಪಚಾರಿಕವಾಗಿ ಆರೆಸ್ಸೆಸ್‌ನ ಪ್ರಚಾರಕ ಕೂಡಾ ಆಗಿದ್ದಾರೆ. ಬಾಬರಿ ಮಸೀದಿ ಒಡೆಯುವ ಕೃತ್ಯ ಎಸಗಿದ ರಾಮ ಜನ್ಮ ಭೂಮಿ ಆಂದೋಲನ, ಭಾರತೀಯ ಸಂಸ್ಕೃತಿ ಉತ್ಸವ, ಸ್ವದೇಶಿ ಜಾಗರಣ ಮಂಚ್ ಮುಂತಾದ ಹಲವಾರು ಕಾರ್ಯಕ್ರಮಗನ್ನು ಮಾಡುತ್ತಲೆ ಬಂದಿದ್ದಾರೆ. ಅಲ್ಲದೆ, ಶಾಶ್ವತ ದೇವಾಲಯ, ಸನಾತನ ಭಾವ ಜಾಗೃತಿ, ITIHASA ಮತ್ತು ಶಾಶ್ವತ ಭಾರತಂನಂತಹ ಹಲವಾರು ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಇದನ್ನೂ ಓದಿ: ತೆಲಂಗಾಣ| ಮರ್ಯಾದೆಗೇಡು ಹತ್ಯೆ; ಅಂತರ್ಜಾತಿ ವಿವಾವಾಗಿದ್ದ ಮಹಿಳಾ ಪೇದೆಯನ್ನು ಹತ್ಯೆಗೈದ ಸಹೋದರ
ತೆಲಂಗಾಣ| ಮರ್ಯಾದೆಗೇಡು ಹತ್ಯೆ; ಅಂತರ್ಜಾತಿ ವಿವಾವಾಗಿದ್ದ ಮಹಿಳಾ ಪೇದೆಯನ್ನು ಹತ್ಯೆಗೈದ ಸಹೋದರ


