ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮುನ್ನವೇ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಮೈತ್ರಿಕೂಟವು ಮೂರು ಪಕ್ಷಗಳ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ಬಿಡುಗಡೆ ಮಾಡಿವೆ.
“ಜಾತ್ಯತೀತ ಮೌಲ್ಯಗಳನ್ನು” ಎತ್ತಿಹಿಡಿಯುವ ಭರವಸೆಯೊಂದಿಗೆ ಸಂವಿಧಾನದ ಆಶಯಗಳಿಗನುಗುಣವಾಗ ಕೆಲಸ ಮಾಡುವುದಾಗಿ ಘೋಷಿಸಿವೆ. ಮುಖ್ಯವಾಗಿ ರೈತರಿಗೆ
ಬರ ಮತ್ತು ಪ್ರವಾಹದಿಂದ ಸಂತ್ರಸ್ತ ರೈತರಿಗೆ ತಕ್ಷಣದ ಪರಿಹಾರ ಕೊಡುವುದು
ರೈತರಿಗೆ ತಕ್ಷಣದ ನೆರವು ಮತ್ತು ಸಾಲ ಮನ್ನಾ ಭರವಸೆ
ಬೆಳೆ ಕಳೆದುಕೊಂಡ ರೈತರಿಗೆ ತಕ್ಷಣದ ಪರಿಹಾರವನ್ನು ಖಚಿತಪಡಿಸಿಕೊಳ್ಳಲು ಬೆಳೆ ವಿಮಾ ಯೋಜನೆಯನ್ನು ಪರಿಷ್ಕರಿಸಿವುದು.
ರೈತರ ಬೆಳೆಗಳಿಗೆ ಸೂಕ್ತ ಬೆಲೆ ನಿಗದಿ ಮಾಡಲು ಸೂಕ್ತ ಮಾನದಂಡಗಳನ್ನು ಅಳವಡಿಸುವುದು.
ಬರ ಪ್ರದೇಶಗಳಲ್ಲಿ ಸುಸ್ಥಿರ ನೀರಾವರಿ ಯೋಜನೆಗಳನ್ನು ರೂಪಿಸುವುದು.
ಈ ಅಂಶಗಳು ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳಲ್ಲಿವೆ.
ಯುವಜನರು ಮತ್ತು ಉದ್ಯೋಗವನ್ನು ಗಮನದಲ್ಲಿಟ್ಟುಕೊಂಡು
ಖಾಲಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವುದು
ವಿದ್ಯಾವಂತ ನಿರುದ್ಯೋಗಿ ಯುವಜನರಿಗೆ ಫೆಲೋಶಿಪ್,
ಶೇ.80 ರಷ್ಟು ಉದ್ಯೋಗಗಳು ಸ್ಥಳೀಯರಿಗೆ ಮೀಸಲು ಎಂದು ಘೋಷಿಸಿವೆ.
ಅಲ್ಲದೇ ಮಹಿಳೆಯರು, ಶಿಕ್ಷಣ, ನಗರ ಅಭಿವೃದ್ದಿ, ಪ್ರವಾಸೋಧ್ಯಮ ಸೇರಿದಂತೆ ಹಲವು ಹೆಡ್ಡಿಂಗ್‌ಗಳಲ್ಲಿ ತಮ್ಮ ಭರವಸೆಗಳನ್ನು ನೀಡಿದ್ದಾರೆ.


