5 ಟ್ರಿಲಿಯನ್ ಮಿಲಿಯನ್‍ಗೆಷ್ಟು ಸೊನ್ನೆ?: ಸೊನ್ನೆ ಎದುರು ಬೆತ್ತಲಾದ ಮೋದಿ ಶಿಷ್ಯ!
ಅಂದು ಮೋದಿ ಸರಕಾರದ ನೂರು ದಿನಗಳ ಪರಾಮರ್ಶೆ ಕುರಿತು ರಾಷ್ಟ್ರೀಯ ಚಾನೆಲ್ ಎಬಿಪ ನ್ಯೂಸ್ ನಲ್ಲಿ ನಡೆದ ಚರ್ಚೆ…. ಕಾಂಗ್ರೆಸ್ಸಿನ ಅಷ್ಟೇನೂ ಫೇಮಸ್ ಅಲ್ಲದ ವಕ್ತಾರನೊಬ್ಬ ಬಿಜೆಪಿಯ ವಟ ವಟ ವಕ್ತಾರ ಸಂಬಿತ್ ಪಾತ್ರನಿಗೆ ಪಾಠ ಕಲಿಸಿದ ವಿಡಿಯೋ ನಿಮ್ಮ ಮುಂದಿದೆ. ವಿಡಿಯೋದ ಸಾರಂಶ ಕೆಳಗಿನಂತಿದೆ.
ಗೌರವ್ ವಲ್ಲಭ್: ಎಲ್ಲಾ ಕ್ಷೇತ್ರಗಳಲ್ಲಿಯೂ ಶೇ.30-40% ಮಾರಾಟ ಕಡಿಮೆಯಾಗಿದೆ.
ಸಂಬಿತ್ ಪಾತ್ರ: ಮೊದಲನೆಯದಾಗ 5 ಟ್ರಿಲಿಯನ್ ಎಕಾನಮಿಯ ನಂತರ ಮೋದಿಯವರು ಉತ್ತಮ ಸಾಧನೆ ಮಾಡಿದ್ದಾರೆ.
ಗೌರವ್ ವಲ್ಲಭ್: ಈ 5 ಟ್ರಿಲಿಯನ್ ಎಕಾನಮಿ ಎಲ್ಲಿದೆ ಸಂಬಿತ್ ಜೀ? ನಿಮಗೆ ನೆನಪಿದೆಯೇ, ಸ್ವಿಸ್ ಬ್ಯಾಂಕ್ ನಿಂದ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದು ಮೋದಿ ಹೇಳಿದ್ದರು.
ಸಂಬಿತ್ ಪಾತ್ರ: ಬರುತ್ತಾ ಇದೆ. ಈ ಪೂರ್ತಿ ಐದು ವರ್ಷದಲ್ಲಿ 2 ಟ್ರಿಲಿಯನ್ ಅನ್ನು ಜೋಡಿಸುತ್ತಿದ್ದೇವೆ. ನಿಮ್ಮೆಲ್ಲರ ಆರ್ಶಿವಾದದಿಂದ ಹಿಂದೂಸ್ತಾನದ ಹಿರಿಮೆಯಿಂದ ಜೋಡಿಸುತ್ತೇವೆ.
ಗೌರವ್ ವಲ್ಲಭ್: ಸಂಬಿತ್ ಬಯ್ಯಾ, 5 ಟ್ರಿಲಿಯನ್ ನಲ್ಲಿ ಎಷ್ಟು ಸೊನ್ನೆ ಬರುತ್ತವೆ ಹೇಳುತ್ತೀರಾ? ಈಗಲೇ ಹೇಳುತ್ತೀರಾ?
ಸಂಬಿತ್ ಪಾತ್ರ: ಹೇಳುತ್ತೇನೆ,
ಸಂಬೀತ್ ಪಾತ್ರಾ ಕಕ್ಕಾಬಿಕ್ಕಿ…..
‘ಒಂದ್ ನಿಮಿಷ, ಹೇಳುತೇನೆ’ ಎನ್ನುವ ಸಂಬೀತ್ ಮರುಕ್ಷಣ ಮೊದಲು ಈ ಪ್ರಶ್ನೆಯನ್ನು ರಾಹುಲ್ ಗಾಂಂಧಿಗೆ ಕೇಳಿ ನಂತರ ಬನ್ನಿ ಎಂದು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ.
ಗೌರವ್ ವಲ್ಲಭ್: ಎಬಿಪಿ ನ್ಯೂಸ್ ವೀಕ್ಷಕರು ಇವರ ಜ್ಞಾನವನ್ನು ಅರ್ಥ ಮಾಡಿಕೊಳ್ಳಬೇಕು. ಸುಮ್ಮನೆ 5 ಟ್ರಿಲಿಯನ್, 5 ಟ್ರಿಲಿಯನ್ ಎಂದು ಬೊಗಳುವುದಲ್ಲ, 5 ಟ್ರಿಲಿಯನ್ ಗೆ ಎಷ್ಟು ಸೊನ್ನೆ ಇರುತ್ತವೆ ಎಂದು ನೀವು ಹೇಳಬೇಕು? ಇದು ನನ್ನ ಸವಾಲು ಎನ್ನುತ್ತಾರೆ.
ಕೊನೆಗೆ ಆ ಸಾಮಾನ್ಯ ಕಾಂಗ್ರೆಸ್ ಪ್ರತಿನಿಧಿಯೇ ಮಿಲಿಯನ್, ಬಿಲಿಯನ್ ಟ್ರಿಲಿಯಮಗಗ ಬಗ್ಗೆ ವಿವರಿಸಿ, ಯಾವುದರ ಮುಂದೆ ಎಷ್ಟು ಸೊನ್ನೆಗಳಿರುತ್ತವೆ ಎಂದು ವಿವರಿಸಿದ್ದಾನೆ….
ಈ ಚರ್ಚೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಸಂಬಿತ್ ಪಾತ್ರನಿಗೆ ಮಣ್ಣು ಮುಕ್ಕಿಸಿದ ಈ ಗೌರವ್ ವಲ್ಲಭ್ ಯಾರು ಎಂದು ಬಹಳಷ್ಟು ಜನ ಕೇಳುತ್ತಿದ್ದಾರೆ. ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಎಂದು ಘೋಷಿಸಬೇಕು, ವಿರೋಧ ಪಕ್ಷಗಳು ಗೌರವ್ ಅವರನ್ನು ತಮ್ಮ ವಕ್ತಾರರನ್ನಾಗಿ ಮಾಡಬೇಕು ಎಂದು ಕೆಲವು ಜನರು ಫೇಸ್ ಬುಕ್ ನಲ್ಲಿ, ಟ್ವಿಟ್ಟರ್ ನಲ್ಲಿ ಬರೆಯುತ್ತಿದ್ದಾರೆ.
ರಾಜಸ್ಥಾನದ ಪಾಲಿ ನಗರದ ನಿವಾಸಿಯಾದ 42 ವರ್ಷದ ಗೌರವ್ ವಲ್ಲಭ್ ಅವರು ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷರಾಗಲು ಅಥವಾ ವಿರೋಧ ಪಕ್ಷಗಳ ನಾಯಕರಾಗಲು ನಾನು ಬಯಸುವುದಿಲ್ಲ. ‘ನನಗೆ ಅಂತಹ ಕಲ್ಪನೆ ಇಲ್ಲ’ ಎಂದು ಬಹಳ ವಿನಯವಾಗಿ ಹೇಳಿದ್ದಾರೆ.
ಪಾಲಿಯಲ್ಲಿ ಶಾಲಾ ಶಿಕ್ಷಣದ ನಂತರ ಗೌರವ್ ಜೈಪುರದಿಂದ ಸಿಎ ಅಧ್ಯಯನ ಮಾಡಿದರು. ಗೌರವ್ ಅವರ ಪೋಷಕರು ಪಾಲಿಯ ಸರ್ಕಾರಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಗೌರವ್ 2000-2003ರವರೆಗೆ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕ್ ಮ್ಯಾನೇಜ್‌ಮೆಂಟ್ ಪೂನಾದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. ಇದರೊಂದಿಗೆ ಅವರು ಮಹರ್ಷಿ ದಯಾನಂದ್ ಸರಸ್ವತಿ ವಿಶ್ವವಿದ್ಯಾಲಯದ ಅಜ್ಮೀರ್‌ನಿಂದ ಎಂ.ಕಾಂನಲ್ಲಿ ‘ಚಿನ್ನದ ಪದಕ’ವನ್ನು ಗಳಿಸಿದ್ದಾರೆ.
‘ದಿ ಪ್ರಿಂಟ್’ ನೊಂದಿಗೆ ಮಾತನಾಡಿದ ಅವರು, ‘2017ರವರೆಗೆ ನಾನು ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಪಾಠ ಮಾಡುತ್ತಿದೆ, ಆನಂತರ ಭಾರತಕ್ಕೆ ಮರಳಿದೆ. ನಮ್ಮ ದೇಶದಲ್ಲಿ ಮಾಬ್ ಲಿಂಚಿಂಗ್ (ಗುಂಪು ಹಲ್ಲೆ) ಹೆಸರಿನಲ್ಲಿ ಜನರನ್ನು ದ್ವೇಷಕ್ಕೆ ಸಜ್ಜುಗೊಳಿಸಲಾಗುತ್ತಿದೆ. ಇದರ ವಿರುದ್ಧ ಹೋರಾಡಲು ನಾನು ಕಾಂಗ್ರೆಸ್ ಪಕ್ಷದ ಸಿದ್ಧಾಂತದೊಂದಿಗೆ ಸಂಪರ್ಕ ಹೊಂದಿದ್ದೇನೆ. ಆದ್ದರಿಂದ 2018 ರವರೆಗೆ ಪ್ಯಾನೆಲಿಸ್ಟ್ ಆಗಿ ಕೆಲಸ ಮಾಡಿದೆ’ ಎನ್ನುತ್ತಾರೆ.
ಅದರ ನಂತರ ನಾನು ರಾಹುಲ್ ಗಾಂಧಿ ಮತ್ತು ರಂದೀಪ್ ಸುರ್ಜೆವಾಲಾ ಅವರಿಗೆ ಪತ್ರ ಬರೆದು ರಾಷ್ಟ್ರೀಯ ವಕ್ತಾರ ಹುದ್ದೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಬಯಸುತ್ತೇನೆ ಎಂದು ಹೇಳಿದೆ. 2019 ರ ಜನವರಿಯಲ್ಲಿ ಅವರು ನನ್ನ ಮೇಲೆ ವಿಶ್ವಾಸದಿಂದ ಈ ಜವಾಬ್ದಾರಿಯನ್ನು ಒಪ್ಪಿಸಿದರು ಎಂದು ಹೇಳಿದ್ದಾರೆ.
ಬಿಜೆಪಿಯ ದೇವಸ್ಥಾನ ಮತ್ತು ಪೂಜಾ ರಾಜಕೀಯದ ಬಗ್ಗೆ ಮಾತನಾಡಿರುವ ಅವರು, ‘ನಾನು ದಿನಕ್ಕೆ ಮೂರು ಗಂಟೆಗಳ ಕಾಲ ಪೂಜಿಸುತ್ತೇನೆ. ನನಗಿಂತ ಹೆಚ್ಚು ಯಾರೂ ಅಯೋಧ್ಯ ದೇವಾಲಯಗಳಿಗೆ ಹೋಗಿಲ್ಲ. ಜೊತೆಗೆ ಗೌರವ್ ಅವರು 20 ದೇಶಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ
ಗೌರವ್ ಲೋಕಸಭಾ ಸಂಶೋಧನಾ ಫೆಲೋಶಿಪ್ ಅಡಿಯಲ್ಲಿ 2016 ರಲ್ಲಿ ಅವರು ಸುಸ್ಥಿರ ಅಭಿವೃದ್ಧಿ ಗುರಿಗಳ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ‘ನಾನು ಮೂರು ಪುಸ್ತಕಗಳನ್ನು ಬರೆದಿದ್ದೇನೆ. ನನ್ನ ಸಂಶೋಧನಾ ಪ್ರಬಂಧಗಳನ್ನು ಹಾರ್ವರ್ಡ್ ವಿಶ್ವವಿದ್ಯಾಲಯದಿಂದ 20 ದೇಶಗಳಿಗೆ ಪ್ರಸ್ತುತಪಡಿಸಿದ್ದೇನೆ. ಮಾರ್ಚ್ 2019 ರಲ್ಲಿ, ಎಕ್ಸ್‌ಎಲ್‌ಆರ್‌ಐ ಜಮ್‌ಶೆಡ್‌ಪುರ ಕೂಡ 15 ವರ್ಷಗಳ ಸೇವೆಗಾಗಿ ನನ್ನನ್ನು ಗೌರವಿಸಿತು. ನಾನು 50 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪ್ರಕಟಣೆಯುಳ್ಳ ಪತ್ರಿಕೆಗಳಿಗೆ ಬರೆದಿದ್ದೇನೆ’ ಎನ್ನುತ್ತಾರೆ.
‘ಟ್ವಿಟರ್‌ನಲ್ಲಿ ದೇಶಪ್ರೇಮವನ್ನು ತೋರಿಸುವುದಿಲ್ಲ’
ಗೌರವ್ ವಲ್ಲಭ್ ರಾಷ್ಟ್ರೀಯತೆಯನ್ನು ಪ್ರಶ್ನಿಸಿ, ‘ರಾಷ್ಟ್ರೀಯತೆಯ ವ್ಯಾಖ್ಯಾನ ಏನು ಎಂದು ನಾನು ಹಲವು ಬಾರಿ ಕೇಳಿದ್ದೇನೆ. ನನಗೆ, ನನ್ನ ಕೆಲಸವನ್ನು ಪ್ರಾಮಾಣಿಕತೆ ಮತ್ತು ಸಮಗ್ರತೆಯಿಂದ ಮಾಡುವುದು ರಾಷ್ಟ್ರೀಯತೆ. ನಾನು ಟ್ವಿಟರ್‌ನಲ್ಲಿ ದೇಶಪ್ರೇಮವನ್ನು ತೋರಿಸುವುದಿಲ್ಲ’ ಎಂದಿದ್ದಾರೆ.
ಕೇವಲ 1,945 ಫೇಸ್‌ಬುಕ್ ಲೈಕ್‌ಗಳು ಮತ್ತು 5000 ಟ್ವಿಟ್ಟರ್ ಫಾಲೋವರ್‌ಗಳನ್ನು ಹೊಂದಿರುವ ಗೌರವ್ ವಲ್ಲಭ್, “ನಾನು ಟ್ವಿಟರ್ ಜಗತ್ತಿನಲ್ಲಿ ಗೆಲ್ಲಲಿಲ್ಲ” ಎಂದು ಹೇಳುತ್ತಾರೆ. ಚರ್ಚೆಗಳಲ್ಲದೆ ನಾನು ಓದುತ್ತೇನೆ ಮತ್ತು ಬರೆಯುತ್ತೇನೆ. ಮುಂದಿನ ತಿಂಗಳು ಪುಸ್ತಕವೂ ಹೊರಬರುತ್ತಿದೆ.’ ಎಂದಿದ್ದಾರೆ.
ಗೌರವ್ ಬಗ್ಗೆ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಜಯವೀರ್ ಶೆರ್ಗಿಲ್, “ಅವರು ಗಣಿತ ಮತ್ತು ಅರ್ಥಶಾಸ್ತ್ರವನ್ನು ಸುಲಭ ಭಾಷೆಯಲ್ಲಿ ವಿವರಿಸುತ್ತಾರೆ, ಜೊತೆಗೆ ಅವರು ಪ್ರಚಾರದಿಂದ ದೂರವಿರುತ್ತಾರೆ” ಎಂದು ಹೇಳಿದ್ದಾರೆ.


