Homeಕರ್ನಾಟಕಭಾರತದಲ್ಲಿ ಗೋಹತ್ಯೆ ಏಕೆ? ಕಲ್ಲಡ್ಕ ಪ್ರಭಾಕರ್‌ ಭಟ್ಟರು ಕೇಳಿದ್ದು ಯಾರಿಗೆ?

ಭಾರತದಲ್ಲಿ ಗೋಹತ್ಯೆ ಏಕೆ? ಕಲ್ಲಡ್ಕ ಪ್ರಭಾಕರ್‌ ಭಟ್ಟರು ಕೇಳಿದ್ದು ಯಾರಿಗೆ?

2018-19ನೇ ಸಾಲಿನಲ್ಲಿ ಭಾರತ 19,00,000 ಮೆಟ್ರಿಕ್ ಟನ್ ದನದ ಮಾಂಸ ರಫ್ತು ಮಾಡಿ ವಿಶ್ವದ ಎರಡನೇ ಅತಿದೊಡ್ಡ ರಫ್ತುದಾರ ಎಂಬ ಹೆಗ್ಗಳಿಕೆ ಪಡೆದಿದೆ

- Advertisement -
- Advertisement -

ತುಮಕೂರಿಗೆ ಆಗಮಿಸಿದ್ದ ಆರ್‌ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್‌ ಭಟ್ಟರು ಪೌರತ್ವ ಕಾಯ್ದೆ ಪರ ಭೀಕರ ಭಾಷಣ ಮಾಡಿಹೋದರು. ಸಭೆಯಲ್ಲಿ ಥರಾವರಿ ಪ್ರಶ್ನೆಗಳು ಕೇಳಿದರು. ಅದು ಯಾರಿಗೆ ಕೇಳಿದರು ಎಂಬುದು ಅಲ್ಲಿದ್ದ ಜನರಿಗೆ ಸ್ವಲ್ಪ ಗಲಿಬಿಲಿಯೇ ಆಗಿರಬೇಕು. ಯಾಕೆಂದರೆ ಕೇಂದ್ರದಲ್ಲಿ ತಮ್ಮದೇ ಸರ್ಕಾರ ಅಧಿಕಾರದಲ್ಲಿದೆ. ಅಂಥಾದ್ದರಲ್ಲಿ ಭಾರತದಲ್ಲಿ ಗೋಹತ್ಯೆ ಏಕೆ ಮಾಡುತ್ತಾರೆ ಎಂದು ಜನರನ್ನು ಪ್ರಶ್ನಿಸಬೇಕೇ? ಕೇಂದ್ರದಲ್ಲಿ ನಪುಂಸಕ ನಾಯಕತ್ವ ಇಲ್ಲ. ಈಗಿನದು ಬಲಿಷ್ಟವಾಗಿದೆ ಎಂದು ಬೀಗಿದರು, ಪ್ರಶ್ನೆ ಮಾತ್ರ ಜನರಿಗೆ ಕೇಳಿದರು.

ಆದರೆ ಕಳೆದ ಎಂಟು ವರ್ಷದಲ್ಲಿ ನಪುಂಸಕ ನಾಯಕತ್ವ ಇಲ್ಲದಿದ್ದರೂ (ಅವರೇ ಹೇಳಿಕೊಂಡಂತೆ) ಭಾರತದಿಂದ ದನದ ಮಾಂಸ ರಫ್ತಾಗುತ್ತಿದೆಯಲ್ಲವೇ? ಅದನ್ನು ಪೌರುಷವಂತರು ತಡೆಯಬೇಕಿತ್ತಲ್ಲವೇ? ಯಾಕೆ ತಡೆಯಲಿಲ್ಲ? ಗೋಹತ್ಯೆಯನ್ನೂ ಸಂಪೂರ್ಣ ನಿಯಂತ್ರಿಸಬೇಕಿತ್ತಲ್ಲವೇ? ಈ ಪ್ರಶ್ನೆಗಳಿಗೆ ಪ್ರಭಾಕರ ಭಟ್ಟರ ಬಳಿ ಉತ್ತರವಿದ್ದಂತೆ ಕಾಣುತ್ತಿಲ್ಲ. ಗೊತ್ತಿದ್ದರೂ ಭಟ್ಟರಲ್ಲವೇ ವಿಸ್ಮೃತಿ ಹೆಚ್ಚಿರಬೇಕು? ಹೌದು ಭಾರತದಲ್ಲಿ ಗೋಹತ್ಯೆ ಹೆಚ್ಚಾಗಲು ಕಾರಣವೇನು? ದನದ ಮಾಂಸ ರಫ್ತು ಮಾಡಲು ಯಾರು ಕಾರಣ? ಎಂಬುದನ್ನು ಪರಿಶೀಲಿಸಿದಾಗ ಕಂಡು ಬಂದ ಸತ್ಯಾಂಶಗಳು ಇವು.

ಕಳೆದ ಆರು ವರ್ಷಗಳಲ್ಲಿ ಅಂದರೆ ನರೇಂದ್ರ ಮೋದಿ ಪ್ರಧಾನಿ ಹುದ್ದೆ ಅಲಂಕರಿಸಿದ ನಂತರ ಭಾರತದಿಂದ ದನದ ಮಾಂಸ ರಫ್ತು ಹೆಚ್ಚಳವಾಗಿರುವುದನ್ನು ಕೇಂದ್ರ ಪಶುಸಂಗೋಪನಾ ಇಲಾಖೆ ಬಿಡುಗಡೆಗೊಳಿಸಿದ ಅಂಕಿಅಶಶಗಳು ದೃಢಪಡಿಸುತ್ತವೆ. 2014-15ನೇ ಸಾಲಿನಲ್ಲಿ ಮೋದಿ ಸರ್ಕಾರ 14,75,440 ಮೆಟ್ರಿಕ್ ಟನ್ ದನದ ಮಾಂಸ ರಫ್ತು ಮಾಡಿದೆ. ಇದು ಹತ್ತು ವರ್ಷಗಳಲ್ಲೇ ಅತಿಹೆಚ್ಚು ರಫ್ತು ಮಾಡಿದ ಹೆಗ್ಗಳಿಕೆ ಭಾರತದ್ದು. ಇದರಿಂದ ಭಾರತ ಸರ್ಕಾರ ಆ ಸಾಲಿನಲ್ಲಿ 29,282 ಕೋಟಿ ರೂಪಾಯಿ ಆದಾಯ ಗಳಿಸಿದೆ. 2015-16ನೇ ಸಾಲಿನಲ್ಲಿ 13,14,000 ಮೆಟ್ರಿಕ್ ಟನ್ ರಫ್ತು ಮಾಡಿದೆ. ಆದರೆ 2016-17ನೇ ಸಾಲಿನಲ್ಲಿ 13,30,013 ಮೆಟ್ರಿಕ್ ಟನ್ ರಫ್ತು ಮಾಡಿದ್ದು ಅದು ಕಳೆದ ವರ್ಷಕ್ಕಿಂತ ಶೇಕಡ 1.2ರಷ್ಟು ಹೆಚ್ಚಳವಾಗಿದೆ.

2017-18ರಲ್ಲಿ 13,48,225 ಮೆಟ್ರಿಕ್ ಟನ್ ರಫ್ತು ಮಾಡಿದ್ದು 25,988.41 ಕೋಟಿ ರೂಪಾಯಿ ಭಾರತಕ್ಕೆ ಆದಾಯ ಬಂದಿದೆ. ಇದು ಕಳೆದ ಸಾಲಿಗಿಂತ ಶೇಕಡ 1.3ರಷ್ಟು ಹೆಚ್ಚಳ ಕಂಡುಬಂದಿದೆ. 2018-19ನೇ ಸಾಲಿನಲ್ಲಿ ಭಾರತ 19,00,000 ಮೆಟ್ರಿಕ್ ಟನ್ ದನದ ಮಾಂಸ ರಫ್ತು ಮಾಡಿ ವಿಶ್ವದ ಎರಡನೇ ಅತಿದೊಡ್ಡ ರಫ್ತುದಾರ ಎಂಬ ಹೆಗ್ಗಳಿಕೆ ಪಡೆದಿದೆ. ಅಂದರೆ ಬ್ರೆಜಿಲ್ ಶೇಕಡ 19.33ರಷ್ಟು ಅಂದರೆ 20,25,000 ಮೆಟ್ರಿಕ್ ಟನ್ ದನದ ರಫ್ತು ಮಾಡಿ ಮೊದಲ ಸ್ಥಾನದಲ್ಲಿದ್ದರೆ, ಭಾರತ ಶೇಕಡ 18.14ರಷ್ಟು ದನದ ಮಾಂಸ ರಫ್ತು ಮಾಡಿ ಎರಡನೇ ಸ್ಥಾನದಲ್ಲಿದೆ. ಅಮೆರಿಕಾ ಶೇಕಡ 13.10ರಷ್ಟು ಅಂದರೆ 13,72,000 ಮೆಟ್ರಿಕ್ ಟನ್ ವಿದೇಶಗಳಿಗೆ ದನದ ಮಾಂಸ ಪೂರೈಕೆ ಮಾಡಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ದನದ ಮಾಂಸ ಅತಿಹೆಚ್ಚು ಸೇವನೆ ಮಾಡುವ ಪಾಕಿಸ್ತಾನ ರಫ್ತಿನಲ್ಲಿ 14ನೇ ಸ್ಥಾನದಲ್ಲಿದೆ.

ಟೈಮ್ಸ್ ಆಫ್ ಇಂಡಿಯಾ, ದಿ ಹಿಂದೂ, ದಿ ಪ್ರಿಂಟ್ ಮೊದಲಾದ ವೆಬ್ ಸೈಟ್‌ಗಳಲ್ಲಿ ಉಲ್ಲೇಖಿಸಿರುವಂತೆ ಕಳೆದ ನಾಲ್ಕು ವರ್ಷಗಳಲ್ಲಿ ದನದ ಮಾಂಸ ರಫ್ತು ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡಿದೆ. ಈ ಅವಧಿಯಲ್ಲಿ 56 ಇಂಚಿನ ಪ್ರಧಾನಿಯೇ ಅಧಿಕಾರದಲ್ಲಿರುವುದು ಎಂಬುದು ಗಮನಾರ್ಹ ಸಂಗತಿ. ಅಪ್ಪಟ ದೇಶಭಕ್ತರು, ಗೋಮಾತೆಯ ಪೂಜಕರು, ಗೋವಿನಲ್ಲಿ 33 ಕೋಟಿ ದೇವರು ನೆಲೆಸಿವೆ ಎಂದು ಪ್ರತಿಪಾದಿಸುವ ಸಂಘ ಪರಿವಾರದ ಭಕ್ತರು ನರೇಂದ್ರ ಮೋದಿ ಅವರೇ ಪ್ರಧಾನಿ ಸ್ಥಾನದಲ್ಲಿದ್ದರೂ ದನದ ಮಾಂಸ ರಫ್ತು ಮಾಡುವುದನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಇದರ ಬಗ್ಗೆ ಭಕ್ತಗಣ ಸುಳ್ಳು ಹೇಳುವುದನ್ನು ಬಿಟ್ಟು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕು. ಮೈಯೆಲ್ಲಾ ಸುಳ್ಳನ್ನೇ ಪೂಸಿಕೊಂಡಿರುವ ಕಲ್ಲಡ್ಕ ಪ್ರಭಾಕರ್ ಭಟ್ಟರಂಥವರು ತಮ್ಮ ಮಾತೃ ಸಂಸ್ಥೆಯ ಕೂಸುಗಳು ಅಧಿಕಾರದಲ್ಲಿದ್ದ ಕಾಲದಲ್ಲೇ ಅತ್ಯಧಿಕ ಗೋಮಾಂಸ ರಫ್ತಾಗುವುದನ್ನು ನಿಯಂತ್ರಿಸಲು ಏಕೆ ಸಾಧ್ಯವಾಗಲಿಲ್ಲ? ಸತ್ಯವನ್ನು ಎದೆಯಲ್ಲಿ ಬಚ್ಚಿಟ್ಟುಕೊಳ್ಳದೇ ಹೊರಹಾಕಬೇಕು.

ಅತಿಹೆಚ್ಚು ಗೋಮಾಂಸ ತಿನ್ನುವ ಮುಸ್ಲಿಂ ರಾಷ್ಟ್ರ ಪಾಕಿಸ್ತಾನ 14ನೇ ಸ್ಥಾನದಲ್ಲಿದೆ. ಅದು ಬಿಡಿ ಬಿಜೆಪಿಯ ಪರಮ ವೈರಿ ದೇಶ. ಭಾರತದಲ್ಲಿ ಗೋಮಾತೆಯ ಪೂಜಕರು ಇರುವ ದೇಶದಲ್ಲೇ ಅದೂ ತಮ್ಮ ಆಡಳಿತದ ಅವಧಿಯಲ್ಲಿ ದನದ ಮಾಂಸ ಅತ್ಯಧಿಕವಾಗಿ ರಫ್ತು ಮಾಡುತ್ತಿದ್ದರೂ ಮೌನವೇಕೆ ವಹಿಸಿದ್ದೀರಿ. ಪ್ರಧಾನಿಯನ್ನು ದಿಟ್ಟಿಸಿ ಕೇಳಬೇಕಲ್ಲವೇ? ಅದು ನಿಮ್ಮಿಂದ ಸಾಧ್ಯವಿಲ್ಲ, ಅಲ್ಲವೇ? ದನ ತಿನ್ನುವವರ ಬಗ್ಗೆ ತುಚ್ಛವಾಗಿ ಕಾಣುವ ಸಂಘಪರಿವಾರ ಗೋಮಾಂಸ ರಫ್ತು ಮಾಡುವ ತಮ್ಮದೇ ಸರ್ಕಾರದ ಬಗ್ಗೆ ಸುಮ್ಮನಿರುತ್ತೀರಿ. ಇದು ಇಬ್ಬಗೆ ನೀತಿಯಲ್ಲವೇ? ಸಂಸ್ಕೃತಿ ರಕ್ಷಕರು ಸುಳ್ಳುಗಳ ಪಾಠ ಹೇಳುವುದು ಬಿಟ್ಟು ವಾಸ್ತವತೆ ಅರ್ಥ ಮಾಡಿಕೊಂಡರೆ ಒಳ್ಳೆದು.

ಮೇಲಿನ ಅಂಕಿಅಂಶಗಳಿಂದ ತಿಳಿದುಬರುವುದೇನೆಂದರೆ ಕಾಂಗ್ರೆಸ್ ಆಡಳಿತ ಇದ್ದ ಸಂದರ್ಭಕ್ಕಿಂತಲೂ ಅತಿಹೆಚ್ಚು ಗೋಮಾಂಸ ರಫ್ತು ಮಾಡಿರುವುದು ಬಿಜೆಪಿ ಅವಧಿಯಲ್ಲೇ. ಅದು ಪ್ರಧಾನಿ ನರೇಂದ್ರ ಮೋದಿ ಕಾಲದಲ್ಲಿ ವ್ಯಾಪಕವಾಗಿ ದನದ ಮಾಂಸ ರಫ್ತು ಮಾಡಿದ್ದು. ಆದರೆ ವೇದಿಕೆ ಸಿಕ್ಕಲ್ಲಿ ದ್ವೇಷವನ್ನೇ ಉಗುಳುವ ಕಲ್ಲಡ್ಕ ಪ್ರಭಾಕರ ಭಟ್ಟರಂಥ ಢೋಂಗಿಗಳು ಗೋಮಾತೆಯ ಭಜನೆ ಮಾಡುತ್ತಾರೆ. ಯುವಜನರ ಮನಸ್ಸಿನಲ್ಲಿ ವಿಷದ ಬೀಜವ ಬಿತ್ತಿ ಇಡೀ ಸಮಾಜವೇ ದ್ವೇಷದಿಂದ ಕುದಿಯುವಂತೆ ಮಾಡುವುದನ್ನು ಬಿಟ್ಟು ಈ ದೇಶದಲ್ಲಿ ಕ್ಯಾನ್ಸರ್ ನಂತೆ ಹರಡಿರುವ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ, ತಾರತಮ್ಯ ಭಾವನೆ, ನಿರುದ್ಯೋಗ ಮೊದಲಾದ ಸಮಸ್ಯೆಗಳ ನಿವಾರಣೆಗೆ ಮುಂದಾದರೆ ಎಲ್ಲರ ಬದುಕು ಹಸನಾದೀತು? ಅವರು ಈ ನಿಟ್ಟಿನಲ್ಲಿ ಯೋಚಿಸುವುದು ಒಳ್ಳೆಯದು.

(ವಿವಿಧ ಲೇಖಕರು ತಮ್ಮ ಲೇಖನಗಳಲ್ಲಿ ಬರೆಯುವ ಅಭಿಪ್ರಾಯಗಳು ನಾನುಗೌರಿ.ಕಾಂನ ಸಂಪಾದಕೀಯ ತಂಡದ ಅಭಿಪ್ರಾಯಗಳು ಆಗಿರಬೇಕೆಂದೇನಿಲ್ಲ.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...