ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟ ನೌಕಾಪಡೆ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಪತ್ನಿಯನ್ನು ಗುರಿಯಾಗಿಸಿ ಬಿಜೆಪಿ ಬೆಂಬಲಿಗರು ಅಶ್ಲೀಲ ಮತ್ತು ದ್ವೇಷಪೂರಿತ ಹೇಳಿಕೆ ನೀಡುತ್ತಿದ್ದು ಈ ಬಗ್ಗೆ ಟಿಎಂಸಿ ಸಂಸದ ಸಾಕೇತ್ ಗೋಖಲೆ ಅವರು ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಇದು ರಾಷ್ಟ್ರೀಯತೆಯೆ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿ ಟ್ರೋಲ್
ಬಿಜೆಪಿ ಜೊತೆ ಸಂಯೋಜಿತವಾಗಿದೆ ಎನ್ನಲಾದ ಸಾಮಾಜಿಕ ಮಾಧ್ಯಮ ಖಾತೆಗಳು ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟ ನೌಕಾಪಡೆ ಅಧಿಕಾರಿಯ ಪತ್ನಿಯ ಮೇಲೆ ತೀವ್ರವಾಗಿ ದಾಳಿ ಮಾಡುತ್ತಿದ್ದಾರೆ. ಈ ದಾಳಿಯನ್ನು ಫ್ಯಾಕ್ಟ್‌ಚೆಕ್ಕರ್ ಮೊಹಮ್ಮದ್ ಜುಬೈರ್ ಅವರು ಪಟ್ಟಿ ಮಾಡಿದ್ದು ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ.
ಎಕ್ಸ್‌ನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಟಿಎಂಸಿ ರಾಜ್ಯಸಭಾ ಸಂಸದ ಗೋಖಲೆ, “ಪಹಲ್ಗಾಮ್‌ನಲ್ಲಿ ಕೊಲ್ಲಲ್ಪಟ್ಟ ನೌಕಾಪಡೆ ಅಧಿಕಾರಿಯ ಪತ್ನಿಯ ವಿರುದ್ಧ ಅಶ್ಲೀಲ ಮತ್ತು ದ್ವೇಷಪೂರಿತ ಹೇಳಿಕೆ ನೀಡಲಾಗುತ್ತಿರುವುದನ್ನು ಕಾಣುವುದು ಆಘಾತಕಾರಿಯಾಗಿದೆ. ವಿಷವನ್ನು ಹರಡುವ ಹೆಚ್ಚಿನ ಖಾತೆಗಳು ಬಿಜೆಪಿಗೆ ಸಂಬಂಧಿಸಿವೆ. ಏಕೆ?” ಎಂದು ಅವರು ಪ್ರಶ್ನಿಸಿದ್ದಾರೆ.
ಅವರು ಕೋಮು ಸಾಮರಸ್ಯಕ್ಕಾಗಿ ಮನವಿ ಮಾಡಿದ ಕಾರಣ ಅವರ ಮೇಲೆ ಈ ದಾಳಿ ನಡೆಯುತ್ತಿದೆ ಎಂದು ಗೋಖಲೆ ಉಲ್ಲೇಖಿಸಿದ್ದಾರೆ.”ಐಟಿ ಸಚಿವ ಅಶ್ವಿನಿ ವೈಷ್ಣವ್ ಇದಕ್ಕೆ ಉತ್ತರಿಸಬೇಕು – ಈ ಖಾತೆಗಳನ್ನು ಏಕೆ ತೆಗೆದುಹಾಕುತ್ತಿಲ್ಲ ಅಥವಾ ನಿರ್ಬಂಧಿಸುತ್ತಿಲ್ಲ? ಹತ್ಯೆಗೀಡಾದ ಸಶಸ್ತ್ರ ಪಡೆ ಅಧಿಕಾರಿಯ ಸಂತ್ರಸ್ತ ಪತ್ನಿಯನ್ನು ಗುರಿಯಾಗಿಸಿಕೊಂಡಾಗಲೂ ನಿಮ್ಮ ಪಕ್ಷದ ಪರವಾಗಿರುವ ಟ್ರೋಲ್‌ಗಳು ಕಾನೂನಿನ ವ್ಯಾಪ್ತಿಯಿಂದ ಹೊರಗಿವೆಯೆ? ಇದು ನಿಮ್ಮ ‘ರಾಷ್ಟ್ರೀಯತೆ’ಯೇ?” ಎಂದು ಅವರು ಕೇಳಿದ್ದಾರೆ.
It is shocking to see the obscene & hateful comments being directed towards the widow of the Navy officer who was killed in Pahalgam. Most accounts spreading venom are BJP-affiliated. Why? Only because she appealed for communal harmony.
IT Minister @AshwiniVaishnaw should…
— Saket Gokhale MP (@SaketGokhale) May 4, 2025
ಪಹಲ್ಗಾಮ್‌ನಲ್ಲಿ ಮೃತಪಟ್ಟ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಪತ್ನಿ ಹಿಮಾಂಶಿ ನರ್ವಾಲ್ ಅವರು ತಮ್ಮ ಪತಿಯ 27 ನೇ ಹುಟ್ಟುಹಬ್ಬದಂದು ರಕ್ತದಾನ ಕಾರ್ಯಕ್ರಮ ಆಯೋಜಿಸಿದ್ದು, ಈ ವೇಳೆ ಅವರು ಶಾಂತಿ ಮತ್ತು ಕೋಮು ಸೌಹಾರ್ದತೆಗಾಗಿ ಹೃತ್ಪೂರ್ವಕ ಮನವಿ ಮಾಡಿದ್ದರು. ಇದರ ನಂತರ ಬಿಜೆಪಿ ಬೆಂಬಲಿಗರು ಅವರ ವಿರುದ್ಧ ತಿರುಗಿಬಿದ್ದಿದ್ದಾರೆ.
ಕಾರ್ಯಕ್ರಮದಲ್ಲಿ ಹಿಮಾಂಶಿ ಅವರು, “ಜನರು ಮುಸ್ಲಿಮರು ಅಥವಾ ಕಾಶ್ಮೀರಿಗಳ ಮೇಲೆ ಮುಗಿಬೀಳುವುದನ್ನು ನಾವು ಬಯಸುವುದಿಲ್ಲ. ನಮಗೆ ಈಗ ಶಾಂತಿ ಮಾತ್ರ ಬೇಕಾಗಿದೆ. ಖಂಡಿತ, ನಮಗೆ ನ್ಯಾಯ ಬೇಕು, ಆದರೆ ಸರ್ಕಾರವು ನಮಗೆ ಅನ್ಯಾಯ ಎಸಗಿದವರ ವಿರುದ್ಧ ನಿಖರವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು” ಎಂದು ಅವರು ಹೇಳಿದ್ದ ಅವರು, ದೇಶವು ತನ್ನ ದಿವಂಗತ ಪತಿಗಾಗಿ ಪ್ರಾರ್ಥಿಸುವಂತೆ ಒತ್ತಾಯಿಸಿದ್ದರು.
The hate army abuses & resorts to the character assassination of Pahalgam victim Naval officer’s wife. #PahalgamTerrorAttack pic.twitter.com/LQ4WPwavXH
— Satish Acharya (@satishacharya) May 5, 2025
ಅವರ ಈ ಹೇಳಿಕೆಯ ನಂತರ ಬಿಜೆಪಿ ಪರವಾಗಿರುವ ಹಲವಾರು ಜನರು ಅವರ ವಿರುದ್ಧ ನಿಂದನೆಗೆ ನಿಂತಿದ್ದು, ಕೋಮು ಪ್ರತೀಕಾರ ಮಾಡದಂತೆ ಅವರು ಕರೆ ನೀಡಿದ್ದಕ್ಕಾಗಿ ಅವರನ್ನು ಗುರಿಯಾಗಿಸಿಕೊಂಡು ಟ್ರೋಲ್‌ಗಳನ್ನು ಮಾಡಲಾಗುತ್ತಿವೆ.
ಅದಾಗ್ಯೂ, ರಾಷ್ಟ್ರೀಯ ಮಹಿಳಾ ಆಯೋಗ (NCW) ಈ ಟ್ರೋಲಿಂಗ್ ಅನ್ನು ಖಂಡಿಸಿದ್ದು, ಇದನ್ನು “ದುರದೃಷ್ಟಕರ” ಎಂದು ಬಣ್ಣಿಸಿದೆ. ಮಹಿಳೆಯನ್ನು ಅವರ ಸೈದ್ಧಾಂತಿಕ ಅಭಿವ್ಯಕ್ತಿ ಅಥವಾ ವೈಯಕ್ತಿಕ ವಿಚಾರಕ್ಕಾಗಿ ಗುರಿಯಾಗಿಸಿಕೊಳ್ಳುವುದು ಸರಿಯಲ್ಲ ಎಂದು ಪ್ರತಿಪಾದಿಸಿದೆ.
“ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಮರಣದ ನಂತರ, ಅವರ ಪತ್ನಿ ಹಿಮಾಂಶಿ ನರ್ವಾಲ್ ಅವರ ಹೇಳಿಕೆಗಳಲ್ಲಿ ಒಂದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಟೀಕೆಗೆ ಗುರಿಯಾಗುತ್ತಿರುವ ರೀತಿ ದುರದೃಷ್ಟಕರ” ಎಂದು NCW ಎಕ್ಸ್‌ನಲ್ಲಿ ತಿಳಿಸಿದೆ.
#WATCH | Karnal | “…We don’t want people going against Muslims or Kashmiris. We want peace and only peace. Of course, we want justice,” says Himanshi, wife of Indian Navy Lieutenant Vinay Narwal, who was killed in the Pahalgam terror attack. pic.twitter.com/LaOpBVe7z2
— ANI (@ANI) May 1, 2025
ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಕೂಡ ಹಿಮಾಂಶಿ ಅವರನ್ನು ಬೆಂಬಲಿಸಿ, ಅವರ ಧೈರ್ಯವನ್ನು ಶ್ಲಾಘಿಸಿದ್ದಾರೆ ಮತ್ತು ದೇಶವು ಅವರ ಸಂದೇಶದಿಂದ ಸ್ಫೂರ್ತಿ ಪಡೆಯಬೇಕೆಂದು ಹೇಳಿದ್ದಾರೆ.
“ತನ್ನ ಪತಿಯ ಹುತಾತ್ಮತೆಯ ಹೊರತಾಗಿಯೂ, ಭಾರತೀಯರು ಕಾಶ್ಮೀರಿಗಳನ್ನು ಅಥವಾ ಮುಸ್ಲಿಮರನ್ನು ದೂಷಿಸಬಾರದು ಮತ್ತು ಗುರಿಯಾಗಿಸಬಾರದು ಎಂದು ಒತ್ತಾಯಿಸಿದ ಹಿಮಾಂಶಿ ನರ್ವಾಲ್ ಅವರಿಂದ ನಾವು ಸ್ಫೂರ್ತಿ ಪಡೆಯಬೇಕು” ಎಂದು ಮುಫ್ತಿ ಎಕ್ಸ್‌ನಲ್ಲಿ ತಿಳಿಸಿದ್ದಾರೆ.
ದಾಳಿಗೆ ಕೆಲವು ದಿನಗಳ ಹಿಂದೆಯಷ್ಟೆ ಹಿಮಾಂಶಿ ಅವರನ್ನು ವಿವಾಹವಾದ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ದುರಂತ ಹತ್ಯೆಯು ದೇಶವನ್ನು ಶೋಕದಲ್ಲಿ ಮುಳುಗಿಸಿದೆ. ಅವರ ಅಂತಿಮ ವಿಧಿವಿಧಾನಗಳನ್ನು ಅವರ ಹುಟ್ಟೂರು ಹರಿಯಾಣದ ಕರ್ನಾಲ್‌ನಲ್ಲಿ ನಡೆಸಲಾಯಿತು. ನೌಕಾಪಡೆಯ ಸಿಬ್ಬಂದಿ ಗುಂಡು ಹಾರಿಸಿ ಅವರಿಗೆ ಗೌರವ ಸಲ್ಲಿಸಿದ್ದಾರೆ. ಬಿಜೆಪಿ ಟ್ರೋಲ್
ಬಿಜೆಪಿ ಜೊತೆ ಸಂಯೋಜಿತವಾಗಿದೆ ಎನ್ನಲಾದ ಸಾಮಾಜಿಕ ಮಾಧ್ಯಮ ಖಾತೆಗಳು ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟ ನೌಕಾಪಡೆ ಅಧಿಕಾರಿಯ ಪತ್ನಿಯ ಮೇಲೆ ತೀವ್ರವಾಗಿ ದಾಳಿ ಮಾಡುತ್ತಿದ್ದಾರೆ. ಈ ದಾಳಿಯನ್ನು ಫ್ಯಾಕ್ಟ್‌ಚೆಕ್ಕರ್ ಮೊಹಮ್ಮದ್ ಜುಬೈರ್ ಅವರು ಪಟ್ಟಿ ಮಾಡಿದ್ದು ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ.
I don’t think the IT Minister @AshwiniVaishnaw will take action against these right wing influencers. The guy who doxxed her is linked to his own party. Chandan Kumar Singh @HPhobiaWatch ( another account @TheSquind) has been doing this for years now and BJP has been protecting… https://t.co/q2VWXY8ssA pic.twitter.com/4qXjg0gLGu
— Mohammed Zubair (@zoo_bear) May 4, 2025
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಅಪರೇಷನ್ ಕಾಗರ್ ತಕ್ಷಣ ನಿಲ್ಲಿಸಿ, ನಕ್ಸಲರೊಂದಿಗೆ ಮಾತುಕತೆ ನಡೆಸಿ: ಸಿಪಿಎಂ ಪಾಲಿಟ್ ಬ್ಯೂರೋ ಸದಸ್ಯ ಬಿ.ವಿ.ರಾಘುವುಲು
ಅಪರೇಷನ್ ಕಾಗರ್ ತಕ್ಷಣ ನಿಲ್ಲಿಸಿ, ನಕ್ಸಲರೊಂದಿಗೆ ಮಾತುಕತೆ ನಡೆಸಿ: ಸಿಪಿಎಂ ಪಾಲಿಟ್ ಬ್ಯೂರೋ ಸದಸ್ಯ ಬಿ.ವಿ.ರಾಘುವುಲು